ಭಾರತದಲ್ಲಿ ಮತ್ತೆ 43 ಆಪ್‌ಗಳು ಕಿಕ್ಔಟ್!.ಬ್ಯಾನ್ ಆದ ಆಪ್‌ಗಳ ಲಿಸ್ಟ್ ಇಲ್ಲಿದೆ!
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ದೇಶದಲ್ಲಿ ಇದೀಗ ಮತ್ತೆ 43 ಮೊಬೈಲ್ ಅಪ್ಲಿಕೇಶನ್‌ಗಳಿಗೆ ಗೇಟ್‌ಪಾಸ್ ನೀಡಿ ಆದೇಶ ಹೊರಡಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಒಳಹರಿವಿನ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದಿಂದ ಪಡೆದ ಸಮಗ್ರ ವರದಿಗಳ ಆಧಾರದ ಮೇಲೆ ಭಾರತದಲ್ಲಿ ಬಳಕೆದಾರರು ಈ ಅಪ್ಲಿಕೇಶನ್‌ಗಳ ಪ್ರವೇಶವನ್ನು ನಿರ್ಬಂಧಿಸುವ ಆದೇಶವನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಬಿಡುಗಡೆ ಮಾಡಿದೆ.
ಕಳೆದ ಜೂನ್ 29 ರಂದು ಭಾರತ ಸರ್ಕಾರವು 59 ಮೊಬೈಲ್ ಅಪ್ಲಿಕೇಶನ್‌ಗಳ ಪ್ರವೇಶವನ್ನು ನಿರ್ಬಂಧಿಸಿತ್ತು. ಆ ನಂತರ ಸೆಪ್ಟೆಂಬರ್ 2, 2020 ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ 118 ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು. ಈಗ ಮತ್ತೆ 43 ಆಪ್‌ಗಳಿಗೆ ಕಿಕ್‌ಔಟ್ ಮಾಡಿದೆ. ಭಾರತದಲ್ಲಿ ಸರ್ಕಾರ ಹೊಸದಾಗಿ ನಿರ್ಬಂಧಿಸಲಾದ 43 ಅಪ್ಲಿಕೇಶನ್‌ಗಳ ಲಿಸ್ಟ್ ತಿಳಿಯಲು ಮುಂದೆ ಓದಿರಿ.

AliSuppliers Mobile App
Alibaba Workbench
AliExpress - Smarter Shopping, Better Living
Alipay Cashier
Lalamove India - Delivery App
Drive with Lalamove India
Snack Video
CamCard - Business Card Reader
CamCard - BCR (Western)
Soul- Follow the soul to find you
Chinese Social - Free Online Dating Video App & Chat
Date in Asia - Dating & Chat For Asian Singles
WeDate-Dating App
Free dating app-Singol, start your date!
Adore App
TrulyChinese - Chinese Dating App
TrulyAsian - Asian Dating App
ChinaLove: dating app for Chinese singles
DateMyAge: Chat, Meet, Date Mature Singles Online
AsianDate: find Asian singles
FlirtWish: chat with singles
Guys Only Dating: Gay Chat
Tubit: Live Streams
WeWorkChina
First Love Live- super hot live beauties live online
Rela - Lesbian Social Network
Cashier Wallet
MangoTV
MGTV-HunanTV official TV APP
WeTV - TV version
WeTV - Cdrama, Kdrama&More
WeTV Lite
Lucky Live-Live Video Streaming App
Taobao Live
DingTalk
Identity V
Isoland 2: Ashes of Time
BoxStar (Early Access)
Heroes Evolved
Happy Fish
Jellipop Match-Decorate your dream island!
Munchkin Match: magic home building
Conquista Online II
Source: www.pib.gov.in


Click it and Unblock the Notifications