ನೀವು ಉಚಿತವಾಗಿ 'ಒನ್​ಪ್ಲಸ್ 7​ ಪ್ರೊ' ಸ್ಮಾರ್ಟ್‌ಫೋನ್ ಗೆಲ್ಲಬೇಕೆ?..ಹೀಗೆ ಮಾಡಿ!!

|

'ಒನ್​ಪ್ಲಸ್ 7​ ಪ್ರೊ' ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಫೋನಿನ ವೈಶಿಷ್ಠ್ಯಗಳ ಕುರಿತು ಗ್ರಾಹಕರಿಗೆ ಇರುವ ಕುತೋಹಲವನ್ನು ಹೆಚ್ಚಿಸುವ ಸಲುವಾಗಿ ಒನ್‌ಪ್ಲಸ್ ಕಂಪೆನಿ ಭರ್ಜರಿ ಪ್ಲ್ಯಾನ್ ಒಂದನ್ನು ಮಾಡಿಕೊಂಡಿದೆ. ಇದೇ 14 ರಂದು ಬೆಂಗಳೂರಿನಲ್ಲಿ ಲಾಂಚ್ ಆಗಲಿರುವ 'ಒನ್​ಪ್ಲಸ್ 7​ ಪ್ರೊ' ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳನ್ನು ಯಾರಾದರೂ ಊಹಿಸಿದರೆ, ಅವರು 'ಒನ್​ಪ್ಲಸ್ 7​ ಪ್ರೊ' ಫೋನ್ ಒಂದನ್ನು ಉಚಿತವಾಗಿ ಗೆಲ್ಲುವಂತಹ ಅವಕಾಶವನ್ನು ಕಂಪೆನಿ ಮಾಡಿಕೊಟ್ಟಿದೆ.

ಹೌದು, ಈಗಾಗಲೇ 'ಒನ್​ಪ್ಲಸ್ 7​ ಪ್ರೊ' ಫೋನಿನ ಫೀಚರ್​ಗಳು ಆನ್‌ಲೈನಿನಲ್ಲಿ ಲೀಕ್ ಆಗಿವೆ. ಆದರೆ, ಒನ್​ಪ್ಲಸ್ ಕಂಪೆನಿಯು ಬಿಡುಗಡೆಗೂ ಮುನ್ನವೇ ತನ್ನ ನೂತನ 'ಒನ್​ಪ್ಲಸ್ 7​ ಪ್ರೊ' ಜನಪ್ರಿಯತೆಯನ್ನು ಹೆಚ್ಚಿಸುವ ಸಲುವಾಗಿ ಇಂತಹದೊಂದು ಆಫರ್ ನೀಡಿದ್ದು, 'ಒನ್​ಪ್ರಸ್ 7​ ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಇರಬಹುದಾದ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಹಾಗೂ RAM ಸಾಮರ್ಥ್ಯಗಳನ್ನು ಊಹಿಸುವುದರ ಮೂಲಕ ಗ್ರಾಹಕರು ಒನ್​ಪ್ಲಸ್​ 7 ಪ್ರೊ ಫೋನ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.

ನೀವು ಉಚಿತವಾಗಿ 'ಒನ್​ಪ್ಲಸ್ 7​ ಪ್ರೊ' ಸ್ಮಾರ್ಟ್‌ಫೋನ್ ಗೆಲ್ಲಬೇಕೆ?..ಹೀಗೆ ಮಾಡಿ!

ಈ ಸುಲಭ ಪ್ರಶ್ನೆಗಳಿಗೆ ಒನ್‌ಪ್ಲಸ್ ಕಂಪೆನಿಯ ಟ್ವಿಟರ್​ನ ಅಧಿಕೃತ ಖಾತೆಯ ಮೂಲಕ ಉತ್ತರಿಸಿ ಸ್ಮಾರ್ಟ್‌ಫೋನ್ ಅನ್ನು ಗೆಲ್ಲಬಹುದಾಗಿದೆ. ಒಂದು ವೇಳೆ ನೀವು ಉತ್ತರಿಸುವ ಫೀಚರ್​ಗಳು 'ಒನ್​ಪ್ಲಸ್ 7​ ಪ್ರೊ' ಸ್ಮಾರ್ಟ್​​ಫೋನ್ ಬಿಡುಗಡೆಯಾದ ನಂತರ ಅದರ ವೈಶಿಷ್ಠ್ಯಗಳಿಗೆ ಹೊಂದಿಕೆ ಆದರೆ ನಿಮಗೂ ಕೂಡ ಪ್ರಶಸ್ತಿ ಲಭಿಸಬಹುದು. ಹಾಗಾದರೆ, ತಡ ಏಕೆ, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ (ಒನ್‌ಪ್ಲಸ್ ಸ್ಪೆಕ್ಸ್ ಗೆಸ್) ಒನ್​ಪ್ಲಸ್​ 7 ಪ್ರೊ ಅನ್ನು ಗೆಲ್ಲವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಬಿಡುಗಡೆ ಕಾರ್ಯಕ್ರಮಕ್ಕೆ ಎಂಟ್ರಿ ಹೇಗೆ?

ಬಿಡುಗಡೆ ಕಾರ್ಯಕ್ರಮಕ್ಕೆ ಎಂಟ್ರಿ ಹೇಗೆ?

ಏಪ್ರಿಲ್ 25, 2019 ಬೆಳಿಗ್ಗೆ 10 ಘಂಟೆಯಿಂದ ಬಿಡುಗಡೆ ಕಾರ್ಯಕ್ರಮಕ್ಕೆ ಎಂಟ್ರಿ ವೋಚರ್ ಅನ್ನು ಒನ್ ಪ್ಲಸ್.ಇನ್ ನಲ್ಲಿ ಲಭ್ಯವಾಗುತ್ತದೆ. ಯಾರಿಗೆಲ್ಲಾ ಇವೆಂಟ್ ನಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುವುದಿಲ್ಲವೋ ಅವರು ಲೈವ್ ಸ್ಟ್ರೀಮ್ ಲಿಂಕ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿರುತ್ತದೆ. ಅಮೇಜಾನಿನಲ್ಲಿ ಎಕ್ಸ್‌ಕ್ಲೂಸೀವ್ ಆನ್‌ಲೈನ್ ಸೇಲ್ ಆರಂಭವಾಗಲಿದೆ.

'ಒನ್‌ಪ್ಲಸ್ 7' ಮೊದಲ ಚಿತ್ರ ಲೀಕ್!

'ಒನ್‌ಪ್ಲಸ್ 7' ಮೊದಲ ಚಿತ್ರ ಲೀಕ್!

ಬಿಡುಗಡೆಯ ಸಮಯ ಫಿಕ್ಸ್ ಆದಾಗಲೇ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರು 'ಒನ್‌ಪ್ಲಸ್ 7' ಫೋನಿನ ಮೊದಲ ಚಿತ್ರ ಈಗಾಗಲೇ ಲೀಕ್ ಆಗಿದೆ. ನೋಚ್ ಇಲ್ಲದ ವಿನ್ಯಾಸದಲ್ಲಿ ಸ್ಕ್ರೀನ್ ಮತ್ತು ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವಂತಹ ಫೋನಿನ ಚಿತ್ರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಫೋನ್ ಪೂರ್ತಿ ಡಿಸ್‌ಪ್ಲೇ ವಿನ್ಯಾಸದಲ್ಲಿ ಫೋನ್ ಕಂಗೊಳಿಸುತ್ತಿತ್ತು.

ಬಾದಾಮಿ ಬಣ್ಣದಲ್ಲಿ ಬರಲಿದೆ ಒನ್​ಪ್ಲಸ್?

ಬಾದಾಮಿ ಬಣ್ಣದಲ್ಲಿ ಬರಲಿದೆ ಒನ್​ಪ್ಲಸ್?

ಜರ್ಮನ್ ತಂತ್ರಜ್ಞಾನ ವೆಬ್‌ಸೈಟ್ ಒಂದರ ವರದಿಯ ಪ್ರಕಾರ, ಒನ್​ಪ್ಲಸ್​ 7 ಪ್ರೊ ಇದೇ ಮೊದಲ ಬಾರಿ ಆಲ್ಮಂಡ್​(ಬಾದಾಮಿ) ಬಣ್ಣದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದೆ. ಒನ್‌ಪ್ಲಸ್ ಕಂಪೆನಿ ನೀಡಿರುವ ಜಾಹಿರಾತುವಿನಲ್ಲೂ ಇಂತಹುದ್ದೇ ಬಣ್ಣ ಕಾಣಬಹುದಾಗಿದ್ದು, ಇದಲ್ಲದೆ ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಸಹ ಈ ​ಫೋನ್​ ಖರೀದಿಗೆ ಲಭ್ಯವಿರಲಿದೆ ಎಂದು ಹೇಳಲಾಗಿದೆ.

'ಒನ್‌ಪ್ಲಸ್ 7'ನಲ್ಲಿ ಗರಿಷ್ಟ ರಿಫ್ರೆಶ್ ರೇಟ್ ಡಿಸ್ಪ್ಲೇ

'ಒನ್‌ಪ್ಲಸ್ 7'ನಲ್ಲಿ ಗರಿಷ್ಟ ರಿಫ್ರೆಶ್ ರೇಟ್ ಡಿಸ್ಪ್ಲೇ

ವರದಿಗಳು ಮತ್ತು ವದಂತಿಗಳು ಹೇಳುತ್ತಿರುವ ಪ್ರಕಾರ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ಗಳಲ್ಲಿ ನೋಚ್ ಇಲ್ಲದ ಗರಿಷ್ಟ ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಹೊಂದಿರುತ್ತವೆ. ಒನ್ ಪ್ಲಸ್ 7 ಪ್ರೋ ಕನ್ಸ್ಯೂಮರ್ ಸೆಂಟ್ರಿಕ್ ಡಿವೈಸ್ ಆಗಿರುತ್ತದೆ. ಇದು ಗೇಮಿಂಗ್‌ಗೆ ಹೆಚ್ಚು ಮಹತ್ವ ನೀಡುಲಿದ್ದು, ರೇಝರ್ ಫೋನ್ 2 ಮತ್ತು ಆಸೂಸ್ ROG ಫೋನ್ ಗಳಿಗೆ ಇದು ಸ್ಪರ್ಧೆ ನೀಡಲಿದೆಯಂತೆ.

 ಮೊದಲ ಬಾರಿ ಪಾಪ್ ಅಪ್ ಸೆಲ್ಫಿ ಕ್ಯಾಮೆರಾ

ಮೊದಲ ಬಾರಿ ಪಾಪ್ ಅಪ್ ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್ ಇದೇ ಮೊದಲ ಬಾರಿಗೆ ಒನ್‌ಪ್ಲಸ್ 7 ಮೂಲಕ ಪಾಪ್ ಅಪ್ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸುತ್ತಿದೆ ಎಂದು ಹೇಳಲಾಗಿದೆ.ಈ ಸೆಲ್ಫಿ ಕ್ಯಾಮೆರಾ ಡಿಸ್‌ಪ್ಲೇ ಮರೆಯಲ್ಲಿರುತ್ತದೆ ಮತ್ತು ಪೋಟೋ ಸೆರೆಹಿಡಿಯುವ ಸಮಯದಲ್ಲಿ ಮಾತ್ರ ಕ್ಯಾಮೆರಾ ಕಾಣಿಸಿಕೊಳ್ಳುತ್ತದೆ. ಈಗಾಗಲೇ ವೀವೊ ಮತ್ತು ಹಾನರ್ ಕಂಪನಿಗಳು ಸಹ ತಮ್ಮ ಫೋನ್‌ಗಳಲ್ಲಿ ಪರಿಚಯಿಸಿವೆ.

ಸೆಲ್ಫೀ ಕ್ಯಾಮರಾ ಮೆಕಾನಿಸಂ

ಸೆಲ್ಫೀ ಕ್ಯಾಮರಾ ಮೆಕಾನಿಸಂ

ಒನ್‌ಪ್ಲಸ್ 7 ನಲ್ಲಿ ಮೊಟೋರೈಸ್ಡ್ ಸೆಲ್ಫೀ ಕ್ಯಾಮರಾ ಮೆಕಾನಿಸಂನ್ನು ಅಳವಡಿಸಲಾಗಿರುತ್ತದೆ ಎಂದು ಹೇಳಲಾಗಿದೆ. ಒನ್ ಪ್ಲಸ್ 7 ಪ್ರೋ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ಅನ್ನು ಹೊಂದಿದ್ದು ಕ್ವಾಲ್ಕಂನ ನೂತನ 5ಜಿ ಮಾಡೆಮ್ ಅನ್ನು ಹೊಂದಿದೆ. ಜೊತೆಗೆ ಕ್ವಾಲ್ಕಂ ಎಕ್ಸ್ 55 ಅನ್ನು ಹೊಂದಿರುತ್ತದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಹೊರಬೀಳಬೇಕಿದೆ.

ಎಚ್‌ಡಿಆರ್ ಸ್ಟ್ರೀಮಿಂಗ್ ಇರಲಿದೆಯಂತೆ!

ಎಚ್‌ಡಿಆರ್ ಸ್ಟ್ರೀಮಿಂಗ್ ಇರಲಿದೆಯಂತೆ!

ಗ್ರಾಹಕರ ನಿರೀಕ್ಷೆಯಂತೆ ಒನ್‌ಪ್ಲಸ್ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಎಚ್‌ಡಿಆರ್ ಸ್ಟ್ರೀಮಿಂಗ್ ಪರಿಚಯಿಸಲಿದ್ದು, ಇದು ಸ್ಮಾರ್ಟ್‌ಫೋನ್‌ನಲ್ಲಿ ಹೈ ಕ್ವಾಲಿಟಿಯ ಅತ್ಯುತ್ತಮ ಸ್ಟ್ರೀಮಿಂಗ್ ಅನುಭವ ಪಡೆಯಬಹುದು. ಇಂತಹ ತಂತ್ರಜ್ಞಾನ ಹೊತ್ತ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ ಎಚ್‌ಆರ್‌ಡಿ ಸ್ಟ್ರೀಮಿಂಗ್ ಬೆಂಬಲ ನೀಡಲಿದೆ ಎಂದು ಹೇಳಲಾಗುತ್ತಿದೆ.

ವಾರ್ಪ್ ಚಾರ್ಜ್ 30 ಇರಲಿದೆಯಂತೆ

ವಾರ್ಪ್ ಚಾರ್ಜ್ 30 ಇರಲಿದೆಯಂತೆ

ಸ್ಮಾರ್ಟ್‌ಫೋನ್‌ಗಳು ಬೇಗನ ಚಾರ್ಜ್ ಆಗಬೇಕು ಎಂದು ಬಹುತೇಕ ಪ್ರಮುಖ ಮೊಬೈಲ್ ಕಂಪನಿಗಳು ಕ್ವಿಕ್ ಚಾರ್ಜರ್ ಪರಿಚಯಿಸುತ್ತವೆ. ಆದರೆ ಒನ್‌ಪ್ಲಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತೀ ವೇಗದ ಚಾರ್ಜರ್ ಅನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. ಹಾಗಾಗಿ, ಒನ್‌ಪ್ಲಸ್ 7 ಫೋನಿನಲ್ಲಿ 'ವಾರ್ಪ್ ಚಾರ್ಜ್ 30' ತಂತ್ರಜ್ಞಾನ ಬರುತ್ತಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ ಕಂಪನಿಯು ತನ್ನ ಪ್ರಮುಖ ಫೋನ್‌ಗಳ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಬಳಸುತ್ತಿದ್ದು, ಇದೀಗ ಹೊಸ ಒನ್‌ಪ್ಲಸ್‌ 7 ಫೋನ್‌ನಲ್ಲಿಯೂ ಸಹ ಸೋನಿಯ ಉನ್ನತ IMX586 ಸೆನ್ಸಾರ್ ಅಳವಡಿಸಲಿದೆ ಎನ್ನಲಾಗಿದೆ.. 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಕೆಲಸಮಾಡಲಿದೆ. ಇದೇ ಸೆನ್ಸಾರ್ ಅನ್ನು ಹಾನರ್ ವೀವ್ 20 ಸಹ ಬಳಸಿದೆ.

ಒನ್​ಪ್ಲಸ್​ ಬೆಲೆ ಎಷ್ಟಿರಬಹುದು?

ಒನ್​ಪ್ಲಸ್​ ಬೆಲೆ ಎಷ್ಟಿರಬಹುದು?

ಮೇ.14 ರಂದು ಭಾರತದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಒನ್​ಪ್ಲಸ್ ಪ್ರೊ 7 ಬಿಡುಗಡೆಯಾಗಲಿದ್ದು, 6 GB + 128 GB ಸಾಮರ್ಥ್ಯದ ಮೊಬೈಲ್​ಗೆ 49,999 ರೂ. ಇರಲಿದೆ ಎನ್ನಲಾಗಿದೆ. ಹಾಗೆಯೇ, 8 GB +256 GB ಫೋನ್​ಗೆ 52,999 ರೂ ಹಾಗೂ 12 GB + 256 GB ಸಾಮರ್ಥ್ಯದ ಫೋನಿಗೆ 57,999 ರೂ ನಿಗದಿ ಪಡಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

Best Mobiles in India

English summary
OnePlus 7 Pro Guess The Specs Contest is Live, But Haven't All Specs Been Leaked Already. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X