ಮೋದಿ ಡಿಜಿಟಲ್ ಇಂಡಿಯಾ: ಭವ್ಯ ಭಾರತ ಇಲ್ಲಿಂದ ಆರಂಭ

By Shwetha
|

ಪ್ರಧಾನಿ ನರೇಂದ್ರ ಮೋದಿ "ಡಿಜಿಟಲ್ ಇಂಡಿಯಾ ವೀಕ್" ಅನ್ನು ಬುಧವಾರ ಲಾಂಚ್ ಮಾಡುವ ಮೂಲಕ ಅಭಿವೃದ್ಧಿಯ ಪಥಕ್ಕೆ ಚಾಲನೆಯನ್ನು ಮಾಡಿದ್ದಾರೆ. ಈ ಯೋಜನೆಯು ಭಾರತದ ಆರ್ಥಿಕ ವ್ಯವಸ್ಥೆಯನ್ನು ಸುಧಾರಣೆ ಮಾಡುವಲ್ಲಿ ಕೈಜೋಡಿಸುವುದು ಮಾತ್ರವಲ್ಲದೆ ಉದ್ಯೋಗ ಸೃಷ್ಟಿ ಅಂತೆಯೇ ತಾಂತ್ರಿಕ ಕ್ಷೇತ್ರದ ಹೊಸ ಹುಟ್ಟನ್ನು ಆರಂಭಿಸಲಿದೆ.

ಓದಿರಿ: ಫೇಸ್‌ಬುಕ್ ಒಡೆಯನ ಸುತ್ತ ವಿವಾದಗಳ ಹುತ್ತ

ಇಲೆಕ್ಟ್ರಾನಿಕ್ ಸರಕುಗಳಲ್ಲಿ ಭಾರತ ತನ್ನದೇ ಪೂರೈಕೆಗಳನ್ನು ಹೊಂದಬೇಕು ಮತ್ತು ವಿಶ್ವದಲ್ಲೇ ಅತಿ ದೊಡ್ಡ ಬಲಾಢ್ಯ ದೇಶವನ್ನಾಗಿ ರೂಪಿಸಬೇಕೆಂಬುದು ನರೇಂದ್ರ ಮೋದಿಯವರ ಕನಸಾಗಿದೆ. ಈ ಯೋಜನೆಗೆ ಸಹಕಾರ ಎಂಬಂತೆ ಸಮಸ್ತ ಭಾರತೀಯರೂ ಮೋದಿಯವರ ಕನಸಿಗೆ ಕೈಜೋಡಿಸುತ್ತಿದ್ದಾರೆ. ಇಂದಿನ ಲೇಖನದಲ್ಲಿ ಈ ಯೋಜನೆಯ ಹೈಲೈಟೆಡ್ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದು ಭವ್ಯ ಭಾರತದ ಕಲ್ಪನೆಯನ್ನು ನಿಮ್ಮ ಮನದಲ್ಲಿ ಇದು ಮೂಡಿಸುವುದು ಖಂಡಿತ.

ಡಿಜಿಟಲ್ ಲಾಕರ್ ಸಿಸ್ಟಮ್

ಡಿಜಿಟಲ್ ಲಾಕರ್ ಸಿಸ್ಟಮ್

ಖಾಸಗಿ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿಡಲು ಮತ್ತು ನೋಂದಾಯಿತ ಸಂಪುಟಗಳ ಮೂಲಕ ಅವರ ಇ ಶೇರಿಂಗ್ ಅನ್ನು ಸಕ್ರಿಯಗೊಳಿಸುವುದು

ಮೈ ಗವರ್ಮೆಂಟ್.ಇನ್

ಮೈ ಗವರ್ಮೆಂಟ್.ಇನ್

ಆನ್‌ಲೈನ್ ಮುಖಾಂತರ ಸರಕಾರ ಮತ್ತು ಜನರ ನಡುವೆ ಸೌಹಾರ್ದವನ್ನು ಏರ್ಪಡಿಸುವುದು. ಇಲ್ಲಿ ಜನತೆ ನೇರವಾಗಿ ತಮ್ಮ ಸಮಸ್ಯೆಗಳನ್ನು ಸರಕಾರದ ಮುಂದಿಡಬಹುದಾಗಿದೆ.

ಸ್ವಚ್ಛ ಭಾರತ್ ಮಿಶನ್

ಸ್ವಚ್ಛ ಭಾರತ್ ಮಿಶನ್

ಈ ಯೋಜನೆ ಮೂಲಕ ಮೊಬೈಲ್ ಅಪ್ಲಿಕೇಶನ್‌ಗಳನ್ನು ಮಿಶನ್ ಯಶಸ್ಸಿಗಾಗಿ ರಚಿಸಲಾಗಿದೆ

ಇ ಸೈನ್

ಇ ಸೈನ್

ಆಧಾರ್ ಬಳಸಿ ಆನ್‌ಲೈನ್‌ನಲ್ಲಿ ಡಾಕ್ಯುಮೆಂಟ್‌ಗಳಿಗೆ ಸೈನ್ ಮಾಡುವ ವ್ಯವಸ್ಥೆ

ಇ ಹಾಸ್ಪಿಟಲ್ ಸಿಸ್ಟಮ್

ಇ ಹಾಸ್ಪಿಟಲ್ ಸಿಸ್ಟಮ್

ಆನ್‌ಲೈನ್ ನೋಂದಾವಣೆ, ಪಾವತಿ, ವೈದ್ಯರುಗಳ ಅಪಾಯಿಂಟ್‌ಮೆಂಟ್ ಮೊದಲಾದ ಸೇವೆಗಳನ್ನು ಪಡೆದುಕೊಳ್ಳುವುದು.

ನ್ಯಾಶನಲ್ ಸ್ಕಾಲರ್‌ಶಿಪ್ ಪೋರ್ಟಲ್

ನ್ಯಾಶನಲ್ ಸ್ಕಾಲರ್‌ಶಿಪ್ ಪೋರ್ಟಲ್

ಫಲಾನುಭವಿಗಳಿಂದ ಬಂದಿರುವ ಅಪ್ಲಿಕೇಶನ್ ಪರಿಶೀಲನೆ, ಮಂಜೂರಾತಿ ಮೊದಲಾದ ಕಾರ್ಯಗಳನ್ನು ಇದು ನಡೆಸುತ್ತದೆ.

ದೊಡ್ಡ ಮಟ್ಟದ ಡಿಜಿಟೈಸೇಶನ್

ದೊಡ್ಡ ಮಟ್ಟದ ಡಿಜಿಟೈಸೇಶನ್

ನಾಗರೀಕರಿಗೆ ಅಗತ್ಯವಾಗಿರುವ ಸೇವೆಗಳನ್ನು ಒದಗಿಸಿಕೊಡುವ ವ್ಯವಸ್ಥೆ

ಭಾರತ್ ನೆಟ್ ಪ್ರೊಗ್ರಾಮ್

ಭಾರತ್ ನೆಟ್ ಪ್ರೊಗ್ರಾಮ್

ದೇಶದ 250,000 ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಪಡಿಸುವ ಹೆಚ್ಚು ವೇಗದ ಡಿಜಿಟಲ್ ಹೆದ್ದಾರಿ

ಬಿಎಸ್‌ಎನ್‌ಎಲ್ ನೆಕ್ಸ್ಟ್ ಜನರೇಶನ್ ನೆಟ್‌ವರ್ಕ್

ಬಿಎಸ್‌ಎನ್‌ಎಲ್ ನೆಕ್ಸ್ಟ್ ಜನರೇಶನ್ ನೆಟ್‌ವರ್ಕ್

ಧ್ವನಿ, ಮಾಹಿತಿ, ಮಲ್ಟಿಮೀಡಿಯಾ ಮೊದಲಾದ ಸೇವೆಗಳನ್ನು ನಿರ್ವಹಿಸಲು 30 ವರ್ಷ ಹಳೆಯ ಟೆಲಿಫೋನ್ ವಿನಿಮಯಗಳನ್ನು ಬದಲಾಯಿಸುವುದು.

ಬ್ರಾಡ್‌ಬ್ಯಾಂಡ್ ಹೈವೇಸ್

ಬ್ರಾಡ್‌ಬ್ಯಾಂಡ್ ಹೈವೇಸ್

ನಾಗರೀಕರಿಗೆ ತಂತ್ರಜ್ಞಾನ ಸಂಬಂಧಿತ ಎಲ್ಲಾ ಸೇವೆಗಳನ್ನು ಪೂರೈಸಲು

Best Mobiles in India

English summary
With Prime Minister Narendra Modi launching the "Digital India Week" here Wednesday, following are the projects and products that have been launched, or are ready for deployment, as part of the initiative.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X