Home
ಸುದ್ದಿಜಾಲ

ಗೂಗಲ್‌ ಡೌನ್‌: ಜಿ-ಮೇಲ್‌, ಯೂಟ್ಯೂಬ್‌ ಸೇವೆಗಳಲ್ಲಿ ಅಡಚಣೆ!

ಗೂಗಲ್‌ ಸೇವೆಯಲ್ಲಿ ಡೌನ್‌ ಆಗಿರುವ ಬಗ್ಗೆ ವರದಿಯಾಗಿದೆ. ಬಳಕೆದಾರರು ತಮ್ಮ ಜಿಮೇಲ್‌ ಖಾತೆಗಳು ಮತ್ತು ಗೂಗಲ್‌ ಡಾಕ್ಯುಮೆಂಟ್‌ಗಳಿಗೆ ಲಾಗ್ ಇನ್ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ವರದಿಯಾಗಿದೆ. ಇಂದು ಬೆಳಗ್ಗೆ ಗೂಗಲ್‌ ವರ್ಕ್‌ಸ್ಪೇಸ್‌ನಲ್ಲಿ ಸ್ಥಗಿತವನ್ನು ವರದಿ ಮಾಡಿದ್ದಾರೆ.

ರಿಯಲ್‌ ಟೈಮ್‌ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್‌ಡೆಕ್ಟರ್, ಮುಂಜಾನೆ 11 ಗಂಟೆಯ ನಂತರ 2,000 ಕ್ಕೂ ಹೆಚ್ಚು ಸ್ಥಗಿತ ವರದಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಕಾಣಿಸಿದೆ. ಸಮಸ್ಯೆಗಳನ್ನು ವರದಿ ಮಾಡುವ 82% ಬಳಕೆದಾರರು ಇದು ಸರ್ವರ್ ಸಂಪರ್ಕ ಎಂದು ಹೇಳಿದರೆ, 12% ಜನರು ಲಾಗಿನ್ ಸಮಸ್ಯೆಗಳನ್ನು ಹೊಂದಿದ್ದಾರೆ ಮತ್ತು 6% ಅವರು ಮೇಲ್ ಸ್ವೀಕರಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಗೂಗಲ್‌ ಡೌನ್‌: ಜಿ-ಮೇಲ್‌, ಯೂಟ್ಯೂಬ್‌ ಸೇವೆಗಳಲ್ಲಿ ಅಡಚಣೆ!

ಗೂಗಲ್‌ ವರ್ಕ್‌ಸ್ಪೇಸ್‌, ಜಿಮೇಲ್‌, ಗೂಗಲ್‌ ಡಾಕ್ಸ್ ಈ ಎಲ್ಲವೂ ಡೌನ್ ಆಗಿರುವಂತೆ ವರದಿಗಳಾಗಿವೆ. ಇದು ಕೆಲಸದಿಂದ ಬಲವಂತದ ವಿರಾಮ ಎಂದು ಬಳಕೆದಾರರು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಹಾಗೆಯೇ ಇನ್ನೊಬ್ಬ ಬಳಕೆದಾರರು ತನ್ನ ಜಿಮೇಲ್ ಕಚೇರಿಯಲ್ಲಿ ಸ್ಥಗಿತಗೊಂಡಿದೆ ಆದರೆ ಬೇರೆಡೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಗೂಗಲ್‌ ಸೇವೆಗಳ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಖಚಿತ ಪಡಿಸಿಕೊಳ್ಳಲು ಟ್ವಿಟರ್ ತಾಣದಲ್ಲಿ ಇಣಕುತ್ತಿದ್ದಾರೆ. ಅಲ್ಲದೇ ಟ್ವಿಟರ್ ಸೇರಿ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಎಂದು ಸಮಸ್ಯೆ ಬಗ್ಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಗೂಗಲ್‌ ಡೌನ್‌ ಆಗಿರುವ ಕುರಿತಾಗಿ ಮಿಮ್ಸ್‌ ಹಾಗೂ ಟ್ರೋಲ್‌ ಸಹ ಮಾಡುತ್ತಿದ್ದಾರೆ. ಅಂದಹಾಗೆ ಗೂಗಲ್‌ನ ಜಿ ಮೇಲ್‌ ಹಾಗೂ ಯೂಟ್ಯೂಬ್‌ ತಾಣಗಳು ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿವೆ.

ಗೂಗಲ್‌ ಡೌನ್‌: ಜಿ-ಮೇಲ್‌, ಯೂಟ್ಯೂಬ್‌ ಸೇವೆಗಳಲ್ಲಿ ಅಡಚಣೆ!

