Home
ಸುದ್ದಿಜಾಲ

ಗೂಗಲ್‌ನ ಈ ಎರಡು ಅಗತ್ಯ ಆಪ್‌ಗಳಲ್ಲಿ ಬದಲಾವಣೆ; ಏನದು ಗೊತ್ತಾ!?

ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಹಲವಾರು ವಿಧದಲ್ಲಿ ಬಳಕೆದಾರರಿಗೆ ಸೇವೆ ನೀಡುತ್ತಾ ಬರುತ್ತಿದೆ. ಅಂತೆಯೇ ಗೂಗಲ್‌ನ ಆಪ್‌ಗಳಾಗಿರಬಹುದು ಅಥವಾ ಗೂಗಲ್‌ನ ಸರ್ಚ್‌ ಇಂಜಿನ್‌ ಸೇವೆಯಾಗಿರಬಹುದು. ಇವೆಲ್ಲಾ ಬಳಕೆದಾರರಿಗೆ ಅಗತ್ಯವಾಗಿರುವ ಸೇವೆಯಾಗಿದ್ದು, ಅದರಂತೆ ಗೂಗಲ್‌ ತನ್ನ ಆಪ್‌ಗಳಲ್ಲಿ ಕೆಲವು ನವೀಕರಣಗಳನ್ನು ಮಾಡುತ್ತಿದ್ದು, ಬಳಕೆದಾರರಿಗೆ ಹೊಸ ರೀತಿಯ ಅನುಭವ ನೀಡುತ್ತಾ ಬರುತ್ತಿದೆ.

ಗೂಗಲ್

ಹೌದು, ಗೂಗಲ್ ತನ್ನ ಯುಟಿಲಿಟಿ ಆಪ್‌ಗಳಿಗಾಗಿ ಹೊಸ ನವೀಕರಣಗಳನ್ನು ಹೊರತರಲು ಮುಂದಾಗಿದೆ. ಇದರಲ್ಲಿ ಗೂಗಲ್ ಕ್ಲಾಕ್‌ ಹಾಗೂ ಗೂಗಲ್ ಕ್ಯಾಲ್ಕುಲೇಟರ್‌ನಲ್ಲಿ ಹೊಸ ಸೌಲಭ್ಯ ಲಭ್ಯವಾಗಲಿದೆ. ಹಾಗಿದ್ರೆ, ನೀವು ಸಾಮಾನ್ಯವಾಗಿ ನಿಮ್ಮ ಫೋನ್‌ನಲ್ಲಿ ಬಳಕೆ ಮಾಡುವ ಈ ಎರಡೂ ಆಯ್ಕೆಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿವೆ?. ಇದರಿಂದ ಬಳಕೆದಾರರಿಗೆ ಯಾವೆಲ್ಲಾ ಪ್ರಯೋಜನ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಈ ಎರಡೂ ಆಪ್‌ಗಳಲ್ಲಿ ಬದಲಾವಣೆ

ಈ ಎರಡೂ ಆಪ್‌ಗಳಲ್ಲಿ ಬದಲಾವಣೆ

ಇತ್ತೀಚಿನ ನವೀಕರಣದಲ್ಲಿ ಕ್ಯಾಲ್ಕುಲೇಟರ್ ಅಪ್ಲಿಕೇಶನ್‌ಗೆ ಆವೃತ್ತಿ 8.4 ಮತ್ತು ಕ್ಲಾಕ್‌ ಅಪ್ಲಿಕೇಶನ್‌ಗೆ ಆವೃತ್ತಿ 7.4 ಅನ್ನು ಹೊರತರಲಾಗುತ್ತಿದೆ. ಈ ಮೂಲಕ ಈ ಎರಡೂ ಆಪ್‌ಗಳಲ್ಲಿ ಅಗಾಧವಾದ ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಗೂಗಲ್‌ ಕ್ಲಾಕ್‌ನಲ್ಲಿನ ಬದಲಾವಣೆ ಏನು?

ಗೂಗಲ್‌ ಕ್ಲಾಕ್‌ನಲ್ಲಿನ ಬದಲಾವಣೆ ಏನು?

ಗೂಗಲ್ ಕ್ಲಾಕ್‌ ಆವೃತ್ತಿ 7.4 ಅಪ್‌ಡೇಟ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಸ್ಟಮ್ ಅಲಾರಾಂ ಸೌಂಡ್‌ ಅನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ. ಈ ಫೀಚರ್ಸ್‌ ರೆಕಾರ್ಡರ್ ಆಪ್‌ ಅನ್ನು ಅವಲಂಭಿಸಲಿದೆ.

ಕ್ಲಾಕ್‌

ಅದರಲ್ಲೂ ಈ ಫೀಚರ್ಸ್ ಇತರ OEM ನ ಕ್ಲಾಕ್‌ ಅಪ್ಲಿಕೇಶನ್‌ಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದು, ಈ ಮೂಲಕ ಬಳಕೆದಾರರು ಸ್ಥಳೀಯ ಫೈಲ್ ಅನ್ನು ಅಲಾರಂ ಸೌಂಡ್‌ ಆಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರ ಹೊರತಾಗಿ ಓವರ್‌ಫ್ಲೋ ಮೆನುವಿನಲ್ಲಿ ಹೊಸ 'ಗೌಪ್ಯತೆ ನೀತಿ' ಲಭ್ಯವಾಗಲಿದ್ದು, ಇದು google.com/privacy ವೆಬ್‌ಪುಟಕ್ಕೆ ಮರುನಿರ್ದೇಶಿಸುತ್ತದೆ.

