ಗೂಗಲ್ ಸರ್ಚ್‌ನಲ್ಲಿ ಹೊಸ ಸೌಲಭ್ಯಗಳು: ಪ್ರವಾಸಿಗರಿಗಂತೂ ಖುಷಿಯೋ ಖುಷಿ!
ಗೂಗಲ್ ಸರ್ಚ್‌ಎಂಬುವುದು ಗೂಗಲ್‌ನ ಸರ್ಚ್ ಎಂಜಿನ್ ಆಗಿದ್ದು, ಜಗತ್ತಿನಾದ್ಯಂತ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಅದರಂತೆ ದಿನಕ್ಕೆ 3.5 ಶತಕೋಟಿಗೂ ಹೆಚ್ಚು ಹುಡುಕಾಟಗಳನ್ನು ಇದರಲ್ಲಿ ಮಾಡಲಾಗುತ್ತದೆ. ಜೊತೆಗೆ ಜಾಗತಿಕ ಹುಡುಕಾಟ ಎಂಜಿನ್ ಮಾರ್ಕೆಟ್‌ನಲ್ಲಿ 92% ಪಾಲನ್ನು ಹೊಂದಿದೆ. ಇದೆಲ್ಲದರ ನಡುವೆ ಈಗ ಬಳಕೆದಾರರಿಗೆ ಮತ್ತಷ್ಟು ಸೌಲಭ್ಯಗಳನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಒದಗಿಸಲಾಗಿದೆ.
ಹೌದು, ಇಡೀ ಪ್ರಪಂಚದಲ್ಲಿ ಹೆಚ್ಚು ಬಳಕೆ ಮಾಡುವ ಸರ್ಚ್ ಎಂಜಿನ್ ಇದಾಗಿದ್ದು, ಇದೀಗ ಮೂರು ಪ್ರಯಾಣ ಸ್ನೇಹಿ ಫೀಚರ್ಸ್‌ಗಳನ್ನು ಹೊಂದಿರಲಿದೆ. ಈ ಮೂಲಕ ಇನ್ಮುಂದೆ ಗೂಗಲ್ ಮ್ಯಾಪ್ಸ್ ಇನ್ನಷ್ಟು ವಿಶೇಷವಾಗಿ ಕಾಣಿಸಿಕೊಳ್ಳಲಿದ್ದು, ಈ ನಿಖರ ವಿಷಯಗಳ ಬಗ್ಗೆ ತಕ್ಷಣವೇ ವಿಶೇಷವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಗೂಗಲ್ ಘೋಷಣೆ ಮಾಡಿದ ಈ ಮೂರು ಫೀಚರ್ಸ್‌ಗಳೇನು, ಇದರಿಂದ ಬಳಕೆದಾರರಿಗೆ ಏನೆಲ್ಲಾ ಪ್ರಯೋಜನ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಹೋಟೆಲ್‌ಗಳನ್ನು ಸುಲಭವಾಗಿ ಬ್ರೌಸ್ ಮಾಡಬಹುದು: ಬಳಕೆದಾರರು ಮೊಬೈಲ್‌ನಲ್ಲಿ ಹೋಟೆಲ್‌ಗಳನ್ನು ಅನ್ವೇಷಿಸಲು ಇನ್ಮುಂದೆ ಕಷ್ಟಬಡಬೇಕಿಲ್ಲ ಎಂದು ಗೂಗಲ್ ತಿಳಿಸಿದೆ. ಅದರಂತೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದು, ಬಳಕೆದಾರರು ಸೋಹೋ ಲಂಡನ್ ಹೋಟೆಲ್‌ಗಳು ಎಂದು ಸರ್ಚ್ ಮಾಡಿ ಅಲ್ಲಿ ಹೆಚ್ಚಿನದನ್ನು ವೀಕ್ಷಿಸಲು ಟ್ಯಾಪ್ ಮಾಡಿದಾಗ, ಪ್ರತಿ ಪ್ರಾಪರ್ಟಿಯನ್ನು ಸ್ವೈಪ್ ಮಾಡಬಹುದಾದ ಸ್ಟೋರಿ ಫಾರ್ಮ್ಯಾಟ್‌ನಲ್ಲಿ ಅನ್ವೇಷಿಸಲು ಹೊಸ ಆಯ್ಕೆಯನ್ನು ಪಡೆದುಕೊಳ್ಳಬಹುದು. ಇದು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಕಂಡುಬರುವ ಸ್ಟೋರಿಗಳ ಹಾಗೆ ಕಾಣಿಸಿಕೊಳ್ಳುತ್ತವೆ ಎಂದು ಉಲ್ಲೇಖಿಸಿದೆ.
ಈ ಆಯ್ಕೆಯಿಂದ ನೀವು ಹೋಟೆಲ್‌ನ ಫೋಟೋಗಳ ಮೂಲಕ ಟ್ಯಾಪ್ ಮಾಡಬಹುದಾಗಿದ್ದು, ಒಂದೇ ಟ್ಯಾಪ್ ಮೂಲಕ ಹೋಟೆಲ್ ಅನ್ನು ಸೇವ್ ಮಾಡಬಹುದು ಹಾಗೆಯೇ ಈ ಪ್ರದೇಶದ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು ಜೊತೆಗೆ ಕೆಲಸವನ್ನು ನೀವು ಪೂರ್ಣಗೊಳಿಸಿದಾಗ, ಬ್ರೌಸಿಂಗ್ ಅನ್ನು ಮುಂದುವರಿಸಲು ಮೇಲಕ್ಕೆ ಸ್ವೈಪ್ ಮಾಡಿ ಎಂದು ಗೂಗಲ್ ಮಾಹಿತಿ ನೀಡಿದೆ.

ಅಗ್ಗದ ದರದಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿ: ಬೆಲೆ ಗ್ಯಾರಂಟಿಯೊಂದಿಗೆ ಗೂಗಲ್ ಫ್ಲೈಟ್‌ಗಳಲ್ಲಿ ಪೈಲಟ್ ಪ್ರೋಗ್ರಾಂ ಅನ್ನು ಸಹ ಗೂಗಲ್ ಆರಂಭಿಸಿದ್ದು, ವಿಮಾನ ನಿರ್ಗಮಿಸುವವರೆಗೆ ಪ್ರತಿದಿನ ಬೆಲೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಹಾಗೆಯೇ ಬೆಲೆಗಳು ಕಡಿಮೆಯಾದರೆ, ಅದು ಬಳಕೆದಾರರಿಗೆ ಗೂಗಲ್ ಪೇ ಮೂಲಕ ಹಿಂತಿರುಗಿಸುತ್ತದೆ ಎಂದು ಗೂಗಲ್ ಹೇಳುತ್ತದೆ. ಇದು ಆರಂಭಿಕವಾಗಿ ಯುನೈಟೆಡ್ ಸ್ಟೇಟ್ಸ್‌ನಿಂದ ಹೊರಡುವ 'ಬುಕ್ ಆನ್ ಗೂಗಲ್' ಪ್ರವಾಸಗಳಿಗೆ ಮಾತ್ರ ಅನ್ವಯ ಎಂದು ತಿಳಿಸಿದೆ.
ನೀವು ಬೆಲೆ ಗ್ಯಾರಂಟಿ ಬ್ಯಾಡ್ಜ್‌ನೊಂದಿಗೆ ಫ್ಲೈಟ್ ಅನ್ನು ನೋಡಿದ್ದೀರಾ ಎಂದಾದರೆ ಅದರಲ್ಲಿ ಇರುವ ಬೆಲೆಯು ಟೇಕ್‌ಆಫ್ ಆಗುವ ಮೊದಲು ಕಡಿಮೆ ಆಗುವುದಿಲ್ಲ ಎಂದು ಅರ್ಥ. ಅದಾಗ್ಯೂ ಈ ಬೆಲೆಗಳ ಬಗ್ಗೆ ಈ ಫೀಚರ್ಸ್ ಕಣ್ಣಿಟ್ಟಿರಲಿದ್ದು, ಎಲ್ಲವನ್ನೂ ಮೇಲ್ವಿಚಾರಣೆ ಮಾಡಲಿದೆ. ಇದರಿಂದ ಪ್ರವಾಸಿಗರಿಗೆ ನಷ್ಟದ ಭಾವನೆ ಉಂಟಾಗುವುದಿಲ್ಲ.
ಗಮ್ಯಸ್ಥಾನವನ್ನು ಉತ್ತಮವಾಗಿ ಅನ್ವೇಷಿಸಿ: ಮೂರನೇ ಹೊಸ ಸೌಲಭ್ಯ ಎಂದರೆ ಗೂಗಲ್ ಸರ್ಚ್ ಮತ್ತು ಮ್ಯಾಪ್ಸ್‌ನಲ್ಲಿ ಈ ವಿಶೇಷ ಫೀಚರ್ಸ್ ಅನ್ನು ಸೇರಿಸಲಾಗಿದೆ. ಇದು ಬಳಕೆದಾರರಿಗೆ ಪ್ರವಾಸಿ ಆಕರ್ಷಣೆ ಅಥವಾ ಪ್ರವಾಸ ಕಂಪನಿಯ ಬೆಲೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಇದರೊಂದಿಗೆ ಸರ್ಚಿಂಗ್ ಫಲಿತಾಂಶಗಳಲ್ಲಿ ಟಿಕೆಟ್ ಬುಕ್ ಮಾಡಲು ಲಿಂಕ್ ಅನ್ನು ಹೊಂದಿರಲಿವೆ. ಹಾಗೆಯೇ ಹೆಚ್ಚಿನ ಪ್ರವಾಸಿ ಸ್ಥಳಗಳನ್ನು ಸುಲಭವಾಗಿ ಒಂದೇ ಬಾರಿಗೆ ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ.

ಈ ಮೂರು ಫೀಚರ್ಸ್‌ಗಳನ್ನು ಬಳಕೆ ಮಾಡಿಕೊಂಡು ನೀವು ಇನ್ಮುಂದೆ ನಿಮ್ಮ ಪ್ರವಾಸದಲ್ಲಿ ಇನ್ನಷ್ಟು ಹೆಚ್ಚಿನ ಅನುಭವಪಡೆದುಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಫ್ಲೈಟ್‌ನಲ್ಲಿ ಹಣವನ್ನು ಉಳಿಸಲು, ನೀವು ಬುಕ್ ಮಾಡುವ ಮೊದಲು ಹೋಟೆಲ್ ಅನ್ನು ಎಕ್ಸ್‌ಪ್ಲೋರ್ ಮಾಡಲು ಹಾಗೆಯೇ ನಿಮ್ಮ ಪ್ರವಾಸದಲ್ಲಿ ಏನೆಲ್ಲಾ ಮಾಡಬೇಕು ಎಂಬ ವಿಷಯಗಳನ್ನು ಸುಲಭವಾಗಿ ಯೋಜಿಸಲು ಈ ಫೀಚರ್ಸ್‌ಗಳು ಸಹಾಯಕಾರಿ ಎಂದೇ ಹೇಳಬಹುದು.


Click it and Unblock the Notifications








