Home
ಸುದ್ದಿಜಾಲ

ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ 'ಗೂಗಲ್ ಸರ್ಚ್'!

ಏನೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗುವುದೇ ಗೂಗಲ್, ವಿಶ್ವದ ಸರ್ಚ್‌ ಇಂಜಿನ್ ದೈತ್ಯ ಗೂಗಲ್ ಸದ್ಯ ಪ್ರತಿಯೊಬ್ಬರ ಮಾಹಿತಿಯ ಗುರು ಎಂದೆನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮತ್ತು ವೆಬ್‌ ವರ್ಷನ್‌ ಎರಡರಲ್ಲೂ ಸಹ ಮುಂಚೂಣಿಯಲ್ಲಿರುವ ಗೂಗಲ್ ಸರ್ಚ್‌ ಇಂಜಿನ್‌, ಇದೀಗ ತನ್ನ ಮೊಬೈಲ್‌ ವರ್ಷನ್‌ ಲುಕ್‌ನಲ್ಲಿ ಹೊಸತನ ಪರಿಚಯಿಸಲಿದೆ. ಸ್ಮಾರ್ಟ್‌ಫೋನ್‌ ಸರ್ಚ್‌ ಮಾಡಿದಾಗ ಮಾಹಿತಿಯ ಪೇಜ್‌ ನೂತನ ಡಿಸೈನ್‌ನಲ್ಲಿ ಕಾಣಿಸಿಕೊಳ್ಳಲಿದೆ.

ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ 'ಗೂಗಲ್ ಸರ್ಚ್'!

ಹೌದು, ಗೂಗಲ್ ತನ್ನ ರಿಜಲ್ಟ್‌ ಪೇಜ್‌ನಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲಿದ್ದು, ಗ್ರಾಹಕರಿಗೆ ಸರ್ಚ್‌ಗೆ ಅನುಗುಣವಾಗಿ ಹೊಸತನವನ್ನು ನೀಡುವ ಉದ್ದೇಶದಿಂದ ಈ ಬದಲಾವಣೆ ಮಾಡಲು ಮುಂದಾಗಿದೆ ಎಂದ ಗೂಗಲ್. ಈಗಾಗಲೇ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಾಗಿರುವ ಗೂಗಲ್‌ನ ನ್ಯೂ ಲುಕ್‌ ವರ್ಷನ್‌ ಶೀಘ್ರದಲ್ಲೇ ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ.

ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ 'ಗೂಗಲ್ ಸರ್ಚ್'!

ಗೂಗಲ್ ಸರ್ಚ್‌ ರೀಸಲ್ಟ್‌ ನ್ಯೂ ಡಿಸೈನ್‌ ಪೇಜ್‌ನ ವಿನ್ಯಾಸದೊಂದಲ್ಲಿ ವೆಬ್‌ಸೈಟ್‌ಗಳ ಅಡ್ವರ್ಟೈಸ್‌, ಬ್ರ್ಯಾಂಡಿಂಗ್‌ಗಳು ರಿಸಲ್ಟ್‌ ಪೇಜ್‌ನ ಮುಂಭಾಗದಲ್ಲಿ ಮತ್ತು ಮಧ್ಯಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಹಾಗೆಯೇ ಬಳಕೆದಾರರು ಮಾಹಿತಿಯನ್ನು ಯಾವ ಪುಟಗಳನ್ನು ನೀವು ಹುಡುಕುತ್ತಿದ್ದಾರೆ ಮತ್ತು ಯಾವ ವೆಬ್‌ಪೇಜ್‌ನಿಂದ ಮಾಹಿತಿ ಹುಡುಕುತ್ತಿದ್ದಿರಿ ಎನ್ನುವುದನ್ನು ಪೂರ್ಣವಾಗಿ ತಿಳಿಯುವಂತೆ ರಚನೆಯನ್ನು ಹೊಂದಿರಲಿದೆ.

ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ 'ಗೂಗಲ್ ಸರ್ಚ್'!

ಕ್ಯಾಲಿಫೋರ್ನಿಯಾ ಮೂಲದ ಕಂಪೆನಿಯಾದ ಮೌಂಟೇನ್ ವ್ಯೂ ಪ್ರಕಾರ, ಗೂಗಲ್ನ ಹೊಸ ವಿನ್ಯಾಸ್‌ದಲ್ಲಿ ಪೇಕ್‌ನ ಮೇಲ್ಭಾಗದಲ್ಲಿ ವೆಬ್‌ಸೈಟ್‌ ಮತ್ತು ಐಕಾನ್‌ಗಳ ಹೆಸರು, ಫಲಿತಾಂಶಗಳ ಲಿಸ್ಟ್‌ ಕಾಣಿಸಿಕೊಳ್ಳಲಿದೆ. ಆನಂತರದಲ್ಲಿ ಪೇಜ್‌ನ ಶೀರ್ಷಿಕೆ, ಪೇಜ್‌ನ ಮಾಹಿತಿಯ ವಿವರಣೆ, ಕಾಣಿಸಿಕೊಳ್ಳಲಿದ್ದು, ಆನಂತರದಲ್ಲಿ ಪೇಜ್‌ಗಳ URL ಅಥವಾ ವೆಬ್‌ಸೈಟ್‌ಗಳ ಹೆಸರು ಪುಟ ವಿವರಣೆಯ ಅಂಶಗಳು ಇರಲಿವೆ.

ಹೊಸ ಅವತಾರದ ಪೇಜ್‌ಗಳಲ್ಲಿ ಅಡ್ವರ್ಟೈಸ್‌ಮೆಂಟ್‌ ಹೆಸರುಗಳು ಬೊಲ್ಡ್‌ ಅಕ್ಷರದಲ್ಲಿದ್ದು, ಜೊತೆಗೆ ಅವುಗಳಿಗೆ ಅಡ್ವರ್ಟೈಸ್‌ಮೆಂಟ್ ಲೆಬಲ್‌ ಸಹ ಇರಲಿದೆ. ಇದರೊಂದಿಗೆ ಆಕ್ಷನ್‌ ಬಟನ್‌ಗಳನ್ನು ಸೇರಿಸಲಿದ್ದು, ಇವು ಬಳಕೆದಾರರಿಗೆ ಅಗತ್ಯ ವೆಬ್‌ಸೈಟ್‌ಗಳಿಗೆ ತೆರೆಯಲು ಅನುಕೂಲವಾಗಲಿವೆ. ಹಾಗೆಯೇ AR ಸರ್ಚ್‌ ಇರಲಿದ್ದು, ನ್ಯೂಸ್‌ ಮಾಹಿತಿಗಳು ಸಂಪೂರ್ಣ ಕವರೇಜ್‌ ಸಹ ಸೇರಿಕೊಳ್ಳಲಿದೆ ಎನ್ನಲಾಗಿದೆ.

Best Mobiles in India

English summary
Google Search Gets a New Look on Mobile Devices.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+