ಗೂಗಲ್‌ ಕ್ಯಾಲ್ಕುಲೇಟರ್‌ನಲ್ಲಿ ಕಂಡು ಬರುವ ಬದಲಾವಣೆ ಏನು?

ಗೂಗಲ್‌ ಕ್ಯಾಲ್ಕುಲೇಟರ್‌ನಲ್ಲಿ ಕಂಡು ಬರುವ ಬದಲಾವಣೆ ಏನು?

ಗೂಗಲ್ ಕ್ಯಾಲ್ಕುಲೇಟರ್ ಅಪ್ಲಿಕೇಶನ್‌ನಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಹೆಚ್ಚಿನ ಬದಲಾವಣೆ ಏನೂ ಇಲ್ಲ. ಇದರಲ್ಲಿ ಒಂದೇ ಒಂದು ಬದಲಾವಣೆ ಕಂಡುಬರಲಿದ್ದು, ಈ ಮೂಲಕ ಓವರ್‌ಫ್ಲೋ ಮೆನುವಿನಲ್ಲಿ ಹೊಸ ಗೌಪ್ಯತೆ ನೀತಿ ಶಾರ್ಟ್‌ಕಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಗೂಗಲ್‌ ಕ್ಲಾಕ್‌ ಅಪ್ಲಿಕೇಶನ್ ನವೀಕರಣವನ್ನು ಸರ್ವರ್ ಸೈಡ್ ಅಪ್‌ಡೇಟ್‌ನಂತೆ ಬಳಕೆದಾರರಿಗೆ ಪರಿಚಯಿಸಲಾಗುತ್ತಿದ್ದು, ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಲ್ಲಿ ಲಭ್ಯವಿರುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.

ಗೂಗಲ್‌

ಇನ್ನು ಗೂಗಲ್‌ ಕ್ಲಾಕ್‌ ಅಪ್ಲಿಕೇಶನ್‌ನ ಹಿಂದಿನ ಆವೃತ್ತಿ 7.3 ರಲ್ಲಿ ಅಲಾರಾಂ ಮತ್ತು ಬಹು-ಟೈಮರ್ ಬಳಕೆದಾರ ಇಂಟರ್ಫೇಸ್ ಅನ್ನು ವಿರಾಮಗೊಳಿಸಲು ಹೊಸ ಸಾಮರ್ಥ್ಯಗಳನ್ನು ನೀಡಲಾಗಿತ್ತು. ಹಾಗೆಯೇ ಆವೃತ್ತಿ 7.2 ನಲ್ಲಿ ಟ್ಯಾಬ್ಲೆಟ್ ಮರುವಿನ್ಯಾಸವನ್ನು ಅಪ್ಲಿಕೇಶನ್‌ಗೆ ತಂದಿತ್ತು.

ಗೂಗಲ್‌

ಇದರ ನಡುವೆ ಗೂಗಲ್‌ ಆಪಲ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಏರ್‌ಟ್ಯಾಗ್‌ ಅನ್ನು ಪರಿಚಯಿಸಲು ಮುಂದಾಗಿದೆ. ಈ ಗೂಗಲ್‌ ಟ್ರ್ಯಾಕಿಂಗ್ ಟ್ಯಾಗ್ ಮೂಲಕನಿಮ್ಮ ಕೀಗಳು ಅಥವಾ ಪರ್ಸ್ ಹಾಗೂ ಯಾವುದೇ ವಸ್ತು ಕಳೆದುಹೋದರೆ ತಕ್ಷಣವೇ ಹುಡುಕಬಹುದಾಗಿದೆ. ಇನ್ನು ಈ ಕೆಲಸಕ್ಕಾಗಿಯೇ ಆಪಲ್‌ ಈಗಾಗಲೇ ಈ ಏರ್‌ಟ್ಯಾಗ್‌ ಅನ್ನು ಪರಿಚಯಿದೆಯಾದರೂ ಇದು ದುಬಾರಿ ಬೆಲೆ ಹೊಂದಿರುವುದರಿಂದ ಸಾಮಾನ್ಯ ಜನರು ಇದನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ನೀಗಿಸಲೆಂದೇ ಗೂಗಲ್‌ ಈ ಹೊಸ ಏರ್‌ಟ್ಯಾಗ್‌ ಅನ್ನು ಅನಾವರಣ ಮಾಡಲು ಮುಂದಾಗಿದೆ.

ಟ್ರ್ಯಾಕಿಂಗ್

ಇನ್ನು ಎಲ್ಲಾ ಸಾಮಾನ್ಯ ಬಳಕೆದಾರರು ಈ ಟ್ರ್ಯಾಕಿಂಗ್ ಟ್ಯಾಗ್‌ಗಳನ್ನು ಕಾರ್, ಬೈಕ್ ಕೀಗಳು, ಪರ್ಸ್, ಸಾಕುಪ್ರಾಣಿಗಳಿಗೆ ಬಳಕೆ ಮಾಡಬಹುದಾಗಿದೆ.ಹೀಗಾಗಿ ಯಾವುದೇ ವಸ್ತುಗಳು ಅಥವಾ ಸಾಕುಪ್ರಾಣಿಗಳನ್ನು ಕಳೆದುಕೊಳ್ಳುವ ಆತಂಕ ಎಂದಿಗೂ ನಿರ್ಮಾಣ ಆಗುವುದಿಲ್ಲ.

Best Mobiles in India

English summary
There is a change in Google calculator application and clock application, details are in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+