ಗೂಗಲ್ ಸರ್ಚ್‌ನಲ್ಲಿರುವ ಈ ಅನುಕೂಲ ತಿಳಿದ್ರೆ, ನೀವು OMG ಅಂತೀರಾ!
ಸದ್ಯ ಏನೇ ಮಾಹಿತಿ ಬೇಕಿದ್ದರೂ ತಕ್ಷಣ ಸರ್ಚ್ ಇಂಜಿನ್ ದೈತ್ಯ ಗೂಗಲ್‌ನಲ್ಲಿ ಮಾಹಿತಿ ಹುಡುಕುತ್ತೇವೆ. ಗೂಗಲ್ ಸರ್ಚ್‌ನಲ್ಲಿ ಬಳಕೆದಾರರು ಯಾವುದೇ ಪ್ರಶ್ನೆ ಅಥವಾ ಮಾಹಿತಿ ಕೇಳಿದರೂ, ಕಣ್ಣು ಪಿಳುಕಿಸುವುದರೊಳಗಾಗಿ ಅದಕ್ಕೆ ಸಂಬಂಧಿಸಿದ ಫಲಿತಾಂಶಗಳ ದೊಡ್ಡ ಲಿಸ್ಟ್ ಲಭ್ಯವಾಗುತ್ತದೆ. ಅದಾಗ್ಯೂ, ಬಳಕೆದಾರರ ಅನುಕೂಲಕ್ಕಾಗಿ ಗೂಗಲ್ ಸರ್ಚ್ ಕೆಲವು ಉಪಯುಕ್ತ ಆಯ್ಕೆಗಳನ್ನು ನೀಡಿದೆ. ಅವುಗಳ ಬಗ್ಗೆ ತಿಳಿದ್ರೆ, ನೀವು OMG ಅಂತೀರಾ!
ಹೌದು, ಗೂಗಲ್ ಕೆಲವು ಅನುಕೂಲಕರ ಶಾರ್ಟ್‌ಕಟ್ ಆಯ್ಕೆಗಳನ್ನು ನೀಡಿದೆ. ಗೂಗಲ್ ಕ್ರೋಮ್ ನಲ್ಲಿ ಬಳಕೆದಾರರು ಯಾವುದಾರೂ ವೆಬ್‌ಸೈಟ್ ತೆರೆಯಬೇಕಿದ್ರೆ, ಪೂರ್ಣವಾಗಿ ಟೈಪ್ ಮಾಡದೆ, ತ್ವರಿತವಾಗಿ ಮತ್ತು ನೇರವಾಗಿ ಆ ವೆಬ್‌ಸೈಟ್ ತೆರೆಯಬಹುದಾಗಿದೆ. ಇದೇ ರೀತಿ ಮತ್ತಷ್ಟು ಆಸಕ್ತಿಕರ ಹಾಗೂ ಕುತೂಹಲಕರಿಯಾದ ಆಯ್ಕೆಗಳನ್ನು ನೀಡಿದೆ. ಇವುಗಳು ಬಳಕೆದಾರರಿಗೆ ಆಕರ್ಷಕ ಎನಿಸಿವೆ.

ಸಾಮಾನ್ಯವಾಗಿ ಅನೇಕರು ಒಂದಿಲ್ಲೊಂದು ಕಾರಣಕ್ಕೆ ಗೂಗಲ್ ಹಾಗೂ ಗೂಗಲ್ ಕ್ರೋಮ್ ಬಳಕೆ ಮಾಡುತ್ತಾರೆ. ಇನ್ನು ಗೂಗಲ್ ಕ್ರೋಮ್ ಮತ್ತು ಗೂಗಲ್‌ನ ಇತರೆ ಸೇವೆಗಳಲ್ಲಿ ಬಳಕೆದಾರರಿಗೆ ಉಪಯುಕ್ತ ಎನಿಸುವ ಕೆಲವು ಶಾರ್ಟ್‌ಕಟ್ ಆಯ್ಕೆಗಳ ಹಾಗೂ ಟಿಪ್ಸ್‌ಗಳ ಮಾಹಿತಿ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಕ್ರೋಮ್ ಅಡ್ರೆಸ್ ಬಾರ್‌ನಲ್ಲಿ ವೆಬ್‌ಸೈಟ್ ಶಾರ್ಟ್‌ಕಟ್ : ಹೆಚ್ಚಾಗಿ ಬಳಕೆ ಮಾಡುವ ವೆಬ್‌ಸೈಟ್ ಅನ್ನು ತ್ವರಿತವಾಗಿ ತೆರೆಯಲು ಈ ಆಯ್ಕೆಯನ್ನು ಬಳಕೆದಾರರು ಸೆಟ್ ಮಾಡಬಹುದು. ಈ ಶಾರ್ಟ್‌ಕಟ್ ಆಯ್ಕೆಯಲ್ಲಿ ತೆರೆಯಬೇಕಾಗಿರುವ ವೆಬ್‌ಸೈಟ್‌ನ ಪೂರ್ಣ ಹೆಸರನ್ನು ನಮೂದಿಸುವ ಅಗತ್ಯ ಇರಲ್ಲ. ಈ ಆಯ್ಕೆ ಸಕ್ರಿಯ ಮಾಡಲು ಈ ಕ್ರಮಗಳನ್ನು ಅನುಸರಿಸಿ:

* ಮೊದಲಿಗೆ ಗೂಗಲ್ ಕ್ರೋಮ್ ತೆರೆಯಿರಿ
* ನಂತರ ಬಲ ಭಾಗದಲ್ಲಿರುವ ಮೂರು ಡಾಟ್ ಮೆನು ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ
* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ಸೆಟ್ಟಿಂಗ್ಸ್ ಆಯ್ಕೆ ಕ್ಲಿಕ್ ಮಾಡಿ ಸರ್ಚ್ ಇಂಜಿನ್ ಆಯ್ಕೆ ಸೆಲೆಕ್ಟ್ ಮಾಡಿ
* ನಂತರ, ಮ್ಯಾನೇಜ್ ಸರ್ಚ್ ಇಂಜಿನ್ ಮತ್ತು ಸೈಟ್ ಸರ್ಚ್ ಕ್ಲಿಕ್ ಮಾಡಿ
* ಬಳಿಕ, ಕೆಳಭಾಗದಲ್ಲಿ ಕಾಣಿಸುವ ADD ಕ್ಲಿಕ್ ಮಾಡಿ, ವಿಂಡೋ ತೆರೆಯುತ್ತದೆ
* ಅಲ್ಲಿ, ಸರ್ಚ್ ಇಂಜಿನ್, ಶಾರ್ಟ್‌ಕಟ್ ಮತ್ತು ವೆಬ್‌ಸೈಟ್ URL ನಮೂದಿಸುವುದು

ಸರ್ಚ್ ಮಾಹಿತಿಯಲ್ಲಿ ಇತ್ತೀಚಿನ ಫಲಿತಾಂಶ ವೀಕ್ಷಿಸುವುದು : ಹಾಗೆಯೇ ಗೂಗಲ್ ಸರ್ಚ್‌ನಲ್ಲಿ ಬಳಕೆದಾರರು ಕೇಳಿರುವ ಮಾಹಿತಿಯ ಬಗ್ಗೆ ಇತ್ತೀಚಿಗಿನ ಹೊಸ ಫಲಿತಾಂಶಗಳ (Search Result) ತಿಳಿಯಬಹುದು. ಅದಕ್ಕಾಗಿ ಬಳಕೆದಾರರು ಈ ಕ್ರಮಗಳನ್ನು ಫಾಲೋ ಮಾಡಬಹುದು.
* ಮೊದಲಿಗೆ ಬೇಕಾದ ಮಾಹಿತಿ ಸರ್ಚ್ ಮಾಡುವುದು
* ನಂತರ, ಫಲಿತಾಂಶ ಕಾಣಿಸುತ್ತದೆ
* ಆಗ, ಮೇಲ್ಭಾಗದಲ್ಲಿ ಕಾಣಿಸುವ Tools ಆಯ್ಕೆ ಕ್ಲಿಕ್ ಮಾಡುವುದು
* ನಂತರ, Any Time ಮತ್ತು All Result ಆಯ್ಕೆಗಳು ಕಾಣಿಸುತ್ತವೆ.
* ಆಗ, Any Time ಪಕ್ಕದ ಡೌನ್ ಆರೋ ಟ್ಯಾಪ್ ಮಾಡಿ
* ಅಲ್ಲಿ, ಕೆಲವು ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ ಇತ್ತೀಚಿನ ಫಲಿತಾಂಶ ವೀಕ್ಷಿಸಲು ನಿಮಗೆ ಸೂಕ್ತವಾದ ಆಯ್ಕೆ ಆರಿಸಿ.

Pdf ಫೈಲ್ ಮಾತ್ರ ಕಾಣಿಸಬೇಕೆ : ಗೂಗಲ್ ಸರ್ಚ್‌ನಲ್ಲಿ ನಿಮಗೆ ಪಿಡಿಎಫ್ ಫೈಲ್‌ಗಳ ಫಲಿತಾಂಶ ಅಷ್ಟೇ ಕಾಣಿಸಬೇಕೆ. ಹಾಗಿದ್ರೆ, ಸರ್ಚ್ ಮಾಡುವಾಗ ಈ ಕ್ರಮ ಅನುಸರಿಸಿ. ಮೊದಲಿಗೆ ನಿಮಗೆ ಬೇಕಾದ ವಿಷಯ > filetype > semicolon ( ; ) > pdf > enter....ಹೀಗೆ ಸರ್ಚ್ ಮಾಡಬಹುದು.


Click it and Unblock the Notifications








