ವಿಶ್ವದ ಎತ್ತರ ಕಟ್ಟಡ ಈಗ ಗೂಗಲ್ ಸ್ಟ್ರೀಟ್ ವ್ಯೂ ಕ್ಯಾಮೆರಾದಲ್ಲಿ ಸೆರೆ
ನೀವೆಲ್ಲಾ ಗೂಗಲ್ ಸ್ಟ್ರೀಟ್ ವ್ಯೂ ಬಗ್ಗೆ ಕೇಳಿರಬಹುದು. ಗೂಗಲ್ ತನ್ನ 'ಆನ್‌ಲೈನ್ ಮ್ಯಾಪಿಂಗ್' ಸೇವೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ 'ಸ್ಟ್ರೀಟ್ ವ್ಯೂ ವೆಹಿಕಲ್' ಎಂಬ ಸಾಧನದ ಮೂಲಕ ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಮಹಾನಗರಗಳ ಸೆರೆ ಹಿಡಿದಿತ್ತು ಈಗ ಈ ಗೂಗಲ್ ಸ್ಟೀಟ್ ವ್ಯೂ ಮತ್ತೆ ಸುದ್ದಿಯಲ್ಲಿದೆ. ಇಲ್ಲಿಯವರೆಗೆ ತನ್ನ ವಿವಿಧ ಉಪಕರಣಗಳ ಮೂಲಕ ಹೊರಗಿನ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದ ಗೂಗಲ್ ಈಗ ಪ್ರಪ್ರಥಮ ಬಾರಿಗೆ ಒಳಾಂಗಣ ದೃಶ್ಯವನ್ನು ರೆಕಾರ್ಡ್ ಮಾಡಿದೆ. ವಿಶ್ವದ ಎತ್ತರದ ಕಟ್ಟಡ ಎಂದು ಹೆಗ್ಗಳಿಕೆ ಪಡೆದ ದುಬೈನ ಬುರ್ಜ್ ಖಲೀಫಾ ಒಳಗಿನ ದೃಶ್ಯ ಸ್ಟ್ರೀಟ್ ವ್ಯೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನೆಲದಿ೦ದ 828 ಮೀಟರ್ ಎತ್ತರದ ಈ ಕಟ್ಟಡದ ಒಳಗಿನ ದೃಶ್ಯ ಜೊತೆಗೆ ಎತ್ತರ ಮಹಡಿಯಿಂದ ದುಬೈ ನಗರವನ್ನು ಗೂಗಲ್ ಸೆರೆಹಿಡಿದಿದೆ. ಸ್ಟೀಟ್ ವ್ಯೂ ಮೂಲಕ ಪ್ರಪ್ರಥಮ ಬಾರಿಗೆ ಸೆರೆಯಾದ ಕಟ್ಟಡ ಎಂಬ ಕೀರ್ತಿಗೆ ಬುರ್ಜ್ ಖಲೀಫಾ ಪಾತ್ರವಾಗಿದೆ. ಸ್ಟೀಟ್ ವ್ಯೂ ಟ್ರಿಕ್ಕರ್ ಟ್ರಾಲಿ,ಬ್ಯಾಕ್ ಪ್ಯಾಕ್ ಕ್ಯಾಮೆರಾದ ಮೂಲಕ ಈ ಕಟ್ಟಡದ 76 ಮಹಡಿಯಲ್ಲಿರುವ ವಿಶ್ವದ ಎತ್ತರ ಈಜುಕೊಳ, 124 ಮಹಡಿಯಲ್ಲಿರುವ ವಿಶ್ವದ ಎತ್ತರದ ವೀಕ್ಷಣಾಲಯ, 163ನೇ ಮಹಡಿಯಲ್ಲಿರುವ ವಿಶ್ವದ ಎತ್ತರದ ಕೊಠಡಿಯನ್ನು ಸೆರೆ ಹಿಡಿದಿದೆ.
ಹೀಗಾಗಿ ಇಲ್ಲಿ ಈ ಎತ್ತರದ ಕಟ್ಟಡವನ್ನು ಸೆರೆ ಹಿಡಿಯಲು ಗೂಗಲ್ ಬಳಸಿದ ಉಪಕರಣಗಳು ಯಾವುದು ಮತ್ತು ಇದನ್ನು ಹೇಗೆ ಸರೆ ಹಿಡಿದಿದೆ ಎನ್ನುವುದರ ಬಗ್ಗೆ ವೀಡಿಯೋ ಮಾಹಿತಿ ಇದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ : ಗೂಗಲ್ ಸ್ಟ್ರೀಟ್ ವ್ಯೂ ಮ್ಯಾಪ್‌ನ್ನು ನಿರ್ಮಿಸಿದ್ದು ಹೇಗೆ?

ಗೂಗಲ್ ಸ್ಟೀಟ್ ವ್ಯೂನಲ್ಲಿ ದುಬೈ ಬುರ್ಜ್ ಖಲೀಫಾ ಒಳಗಿನ ದೃಶ್ಯವನ್ನು ವೀಕ್ಷಿಸಲು ಇಲ್ಲಿ ಭೇಟಿ ನೀಡಿ: ಗೂಗಲ್ ಸ್ಟ್ರೀಟ್ ವ್ಯೂ

Click it and Unblock the Notifications