Smart TV ಖರೀದಿ ಮಾಡುವ ಮುನ್ನ ಈ ಬಗ್ಗೆ ಗೊತ್ತಿರಲಿ; ಗೂಗಲ್ ನೀಡಿದ ಎಚ್ಚರಿಕೆ ಏನು!?
ಸ್ಮಾರ್ಟ್‌ಟಿವಿಗಳು (Smart TV) ಇಂದು ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಪ್ರಯೋಜನ ನೀಡುತ್ತವೆ. ಈ ಕಾರಣಕ್ಕಾಗಿಯೇ ಪ್ರಮುಖ ಸ್ಮಾರ್ಟ್‌ಟಿವಿ ತಯಾರಕರು ಹೊಸ ಹೊಸ ಸ್ಮಾರ್ಟ್‌ಟಿವಿಗಳನ್ನು ಸುಧಾರಿತ ಫೀಚರ್ಸ್‌ನೊಂದಿಗೆ ಪರಿಚಯಿಸಿಕೊಂಡು ಬರುತ್ತಲೇ ಇವೆ. ಈ ಎಲ್ಲಾ ಬೆಳವಣಿಗೆ ನಡುವೆ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಮುಂದಾಗುವವರಿಗೆ ಗೂಗಲ್ ಎಚ್ಚರಿಕೆ ನೀಡಿದೆ.
ಹೌದು, ನೀವೇನಾದರೂ ವಿವಿಧ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಳ್ಳುವ ಜಾಹೀರಾತಿಗೆ ಮನಸೋತು ಆ ಟಿವಿಯ ಬಗ್ಗೆ ಹಿಂದು ಮುಂದು ತಿಳಿಯದೆ ಖರೀದಿ ಮಾಡಿದ್ದೀರಾ ಎಂದಾದರೆ ನೀವು ಮೋಸ ಹೋಗುತ್ತಿದ್ದೀರಿ ಎಂದರ್ಥ. ಯಾಕೆಂದರೆ ನೀವು ಖರೀದಿ ಮಾಡುವ ಎಲ್ಲವೂ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಗಳಲ್ಲ ಎನ್ನುವುದು ಗೊತ್ತಿರಲಿ. ಹಾಗಿದ್ರೆ, ಸ್ಮಾರ್ಟ್‌ಟಿವಿ ಬಳಕೆದಾರರಿಗೆ ಗೂಗಲ್ ನೀಡಿದ ಎಚ್ಚರಿಕೆ ಏನು?, ಸ್ಮಾರ್ಟ್‌ಟಿವಿ ತಯಾರಕರು ಹೇಗೆಲ್ಲಾ ಮೋಸ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದಿಕೊಳ್ಳಲು ಈ ಲೇಖನ ಓದಿರಿ.

ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ ಸ್ಮಾರ್ಟ್‌ಟಿಟಿಗಳು: ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್ ಟಿವಿಗಳು ಅತ್ಯಂತ ಜನಪ್ರಿಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಆಗಿ ಗುರುತಿಸಿಕೊಂಡಿವೆ. ಇದರೊಂದಿಗೆ ಪ್ರತಿಯೊಂದು ಟಿವಿಯು ಆಂಡ್ರಾಯ್ಡ್ ಟಿವಿ ಎಂದು ಹೇಳಿಕೊಳ್ಳುತ್ತದೆ. ಆದರೆ, ಗೂಗಲ್ ಪ್ರಕಾರ ಇದು ಖಂಡಿತಾ ನಿಜವಲ್ಲ. ಯಾಕೆಂದರೆ ಆಂಡ್ರಾಯ್ಡ್ ಟಿವಿ ಎಂದು ಉಲ್ಲೇಖಿಸಲಾದ ಟಿವಿ ಬಾಕ್ಸ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇವು ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್ (AOSP) ಅನ್ನು ಮಾತ್ರ ಬಳಕೆ ಮಾಡುತ್ತಿವೆ ಎಂದು ತಿಳಿದುಬಂದಿದೆ.
ಹಾಗಿದ್ರೆ, ಆಂಡ್ರಾಯ್ಡ್‌ಗೂ AOSP ಗೂ ವ್ಯತ್ಯಾಸ ಏನು?: ಗೂಗಲ್ ನೀಡುವ ಮಾಹಿತಿಯಂತೆ ಈ ಟಿವಿಗಳು ತಾಂತ್ರಿಕವಾಗಿ ಗೂಗಲ್ ಅಪ್ಲಿಕೇಶನ್‌ಗಳನ್ನು ಮತ್ತು ಗೂಗಲ್ ನಿಂದ ಪರವಾನಗಿ ಪಡೆಯದೆ ಪ್ಲೇ ಸ್ಟೋರ್ ಅನ್ನು ಸಹ ಒಳಗೊಂಡಿರುತ್ತದೆ. ಇದರಿಂದಾಗಿ ಸರಳವಾಗಿ ನೀವು ಪ್ಲೇ ಸ್ಟೋರ್ ಸೇವೆ ಪಡೆದುಕೊಳ್ಳಲು ಆಗುವುದಿಲ್ಲ ಯಾಕೆಂದರೆ ಈ ಡಿವೈಸ್‌ಗಳು ಪ್ರಮಾಣೀಕೃತವಾಗಿರುವುದಿಲ್ಲ. ಇನ್ನು ಆಂಡ್ರಾಯ್ಡ್‌ಟಿವಿ ಓಎಸ್ ಮತ್ತು ಪ್ಲೇ ಪ್ರೊಟೆಕ್ಟ್ ಪ್ರಮಾಣೀಕೃತದಿಂದ ನಿರ್ಮಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಖರೀದಿ ಮಾಡಬೇಕಿದೆ.
ಇನ್ನು ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್‌ನೊಂದಿಗೆ ನಿರ್ಮಿಸಲಾದ ಟಿವಿ ಬಾಕ್ಸ್‌ಗಳ ಬಗ್ಗೆ ನಾವು ಇತ್ತೀಚೆಗೆ ಕೆಲವು ಮಾಹಿತಿಯನ್ನು ಕಲೆ ಹಾಕಿದ್ದೇವೆ. ಜೊತೆಗೆ ಆಂಡ್ರಾಯ್ಡ ಟಿವಿ ಓಎಸ್ ಡಿವೈಸ್‌ಗಳಂತೆಯೆ ಇವು ಕಾಣಿಸಿಕೊಳ್ಳುತ್ತಿವೆ ಎಂದು ಗೂಗಲ್ ಮಾಹಿತಿ ನೀಡಿದೆ. ಈ ಮೂಲಕ ಜನರಿಗೆ ಸುಲಭವಾಗಿ ವಂಚನೆ ಮಾಡಲಾಗುತ್ತಿದೆ. ಜೊತೆಗೆ ಯಾವುದೇ ಪ್ರಾಮಾಣೀಕೃತತೆ ಇಲ್ಲದ ಟಿವಿಯನ್ನು ಬಳಕೆ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.

ಸ್ಮಾರ್ಟ್‌ಟಿವಿ ಖರೀದಿ ಮಾಡುವ ಮುನ್ನ ಏನನ್ನು ಪರಿಶೀಲಿಸಬೇಕು?: ನೀವು ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಎಂದುಕೊಂಡರೆ ಮೊದಲು ಅಧಿಕೃತ ಆಂಡ್ರಾಯ್ಡ್ ಟಿವಿ ವೆಬ್‌ಸೈಟ್‌ಗೆ ಭೇಟಿ ನಿಡಿ. ಇದರಲ್ಲಿ ಖರೀದಿದಾರರು ಅಧಿಕೃತ ಆಂಡ್ರಾಯ್ಡ್‌ಟಿವಿ ಮತ್ತು ಗೂಗಲ್ ಟಿವಿ ಉತ್ಪನ್ನಗಳನ್ನು ನೋಡಬಹುದು. ಇದರೊಂದಿಗೆ ನೀವು ಖರೀದಿ ಮಾಡಲು ಬಯಸುವ ಸ್ಮಾರ್ಟ್‌ಟಿವಿ ಗೂಗಲ್ ಪ್ಲೇ ಪ್ರೊಟೆಕ್ಟ್‌ನಿಂದ ಕೂಡಿದೆಯೇ ಎಂದು ಕಂಡುಕೊಳ್ಳಲು ಈ ಮಾರ್ಗ ಅನುಸರಿಸಿ.
ಪ್ಲೇ ಪ್ರೊಟೆಕ್ಟ್‌ನಿಂದ ನಿಮ್ಮ ಸ್ಮಾರ್ಟ್‌ಟಿವಿ ಪ್ರಮಾಣೀಕರಿಸಿದ್ದರೆ ಅದರಲ್ಲಿ ಗೂಗಲ್‌ನಿಂದ ಪರವಾನಗಿ ಪಡೆದ ಆಪ್‌ಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಆಂಡ್ರಾಯ್ಡ್ ಹೊಂದಾಣಿಕೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುತ್ತದೆ. ಇದರೊಂದಿಗೆ ಪ್ಲೇ ಪ್ರೊಟೆಕ್ಟ್ ಸ್ಮಾರ್ಟ್‌ಟಿವಿಗಳು ಮಾತ್ರ ಗೂಗಲ್ ಪ್ಲೇ ಸ್ಟೋರ್ ಆಪ್ ಅನ್ನು ಬಳಕೆ ಮಾಡಲು ಸುಲಭ ಅನುಕೂಲ ಮಾಡಿಕೊಡುತ್ತವೆ. ಇದ್ಯಾವುದು ಬಳಕೆಗೆ ಲಭ್ಯವಾಗುತ್ತಿಲ್ಲ ಎಂದಾದರೆ ಅದು ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್ ಇರುವ ಸ್ಮಾರ್ಟ್‌ಟಿವಿ ಎಂದರ್ಥ.

ಇದರ ಹೊರತಾಗಿ ಕೆಲವು ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಟಿವಿಗಳನ್ನು ಅಗ್ಗದ ಬೆಲೆಯಲ್ಲಿ ಮಾರಾಟ ಮಾಡುವ ಮೂಲಕವೂ ಮೋಸ ಮಾಡಲಾಗುತ್ತಿದೆ. ಅಂದರೆ ಮೂಲ ದರ ಭಾರಿ ಮೊತ್ತ ಹೊಂದಿದ್ದು, ಡಿಸ್ಕೌಂಟ್ ನೆಪದಲ್ಲಿ ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಟಿವಿ ಎಂದಿರುವ ಅಥವಾ ಆಂಡ್ರಾಯ್ಡ್ ಟಿವಿ ಎಂದು ಕಾಣಿಸುವ ಟಿವಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಈ ರೀತಿಯ ಟಿವಿಗಳನ್ನು ಖರೀದಿ ಮಾಡಿ ಜನರು ಮೋಸ ಹೋಗಿದ್ದಾರೆ.


Click it and Unblock the Notifications








