ಗೋಪ್ರೊ ಹೀರೋ 9 ಆಕ್ಷನ್ ಕ್ಯಾಮೆರಾ ಬೆಲೆಯಲ್ಲಿ ಈಗ ಭಾರೀ ಇಳಿಕೆ!
ಡಿಎಸ್‌ಎಲ್‌ಆರ್ ಕ್ಯಾಮೆರಾಗಳಂತೆ ಆಕ್ಷನ್ ಕ್ಯಾಮೆರಾಗಳಿಗೂ ಡಿಮ್ಯಾಂಡ್ ಹೆಚ್ಚಿದೆ. ಆಕ್ಷನ್ ಕ್ಯಾಮೆರಾಗಳ ವಿಭಾಗದಲ್ಲಿ ಗೋಪ್ರೊ (GoPro) ಸಂಸ್ಥೆಯ ಕ್ಯಾಮೆರಾಗಳು ಗಮನ ಸೆಳೆದಿವೆ. ಈ ಸಂಸ್ಥೆಯ ಗೋಪ್ರೊ ಹೀರೋ 9 ಕ್ಯಾಮೆರಾ ಬೆಲೆಯಲ್ಲಿ ಇದೀಗ ಭರ್ಜರಿ ಡಿಸ್ಕೌಂಟ್ ಲಭ್ಯವಾಗಿದ್ದು, ಕ್ಯಾಮೆರಾ ಪ್ರಿಯರು ಫುಲ್ ಖುಷ್ ಆಗುವಂತಾಗಿದೆ.
ಹೌದು, ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಗೋಪ್ರೊ ಹೀರೋ 9 ಕ್ಯಾಮೆರಾ 31% ರಿಯಾಯಿತಿ ಪಡೆದಿದ್ದು, 34,400 ರೂ. ಗಳ ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಕ್ಯಾಮೆರಾವು 23.6 ಮೆಗಾ ಪಿಕ್ಸೆಲ್ ಇಮೇಜ್ ಸೆನ್ಸಾರ್ ಪಡೆದಿದ್ದು, ಬೈಕ್ ರೈಡರ್ಸ್‌ಗೆ, ಆಫ್ ರೋಡ್, ಯೂಟ್ಯೂಬ್ ಚಾನೆಲ್ ಬಳಕೆದಾರರಿಗೆ ಇದು ಅತ್ಯುತ್ತಮ ಎನಿಸಲಿದೆ.

ಹೌದು, ಗೋಪ್ರೊ ಸಂಸ್ಥೆ ತನ್ನ ಹೊಸ ಆಕ್ಷನ್ ಕ್ಯಾಮೆರಾ ಹಗುರ ಗಾತ್ರವನ್ನ ಹೊಂದಿರುವುದರಿಂದ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇನ್ನು ಈ ಕ್ಯಾಮೆರಾ ದೊಡ್ಡ ಗಾತ್ರದ ಬ್ಯಾಟರಿಯನ್ನು ಹೊಂದಿದ್ದು, ಲೆನ್ಸ್ ಕವರ್ ಅನ್ನು ತೆಗೆಯಬಹುದಾಗಿದೆ. ಅಲ್ಲದೆ ಇದರ ಮುಂಭಾಗದ ಫೇಸ್ ಕಲರ್ ಎಲ್ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಗೋಪ್ರೊ ಈ ವರ್ಷ ತನ್ನ ಮುಖ್ಯ ಹೀರೋ ಲೈನ್ ಅನ್ನು ಮಾತ್ರ ಆಪ್ಡೇಟ್ ಮಾಡಿದೆ. ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾ ಹೊಸ 23.6 ಮೆಗಾ ಪಿಕ್ಸೆಲ್ ಇಮೇಜ್ ಸೆನ್ಸಾರ್ ಅನ್ನು ಹೊಂದಿದೆ. ಇದು ಹಿಂದಿನ ಮಾದರಿಯಂತೆ GP1 ಪ್ರೊಸೆಸರ್ ಹೊಂದಿದೆ. ಇನ್ನು ಕ್ಯಾಮೆರಾದಲ್ಲಿ ಈಗ 5K 30FPS ವೀಡಿಯೊ ಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಅಲ್ಲದೆ 20 ಮೆಗಾಪಿಕ್ಸೆಲ್ ಸ್ಟಿಲ್‌ಗಳನ್ನು ಸೆರೆಹಿಡಿಯಬಹುದಾಗಿದೆ. ಇನ್ನು ಈ ಕ್ಯಾಮೆರಾ ಫ್ರಂಟ್ ಸೈಡ್ ಕಲರ್ ಎಲ್ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ನಿಮ್ಮ ಕಡೆಗೆ ಕ್ಯಾಮೆರಾವನ್ನು ಫೋಕಸ್ ಮಾಡಿದಾಗಿ ಫ್ರೇಮಿಂಗ್ ಶಾಟ್‌ಗಳಿಗೆ ಉಪಯುಕ್ತವಾಗಲಿದೆ.
ಇನ್ನು ಗೋಪ್ರೊ ಹೀರೋ 9 ಬ್ಲ್ಯಾಕ್ ನಲ್ಲಿ ಹೊಸ ಸಾಫ್ಟ್‌ವೇರ್ ಫೀಚರ್ಸ್‌ಗಳನ್ನ ಅಳವಡಿಸಲಾಗಿದೆ. ಇವುಗಳಲ್ಲಿ ಹೈಪರ್‌ಸ್ಮೂತ್ 3.0 ಅನ್ನು ಅಳವಡಿಸಲಾಗಿದೆ. ಇದು ಸುಧಾರಿತ ಸ್ಥಿರೀಕರಣ ಮತ್ತು 5K ಸೇರಿದಂತೆ ಎಲ್ಲಾ ರೆಸಲ್ಯೂಷನ್‌ಗಳಲ್ಲಿ ಬೂಸ್ಟ್ ಮೋಡ್ ಅನ್ನು ಬಳಸುವ ಸಾಮರ್ಥ್ಯ ವನ್ನು ನೀಡುತ್ತದೆ. ಅಲ್ಲದೆ ಈ ಹೊಸ ಟೈಮ್‌ವರ್ಪ್ 3.0 ಮೋಡ್ ಈಗ ನಿಮ್ಮ ಹೈಪರ್‌ಲ್ಯಾಪ್ಸ್ ವೀಡಿಯೊ ಗಳನ್ನು ರಿಯಲ್-ಟೈಂನ ವೇಗಕ್ಕೆ ಆಡಿಯೊ ಅಥವಾ slow-motion ಆಯ್ಕೆಗೂ ಅನುಮತಿಸುತ್ತದೆ.

ಗೋಪ್ರೊ ಹೀರೋ 9 ಬ್ಲ್ಯಾಕ್ ಕ್ಯಾಮೆರಾ ಲೀನಿಯರ್ + ಹರೈಸನ್ ಲೆವೆಲಿಂಗ್ ಆಯ್ಕೆಯನ್ನು ನೀಡಿದ್ದು, ಇದು ಕ್ಯಾಮೆರಾದಲ್ಲಿಯೇ ಹಾರಿಜಾನ್ ಲೆವೆಲಿಂಗ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಈ ಕ್ಯಾಮೆರಾ ದಲ್ಲಿ ಲೆನ್ಸ್ ಕವರ್ ತೆಗೆದುಹಾಕುವ ಆಯ್ಕೆಯನ್ನು ಹೊಂದಿದೆ. ಅಲ್ಲದೆ ಹೊಸ ಮ್ಯಾಕ್ಸ್ ಲೆನ್ಸ್ ಮೋಡ್ ನೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾದ ಅವಕಾಶವನ್ನು ಸಹ ನೀಡಲಾಗಿದೆ. ಇನ್ನುಳಿದಂತೆ ಈ ಕ್ಯಾಮೆರಾ ಮ್ಯಾಕ್ಸ್ ಹೈಪರ್‌ಸ್ಮೂತ್ ಸ್ಥಿರೀಕರಣ ಮತ್ತು ಹಾರಿಜಾನ್ ಲಾಕ್ ಫೀಚರ್ಸ್‌ಗಳ ಲಾಭವನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಇನ್ನು ಈ ಆಕ್ಷನ್ ಕ್ಯಾಮೆರಾ ಒಂದೇ ಮೈಕ್ರೊ ಎಸ್‌ಡಿ ಕಾರ್ಡ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಚಾರ್ಜಿಂಗ್ ಅನ್ನು ಹೊಂದಿದೆ. ಸದ್ಯ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಗೋಪ್ರೊ ಹೀರೋ 9 ಕ್ಯಾಮೆರಾ 34,400 ರೂ. ಗಳ ರಿಯಾಯಿತಿ ಬೆಲೆಯನ್ನು ಹೊಂದಿದೆ.


Click it and Unblock the Notifications