ಗೂಗಲ್‌ ಸೇವೆ ಡೌನ್‌ ಆಗಿರುವುದಕ್ಕೆ ಟ್ವಿಟರ್‌ನಲ್ಲಿ ಬಳಕೆದಾರರೊಬ್ಬರು 'ಮತ್ತೆ ಜಿ-ಮೇಲ್‌ ಡೌನ್ ಆಗಿದೆ, ಇದು ಲೇಆಫ್‌ನ ಪರಿಣಾಮವೇ?' ಎಂದು ಟ್ವಿಟ್‌ ಮಾಡಿದ್ದಾರೆ. ಹಾಗೆಯೇ ಗೂಗಲ್‌ ಡೌನ್‌ ಆಗಿದೆ, ಈ ರೀತಿಯ ಅನುಭವ ಯಾರಿಗಾದರೂ ಆಗಿದೆಯೇ? ಎಂದು ಬಳಕೆದಾರರೊಬ್ಬರು ಟ್ವಿಟ್‌ ಮಾಡಿದ್ದಾರೆ.

'ಈ ಮಧ್ಯಾಹ್ನ ಪೆಸಿಫಿಕ್ ಸಮಯದ ಸಾಫ್ಟ್‌ವೇರ್ ನವೀಕರಣವು ಗೂಗಲ್‌ ಸರ್ಚ್‌ ಮತ್ತು ಮ್ಯಾಪ್‌ ಲಭ್ಯತೆಯ ಮೇಲೆ ಕಿರು ಪರಿಣಾಮ ಬೀರಿದೆ ಎಂದು ನಮಗೆ ತಿಳಿದಿದೆ ಮತ್ತು ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ' ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ. 'ನಾವು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಕೆಲಸ ಮಾಡಿದ್ದೇವೆ ಮತ್ತು ನಮ್ಮ ಸೇವೆಗಳು ಈಗ ಆನ್‌ಲೈನ್‌ಗೆ ಮರಳಿವೆ.' ಎಂದಿದೆ.

ಇತ್ತೀಚಿಗೆ ಟೆಕ್‌ ವಲಯದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಚಾಟ್‌ಜಿಪಿಟಿ (ChatGPT) ಕೆಲಸ ನಿರ್ವಹಿಸುತ್ತಿಲ್ಲ, ಡೌನ್‌ ಆಗಿದೆ ಎಂದು ವರದಿಯಾಗಿತ್ತು. ಪ್ರಪಂಚದಾದ್ಯಂತ ಚಾಟ್‌GPT ಬಳಕೆದಾರರು ಓಪನ್‌AI ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರೆ. ಚಾಟ್‌GPT AI ಆಧಾರಿತ ಚಾಟ್‌ಬಾಟ್ ಟೂಲ್‌ ಆಗಿದ್ದು, ಏನೇ ಕೇಳಿದರು, ಮಾಹಿತಿ ನೀಡಬಲ್ಲದು.

ಆನ್‌ಲೈನ್ ಸೇವೆಯ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ಡೌನ್‌ಡೆಕ್ಟರ್ ಸೈಟ್‌ನಲ್ಲಿ ಸ್ಪೈಕ್ ಅನ್ನು ತೋರಿಸುತ್ತಿದೆ. ಇಲ್ಲಿ ಸುಮಾರು 1,200 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಹಾಗೆಯೇ ಟ್ವಿಟರ್‌ನಲ್ಲಿ ಬಳಕೆದಾರರು ಚಾಟ್‌ಜಿಪಿಟಿ ಚಾಟ್‌ಬಾಟ್ ಸ್ಥಗಿತದ ಬಗ್ಗೆ ಸಮಸ್ಯೆ ಹೊರಹಾಕಿದ್ದರು.

ಹಾಗೆಯೇ ಚಾಟ್‌ಜಿಪಿಟಿ ಚಾಟ್‌ಬಾಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಎಂದು ಸಮಸ್ಯೆ ವ್ಯಕ್ತಪಡಿಸುತ್ತಿದ್ದರು. ಅಲ್ಲದೇ ಚಾಟ್‌ಜಿಪಿಟಿ ಡೌನ್‌ ಆಗಿರುವ ಕುರಿತಾಗಿ ಮಿಮ್ಸ್‌ ಹಾಗೂ ಟ್ರೋಲ್‌ ಸಹ ಮಾಡುತ್ತಿದ್ದಾರೆ. ಅಂದಹಾಗೆ ಓಪನ್‌AI ಇತ್ತೀಚಿಗೆ ಚಾಟ್‌ಜಿಪಿಟಿ 4 ಅನ್ನು ಪರಿಚಯಿಸಿದೆ.

Best Mobiles in India

English summary
Google services down! Users face issues with Gmail, YouTube. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+