ಗೂಗಲ್‌ನಿಂದ ಹೊಸ ಪ್ರೀಪೇಯ್ಡ್ ವ್ಯಾಲೆಟ್ ಕಾರ್ಡ್ ಬಿಡುಗಡೆ
ಇಂಟರ್‌ನೆಟ್ ದಿಗ್ಗಜ ಗೂಗಲ್ ಈಗ ಮತ್ತೊಂದು ಪ್ರೊಡಕ್ಟ್‌ನ್ನು ಬಿಡುಗಡೆ ಮಾಡಿದೆ. ಗೂಗಲ್ ಹೊಸ ಪ್ರಿಪೇಡ್ ವ್ಯಾಲೆಟ್ ಕಾರ್ಡ್‌ನ್ನು ಅಮೆರಿಕದಲ್ಲಿ ಬಿಡುಗಡೆ ಮಾಡಿದ್ದು ಬಳಕೆದಾರರು ಇತರೇ ಡೆಬಿಟ್ ಕಾರ್ಡ್‌ನಂತೆ ವಸ್ತುಗಳನ್ನು ಖರೀದಿಸಲು,ಆನ್‌ಲೈನ್ ವ್ಯವಹಾರ ಮತ್ತು ಎಟಿಎಂನಿಂದ ಹಣ ತೆಗೆಯಲು ಈ ಕಾರ್ಡ್‌ನ್ನು ಬಳಸಬಹುದಾಗಿದೆ.
ಆದರೆ ಇದು ಬ್ಯಾಂಕ್ ಎಟಿಎಂ ಡೆಬಿಟ್ ಕಾರ್ಡ್‌ನಂತೆ ಇದ್ದರೂ ಸ್ವಲ್ಪ ಬದಲಾವಣೆ ಇದೆ.ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನೇರವಾಗಿ ಗೂಗಲ್ ಡೆಬಿಟ್ ಕಾರ್ಡ್‌ಗೆ ವರ್ಗಾಯಿಸಲು ಸಾಧ್ಯವಿಲ್ಲ.ಬದಲಾಗಿ ಗೂಗಲ್ ವ್ಯಾಲೆಟ್ ಆಪ್ಲಿಕೇಶನ್ ಅಕೌಂಟ್‌ಗೆ ವರ್ಗಾಯಿಸಿ ನಂತರ ಈ ಕಾರ್ಡ್‌ನ್ನು ವ್ಯವಹಾರದಲ್ಲಿ ಬಳಸಬಹುದಾಗಿದೆ.

ಡೆಬಿಟ್ ಕಾರ್ಡ್ ಕಳುವಾದರೆ, ಅದರಲ್ಲಿರುವ ಹಣವನ್ನು ದೋಚುವ ಸಾಧ್ಯತೆ ಇರುತ್ತದೆ. ಆದರೆ ಗೂಗಲ್ ವ್ಯಾಲೆಟ್‌ನಲ್ಲಿ ಬಳಕೆದಾರರು ತಮಗೆ ಬೇಕಾದಷ್ಟೇ ಹಣವನ್ನು ವ್ಯಾಲೆಟ್‌ಗೆ ವರ್ಗಾಯಿಸಿ ವ್ಯವಹಾರ ನಡೆಸಬಹುದು.ಒಂದು ವೇಳೆ ಗೂಗಲ್ ಡೆಬಿಟ್ ಕಾರ್ಡ್ ಕಳೆದು ಹೋದರು ಆ ಕಾರ್ಡ್‌ನಲ್ಲಿರುವ ಹಣ ಮಾತ್ರ ದೋಚಬಹುದು. ಈ ಕಾರಣಕ್ಕಾಗಿ ಹೊಸ ವ್ಯಾಲೆಟ್ ಕಾರ್ಡ್ ಪ್ರೊಡಕ್ಟ್‌ನ್ನು ಆರಂಭಿಸುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.
ಈ ಹೊಸ ಪ್ರೊಡೆಕ್ಟ್‌ನಿಂದ ಗೂಗಲ್ ಲಾಭವಿದ್ದು,ಈ ಡೆಬಿಟ್ ಕಾರ್ಡ್ ಬಳಸಿ ಗ್ರಾಹಕರು ಯಾವುದೆಲ್ಲ ವಸ್ತುಗಳನ್ನು ಖರೀದಿಸಿದ್ದಾರೆ ಎನ್ನುವ ಡೇಟಾವನ್ನು ಸಂಗ್ರಹಿಸುತ್ತದೆ.ನಂತರ ಸಂಗ್ರಹಿಸಿದ ಡೇಟಾವನ್ನು ಜಾಹೀರಾತು ಕಂಪೆನಿಗಳಿಗೆ ನೀಡುವ ಮೂಲಕ ಗೂಗಲ್ ಹಣವನ್ನು ಸಂಪಾದಿಸುತ್ತದೆ.
ಇದನ್ನೂ ಓದಿ: ಗೂಗಲ್ ಉದ್ಯೋಗಿಗಳಿಗೆ ಪೂರಕ ಆಫೀಸ್ ಅಲ್ಲ!


Click it and Unblock the Notifications








