ವಾರ್ನಿಂಗ್! ಜುಲೈ 9ಕ್ಕೆ ಇಂಟರ್ನೆಟ್ ಬಂದ್: ಗೂಗಲ್

Posted By: Varun
ವಾರ್ನಿಂಗ್! ಜುಲೈ 9ಕ್ಕೆ ಇಂಟರ್ನೆಟ್ ಬಂದ್: ಗೂಗಲ್

ಜುಲೈ 9ಕ್ಕೆ ಇಂಟರ್ನೆಟ್ ಬಂದ್ ಆಗುವುದು ನಿಜ ಎಂಬ ಸುದ್ದಿಯನ್ನು ಇಂಟರ್ನೆಟ್ ದೈತ್ಯ ಗೂಗಲ್ ದೃಢಪಡಿಸಿದೆ.

ಕಳೆದ ವರ್ಷ ಅಂತರರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕರ್ ಗಳ ತಂಡವೊಂದು ಆನ್ಲೈನ್ ಅಡ್ವರ್ಟೈಸಿಂಗ್ ಮೂಲಕ ಜಗತ್ತಿನಾದ್ಯಂತ ಕಂಪ್ಯೂಟರ್ ಗಳನ್ನು ವೈರಸ್ ಹರಡುವಂತೆ ಮಾಡಿತ್ತು. ಈ ರೀತಿಯ ಆನ್ಲೈನ್ ಜಾಹೀರಾತನ್ನು ಯಾರ್ಯಾರು ಕ್ಲಿಕ್ ಮಾಡಿದ್ದಾರೋ ಅವರ ಕಂಪ್ಯೂಟರುಗಳು ವೈರಸ್ ಧಾಳಿಗೆ ತುತ್ತಾಗಿ, ಜುಲೈ 9 ರ ನಂತರ ಆ ಕಂಪ್ಯೂಟರುಗಳು ಇಂಟರ್ನೆಟ್ ಉಪಯೋಗಿಸಲು ಆಗುವುದಿಲ್ಲ.

ಹಾಗಾಗಿ ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಇದರ ಬಗ್ಗೆ ಎಚ್ಚೆತ್ತುಕೊಂಡು ಇದರ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ತಿಂಗಳಿನಿಂದ ಪ್ರಯತ್ನ ಪಡುತ್ತಿದೆ. ದುರಂತವೇನೆಂದರೆ ಈ ವೈರಸ್ ತಮ್ಮ ಕಂಪ್ಯೂಟರಿಗೆ ಬಂದಿದೆಯೋ ಇಲ್ಲವೋ ಎಂದು ಕೂಡ ಗೂತ್ತಿರುವುದಿಲ್ಲ. ಇದನ್ನು ಸರಿಪಡಿಸಲು FBI, DCWG ಎಂಬ ವೆಬ್ಸೈಟ್ ಮಾಡಿದೆ. ಅದರಲ್ಲಿ ನಿಮ್ಮ ನಿಮ್ಮ ಕಂಪ್ಯೂಟರ್ ಗಳು ಈ ವೈರಸ್ ಗೆ ತುತ್ತಗಿದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಂಡು, ವೈರಸ್ ಬಂದಿದ್ದರೆ ನಿಮ್ಮ ಕಂಪ್ಯೂಟರನ್ನು ಸರಿಪಡಿಸಿಕೊಳ್ಳಲು ವಿವರಗಳನ್ನು ಕೊಡಲಾಗಿದೆ.

ಈಗ ಗೂಗಲ್ ಕೂಡ ಇಂಟರ್ನೆಟ್ ಉಪಯೋಗಿಸುವ ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಬಳಕೆದಾರರಿಗೆ ವಾರ್ನಿಂಗ್ ಕೊಟ್ಟಿದ್ದು, ಯಾರ್ಯಾರ ಕಂಪ್ಯೂಟರುಗಳು ಈ ರೀತಿಯ ವೈರಸ್ ಧಾಳಿಗೆ ಒಳಗಾಗಿದೆಯೋ ಅಂಥಹ PC ಗಳಲ್ಲಿ ಗೂಗಲ್ ಸರ್ಚ್ ನ ಪೇಜ್ ನಲ್ಲಿ, ವಾರ್ನಿಂಗ್ ಮೆಸೇಜ್ ಗಳನ್ನ ಗೂಗಲ್ ಕಳುಹಿಸುತ್ತಿದೆ.

ಇಂಟರ್ನೆಟ್ ಬಳಕೆದಾರರೇ, ಈ ಸುದ್ದಿಯನ್ನು ಗಂಭೀರವಾಗಿ ತೆಗೆದುಕೊಂಡು, ನಿಮ್ಮ ಕಂಪ್ಯೂಟರುಗಳನ್ನು ದಯವಿಟ್ಟು ಪರೀಕ್ಷಿಸಿಕೊಳ್ಳಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot