Home
ಸುದ್ದಿಜಾಲ

Google: ಕಾಂಟ್ಯಾಕ್ಟ್‌ ಲೆಸ್‌ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲಿದೆ ಗೂಗಲ್‌ ವಾಲೆಟ್‌

ಗೂಗಲ್‌ (Google) ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಮೂಲಕ ಬಳಕೆದಾರರು ತಮಗೆ ಅಗತ್ಯವಾದ ಸೇವೆಗಳನ್ನು ಪಡೆಯುತ್ತಿದ್ದಾರೆ. ಈ ನಡುವೆ ಡಿಜಿಟಲ್ ಪಾವತಿಗಳ ಮಹತ್ವದ ಬೆಳವಣಿಗೆಯಲ್ಲಿ, ಗೂಗಲ್ ವಾಲೆಟ್ (Google Wallet) ಭಾರತದಲ್ಲಿ ಅಧಿಕೃತವಾಗಿ ಆರಂಭ ಆಗಿದೆ. ಈ ಮೂಲಕ ದೇಶಾದ್ಯಂತ ಆಂಡ್ರಾಯ್ಡ್ ಬಳಕೆದಾರರನ್ನು ಪಡೆದುಕೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.

ಹೌದು, ಗೂಗಲ್‌ ಇದೀಗ ಮೊಬೈಲ್ ಪಾವತಿಗಳಲ್ಲಿ ಹೊಸ ಅಧ್ಯಾಯವನ್ನು ಆರಂಭ ಮಾಡಿದೆ. ಡಿಜಿಟಲ್ ಹಣಕಾಸು ಮತ್ತು ಕಾಂಟ್ಯಾಕ್ಟ್‌ ಲೆಸ್‌ (Contactless) ವ್ಯವಹಾರವನ್ನು ಮಾಡಲು ತಡೆರಹಿತ ಮತ್ತು ಸುರಕ್ಷಿತ ಮಾರ್ಗವನ್ನು ಈ ಮೂಲಕ ನೀಡುತ್ತಿದೆ. ಹಾಗಿದ್ರೆ, ಏನಿದು ಗೂಗಲ್‌ ವಾಲೆಟ್‌?, ಇದು ಬಳಕೆದಾರರಿಗೆ ಹೇಗೆಲ್ಲಾ ಸಹಾಯ ಮಾಡಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕಾಂಟ್ಯಾಕ್ಟ್‌ ಲೆಸ್‌ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲಿದೆ ಗೂಗಲ್‌ ವಾಲೆಟ್‌

ಏನಿದು ಗೂಗಲ್ ವಾಲೆಟ್‌? : ಗೂಗಲ್ ವಾಲೆಟ್ ಅನ್ನು ಇದೀಗ ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ನಿಯರ್‌ ಫೀಲ್ಡ್‌ ಕಮ್ಯೂನಿಕೇಶನ್‌ (NFC) ತಂತ್ರಜ್ಞಾನವನ್ನು ಹೊಂದಿರುವ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ಸಹಾಯಕವಾಗಲಿದೆ. ಹಾಗೆಯೇ ಆಪ್‌ ಬಳಕೆದಾರರು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಟೋಕನ್‌ಗಳ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸುವ ಮೂಲಕ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಈ ಟೋಕನ್‌ಗಳು ಸೂಕ್ಷ್ಮ ಕಾರ್ಡ್ ವಿವರಗಳನ್ನು ಅನನ್ಯ ಕೋಡ್‌ಗಳೊಂದಿಗೆ ಬದಲಾಗಲಿದ್ದು, ಭದ್ರತೆಯನ್ನು ಹೆಚ್ಚಿಸುತ್ತವೆ ಮತ್ತು ವಂಚನೆಯ ಅಪಾಯವನ್ನು ಕಡಿಮೆ ಮಾಡುತ್ತವೆ.

ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ವ್ಯವಹಾರಗಳಿಗಾಗಿ ಭಾರತದಲ್ಲಿ ಈಗಾಗಲೇ ಜನಪ್ರಿಯವಾಗಿರುವ ಗೂಗಲ್‌ ಪೇ (Google Pay) ಗಿಂತ ಭಿನ್ನವಾಗಿ, ಗೂಗಲ್‌ ವಾಲೆಟ್‌ ಮುಖ್ಯವಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಕಾಂಟ್ಯಾಕ್ಟ್‌ ಲೆಸ್‌ ಪಾವತಿಗಳ ಮೇಲೆ ಕೇಂದ್ರೀಕರಿಸುತ್ತದೆ. ಟೆಕ್ಕ್ರಂಚ್‌ನ ವರದಿಗಳ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ವಿಭಿನ್ನ ಬಳಕೆದಾರರ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಗುರಿಯಾಗಿಸಿಕೊಂಡು ಎರಡೂ ಆಪ್‌ಗಳನ್ನು ಏಕಕಾಲದಲ್ಲಿ ನೀಡಲು ಗೂಗಲ್‌ ನಿರ್ಧರಿಸಿದೆ.

ಕಾಂಟ್ಯಾಕ್ಟ್‌ ಲೆಸ್‌ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲಿದೆ ಗೂಗಲ್‌ ವಾಲೆಟ್‌

ಗೂಗಲ್‌ ವಾಲೆಟ್‌ನಲ್ಲಿ ಅಂತಹುದ್ದೇನಿದೆ?: ಇನ್ನು ಗೂಗಲ್‌ ವಾಲೆಟ್‌ ಕೇವಲ ಪಾವತಿಗಳ ಬಗ್ಗೆ ಅಲ್ಲ. ಗಿಫ್ಟ್‌ ಕಾರ್ಡ್‌ಗಳು, ಜಿಮ್ ಮೆಂಬರ್‌ಶಿಫ್‌, ಈವೆಂಟ್ ಟಿಕೆಟ್‌ಗಳು ಸೇರಿದಂತೆ ಇನ್ನೂ ಹೆಚ್ಚಿನ ಪಾಸ್‌ಗಳಿಗೆ ಇದು ಡಿಜಿಟಲ್ ಸ್ಟೋರೇಜ್ ಪರಿಹಾರವಾಗಿದೆ. ಜಿಮೇಲ್‌ನೊಂದಿಗಿನ ಏಕೀಕರಣವು ಈ ಪಾಸ್‌ಗಳನ್ನು ಆಟೋಮ್ಯಾಟಿಕ್‌ ಆಗಿ ತಮ್ಮ ವ್ಯಾಲೆಟ್‌ಗೆ ಸೇರಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಡಿಜಿಟಲ್ ಸ್ವತ್ತುಗಳ ನಿರ್ವಹಣೆಯನ್ನು ಈ ಮೂಲಕ ಸುಗಮಗೊಳಿಸುತ್ತದೆ.

ಹೆಚ್ಚುವರಿಯಾಗಿ, ವಿಯರ್‌ಓಎಸ್‌ ಚಾಲಿತ ಸ್ಮಾರ್ಟ್‌ವಾಚ್‌ಗಳನ್ನು ಹೊಂದಿರುವ ಬಳಕೆದಾರರು ತಮ್ಮ ಮಣಿಕಟ್ಟಿನಿಂದ ನೇರವಾಗಿ ಪಾವತಿಗಳನ್ನು ಮಾಡಲು ಗೂಗಲ್‌ ವಾಲೆಟ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದು ಪ್ರಯಾಣದಲ್ಲಿರುವಾಗ ಹಣಕಾಸಿನ ವ್ಯವಹಾರಗಳಿಗೆ ಸೂಕ್ತವಾದ ಮಾರ್ಗವಾಗಿದೆ.

ಗೂಗಲ್‌ ವಾಲೆಟ್‌ ಅನ್ನು ಬಳಕೆ ಮಾಡುವುದು ಹೇಗೆ?: ಗೂಗಲ್‌ ವಾಲೆಟ್‌ ಅನ್ನು ಬಳಕೆ ಮಾಡಲು ಆಂಡ್ರಾಯ್ಡ್‌ ಬಳಕೆದಾರರು ಪ್ಲೇ ಸ್ಟೋರ್‌ನಿಂದ ಆಪ್‌ ಅನ್ನು ಡೌನ್‌ಲೋಡ್ ಮಾಡಬೇಕಿದೆ. ನಂತರ 'ವಾಲೆಟ್‌ಗೆ ಸೇರಿಸು' ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ ಮತ್ತು ಕಾರ್ಡ್ ವಿವರಗಳನ್ನು ನಮೂದಿಸಲು ಮತ್ತು ಮಾಹಿತಿಯನ್ನು ಪರಿಶೀಲಿಸಲು ಪ್ರಾಂಪ್ಟ್‌ಗಳನ್ನು ಅನುಸರಿಸಿ.

ಕಾಂಟ್ಯಾಕ್ಟ್‌ ಲೆಸ್‌ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲಿದೆ ಗೂಗಲ್‌ ವಾಲೆಟ್‌

ಸ್ಟೋರ್‌ಗಳಲ್ಲಿ ಗೂಗಲ್‌ ವಾಲೆಟ್‌ ಅನ್ನು ಬಳಸುವುದು ಸಹ ಅಷ್ಟೇ ಸುಲಭ. ನಿಮ್ಮ ಡಿವೈಸ್‌ನಲ್ಲಿ ಎನ್‌ಎಫ್‌ಸಿ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿ ಮತ್ತು ಪಾವತಿ ಟರ್ಮಿನಲ್ ಬಳಿ ಅದನ್ನು ಹಿಡಿದುಕೊಳ್ಳಿ. ಡಿವೈಸ್‌ನ ಡಿಸ್‌ಪ್ಲೇನಲ್ಲಿ ಚೆಕ್‌ಮಾರ್ಕ್‌ನೊಂದಿಗೆ ಯಶಸ್ವಿ ಪಾವತಿಯನ್ನು ಮಾಡಿ.

Best Mobiles in India

English summary
Google has just started a new chapter in mobile payments through google wallet. It offers a seamless and secure way to conduct digital finance and contactless transactions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+