Home
ಸುದ್ದಿಜಾಲ

OTT ಪ್ಲಾಟ್‌ಫಾರ್ಮ್‌ಗಳ ನಿಯಂತ್ರಣಕ್ಕೆ ಮುಂದಾಯ್ತಾ ಸರ್ಕಾರ? ಇನ್ಮುಂದೆ ಅಶ್ಲೀಲ ಕಂಟೆಂಟ್ ಕಣ್ಮರೆ?

ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳು ಇಂದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಭಾರತದಲ್ಲಿ ವಿವಿಧ ರೀತಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳು ತಮ್ಮದೇ ಆದ ಕಂಟೆಂಟ್‌ಮೂಲಕ ವೀಕ್ಷಕರನ್ನು ಆಕರ್ಷಣೆ ಮಾಡುತ್ತಿದ್ದು, ಈ ನಡುವೆ ಭಾರತದ ಸರ್ಕಾರ ಈ ಪ್ಲಾಟ್‌ಫಾರ್ಮ್‌ಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಹೌದು, ನೆಟ್‌ಫ್ಲಿಕ್ಸ್, ಡಿಸ್ನಿಯಂತಹ ಅನೇಕ ಸ್ಟ್ರೀಮಿಂಗ್ ದೈತ್ಯ ಪ್ಲಾಟ್‌ಫಾರ್ಮ್‌ಗಳು ತಮ್ಮ ಕಂಟೆಂಟ್‌ ಅನ್ನು ಆನ್‌ಲೈನ್‌ನಲ್ಲಿ ವೀಕ್ಷಣೆಗೆ ಅನುಕೂಲ ಮಾಡಿಕೊಡುವ ಮೊದಲು ಪರಿಶೀಲನೆಗೆ ಒಳಪಡಿಸಬೇಕು ಎಂದು ಭಾರತ ಸರ್ಕಾರ ಪ್ರಸ್ತಾಪಿಸಿದೆ. ಈ ಮೂಲಕ ಅಶ್ಲೀಲತೆ ಮತ್ತು ಹಿಂಸಾಚಾರಕ್ಕೆ ಕಡಿವಾಣ ಹಾಕಲು ಸಿದ್ಧತೆ ನಡಸಲಾಗಿದೆ. ಹಾಗಿದ್ರೆ, ಏನಿದು ಹೊಸ ನಿಯಮ? ಯಾವೆಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಇದು ಅನ್ವಯ ಎಂಬ ಮಾಹಿತಿ ಇಲ್ಲಿದೆ ನೋಡಿ.

OTT ಪ್ಲಾಟ್‌ಫಾರ್ಮ್‌ಗಳ ನಿಯಂತ್ರಣಕ್ಕೆ ಮುಂದಾಯ್ತಾ ಸರ್ಕಾರ?..

ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್‌ ಬಗ್ಗೆ ಸರ್ಕಾರ ಕಾಳಜಿ ವಹಿಸಿದ್ದು, ಈ ಸಂಬಂಧ ಜೂನ್ 20 ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಲಾಗಿದೆ. ಈ ವೇಳೆ ಟಾಪ್ ಬಾಲಿವುಡ್ ತಾರೆಯರು ಎನಿಸಿಕೊಂಡ ಕೆಲವರು ಅಸಭ್ಯ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೆ ನಟನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಚುನಾಯಿತ ಸದಸ್ಯರು ಮತ್ತು ಸಾರ್ವಜನಿಕರು ಟೀಕೆ ಮಾಡಿದ್ದಾರೆ.

ಭಾರತೀಯ ಚಿತ್ರಮಂದಿರಗಳಲ್ಲಿನ ಎಲ್ಲಾ ಚಲನಚಿತ್ರಗಳನ್ನು ಸರ್ಕಾರ ನೇಮಿಸಿದ ಮಂಡಳಿಯಿಂದ ಪರಿಶೀಲಿಸಲಾಗುತ್ತದೆ. ಇದಾದ ಬಳಿಕವೇ ಆ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಆದರೆ ಈ ಓಟಿಟಿಯಲ್ಲಿ ಪ್ರಸಾರ ಆಗುವ ಯಾವುದೇ ಕಂಟೆಂಟ್‌ ಅನ್ನು ಸರ್ಕಾರ ಈವರೆಗೂ ಪರಿಶೀಲನೆ ನಡೆಸುವ ಕೆಲಸ ಮಾಡುತ್ತಿಲ್ಲ ಎಂದು ಉಲ್ಲೇಖ ಮಾಡಲಾಗಿದೆ. ಇದರಿಂದಾಗಿ ಈ ಕಂಟೆಂಟ್‌ಗಳನ್ನು ಪರಿಶೀಲಿಸಲು ಸ್ವತಂತ್ರ ಸಮಿತಿಯನ್ನು ಪರಿಗಣಿಸುವಂತೆ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

ಈ ಸಭೆಯಲ್ಲಿ ಅಮೆಜಾನ್, ಡಿಸ್ನಿ, ನೆಟ್‌ಫ್ಲಿಕ್ಸ್‌ ಹಾಗೂ ರಿಯಲಯನ್ಸ್, ವಯಾಕಾಮ್‌ 18 ಹಾಗೂ ಆಪಲ್ ಟಿವಿ ಸಂಸ್ಥೆಗಳು ಭಾಗಿಯಾಗಿದ್ದವು. ಆದರೆ, ಈ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರಸ್ತಾವನೆಯನ್ನು ವಿರೋಧಿಸಿದ್ದು, ಈ ಸಂಬಂಧ ಯಾವುದೇ ಅಂತಿಮ ನಿರ್ಧಾರವನ್ನು ಈವರೆಗೂ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ. ಆದರೆ, ಅಂತರಾಷ್ಟ್ರೀಯ ಕಂಟೆಂಟ್‌ ಅನ್ನು ಒಳಗೊಂಡಂತೆ ಸ್ಟ್ರೀಮಿಂಗ್ ಕಂಟೆಂಟ್‌ ಒಂದು ನಿರ್ದಿಷ್ಟ ನೀತಿ ಸಂಹಿತೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚು ಪೂರ್ವಭಾವಿ ವಿಧಾನದ ಅಗತ್ಯತೆಯನ್ನು ಸರ್ಕಾರ ಈ ವೇಳೆ ಒತ್ತಿ ಹೇಳಿದೆ.

ಇನ್ನು ಈ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಆಗುತ್ತಿರುವ ಅಶ್ಲೀಲತೆಯ ವಿಡಿಯೋಗಳು ದೇಶದಲ್ಲಿ ಕೆಲವು ಸಮಯದಿಂದ ಚರ್ಚೆ ಆಗುತ್ತಲೇ ಇವೆ. ಇದರೊಂದಿಗೆ ಸ್ಟ್ರೀಮಿಂಗ್ ಸೇವಾ ಪೂರೈಕೆದಾರರು ತೋರಿಸಿರುವ ಕಂಟೆಂಟ್ ಅನ್ನು ಸೆನ್ಸಾರ್ ಮಾಡಲು ಸಹ ಸರ್ಕಾರಕ್ಕೆ ಮನವಿಗಳು ಬರುತ್ತಿವೆಯಂತೆ. ಇದರಲ್ಲಿ ಗಮನಾರ್ಹ ವಿಷಯ ಏನೆಂದರೆ ಈ ವರ್ಷದ ಆರಂಭದಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಸೃಜನಶೀಲತೆಯ ಹೆಸರಿನಲ್ಲಿ ಅಸಭ್ಯತೆ ಮತ್ತು ನಿಂದನೀಯ ಭಾಷೆ ಸ್ವೀಕಾರಾರ್ಹವಲ್ಲ ಈ ಪ್ಲಾಟ್‌ಫಾರ್ಮ್‌ಗಳಿಗೆ ಎಚ್ಚರಿಕೆ ನೀಡಿದ್ದರು

OTT ಪ್ಲಾಟ್‌ಫಾರ್ಮ್‌ಗಳ ನಿಯಂತ್ರಣಕ್ಕೆ ಮುಂದಾಯ್ತಾ ಸರ್ಕಾರ?..

ಅದರಲ್ಲೂ ಅಶ್ಲೀಲ ವಿಷಯಗಳ ಬಗ್ಗೆ ದೂರುಗಳು ಹೆಚ್ಚುತ್ತಿದ್ದು, ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿದ್ದರೆ ನಿಯಮಗಳನ್ನು ಬದಲಾಯಿಸಲು ಸರ್ಕಾರ ಸಿದ್ಧವಾಗಿದೆ ಎಂದು ಠಾಕೂರ್ ಹೇಳಿದ್ದರು. ಇನ್ನು ಸ್ಟ್ರೀಮಿಂಗ್ ದೈತ್ಯರು ಪ್ರತಿ ಕಂಟೆಂಟ್‌ನಲ್ಲಿ 50 ಸೆಕೆಂಡ್‌ಗಳ ತಂಬಾಕು ಆರೋಗ್ಯ ಎಚ್ಚರಿಕೆಗಳನ್ನು ಆಡ್‌ ಮಾಡುವ ಸರ್ಕಾರದ ಆದೇಶವನ್ನು ಪ್ರತಿಭಟಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಈ ವರ್ಷದ ಮಾರ್ಚ್‌ನಲ್ಲಿ, 'ಕಾಲೇಜ್ ರೊಮ್ಯಾನ್ಸ್' ವೆಬ್ ಸರಣಿಯನ್ನು ಸ್ಟ್ರೀಮಿಂಗ್ ಮಾಡಿದ್ದಕ್ಕಾಗಿ ಸೋನಿಲಿವ್‌, ಯೂಟ್ಯೂಬ್‌ ಮತ್ತು ಟಿವಿಎಫ್‌ಪ್ಲೈ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಯಾಕೆಂದರೆ ಇದರಲ್ಲಿ ಅಶ್ಲೀಲ ಮತ್ತು ಅಸಭ್ಯ ಭಾಷೆಯ ಬಳಕೆಯನ್ನು ಮಾಡಲಾಗಿತ್ತು. ಅಷ್ಟು ಮಾತ್ರವಲ್ಲದೆ ಇದನ್ನು ಪ್ರಸಾರ ಮಾಡುವಾಗ ವೀಕ್ಷಕರಿಗೆ ಯಾವುದೇ ಎಚ್ಚರಿಕೆಯನ್ನು ನೀಡದೆ ಐಟಿ ನಿಯಮಗಳನ್ನು ಉಲ್ಲಂಘಿಸಿದ್ದವು.

ಈ ವಿಭಾಗದಲ್ಲಿ ಕೇವಲ ಅಂತರಾಷ್ಟೀಯ ಪ್ಲಾಟ್‌ಫಾರ್ಮ್‌ಗಳಲ್ಲದೆ ಭಾರತೀಯ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಸಹ ಇದ್ದು, ಅದರಲ್ಲಿ ಜಿಯೋ ಸಿನಿಮಾ, ಝೀ5 ಹಾಗೂ ALT ಬಾಲಾಜಿ ಸೇರಿದಂತೆ ಹಲವಾರು ಪ್ಲಾಟ್‌ಫಾರ್ಮ್‌ಗಳು ತಮ್ಮದೇ ಆದ ಚಂದಾದಾರನ್ನು ಪಡೆದುಕೊಂಡಿವೆ. ಅದರಂತೆ ಭಾರತದ ಸ್ವದೇಶಿ ಓಟಿಟಿ ಸ್ಟ್ರೀಮಿಂಗ್ ಮಾರುಕಟ್ಟೆಯು 2030ರ ವೇಳೆಗೆ $12.5 ಬಿಲಿಯನ್‌ ಮಾರುಕಟ್ಟೆ ಗಾತ್ರಕ್ಕೆ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ .

Best Mobiles in India

English summary
The Indian government has proposed that OTT Platform should subject their content to an independent vetting process before showing it online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+