ನರೇಂದ್ರ ಮೋದಿಯವರು "ಇಂಟರ್ನೆಟ್‌ ಸ್ಟಾರ್‌": ವಿಶೇಷತೆ ಏನು ಗೊತ್ತಾ?

Written By:

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ'ಯವರು ಪ್ರಪಂಚದ ಎಲ್ಲಾ ದೇಶಗಳಿಗೂ ಪರಿಚಿತರಾದ ರಾಜಕೀಯ ವ್ಯಕ್ತಿ. ಪ್ರಪಂಚಕ್ಕೆ ಪರಿಚಿತ ರಾಜಕೀಯ ವ್ಯಕ್ತಿ ಆಗೋದು ಅಂದ್ರೆ ಕಡಿಮೆ ವಿಷಯವಂತು ಅಲ್ವೇ ಅಲ್ಲಾ. ಇನ್ನು ಬಹಳಷ್ಟು ಜನರು ಅಯ್ಯೋ ಅವರ ಭಾರತಕ್ಕೆ ಮಾತ್ರ ಪ್ರಭಾವಿ ವ್ಯಕ್ತಿ ಅಂತ ಅಂದುಕೊಂಡಿರಬಹುದು. ಹಾಗೆನಾದ್ರು ಚಿಂತಿಸಿದ್ರೆ ಈಗಲೇ ನಿಮ್ಮ ತಲೆಯಿಂದ ಆ ಅಲೋಚನೆಯನ್ನು ತೆಗೆದುಹಾಕಿ. ಯಾಕಂದ್ರೆ ನರೇಂದ್ರ ಮೋದಿ'ಯವರ ಬಗ್ಗೆ ಕುತೂಹಲ ಮಾಹಿತಿಯೊಂದು ಬಿಡುಗಡೆಗೊಂಡಿದೆ. ಅದೇನಂದ್ರೆ ನರೇಂದ್ರ ಮೋದಿ'ಯವರು ಈಗ ಇಂಟರ್ನೆಟ್‌ ಸ್ಟಾರ್‌ ಆಗಿದ್ದಾರೆ. ಇಂಟರ್ನೆಟ್‌ ಸ್ಟಾರ್‌.... ಇದೇನಪ್ಪಾ ಇದು ಹೊಸ ವಿಷಯ ಅಂತಿರಾ ಈ ಬಗ್ಗೆ ಲೇಖನದ ಸ್ಲೈಡರ್‌ನಲ್ಲಿ ಓದಿ ನಿಮಗೆ ತಿಳಿಯುತ್ತೇ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟರ್ನೆಟ್‌ ಸ್ಟಾರ್‌ ನರೇಂದ್ರ ಮೋದಿ'ಯವರು

1

ಇಷ್ಟು ದಿನ ಭಾರತದಲ್ಲಿ ಮಾತ್ರ ಪ್ರಧಾನಿಯಾಗಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ ಮೋದಿ ಎಂದು ತಿಳಿದಿದ್ದ ಜನರಿಗೆ ಹೊಸ ವಿಷಯವಿದು. ಇಂಟರ್ನೆಟ್‌ನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿಯವರು ಇದ್ದು, ಈಗ ಇಂಟರ್ನೆಟ್‌ ಸ್ಟಾರ್‌ ಆಗಿದ್ದಾರೆ ಎಂದು ಟೈಮ್ಸ್‌ ಮ್ಯಾಗಜೀನ್‌ ಹೇಳಿದೆ. ಅಲ್ಲದೇ ಅತಿಹೆಚ್ಚು ಸಾಮಾಜಿಕ ಜಾಲತಾಣ ಬಳಸುವ ವ್ಯಕ್ತಿಗಳಲ್ಲೂ ಇವರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದೆ.
ಚಿತ್ರ ಕೃಪೆ: Times Magazine

ಪಾಕಿಸ್ತಾನ ಭೇಟಿ

2

ಕಳೆದ ವರ್ಷ ನರೇಂದ್ರ ಮೋದಿ'ಯವರು ಪಾಕಿಸ್ತಾನಕ್ಕೆ ಇದ್ದಕ್ಕಿದ್ದ ಹಾಗೆ ಭೇಟಿ ನೀಡುವ ಬಗ್ಗೆ ಟ್ವೀಟ್‌ ಮಾಡಿದ್ದರು. ಈ ವೇಳೆ 30 ಪ್ರಭಾವಿ ಇಂಟರ್ನೆಟ್‌ ಸ್ಟಾರ್‌ಗಳ ಪಟ್ಟಿಯಲ್ಲಿ ಇದ್ದರು. ಅಂತೆಯೇ ಈ ವರ್ಷವು ಸಹ ಮೋದಿ'ಯವರು ಶ್ರೇಣಿ ನೀಡದ ಪಟ್ಟಿಯಲ್ಲಿ ಇಂಟರ್ನೆಟ್‌ ಸ್ಟಾರ್‌ ಅಗಿದ್ದಾರೆ.

ಇಂಟರ್ನೆಟ್‌ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಇರುವವರು

3

ಅಮೇರಿಕ ಅಧ್ಯಕ್ಷರಾಗುವ ಭರವಸೆ ಹೊಂದಿರುವ ಡೊನಾಲ್ಡ್‌ ಟ್ರಂಪ್‌, ರಿಯಾಲಿಟಿ ಟಿವಿ ಸ್ಟಾರ್‌ ಕಿಮ್‌ ಕಾರ್ದಾಶಿಯನ್‌ ಮತ್ತು ಪತಿ ಕ್ಆನ್ಯೆ ವೆಸ್ಟ್‌, ಲೇಖಕರಾದ ಜೆಕೆ ರೌಲಿಂಗ್, ಮಾಜಿ ಒಲಿಂಪಿಕ್‌ ಕ್ರೀಡಾಪಟು ಕೈಟ್ಲಿನ್‌ ಜೆನ್ನರ್‌, ಸಾಕರ್‌ ಸ್ಟಾರ್‌ ಕ್ರಿಶ್ಷಿಯಾನೊ ರೊನಾಲ್ಡೊ.

 ಸಾಮಾಜಿಕ ತಾಣದಿಂದ ಜಾಗತಿಕ ಪರಿಣಾಮ

4

ಈ ಭಾರಿ ಟೈಮ್ಸ್‌ ಮ್ಯಾಗಜೀನ್ "ಸಾಮಾಜಿಕ ಜಾಲತಾಣ ಮತ್ತು ಅದರ ಬಳಕೆಯಿಂದ ನ್ಯೂಸ್ ಮೂಲಕ ಪರಿಣಾಮಬೀರಿದ ಎಲ್ಲಾ ಸಾಮರ್ಥ್ಯವನ್ನು ನೋಡಿ ಇಂಟರ್ನೆಟ್‌ ಸ್ಟಾರ್‌'ಗಳನ್ನು ಪಟ್ಟಿ ಮಾಡಿರುವುದಾಗಿ" ಹೇಳಿದೆ.

ಪ್ರಜಾಪ್ರಭುತ್ವದ ನಾಯಕ

5

ಮೋದಿ'ಯವರನ್ನು ಕುರಿತು ಟೈಮ್ಸ್‌ ಮ್ಯಾಗಜೀನ್‌ "ಪ್ರಪಂಚದ ವಿಶಾಲ ಪ್ರಜಾಪ್ರಭುತ್ವದ ಲೀಡರ್‌ ಸಹ ಇಂಟರ್ನೆಟ್‌ ಸ್ಟಾರ್‌ ಆಗಿದ್ದು, ಟ್ವಿಟರ್‌ನಲ್ಲಿ 18 ದಶಲಕ್ಷ ಫಾಲೋವರ್‌ಗಳನ್ನು, ಹಾಗೂ 32 ದಶಲಕ್ಷ ಫೇಸ್‌ಬುಕ್‌ ಲೈಕ್‌ಗಳನ್ನು ಪಡೆದಿದ್ದಾರೆ ಎಂದು" ಹೇಳಿದೆ.

ಬ್ರೇಕಿಂಗ್‌ ನ್ಯೂಸ್‌ ಮತ್ತು ರಾಜತಂತ್ರ

6

ಮೋದಿ ಬ್ರೇಕಿಂಗ್ ನ್ಯೂಸ್‌ಗಳನ್ನು ನೀಡಲು ಮತ್ತು ರಾಜತಂತ್ರ ನಡೆಸಲು ಸಾಮಾಜಿಕ ಜಾಲತಾಣ ಬಳಸುತ್ತಾರೆ ಎನ್ನಲಾಗಿದೆ. ಉದಾಹರಣೆಗೆ ಕಳೆದ ವರ್ಷ ಪಾಕಿಸ್ತಾನಕ್ಕೆ ದಿಡೀರ್‌ ಬೇಡಿ ನೀಡಿದ ವೇಳೆ ಟ್ವೀಟ್‌ ಮಾಡಿದ್ದರಲ್ಲ ಹಾಗೆ. ಅಲ್ಲದೇ ಮೋದಿ ಟ್ವಿಟರ್‌ ಅನ್ನು ಇತರೆ ದೇಶಗಳ ಅಧ್ಯಕ್ಷರಿಗೆ ಶುಭಾಷಯಗಳನ್ನು ನೀಡಲು ಸಹ ಬಳಸುತ್ತಾರೆ ಎಂಬುದನ್ನು ಪ್ರಶಂಸಿಸಿದೆ.

ಕಳೆದ ವರ್ಷ 100 ವ್ಯಕ್ತಿಗಳಲ್ಲಿ ಒಬ್ಬರು

7

ಮೋದಿ'ಯವರು ಕಳೆದ ವರ್ಷ ಟೈಮ್ಸ್ ಮ್ಯಾಗಜೀನ್‌ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿದ್ದರು. ಆಗತಾನೆ ಒಬಾಮ'ರವರು ಸಹ ತನ್ನ ಪ್ರೊಫೈಲ್‌ ಅನ್ನು ಆರಂಭಿಸಿದ್ದರು.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು

ಫೇಸ್‌ಬುಕ್ ಕಚೇರಿಯಲ್ಲಿ ಮೋಡಿ ಮಾಡಿದ ನರೇಂದ್ರ ಮೋದಿ

ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೂರನೇ ಸ್ಥಾನ

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
PM Modi’s On Time Magazine’s 30 Most Influential People On Internet List Again. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot