Just In
Don't Miss
- News
ಏಪ್ರಿಲ್ 10-12 ರೊಳಗೆ ವಿಧಾನಸಭಾ ಚುನಾವಣೆ: ಬಿಎಸ್ವೈ ಭವಿಷ್ಯ
- Movies
Puttakkana Makkalu: ಪುಟ್ಟಕ್ಕನ ಮನೆಯಲ್ಲಿ ಗೋಪಾಲನನ್ನು ನೋಡಿದ ರಾಜಿ!
- Automobiles
ಬಾಲಿವುಡ್ ನಟಿಯರೇನೂ ಕಮ್ಮಿಯಿಲ್ಲ: ಎಂತಹ ಐಷಾರಾಮಿ ಕಾರುಗಳ ಒಡತಿಯರು ಗೋತ್ತಾ?
- Lifestyle
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- Finance
World Cancer Day: ಕ್ಯಾನ್ಸರ್ ವಿಮೆ ಎಂದರೇನು, ಪ್ರಾಮುಖ್ಯತೆ, ಇತರೆ ಮಾಹಿತಿ
- Sports
ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ಈತ ಭಾರತದ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದ ಆರ್ ಅಶ್ವಿನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸರ್ಕಾರದಿಂದ ಉಚಿತ ಆನ್‌ಲೈನ್ ಕೌಶಲ್ಯಾಭಿವೃದ್ದಿ ಕೋರ್ಸ್‌ಗಳ ಆರಂಭ
ಪ್ರಧಾನ ಮಂತ್ರಿ 'ನರೇಂದ್ರ ಮೋದಿ'ರವರು ಕಳೆದ ವರ್ಷ ಜಾರಿಗೆ ತಂದಿದ್ದ 'ಸ್ಕಿಲ್ ಇಂಡಿಯಾ ಮಿಷನ್' ಅಂತೂ ತಡವಾಗಿ ಈಗ ಕಾರ್ಯ ಆರಂಭಿಸಿದೆ. ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲ ಸಚಿವಾಲಯವು(The Ministry of Skill Development and Entrepreneurship), ಉಚಿತ ಆನ್‌ಲೈನ್ ಕೌಶಲ್ಯಾಭಿವೃದ್ದಿ ಕೋರ್ಸ್‌ಗಳನ್ನು ಪ್ರಾರಂಭಿಸುವ ಬಗ್ಗೆ ಪ್ರಕಟಿಸಿದೆ.
ಡಿಜಿಟಲ್ ಡಿವೈಡೆನ್ಸ್ ಹೋಗಲಾಡಿಸಲು ಆರಂಭಿಸಿರುವ ಆನ್‌ಲೈನ್ ವೇದಿಕೆ 'www.indiaskillsonline.com' ಗೆ ಭೇಟಿ ನೀಡಿ ಬಳಕೆದಾರರು ಹಲವು ಕೌಶಲ್ಯಗಳನ್ನು ಉಚಿತವಾಗಿ ತರಬೇತಿ ಪಡೆಯಬಹುದಾಗಿದೆ. ಅಂದಹಾಗೆ ಬಳಕೆದಾರರು ತರಬೇತಿ ಪಡೆಯಬಹುದಾದ ಕೌಶಲ್ಯಗಳು ಯಾವುವು, ಹೇಗೆ, ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ನರೇಂದ್ರ ಮೋದಿಯವರು "ಇಂಟರ್ನೆಟ್ ಸ್ಟಾರ್": ವಿಶೇಷತೆ ಏನು ಗೊತ್ತಾ?

ಉಚಿತ ಆನ್‌ಲೈನ್ ಕೌಶಲ್ಯಾಭಿವೃದ್ದಿ ಕೋರ್ಸ್
ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲ ಸಚಿವಾಲಯವು(The Ministry of Skill Development and Entrepreneurship), ಉಚಿತ ಆನ್‌ಲೈನ್ ಕೌಶಲ್ಯಾಭಿವೃದ್ದಿ ಕೋರ್ಸ್‌ಗಳನ್ನು ಪ್ರಾರಂಭಿಸುವ ಬಗ್ಗೆ ಪ್ರಕಟಣೆ ನೀಡಿದೆ.

ಆನ್‌ಲೈನ್ ವೇದಿಕೆ
ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲ ಸಚಿವಾಲಯವು, www.indiaskillsonline.com ಆನ್‌ಲೈನ್ ವೇದಿಕೆ ಲಾಂಚ್ ಮಾಡುತ್ತಿದ್ದು, ಇದರ ಮೂಲಕ ಇಚ್ಛಿಸಿದ ಯಾವುದೇ ಕೌಶಲ್ಯಗಳನ್ನು ಉಚಿತವಾಗಿ ಅಭ್ಯಾಸ ನಡೆಸಬಹುದಾಗಿದೆ.

ಕೋರ್ಸ್‌ಗಳು
ಬಳಕೆದಾರರಿಗೆ 'www.indiaskillsonline.com' ನಲ್ಲಿ ಸಾಫ್ಟ್ ಸ್ಕಿಲ್, ಭಾಷೆಗಳು, ಸಂಸ್ಕೃತಿ, ಡಿಜಿಟಲ್ ಸಾಕ್ಷರತೆ ಮತ್ತು ಉದ್ಯಮಶೀಲತೆ ಬಗ್ಗೆ ಅಭ್ಯಾಸ ನಡೆಸಲು ಆಯ್ಕೆಗಳು ಲಭ್ಯವಿವೆ.

ಸ್ಕಿಲ್ ಇಂಡಿಯಾ ಮಿಷನ್
ಭಾರತದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ'ಯವರು 'ಸ್ಕಿಲ್ ಇಂಡಿಯಾ ಮಿಷನ್' ಅನ್ನು ಕಳೆದ ವರ್ಷ ಲಾಂಚ್ ಮಾಡಿದ್ದರು. 'ಸ್ಕಿಲ್ ಇಂಡಿಯಾ ಮಿಷನ್', 2022 ರ ವೇಳೆಗೆ ಭಾರತದಲ್ಲಿನ 40 ಕೋಟಿ ಯುವಜನತೆಗೆ ತರಬೇತಿ ನೀಡುವ ಗುರಿ ಹೊಂದಿದೆ.

ಆನ್‌ಲೈನ್‌ನಿಂದ ಕೌಶಲ್ಯ ತರಬೇತಿ
"ಆನ್‌ಲೈನ್ ವೇದಿಕೆ ಕೌಶಲ್ಯ ತರಬೇತಿ ಪರಿಚಯಿಸುವ ಮುಖಾಂತರ ಇಡೀ ದೇಶ ಒಂದು ಪ್ರಬಲ ತರಗತಿಯಾಗುತ್ತದೆ. ಆಡಿಯೋ, ವೀಡಿಯೊ ಗ್ರಾಫಿಕಲ್ ನಿದರ್ಶನಗಳ ರೂಪದಲ್ಲಿ ಆಂತರಿಕ ಪರಿಕಲ್ಪನೆಗೆ ಕೌಶಲ್ಯ ತರಬೇತಿ ಪಡೆಯುವವರಿಗೆ ಸಹಾಯವಾಗುತ್ತದೆ. ಇದು ಅತಿ ವೇಗದಲ್ಲಿ ದೀರ್ಘಕಾಲ ಸಹಾಯಕವಾಗಲಿದೆ" ಅಧಿಕೃತ ಮೂಲಗಳು ತಿಳಿಸಿವೆ.

ಡಿಜಿಟಲ್ ಸಾಕ್ಷರತೆ
"ಕೌಶಲ್ಯ ತರಬೇತಿ ಬೇಡುವವರಿಗೆ ಪ್ರಾಥಮಿಕ ಡಿಜಿಟಲ್ ಸಾಕ್ಷರತೆ ಅವಕಾಶ ನೀಡಿವುದರ ಮುಖಾಂತರ, 'ಸ್ಕಿಲ್ ಇಂಡಿಯಾ' ಡಿಜಿಟಲ್ ಸಾಕ್ಷರತೆ ಡಿವೈಡ್ ಅನ್ನು ಸರಿಪಡಿಸಲಿದೆ. ಹೆಚ್ಚು ಅರಿವು ಮೂಡಿಸುವ ಮುಖಾಂತರ ದಿನದ ಕೆಲಸದಲ್ಲಿ ಉತ್ತಮ ವಾತಾವರಣ ಕಲ್ಪಿಸಿಕೊಡಲಿದೆ" ಎಂದು ಹೇಳಲಾಗಿದೆ.

ಇಂಡಿಯಾ ಸ್ಕಿಲ್ಸ್
ಜುಲೈ 16 ರಂದು 'ವರ್ಲ್ಡ್ ಯೂತ್ ಸ್ಕಿಲ್ಸ್ ಡೇ' ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಂದು 'ಇಂಡಿಯಾ ಸ್ಕಿಲ್ಸ್' ಮೊದಲ ಆವೃತ್ತಿಯನ್ನು ರಾಷ್ಟ್ರಪತಿ 'ಪ್ರಣಬ್ ಮುಖರ್ಜಿ'ಯವರು ಉದ್ಘಾಟಿಸಿದರು.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470