ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

By Ashwath
|

ಗೂಗಲ್‌ ವಿಶ್ವದ ಮಲ್ಟಿನ್ಯಾಷನಲ್‌ ಕಂಪೆನಿಯಾಗಿ ಈಗಾಗಲೇ ಹೊರ ಹೊಮ್ಮಿದೆ. ಮಾನವ ಸಂಪನ್ಮೂಲ ಸಂಸ್ಥೆ ಗ್ರೇಟ್‌ ಪ್ಲೇಸ್‌ಟು ವರ್ಕ್‌ ಇನ್ಸ್ಟಿಟ್ಯೂಟ್ ಈ ವರ್ಷದ ನಂಬರ್‌ ಒನ್‌ ಬಹುರಾಷ್ಟ್ರೀಯ ಕಂಪೆನಿ ಎನ್ನುವ ಪಟ್ಟವನ್ನು ಗೂಗಲ್‌ಗೆ ನೀಡಿದೆ.

ಗೂಗಲ್‌ಗೆ ಏನೇ ಈ ಎಲ್ಲಾ ರ್‍ಯಾಂಕ್‌ ಬಂದರೂ ಈ ಹಿಂದೆ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಗೂಗಲ್‌ ಕಂಪೆನಿಯಲ್ಲಿ ದೂರುತ್ತಿದ್ದಾರೆ. ಗೂಗಲ್‌ನಲ್ಲಿ ಉದ್ಯೋಗಿಗಳ ಅಭಿವೃದ್ಧಿಗೆ ಪೂರಕ ವಾತಾವರಣ ಇಲ್ಲವಂತೆ. ಉದ್ಯೋಗಿಗಳ ಉಸ್ತುವಾರಿ ನೋಡುವ ಟೀಮ್‌ ಲೀಡರ್‌ಗಳು ರಾಜಕೀಯ ಮಾಡುತ್ತಾರೆ ಎನ್ನವ ದೂರನ್ನು ಸಾಮಾಜಿಕ ಜಾಲತಾಣ ಕೋರಾದಲ್ಲಿ ಹೇಳಿದ್ದಾರೆ. ಈ ಸಂಬಂಧ ಕೋರಾದಲ್ಲಿ ಗೂಗಲ್‌ನ ಆಫೀಸ್‌ ಪರಿಸರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆ‌ಯೆ ನಡೆಯುತ್ತಿದೆ. ಹೀಗಾಗಿ ಇಲ್ಲಿ ಗೂಗಲ್‌ನ್ನು ತೊರೆದಿರುವ ಕೆಲವು ಉದ್ಯೋಗಿಗಳು ಗೂಗಲ್‌‌ ಮೇಲೆ ಆರೋಪ ಮಾಡಿರುವ ಕೆಲವೊಂದು ವಿಚಾರಗಳಿವೆ. ಏನೇನು ಆರೋಪ ಮಾಡಿದ್ದಾರೆ ಎನ್ನುವುದಕ್ಕೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್‌ನ ಯೂರೋಪ್‌ ಖಂಡದ ಕೇಂದ್ರ ಕಚೇರಿ ಹೇಗಿದೆ ನೋಡಿದ್ದೀರಾ

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!


ಗೂಗಲ್‌ನಲ್ಲಿ ಕೆಲಸ ಮಾಡುವ ಬಹುತೇಕ ಮಂದಿ ಉದ್ಯೋಗಕ್ಕೆ ಬೇಕಾಗಿರುವ ಅರ್ಹತೆಗಿಂತಲೂ ಹೆಚ್ಚಿನ ಅರ್ಹತೆ ಪಡೆದಿದ್ದಾರೆ. ಆರ್ಹತೆ ಪಡೆದಿದ್ದರೂ ಕಂಪೆನಿ ಮತ್ತು ಸಂಬಳಕ್ಕಾಗಿ ಗೂಗಲ್‌ನಲ್ಲೇ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸಣ್ಣ ಕೆಲಸಕ್ಕೂ ಪ್ರತಿಭಾವಂತ ಅಭ್ಯರ್ಥಿಗಳನ್ನೇ ಗೂಗಲ್‌ ಆಯ್ಕೆ ಮಾಡುತ್ತಿದೆ ಎನ್ನುವ ಒಂದು ದೂರನ್ನು ಉದ್ಯೋಗಿಗಳು ಹೇಳಿದ್ದಾರೆ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಈಗಾಗಲೇ ದೊಡ್ಡ ಮಲ್ಟಿನ್ಯಾಷನಲ್‌ ಕಂಪೆನಿಯಾಗಿ ಬೆಳೆದಿದೆ. ಹೀಗಾಗಿ ಹೊಸ ಉದ್ಯೋಗಿ ಆರಂಭದಲ್ಲೇ ಗೂಗಲ್‌ನಲ್ಲಿ ಉದ್ಯೋಗ ಪಡೆದರೆ ಅವನ/ಅವಳ ಬೆಳವಣಿಗೆ ಪ್ರೋತ್ಸಾಹ ಸಿಗುವುದಿಲ್ಲ ಮತ್ತು ಪ್ರತಿಭೆ ಬೇರೆಯವರಿಗೆ ತಿಳಿಯುದಿಲ್ಲ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!


ಗೂಗಲ್‌ನಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್‌ಗಳ ಪೈಕಿ ಸಿಡುಕಿನ ಸ್ವಭಾವದ ಎಂಜಿನಿಯರ್‌‌ಗಳ ಸಂಖ್ಯೆ ಹಚ್ಚಿದೆಯಂತೆ. ಹತ್ತಿರದಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಿಂತ ನಾನೇ ಬುದ್ಧಿವಂತ ಎನ್ನುವ ಭಾವನೆ ಪ್ರತಿಯೊಬ್ಬ ಉದ್ಯೋಗಿ ಹೊಂದಿರುತ್ತಾನೆ ಎನ್ನುವದನ್ನು ಗೂಗಲ್‌ ಉದ್ಯೋಗಿಗಳು ಹೊರ ಹಾಕಿದ್ದಾರೆ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!


ಗೂಗಲ್‌ನಲ್ಲಿ ಮಹಿಳಾ ಉದ್ಯೋಗಿಗಳಿಗೆ ಪ್ರಾಶಸ್ತ್ಯ ಕಡಿಮೆಯಂತೆ. ಬಹುತೇಕ ಪುರುಷ ಉದ್ಯೋಗಳೇ ಟೀಮ್‌ ಲೀಡರ್‌ ಆಗಿ ಕೆಲಸ ನಿರ್ವ‌ಹಿಸುತ್ತಿದ್ದಾರೆ ಎನ್ನುವ ಆರೋಪವನ್ನು ಉದ್ಯೋಗಿಗಳು ಮಾಡಿದ್ದಾರೆ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!


ಟೀಮ್‌ ಲೀಡರ್‌ಗಳ ಕೆಳಗೆ ಕೆಲಸ ಮಾಡುವ ಉ‌ದ್ಯೋಗಿಗಳ ಪ್ರತಿಭೆಯನ್ನು ಈ ಲೀಡರ್‌ಗಳು ಮೇಲಿನವರಿಗೆ ಹೇಳುವುದಿಲ್ಲವಂತೆ. ಉದ್ಯೋಗಿಗಳು ಏನೇ ಮಾಡಿ ಚೆನ್ನಾಗಿ ಪ್ರೊಜೆಕ್ಟ್‌ ಮಾಡಿದ್ದರೂ ಅದರ ಕ್ರೆಡಿಟ್‌ನ್ನು ಈ ಟೀಮ್‌ ಲೀಡರ್‌ಗಳು ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಕೋರಾದಲ್ಲಿ ವ್ಯಕ್ತವಾಗಿದೆ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ನ ಮೇಲಿರುವ ಇನ್ನೊಂದು ಆರೋಪ ತನ್ನ ಎಂಜಿನಿಯರ್‌ಗಳ ಮೇಲೆ ಗೂಗಲ್‌ ಹೆಚ್ಚಿನ ಗಮನ ಹರಿಸುತ್ತದೆ ವಿನಾಃ ತನ್ನ ಪ್ರೊಡಕ್ಟ್‌ಗಳ ಮೇಲೆ ಗಮನ ಹರಿಸುವುದಿಲ್ಲವಂತೆ.Wave, Buzz, Dodgeball, Orkut, Knol, Friend Connectನಂತ ಪ್ರೊಡಕ್ಟ್‌ಗಳ ಮೇಲೆ ಗೂಗಲ್‌ ಗಮನಹರಿಸದ ಕಾರಣ ಇವುಗಳು ಫ್ಲಾಪ್‌ ಆಗಿದೆ ಎಂದು ಕೋರಾದಲ್ಲಿ ಉದ್ಯೋಗಿಗಳು ಹೇಳಿದ್ದಾರೆ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!


ಗೂಗಲ್‌ ಮೇಲೆ ಇರುವ ಇನ್ನೊಂದು ಆರೋಪ ಕೆಲವು ಆಫೀಸ್‌ನಲ್ಲಿ ಒಂದೇ ಕ್ಯೂಬ್‌ನಲ್ಲಿ ನಾಲ್ಕು ಉದ್ಯೋಗಿಗಳು ಕೆಲಸ ಮಾಡುವುದು ಚೆನ್ನಾಗಿಲ್ಲವಂತೆ. ಮ್ಯಾನೇಜರ್‌ಗಳಿಗೆ ಸಹ ಪ್ರತ್ಯೇಕ ಕ್ಯೂಬ್‌ ವ್ಯವಸ್ಥೆ ಇಲ್ಲದೇ ಎಲ್ಲರೊಂದಿಗೆ ಕೆಲಸ ಮಾಡುವ ವ್ಯವಸ್ಥೆಗೆ ಬಹತೇಕ ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!


ಉದ್ಯೋಗಿಗಳಿಗೆ ಆರಂಭದಲ್ಲಿ ಹಲವಾರು ಸೇವೆಗಳ ಬಗ್ಗೆ ಹೇಳಿದರೂ ಕೊನೆಗೆ ಆ ಸೇವೆಗಳನ್ನು ನೀಡುವುದಿಲ್ಲ. ಹೀಗಾಗಿ ಆರಂಭದಲ್ಲಿ ಸೇರುವಾಗಲೇ ಈ ಎಲ್ಲಾ ವಿಚಾರಗಳನ್ನು ಪರೀಕ್ಷಿಸಿ, ನಂತರ ಗೂಗಲ್‌ನ್ನು ಸೇರುವುದು ಒಳ್ಳೇಯದು ಎಂದು ಹೊಸದಾಗಿ ಸೇರುವ ಗೂಗಲ್‌ ಉದ್ಯೋಗಿಗಳಿಗೆ ಕೋರಾದಲ್ಲಿ ಸಲಹೆ ನೀಡಿದ್ದಾರೆ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ನ ಮೇಲಿರುವ ಇನ್ನೊಂದು ಆರೋಪ ಅಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಳ ಸಂಸ್ಕೃತಿ ಸರಿಯಿಲ್ಲವಂತೆ.ಕುಡಿದುಕೊಂಡೇ ಆಫೀಸ್‌ಗೆ ಬರುತ್ತಾರೆ.ಹೆಚ್ಚು ಆಟ,ಮಾತುಕತೆಯಲ್ಲೇ ಸಮಯವನ್ನು ಕಳೆಯುತ್ತಾರೆ.ಆಫೀಸ್‌ ಕೆಲಸಕ್ಕೆ ಕಡಿಮೆ ಸಮಯವನ್ನು ಮೀಸಲಿಡುತ್ತಾರೆ.ಈ ಕಾರಣಕ್ಕಾಗಿ ಹಲವು ಪ್ರತಿಭಾವಂತ ಎಂಜಿನಿಯರ್‌ಗಳು ಗೂಗಲ್‌ನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲ!

ಗೂಗಲ್‌ ಕೆಲಸವನ್ನು ಆಫೀಸ್‌ನಲ್ಲೇ ಮಾಡಬೇಕು. ಮನೆಯಿಂದ ಕೆಲಸ ಮಾಡುವಂತಿಲ್ಲ. ಗೂಗಲ್‌ನ ಈ ನೀತಿಗೆ ಬೇಸತ್ತು ನಾವು ಗೂಗಲ್‌‌ಗೆ ರಾಜೀನಾಮೆ ನೀಡಿದ್ದೇವೆ ಎಂದು ಹಲವು ಉದ್ಯೋಗಿಗಳು ಕೋರಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X