ಗೂಗಲ್‌ನಿಂದ ಹೊಸದಾಗಿ ಬ್ರೈಲ್ ಕೀಬೋರ್ಡ್ ಅನಾವರಣ!
ಪ್ರಸ್ತುತ ಇಂದನ ಬಹುತೇಕ ಕೆಲಸಗಳು ಸ್ಮಾರ್ಟ್‌ಫೋನ್ ಮೂಲಕವೇ ನಡೆಯುತ್ತವೇ. ಈ ನಿಟ್ಟಿನಲ್ಲಿ ವಿಶ್ವ ಟೆಕ್ ದೊಡ್ಡಣ್ಣ ಎಂದೆನಿಸಿಕೊಂಡಿರುವ ಗೂಗಲ್ ಬಳಕೆದಾರರಿಗೆ ಹಲವು ಉಪಯುಕ್ತ ಸೇವೆಗಳನ್ನು ಪರಿಚಯಿಸಿದೆ. ಆ ಸಾಲಿಗಿಗ ಹೊಸ ಸೇರ್ಪಡೆ ಎಂದರೇ ಬ್ರೈಲ್ ಕೀಬೋರ್ಡ್. ಅಂಧರು ಸಹ ತಮ್ಮ ಸ್ಮಾರ್ಟ್‌ಫೋನಿನಲ್ಲಿ ಸುಲಭವಾಗಿ ಟೈಪ್ ಮಾಡಲು ಅನುಕೂಲ ಒದಗಿಸಲು ಗೂಗಲ್ ಹೊಸದಾಗಿ ಬ್ರೈಲ್ ಕೀಬೋರ್ಡ್ ಪರಿಚಯಿಸಿದೆ.

ಹೌದು, ಅಂಧರಿಗಾಗಿ ಗೂಗಲ್ ಈಗ ಹೊಸದಾಗಿ ಬ್ರೈಲ್ ಕೀಬೋರ್ಡ್ ಅನ್ನು ಪ್ರಾರಂಭಿಸಿದೆ. ಈ ಕೀಪ್ಯಾಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಬೆಂಬಲ ಒದಗಿಸುತ್ತದೆ. ಹೀಗಾಗಿ ಯಾವುದೇ ಹೆಚ್ಚುವರಿ ಹಾರ್ಡ್‌ವೇರ್ ಬಳಸದೆ ಟೈಪ್ ಮಾಡಲು ಈ ಕೀಪ್ಯಾಡ್ ಅನುಮತಿಸುತ್ತದೆ. ಹೊಸ ಕೀಬೋರ್ಡ್ ಒಟ್ಟು ಆರು ಕೀ ವಿನ್ಯಾಸಗಳನ್ನು ಒಳಗೊಂಡಿದ್ದು, ಟೈಪ್ ಮಾಡಬಹುದು ಹಾಗೂ ಡಿಲೀಟ್/ಅಳಿಸುವ ಸೌಲಭ್ಯವು ಇದೆ.

ಬ್ರೈಲ್ ಕೀಪ್ಯಾಡ್ 6-ಕೀ ವಿನ್ಯಾಸವನ್ನು ಹೊಂದಿದ್ದು, ಪ್ರತಿ ಕೀಲಿಯು 6 ಬ್ರೈಲ್ ಚುಕ್ಕೆಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ. ಕೀ ಅನ್ನು ಟ್ಯಾಪ್ ಮಾಡಿದಾಗ ಯಾವುದೇ ಅಕ್ಷರ ಅಥವಾ ಚಿಹ್ನೆ ಮೂಡುತ್ತದೆ. ಉದಾಹರಣೆಗೆ A ಎಂದು ಟೈಪ್ ಮಾಡಲು ನೀವು ಡಾಟ್ 1 ಅನ್ನು ಒತ್ತಿರಿ. ಹಾಗೂ B ಗಾಗಿ ಡಾಟ್ಸ್ 1 ಮತ್ತು 2 ಅನ್ನು ಒಟ್ಟಿಗೆ ಟೈಪ್ ಮಾಡಬೇಕಿದೆ ಎಂದು ಆಂಡ್ರಾಯ್ಡ್ ಉತ್ಪನ್ನ ನಿರ್ವಾಹಕ ಬ್ರಿಯಾನ್ ಕೆಮ್ಲರ್ ಬ್ಲಾಗ್ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ.

ಬಳಕೆದಾರರಿಗೆ ಈ ಕೀ ಬೋರ್ಡ್‌ನಲ್ಲಿ ಸುಲಭವಾಗಿ ಟೆಕ್ಸ್ಟ್ ಟೈಪ್ ಮಾಡಲು ಮಾತ್ರವಲ್ಲ, ಹಲವು ಸಾಲುಗಳಲ್ಲಿ ಬರವಣಿಗೆ ಮಾಡಲು ಪೂರಕವಾಗಿದೆ. ಹಾಗೆಯೇ ಬ್ರೈಲ್ ಕೀಬೋರ್ಡ್ ಅನ್ನು ಆನ್ ಮತ್ತು ಆಫ್ ಮಾಡುವ ಸೌಲಭ್ಯವು ಸಹ ಹೊಂದಿದೆ. ಫೋನ್ ವ್ಯಾಲ್ಯೂಮ್ ಬಟನ್ 3 ಸೆಕೆಂಡ್ ಒತ್ತಿ ಹಿಡಿಯುವ ಮೂಲಕ ಆಡಿಯೊ ಪ್ರತಿಕ್ರಿಯೇ ಸಫೋರ್ಟ್ ಸಕ್ರಿಯ ಮಾಡಬಹುದಾಗಿದೆ. ಹಾಗೂ ಕೈ ಸನ್ನೆ/ಗೆಸ್ಚರ್ ಪ್ರಕ್ರಿಯೆ ಸೂಕ್ತವಾಗುವುದಿಲ್ಲ.

ಬಳಕೆದಾರರು ಈ ಬ್ರೈಲ್ ಕೀಬೋರ್ಡ್ ಅನ್ನು ಸಕ್ರಿಯ ಮಾಡಲು ಟಾಕ್‌ಬ್ಯಾಕ್ ಸೆಟ್ಟಿಂಗ್‌ಗಳನ್ನು ಆನ್ ಮಾಡಬೇಕಾಗುತ್ತದೆ. ಆನಂತರ Accessibility > TalkBack > Settings > select Braille keyboard > Select Tap to set up > Select Settings in the dialog > turn on TalkBack ಈ ಹಂತಗಳನ್ನು ಅನುಸರಿಸಬೇಕಿದೆ. ಗೂಗಲ್‌ನ ಈ ಟಾಕ್‌ಬ್ಯಾಕ್ ಬ್ರೈಲ್ ಕೀಬೋರ್ಡ್ ಆಂಡ್ರಾಯ್ಡ್ 5 ಮತ್ತು ಅದಕ್ಕಿಂತಲೂ ಹೆಚ್ಚಿನ ಓಎಸ್ ಆವೃತ್ತಿಗಳಲ್ಲಿ ಸಫೋರ್ಟ್ ಒದಗಿಸಲಿದೆ.


Click it and Unblock the Notifications








