Home
ಸುದ್ದಿಜಾಲ

'ವೈಯಕ್ತಿಕ ಮಾಹಿತಿ ದುರ್ಬಳಕೆ' ಆತಂಕದ ಕುರಿತು ಪಿಚೈ ಹೇಳಿದ್ದು ಹೀಗೆ!

ಖಾಸಗಿತನ ಎಂಬುದು ಐಷಾರಾಮಿ ವಸ್ತು ಅಲ್ಲ. ಇದು ಬೆಲೆಯುಳ್ಳ ಉತ್ಪನ್ನ ಮತ್ತು ಸೇವೆಗಳನ್ನು ಖರೀದಿಸಲು ಬಯಸುವ ಜನರಿಗೆ ಮಾತ್ರವೇ ಲಭ್ಯವಾಗುತ್ತದೆ ಎಂದು ಗೂಗಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಸುಂದರ್ ಪಿಚೈ ಅವರು ಹೇಳಿದ್ದಾರೆ. 'ದಿ ನ್ಯೂಯಾರ್ಕ್‌ ಟೈಮ್ಸ್‌' ಪತ್ರಿಕೆಗೆ ನೀಡಿರುವ ಮಾಹಿತಿಯಲ್ಲಿ ಖಾಸಗಿತನದ ಬಗ್ಗೆ ಅವರು ವ್ಯಾಖ್ಯಾನಿಸಿದ್ದಾರೆ.

ಕೆಲವು ಸಾಮಾಜಿಕ ಮಾಧ್ಯಮಗಳು ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಜಾಗತಿಕ ಆತಂಕದ ಕುರಿತು ಪಿಚೈ ಅವರು ಹೀಗೆ ಹೇಳಿದ್ದು, ತಮ್ಮ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಮತ್ತು ಹಂಚಲಾಗುತ್ತದೆ ಎಂಬ ಬಗ್ಗೆ ಇಂದು ಜನರಿಗೆ ಕುತೂಹಲವಿದೆ. ಆದರೂ ಅವರು ತಮ್ಮದೇ ರೀತಿ ಖಾಸಗಿತನವನ್ನು ವ್ಯಾಖ್ಯಾನಿಸುತ್ತಾರೆ ಎಂದು ಹೇಳಿದ್ದಾರೆ.

'ವೈಯಕ್ತಿಕ ಮಾಹಿತಿ ದುರ್ಬಳಕೆ' ಆತಂಕದ ಕುರಿತು ಪಿಚೈ ಹೇಳಿದ್ದು ಹೀಗೆ!

ಖಾಸಗಿತನ ಎಂಬುದು ಐಷಾರಾಮಿ ವಸ್ತು ಅಲ್ಲ ಎಂದು ತಿಳಿಸಿದ ಪಿಚೈ, ಗೂಗಲ್‌ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡುವುದಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಿದ್ದಾರೆ. ವಿಶ್ವದಾದ್ಯಂತ ಜನರಿಗೆ ಖಾಸಗಿತನ ರಕ್ಷಣೆ ಖಾತರಿಯಾಗಲು ನಮ್ಮದೇ ಆದ ಜವಾಬ್ದಾರಿ ಇದೆ. ಇದೇ ಸ್ಫೂರ್ತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಎಂದಿದ್ದಾರೆ.

ವಿಶ್ವದಾದ್ಯಂತ ಜನರಿಗೆ ಖಾಸಗಿತನ ರಕ್ಷಣೆ ಖಾತರಿಯಾಗಲು ಗೂಗಲ್‌ ನಂತಹ ಕಂಪನಿಗಳಿಗೆ ಕಾನೂನು ನೆರವಾಗಲಿದೆ. ಆದರೆ ನಾವು ಇದಕ್ಕಾಗಿ ಕಾಯುವುದಿಲ್ಲ. ನಮಗೆ ನಮ್ಮದೇ ಆದ ಜವಾಬ್ದಾರಿ ಇದೆ. ಇದೇ ಸ್ಫೂರ್ತಿಯಲ್ಲಿ ನಾವು ಕಾರ್ಯೋನ್ಮುಖರಾಗುತ್ತೇವೆ. ಪ್ರತಿಯೊಬ್ಬರಿಗೂ ಖಾಸಗಿತನ ವಾಸ್ತವ ಎಂದು ತೋರಿಸುತ್ತೇವೆ ಎಂದು ಸುಂದರ್ ಪಿಚೈ ಭರವಸೆ ನೀಡಿದ್ದಾರೆ.

'ವೈಯಕ್ತಿಕ ಮಾಹಿತಿ ದುರ್ಬಳಕೆ' ಆತಂಕದ ಕುರಿತು ಪಿಚೈ ಹೇಳಿದ್ದು ಹೀಗೆ!

ಇನ್ನು ಹಣ ಪಾವತಿಗೆ ಕ್ರೆಡಿಟ್‌ ಕಾರ್ಡ್‌ ಬಳಸುವ ಸಣ್ಣ ವ್ಯಾಪಾರಿಗಳಿಗೆ, ಗ್ರಾಹಕರ ಮಾಹಿತಿ ಸುರಕ್ಷಿತವಾಗಿರಬೇಕು. ಸೆಲ್ಫಿಗಳನ್ನು ಹಂಚಿಕೊಳ್ಳುವ ಯುವಜನರು ಖಾಸಗಿತನ ಎಂದರೆ ಭವಿಷ್ಯದಲ್ಲಿ ಮಾಹಿತಿಯನ್ನು ಅಳಿಸಿಹಾಕುವಂತಿರಬೇಕು ಎಂದು ಬಯಸುತ್ತಾರೆ. ಖಾಸಗಿತನ ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತದೆ ಎಂಬುದನ್ನು ಸಹ ಪಿಚೈ ಅವರು ತಿಳಿಸಿದ್ದಾರೆ.

ಓದಿರಿ: ನೀವು ಉಚಿತವಾಗಿ 'ಒನ್​ಪ್ಲಸ್ 7​ ಪ್ರೊ' ಸ್ಮಾರ್ಟ್‌ಫೋನ್ ಗೆಲ್ಲಬೇಕೆ?..ಹೀಗೆ ಮಾಡಿ!!

Best Mobiles in India

English summary
Google will never sell any personal information of its users to third parties, CEO Sundar Pichai has said, amidst growing global concern over. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+