ಗ್ರಾಹಕರೇ ಭರ್ಜರಿ ಆಫರ್!..ಇಷ್ಟು ಕಡಿಮೆ ಬೆಲೆಗೆ ಆಕ್ಷನ್ ಕ್ಯಾಮೆರಾ ಲಭ್ಯವೇ?!
ಇತ್ತೀಚಿಗೆ ಆಕ್ಷನ್ ಕ್ಯಾಮೆರಾಗಳು ಹೆಚ್ಚು ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಯೂಟ್ಯೂಬ್ ಚಾನೆಲ್‌ಗಳಿಗಾಗಿ ಬಹುತೇಕರು ಈ ರೀತಿಯ ಕ್ಯಾಮೆರಾ ಖರೀದಿಗೆ ಮುಂದಾಗುತ್ತಾರೆ. ಆ ಪೈಕಿ ಅನೇಕರ ಮೊದಲ ಆಯ್ಕೆ ಗೋಪ್ರೋ ಸಂಸ್ಥೆಯ ಆಕ್ಷನ್ ಕ್ಯಾಮೆರಾ ಆಗಿರುತ್ತವೆ. ಸದ್ಯ ನೀವೇನಾದರೂ ಗೋಪ್ರೋ ಆಕ್ಷನ್ ಕ್ಯಾಮೆರಾ ಖರೀದಿ ಮಾಡಬೇಕು ಎಂದುಕೊಮಡಿದ್ದರೆ, ನಿಮಗೆ ಇಲ್ಲಿದೆ ಗುಡ್‌ನ್ಯೂಸ್.
ಹೌದು, ಇ ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಯ ಆಯೋಜಿಸಿರುವ ಅಮೆಜಾನ್ ಗ್ರೇಟ್ ಫ್ರಿಡಂ ಸೇಲ್ ಲೈವ್ ಇದೆ. ಈ ಮಾರಾಟದಲ್ಲಿ ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾ 39% ರಷ್ಟು ಡಿಸ್ಕೌಂಟ್ ಪಡೆದಿದೆ. ಈ ಕ್ಯಾಮೆರಾ ಬೆಲೆಯು 49,500ರೂ. ಆಗಿದ್ದು, ಆಫರ್‌ನಲ್ಲಿ 29,988ರೂ. ಗಳಿಗೆ ಲಭ್ಯ ಇದೆ. ಅದಾಗ್ಯೂ, ಕೆಲವು ಬ್ಯಾಂಕ್ ಆಫರ್ ಮೂಲಕ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ಅಂದಹಾಗೆ ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾವು ಸ್ಥಿರವಾಗಿ ರೆಕಾರ್ಡಿಂಗ್ ಮಾಡಲು ಸೂಕ್ತ ಆಗಿದ್ದು, ಆಕ್ಷನ್ ಸನ್ನಿವೇಶಗಳನ್ನು ಅಧಿಕ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ರೆಕಾರ್ಡ್ ಮಾಡಬಹುದಾಗಿದೆ. ಹಾಗಾದರೆ ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾದ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾ ಸಾಧನವು 23.6 ಮೆಗಾ ಪಿಕ್ಸೆಲ್ ಇಮೇಜ್ ಸೆನ್ಸಾರ್ ಅನ್ನು ಪಡೆದಿದ್ದು, ಈ ಹಿಂದಿನ ಮಾಡೆಲ್‌ನಂತೆ ಇದು ಸಹ GP1 ಪ್ರೊಸೆಸರ್ ಒಳಗೊಂಡಿದೆ. ಇನ್ನು ಆಕ್ಷನ್ ಕ್ಯಾಮೆರಾದಲ್ಲಿ ಈಗ 5K 30FPS ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದಾಗಿದೆ.
ಇದರೊಂದಿಗೆ ಬಳಕೆದಾರರು ಈ ಕ್ಯಾಮೆರಾ ಮೂಲಕ 20 ಮೆಗಾಪಿಕ್ಸೆಲ್ ಸ್ಟಿಲ್‌ಗಳನ್ನು ಸೆರೆಹಿಡಿಯಲು ಅವಕಾಶ ಇದೆ. ಇನ್ನು ಈ ಕ್ಯಾಮೆರಾ ಫ್ರಂಟ್ ಸೈಡ್ ಕಲರ್ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ನಿಮ್ಮ ಕಡೆಗೆ ಕ್ಯಾಮೆರಾವನ್ನು ಫೋಕಸ್ ಮಾಡಿದಾಗಿ ಫ್ರೇಮಿಂಗ್ ಶಾಟ್‌ಗಳಿಗೆ ಉಪಯುಕ್ತ ಆಗಲಿದೆ.
ಇನ್ನು ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾ ಬ್ಯಾಟರಿ ಈ ಹಿಂದಿನ ಹೀರೋ 8 ಬ್ಲ್ಯಾಕ್ ಗಿಂತ ದೊಡ್ಡ ಗಾತ್ರದ ಹೊಂದಿದೆ. ಜೊತೆಗೆ ಗೋಪ್ರೊ ಹೀರೋ 9 ಬ್ಲ್ಯಾಕ್‌ನಲ್ಲಿ ಹೊಸ ಸಾಫ್ಟ್‌ವೇರ್ ಫೀಚರ್ಸ್‌ಗಳನ್ನ ಸೇರ್ಪಡೆ ಮಾಡಲಾಗಿದ್ದು, ಇವುಗಳಲ್ಲಿ ಹೈಪರ್‌ಸ್ಮೂತ್ 3.0 ಅನ್ನು ಕೂಡಾ ಒದಗಿಸಲಾಗಿದೆ.
ಇದು ಅಪ್‌ಗ್ರೇಡ್ ಸ್ಥಿರೀಕರಣ ಪಡೆದಿದ್ದು, ಅಲ್ಲದೇ 5K ಸೇರಿದಂತೆ ಎಲ್ಲಾ ಮಾದರಿಯ ರೆಸಲ್ಯೂಷನ್‌ಗಳಲ್ಲಿ ಬೂಸ್ಟ್ ಮೋಡ್ ಅನ್ನು ಬಳಸುವ ಸಾಮರ್ಥ್ಯ ಕೂಡಾ ಪಡೆದುಕೊಂಡಿದೆ. ಜೊತೆಗೆ ಹೊಸ ಟೈಮ್‌ವರ್ಪ್ 3.0 ಮೋಡ್ ಇದ್ದು, ಬಳಕೆದಾರರು ಹೈಪರ್‌ಲ್ಯಾಪ್ಸ್ ವೀಡಿಯೊಗಳನ್ನು ರಿಯಲ್-ಟೈಂನ ವೇಗಕ್ಕೆ ಆಡಿಯೊ ಅಥವಾಸ್ಲೋ ಮೋಷನ್ ಆಯ್ಕೆ ರೆಕಾರ್ಡ್ ಮಾಡಲು ಅವಕಾಶ ನೀಡುತ್ತದೆ.
ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾ ಲೀನಿಯರ್ + ಹರೈಸನ್ ಲೆವೆಲಿಂಗ್ ಆಯ್ಕೆಯ ಸೌಲಭ್ಯ ಪಡೆದಿದ್ದು, ಇದು ಕ್ಯಾಮೆರಾದಲ್ಲಿಯೇ ಹಾರಿಜಾನ್ ಲೆವೆಲಿಂಗ್ ಮಾಡುವ ಅವಕಾಶವನ್ನು ಸಹ ಒಳಗೊಂಡಿದೆ. ಇದರ ಜೊತೆಗೆ ಈ ಆಕ್ಷನ್ ಕ್ಯಾಮೆರಾದಲ್ಲಿ ಲೆನ್ಸ್ ಕವರ್ ತೆಗೆದುಹಾಕುವ ಆಯ್ಕೆ ಸಹ ಒದಗಿಸಲಾಗಿದ್ದು, ಅಲ್ಲದೆ ಹೊಸ ಮ್ಯಾಕ್ಸ್ ಲೆನ್ಸ್ ಮೋಡ್‌ನೊಂದಿಗೆ ಎಕ್ಸ್‌ಚೇಂಜ್ ಮಾಡಬಹುದಾದ ಅವಕಾಶವನ್ನು ಸಹ ಇದೆ.
ಇನ್ನುಳಿದಂತೆ ಈ ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾ ಮ್ಯಾಕ್ಸ್ ಹೈಪರ್‌ಸ್ಮೂತ್ ಸ್ಥಿರೀಕರಣ ಮತ್ತು ಹಾರಿಜಾನ್ ಲಾಕ್ ಫೀಚರ್ಸ್‌ಗಳ ಆಯ್ಕೆ ಪಡೆದುಕೊಂಡಿದೆ. ಇದು ಒಂದೇ ಮೈಕ್ರೊ ಎಸ್‌ಡಿ ಕಾರ್ಡ್ ಅನ್ನು ಸಪೋರ್ಟ್ ಮಾಡುತ್ತದೆ. ಹಾಗೆಯೇ ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಚಾರ್ಜಿಂಗ್ ವ್ಯವಸ್ಥೆ ಅನ್ನು ಪಡೆದುಕೊಂಡಿದೆ.


Click it and Unblock the Notifications