Subscribe to Gizbot

ಭಾರತದ 500 ರೈಲ್ವೇ ಸ್ಟೇಶನ್‌ಗಳಿಗೆ ಹೈಸ್ಪೀಡ್ ವೈಫೈ ಸೌಲಭ್ಯ

Written By:

ಭಾರತೀಯ ರೈಲ್ವೇಯೊಂದಿಗೆ ಕೈಜೋಡಿಸಲಿರುವ ಗೂಗಲ್ ಮುಂದಿನ ವರ್ಷ 500 ಸ್ಟೇಶನ್‌ಗಳಿಗೆ ವೈಫೈ ಸೇವೆಗಳನ್ನು ಒದಗಿಸಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಗೂಗಲ್ ಕೇಂದ್ರದಲ್ಲಿ ನುಡಿದಿದ್ದಾರೆ. ಗೂಗಲ್ ಅರ್ತ್‌ನ ಅನೂಹ್ಯ ಕಮಾಲನ್ನು ಹೊಗಳಿದ ಪ್ರಧಾನಿಯವರು ದೇಶದ ಪ್ರಗತಿಯಲ್ಲಿ ಸರ್ಚ್ ಇಂಜಿನ್ ದೈತ್ಯನ ಕೊಡುಗೆ ಅಪಾರವಾದುದು ಎಂದು ಶ್ಲಾಫಿಸಿದ್ದಾರೆ.

ಓದಿರಿ: ಸಿಲಿಕಾನ್‌ ವ್ಯಾಲಿಯಲ್ಲಿ ಮೋದಿಯ ಡಿಜಿಟಲ್‌ ಮುಖ್ಯಾಂಶಗಳು

ಇನ್ನು ಪ್ರತಿಯೊಬ್ಬ ನಾಗರೀಕನಿಗೂ ಅತ್ಯವಶ್ಯಕ ಎಂಬ ಮಾದರಿಯಲ್ಲಿ ಗೂಗಲ್ ತನ್ನ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದು ತಂತ್ರಜ್ಞಾನದ ಅದ್ಭುತಗಳನ್ನು ಪ್ರತಿಯೊಬ್ಬ ಬಳಕೆದಾರನ ಕೈಗೆಟಕುವಂತೆ ಮಾಡುವಲ್ಲಿ ಸಂಸ್ಥೆಯ ಕಮಾಲು ನಿಜಕ್ಕೂ ಶ್ಲಾಘನೀಯವಾದುದು ಎಂದು ನುಡಿದಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
500 ರೈಲು ಸ್ಟೇಶನ್‌ಗಳಿಗೆ ವೈಫೈ ಸೌಲಭ್ಯ

500 ರೈಲು ಸ್ಟೇಶನ್‌ಗಳಿಗೆ ವೈಫೈ ಸೌಲಭ್ಯ

ಇನ್ನು ಗೂಗಲ್‌ನ ಹೆಚ್ಚಿನ ಉದ್ಯೋಗಿಗಳಲ್ಲಿ ಹೆಚ್ಚಿನವರು ಭಾರತೀಯರಾಗಿದ್ದಾರೆ ಇದೂ ಕೂಡ ನಮ್ಮ ದೇಶಕ್ಕೆ ಹೆಮ್ಮೆಯ ವಿಷಯವಾಗಿದ್ದು ಭಾರತದಲ್ಲಿ 500 ರೈಲು ಸ್ಟೇಶನ್‌ಗಳಿಗೆ ವೈಫೈ ಸೌಲಭ್ಯವನ್ನು ಒದಗಿಸುವಲ್ಲಿ ಗೂಗಲ್ ಶೀಘ್ರದಲ್ಲಿಯೇ ಕೈಜೋಡಿಸಲಿದೆ.

ಇಂಟರ್ನೆಟ್ ಸೌಲಭ್ಯ

ಇಂಟರ್ನೆಟ್ ಸೌಲಭ್ಯ

ಇನ್ನು ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಗೂಗಲ್ 100 ಸ್ಟೇಶನ್‌ಗಳಿಗೆ ಹೆಚ್ಚು ವೇಗದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಿದೆ ನಂತರ ಮುಂದಿನ ವರ್ಷ ಸ್ಟೇಶನ್ ಸಂಖ್ಯೆಯನ್ನು 400 ಕ್ಕೆ ಏರಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಎರಡು ಪಟ್ಟು ಹೆಚ್ಚಿನ ಅಂತರ

ಎರಡು ಪಟ್ಟು ಹೆಚ್ಚಿನ ಅಂತರ

ಯುರೋಪ್ ಮಾದರಿಯ ನೆಟ್‌ವರ್ಕ್ ಅನ್ನು ಭಾರತೀಯ ರೈಲ್ವೇ ಹೊಂದಿದೆ ಅಂತೆಯೇ ಭೂಮಿ ಮತ್ತು ಸೂರ್ಯನ ನಡುವಿನ ಎರಡು ಪಟ್ಟು ಹೆಚ್ಚಿನ ಅಂತರವನ್ನು ಭಾರತೀಯ ರೈಲ್ವೇ ಹೊಂದಿದೆ ಎಂಬುದಾಗಿ ಅವರು ಗುರುತು ಮಾಡಿದ್ದಾರೆ.

ಆನ್‌ಲೈನ್ ವ್ಯವಸ್ಥೆಯಲ್ಲಿ ಸುಧಾರಣೆ

ಆನ್‌ಲೈನ್ ವ್ಯವಸ್ಥೆಯಲ್ಲಿ ಸುಧಾರಣೆ

ಆನ್‌ಲೈನ್ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಮಾಡಹೊರಟಿರುವ ಸಂಸ್ಥೆ ಭಾರತೀಯರು ಸಂಪೂರ್ಣ ವೆಬ್ ಅನ್ನು ಯಾವುದೇ ತೊಡಕಿಲ್ಲದೆ ಪ್ರವೇಶಿಸುವ ಅವಕಾಶವನ್ನು ಒದಗಿಸಲಿದೆ.

ಆಧುನಿಕ ಮತ್ತು ವೇಗದ ಮಾದರಿಯ ಬ್ರಾಡ್‌ಬ್ಯಾಂಡ್

ಆಧುನಿಕ ಮತ್ತು ವೇಗದ ಮಾದರಿಯ ಬ್ರಾಡ್‌ಬ್ಯಾಂಡ್

ಹಳೆಯ ಇಂಟರ್ನೆಟ್ ಸಂಪರ್ಕಕ್ಕೆ ಆಧುನಿಕ ಮತ್ತು ವೇಗದ ಮಾದರಿಯ ಬ್ರಾಡ್‌ಬ್ಯಾಂಡ್ ವ್ಯವಸ್ಥೆಯನ್ನು ಬಳಕೆದಾರ ಪಡೆದುಕೊಳ್ಳಲಿದ್ದಾನೆ.

ಗೂಗಲ್ ಕೈ ಜೋಡಿಸಲಿದೆ

ಗೂಗಲ್ ಕೈ ಜೋಡಿಸಲಿದೆ

ಡಿಜಿಟಲ್ ಇಂಡಿಯಾ ಆರಂಭದ ಹೊಸ ಹೆಜ್ಜೆಯಂತೆ ಹೆಚ್ಚು ವೇಗದ ವೈಫೈ ಸೌಲಭ್ಯವನ್ನು 400 ರೈಲು ಸ್ಟೇಶನ್‌ಗಳಿಗೆ ಒದಗಿಸುವ ಹೊಸ ಪ್ರಾಜೆಕ್ಟ್‌ಗೆ ಗೂಗಲ್ ಕೈ ಜೋಡಿಸಲಿದೆ ಎಂಬುದಾಗಿ ಘೋಷಿಸಿದೆ.

ಅತ್ಯಂತ ದೊಡ್ಡ ರೈಲ್ವೇ ನೆಟ್‌ವರ್ಕ್

ಅತ್ಯಂತ ದೊಡ್ಡ ರೈಲ್ವೇ ನೆಟ್‌ವರ್ಕ್

ವಿಶ್ವದ ಅತ್ಯಂತ ದೊಡ್ಡ ರೈಲ್ವೇ ನೆಟ್‌ವರ್ಕ್ ಎಂದೇ ಖ್ಯಾತಿ ಪಡೆದಿರುವ ಭಾರತೀಯ ರೈಲ್ವೇಗಳಲ್ಲಿ ಕಾರ್ಯನಿರ್ವಹಿಸುವುದು ನಿಜಕ್ಕೂ ಅದ್ಭುತ ವಿಚಾರ ಎಂದೆನಿಸಿದೆ ಎಂಬುದು ಸುಂದರ್ ನುಡಿಯಾಗಿದೆ.

100 ಸ್ಟೇಶನ್‌

100 ಸ್ಟೇಶನ್‌

2016 ರ ಕೊನೆಯಲ್ಲಿ ಹೆಚ್ಚು ಕಾರ್ಯನಿರತವಾಗಿರುವ 100 ಸ್ಟೇಶನ್‌ಗಳನ್ನು ನೆಟ್‌ವರ್ಕ್ ಶೀಘ್ರವಾಗಿ ಕವರ್ ಮಾಡಲಿದೆ.

ಆಂಡ್ರಾಯ್ಡ್ ಅಪ್ಲಿಕೇಶನ್

ಆಂಡ್ರಾಯ್ಡ್ ಅಪ್ಲಿಕೇಶನ್

ಮೋದಿಯವರ ಮಾತೃ ಭಾಷೆ ಗುಜರಾತಿ ಸೇರಿದಂತೆ 11 ಭಾರತೀಯ ಭಾಷೆಗಳನ್ನು ಬಳಕೆದಾರರಿಗೆ ಸಕ್ರಿಯಗೊಳಿಸುವ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಗೂಗಲ್ ಬಿಡುಗಡೆ ಮಾಡಲಿದೆ.

ಯೋಜನೆ

ಯೋಜನೆ

ಇನ್ನು ಬಡತನದಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಗೂಗಲ್ ಉದ್ಯೋಗಿಗಳು ಏನಾದರೂ ಯೋಜನೆಗಳನ್ನು ಹೊರತರಬೇಕೆಂದು ಮೋದಿಯವರು ವಿನಂತಿಸಿಕೊಂಡಿದ್ದಾರೆ.

ತಂತ್ರಜ್ಞಾನದ ಪ್ರಗತಿ

ತಂತ್ರಜ್ಞಾನದ ಪ್ರಗತಿ

ಇನ್ನು ತಂತ್ರಜ್ಞಾನದ ಪ್ರಗತಿಯನ್ನು ಹೊಗಳುತ್ತಾ ಮೋದಿಯವರು ಅದರ ಇನ್ನೊಂದು ಮುಖವನ್ನು ಬಿಚ್ಚಿಟ್ಟಿದ್ದಾರೆ. ಜನರು ತಮ್ಮ ಕರ್ತವ್ಯಗಳನ್ನು ಮರೆತು ಇಂದಿನ ಕಾಲದಲ್ಲಿ ಇಂಟರ್ನೆಟ್‌ನಲ್ಲಿ ಹೆಚ್ಚು ಬ್ಯುಸಿಯಾಗುತ್ತಿರುವುದು ಆತಂಕದ ವಿಷಯವಾಗಿದೆ ಎಂದವರು ನುಡಿದಿದ್ದಾರೆ.

ತಂತ್ರಜ್ಞಾನದ ಹಸಿವು

ತಂತ್ರಜ್ಞಾನದ ಹಸಿವು

ಇನ್ನು ತಂತ್ರಜ್ಞಾನದ ಹಸಿವು ಭಾರತದಲ್ಲಿ ಹೆಚ್ಚು ಎದ್ದು ಕಾಣುತ್ತಿದ್ದು ಗೂಗಲ್ ಕ್ರೋಮ್ ಬ್ರೌಸರ್ ಅನ್ನು ಲಾಂಚ್ ಮಾಡಿದಾಗ ಅದನ್ನು ಹಲವಾರು ಪ್ರಯೋಜನಕಾರಿ ವಿಧಾನಗಳಲ್ಲಿ ಅಳವಡಿಸಿಕೊಂಡಿದ್ದು ಭಾರತವಾಗಿದೆ ಎಂದು ಸುಂದರ್ ಪಿಚ್ಚೈ ಶ್ಲಾಫಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google will collaborate with Indian Railways to provide wi-fi services at 500 stations by next year, Prime Minister Narendra Modi announced today as he visited the headquarters of the search engine giant here.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot