ಈಗಲೇ ಕ್ರೋಮ್ ಅಪ್‌ಡೇಟ್ ಮಾಡಿ: ಸರ್ಕಾರದಿಂದ ಸೂಚನೆ!
ಯಾವುದೇ ಮಾಹಿತಿ ಬೇಕು ಎಂದರೂ ಮೊದಲು ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಓಪನ್ ಮಾಡುವುದು ಕ್ರೋಮ್ ಅನ್ನು. ಈ ಕ್ರೋಮ್ ಮೂಲಕ ಬೇಕಾದ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಈ ನಡುವೆ ಕ್ರೋಮ್ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಹೌದು, ಕ್ರೋಮ್ ಬಳಕೆದಾರರು ಕಡ್ಡಾಯವಾಗಿ ತಮ್ಮ ವೆಬ್ ಬ್ರೌಸರ್ ಅನ್ನು ನವೀಕರಿಸಲು ಸೂಚಿಸಿದೆ. ಈ ಮೂಲಕ ವಿಶ್ವಾದ್ಯಂತ ಅತ್ಯಂತ ಜನಪ್ರಿಯ ವೆಬ್ ಬ್ರೌಸರ್‌ಗಳಲ್ಲಿ ಒಂದಾದ ಗೂಗಲ್ ಕ್ರೋಮ್‌ನಲ್ಲಿ ದೋಷ ಕಂಡುಕೊಳ್ಳಲಾಗಿದೆ. ಹಾಗಿದ್ರೆ, ಇದರಿಂದ ಬಳಕೆದಾರರಿಗೆ ಆಗುವ ಸಮಸ್ಯೆ ಏನು?, ನವೀಕರಣ ಮಾಡುವುದರಿಂದ ಆಗುವ ಲಾಭ ಏನು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಕ್ರೋಮ್‌ನಲ್ಲಿ ಕಂಡುಬಂದ ದೋಷ ಏನು?: ಸಿಸ್ಟಂಗಳಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಆಕ್ರಮಣಕಾರರನ್ನು ಸಮರ್ಥವಾಗಿ ಸಕ್ರಿಯಗೊಳಿಸುವ ಬಹು ನಿರ್ಣಾಯಕ ದೋಷಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ದುರ್ಬಲತೆಗಳ ತೀವ್ರತೆ ಹೆಚ್ಚಿದೆ ಎಂದು ಎಂದು ರೇಟ್ ಮಾಡಲಾಗಿದೆ. ಹೀಗಾಗಿ ಅಪಾಯಗಳನ್ನು ತಗ್ಗಿಸಲು ಬಳಕೆದಾರರು ತಮ್ಮ ಕ್ರೋಮ್ ಅನ್ನು ವಿಂಡೋಸ್‌ಗಾಗಿ ಆವೃತ್ತಿ 113.0.5672.63/.64 ಅಥವಾ ಮ್ಯಾಕ್ ಮತ್ತು ಲಿನಕ್ಸ್ ಗಾಗಿ ಆವೃತ್ತಿ 113.0.5672.63 ಗೆ ನವೀಕರಿಸಲು ಸೂಚನೆ ನೀಡಲಾಗಿದೆ.
ಕ್ರೋಮ್‌ನಲ್ಲಿಯೇ ಯಾಕೆ ಈ ರೀತಿಯ ದೋಷ ಕಂಡುಬರುತ್ತಿವೆ: ಗೂಗಲ್ ಕ್ರೋಮ್‌ಅನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಇದರ ಸೇವೆ ಅದ್ವಿತೀಯ. ಈ ಕಾರಣಕ್ಕಾಗಿಯೇ ಸ್ಕ್ಯಾಮರ್‌ಗಳು ಕ್ರೋಮ್ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಅದರಂತೆ ಕ್ರೋಮ್‌ನಲ್ಲಿನ ಹಲವಾರು ವಿಭಿನ್ನ ಸಮಸ್ಯೆಗಳಿಂದ ದೋಷಗಳು ಉಂಟಾಗುತ್ತಿದ್ದು, ಈ ಮೂಲಕ ವಿಸ್ತರಣೆಗಳಲ್ಲಿ ವಿಶ್ವಾಸಾರ್ಹವಲ್ಲದ ಇನ್‌ಪುಟ್‌ನ ಸಾಕಷ್ಟು ಮೌಲ್ಯೀಕರಣದಿಂದ ಬ್ರೌಸರ್ ಸಂಕಷ್ಟಪಡುತ್ತದೆ.
ಇದನ್ನು ದುರುದ್ದೇಶಪೂರಿತ ಸ್ಕ್ಯಾಮರ್‌ಗಳು ಕ್ರೋಮ್‌ನ ಈ ಕಾರ್ಯವನ್ನು ಕುಶಲತೆಯಿಂದ ಬಳಸಿಕೊಳ್ಳುತ್ತಾರೆ. ಜೊತೆಗೆ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸುತ್ತಾರೆ. ಅಷ್ಟೇ ಅಲ್ಲದೆ ಓಎಸ್ ಇನ್‌ಪುಟ್‌ಗಳಲ್ಲಿನ ಬಳಕೆಯ ನಂತರ ಈ ದುರ್ಬಲತೆಯು ದಾಳಿಕೋರರಿಗೆ ಮೆಮೊರಿ ದೋಷಗಳನ್ನು ಕಂಟ್ರೋಲ್ ಮಾಡಲು ಅನುಮತಿಸುತ್ತದೆ. ಈ ಮೂಲಕ ಸಂಭಾವ್ಯವಾಗಿ ಅನಿಯಂತ್ರಿತ ಕೋಡ್ ಎಕ್ಸಿಕ್ಯೂಶನ್‌ಗೆ ಕಾರಣವಾಗುತ್ತದೆ.

ಇದು ಮಾತ್ರವಲ್ಲದೆ ಪ್ರಾಂಪ್ಟ್‌ಗಳು, ಫುಲ್ ಸ್ಕ್ರೀನ್ ಮೋಡ್, ಪಿಕ್ಚರ್-ಇನ್-ಪಿಕ್ಚರ್, ಮತ್ತು ಕ್ರಾಸ್-ಆರಿಜಿನ್ ರಿಸೋರ್ಸ್ ಶೇರಿಂಗ್ (CORS) ಸೇರಿದಂತೆ ವಿವಿಧ ಫೀಚರ್ಸ್ ಹೊಂದಿರುವ ಕ್ರೋಮ್ ಅನುಚಿತ ದೋಷಗಳನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಈ ನ್ಯೂನತೆಗಳೇ ಆಕ್ರಮಣಕಾರಿಗೆ ಬೇಕಾದ ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶವನ್ನು ನೀಡಲಿವೆ, ಜೊತೆಗೆ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಅನುಮತಿಸುತ್ತವೆ.
ಕ್ರೋಮ್‌ನಲ್ಲಿ ಕಂಡು ಬರುವ ಈ ದುರ್ಬಲತೆಗಳನ್ನು ಬಳಸಿಕೊಳ್ಳಲು ಸ್ಕ್ಯಾಮರ್‌ಗಳು ನಿರ್ದಿಷ್ಟವಾಗಿ ರಚಿಸಲಾದ ವೆಬ್ ಪುಟಕ್ಕೆ ಭೇಟಿ ನೀಡುವಂತೆ ಬಳಕೆದಾರರನ್ನು ಪ್ರೇರೀಪಿಸುತ್ತಾರೆ ಎಂದು CERT-In ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಇನ್ನು ಸ್ಕ್ಯಾಮರ್‌ಗಳು ಫಿಶಿಂಗ್ ಇಮೇಲ್‌ಗಳು, ದುರುದ್ದೇಶಪೂರಿತ ಲಿಂಕ್‌ಗಳು ಅಥವಾ ರಾಜಿ ಮಾಡಿಕೊಂಡ ವೆಬ್‌ಸೈಟ್‌ಗಳಂತಹ ವಿವಿಧ ಸಾಮಾಜಿಕ ಎಂಜಿನಿಯರಿಂಗ್ ತಂತ್ರಗಳ ಮೂಲಕ ಇದನ್ನು ತಮ್ಮ ಇಚ್ಚೆ ಸಾಧಿಸಿಕೊಳ್ಳಬಹುದಾಗಿದೆ.
ಇನ್ನು ಕ್ರೋಮ್‌ನ ಹಳೆಯ ಆವೃತ್ತಿಯನ್ನು ಬಳಸಿಕೊಂಡು ಬಳಕೆದಾರರು ದುರುದ್ದೇಶಪೂರಿತ ಪುಟವನ್ನು ಪ್ರವೇಶಿಸಿದ ನಂತರ, ಸ್ಕ್ಯಾಮರ್‌ಗಳು ಬಳಕೆದಾರರ ಸಿಸ್ಟಂನಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ.ಈ ಎಲ್ಲಾ ಕಾರಣಕ್ಕಾಗಿಯೇ ತಕ್ಷಣವೇ ನಿಮ್ಮ ಬಳಕೆಯ ಕ್ರೋಮ್ ಅನ್ನು ನವೀಕರಣ ಮಾಡಲೇಬೇಕು ಎಂದು ಸರ್ಕಾರ ಸೂಚನೆ ನೀಡುತ್ತಿದೆ.

ಇದರೊಂದಿಗೆ ಕ್ರೋಮ್ ಬ್ರೌಸರ್‌ನಲ್ಲಿ ನಿರ್ಮಿಸುತ್ತಿರುವ ವೆಬ್ ಜಿಪಿಯು (WebGPU) ಎಂಬ ತಂತ್ರಜ್ಞಾನದಿಂದಾಗಿ ಬಳಕೆದಾರರು ವೆಬ್ ಅಪ್ಲಿಕೇಶನ್‌ಗಳು AI ಪ್ರಕ್ರಿಯೆಯ ಲಾಭವನ್ನು ಹೆಚ್ಚು ನೇರವಾಗಿ ಪಡೆಯಬಹುದಾಗಿದೆ. ಗೂಗಲ್ I/O ಸಮ್ಮೇಳನದಲ್ಲಿ ವೆಬ್‌ಜಿಪಿಯು ಅಳವಡಿಕೆಯನ್ನು ಗೂಗಲ್ ಘೋಷಣೆ ಮಾಡಿತ್ತು. ಈ ವೆಬ್ ಜಿಪಿಯು ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಲ್ಲಿನ ವೆಬ್ ಅಪ್ಲಿಕೇಶನ್‌ಗಳು ಸೃಜನಶೀಲ ಟೂಲ್ಸ್‌ಗಳಿಂದ ಹಿಡಿದು ಆರೋಗ್ಯ ಅಪ್ಲಿಕೇಶನ್‌ಗಳವರೆಗೆ ಎಲ್ಲವನ್ನೂ ವ್ಯಾಪಕಗೊಳಿಸುವ ಕೃತಕ ಬುದ್ಧಿಮತ್ತೆಯ ಸಾಫ್ಟ್‌ವೇರ್‌ಗಳನ್ನು ಉತ್ತಮವಾಗಿ ಟ್ಯಾಪ್ ಮಾಡಬಹುದಾಗಿದೆ.


Click it and Unblock the Notifications








