Subscribe to Gizbot

ಗೂಗಲ್‌ನಿಂದ 2 ಸಾವಿರಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ!!

Written By:

ಭಾರತದಲ್ಲಿ ಆಫ್‌ಲೈನ್‌ ಸ್ಟಾರ್ಟಪ್ ಬ್ಯಸಿನೆಸ್‌ಗೆ ಆನ್‌ಲೈನ್ ಟ್ರೈನಿಂಗ್ ನೀಡುವುದಾಗಿ ಹೆಳಿದ್ದ ಗೂಗಲ್, ಇನ್ನು ಕೆಲವೇ ದಿವಸಗಳಲ್ಲಿ ಭಾರತಕ್ಕೆ ಎರಡು ಸಾವಿರ ರೂಪಾಯಿಗಳ ಗೂಗಲ್ ಸ್ಮಾರ್ಟ್‌ಫೋನ್‌ ಪರಿಚಯಿಸುವುದಾಗಿ ರಿಪೋರ್ಟ್ ಒಂದು ಹೊರಬಿದ್ದಿದೆ..!!

ಗೂಗಲ್ ಸಿಇಒ ಆಗಿರುವ ಭಾರತದ ಸಂಜಾತ ಸುಂದರ್‌ ಪಿಚೈ ಅವರು 30 ಡಾಲರ್‌ ಒಳಗೆ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಬಳಕೆ ಮೆಲೆ ದೂರದೃಷ್ಟಿ ಹಾಯಿಸಿದ್ದು, ಡಿಜಿಟಲ್ ಆರ್ಥಿಕತೆಯಲ್ಲಿ ಭಾರತ ದೇಶ ಪ್ರಪಂಚದಲ್ಲಿಯೇ ಮುಂಚೂಣಿಗೆ ಬರಲಿದೆ ಎಂದು ಹೇಳಿದ್ದಾರೆ.!!

ಗೂಗಲ್‌ನಿಂದ 2 ಸಾವಿರಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ!!

ನಿಮ್ಮ ಜಿ-ಮೇಲ್ ಮಾಹಿತಿ ಸಹ ಹ್ಯಾಕ್ ಆಗಿರಬಹುದು!..ಸುರಕ್ಷಿತವಾಗಿಲ್ಲ!!

ಡಿಜಿಟಲ್ ಇಂಡಿಯಾ ಸಾಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಭಾರತದ ಡಿಜಿಟಲ್ ಆರ್ಥಿಕತೆಯು ಕಡಿಮೆ ದರದ ಸ್ಮಾರ್ಟ್‌ಫೊನ್‌ಗಳ ಮೆಲೆ ನಿಂತಿದೆ. ಹಾಗಾಗಿ, ಗೂಗಲ್ ಕಡಿಮೆ ಬೆಲೆಯ ಸ್ಮಾರ್ಟ್‌ಪೊನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಉತ್ಸಾಹಕವಾಗಿದೆ ಎಂದು ಹೇಳಿದ್ದಾರೆ.

ಗೂಗಲ್‌ನಿಂದ 2 ಸಾವಿರಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ!!

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಬಳಕೆಯ ಪ್ರಮಾಣ ಬಹಳ ಕಡಿಮೆ ಇದ್ದು, 30 ಡಾಲರ್‌ ಬೆಲೆಗಿಂತಲೂ ಕಡಿಮೆ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಗೂಗಲ್ ಉತ್ಸುಕವಾಗಿದೆ. ಹಾಗಾಗಿ, ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಜೊತೆಯಲ್ಲಿ ಕಡಿಮೆ ದರದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

English summary
Budget smartphone might be an Android One device. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot