Home
ಸುದ್ದಿಜಾಲ

ಸಿಮ್‌ ಖರೀದಿ ವಿಷಯದಲ್ಲಿ ಭಾರತ ಸರ್ಕಾರದಿಂದ ಮಹತ್ವದ ನಿರ್ಧಾರ!? ಇದರಿಂದಾಗುವ ಪ್ರಯೋಜನವೇನು?

ಪ್ರಮುಖ ಟೆಲಿಕಾಂ ಸಂಸ್ಥೆಗಳು ಹೊಸ ಹೊಸ ಚಂದಾದಾರರನ್ನು ಸೆಳೆಯುವ ಉದ್ದೇಶದಿಂದ ವಿವಿಧ ಸೌಲಭ್ಯ ಇರುವ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಘೋಷಣೆ ಮಾಡುತ್ತವೆ. ಅದರಲ್ಲೂ ಮೊನ್ನೆಯಷ್ಟೇ ವಿ ಟೆಲಿಕಾಂ ತನ್ನ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲೂ ರಿಯಾಯಿತಿ ನೀಡಲು ಮುಂದಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸರ್ಕಾರ ಸಿಮ್‌ ಸಂಬಂಧ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.

ಹೌದು,ಕೆಲವೇ ವರ್ಷಗಳ ಹಿಂದೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ಸಿಮ್‌ಗಳನ್ನು ಉಚಿತವಾಗಿ ನೀಡುತ್ತಿದ್ದವು. ಜೊತೆಗೆ ಒಂದು ತಿಂಗಳ ಕರೆ ಸೌಲಭ್ಯ, ಮೆಸೆಜ್‌ ಹಾಗೂ ಡೇಟಾವನ್ನೂ ಸಹ ನೀಡುತ್ತಿದ್ದವು. ಆ ವೇಳೆ ಜನ ಒಂದು ತಿಂಗಳ ನಂತರ ಮತ್ತೊಂದು ಹೊಸ ಸಿಮ್ ಖರೀದಿ ಮಾಡಿ ಹಳೆ ಸಿಮ್‌ಗೆ ವಿದಾಯ ಹೇಳುತ್ತಿದ್ದರು. ಬದಲಾದ ಸಮಯದಲ್ಲಿ ಒಂದು ಐಡಿಗೆ 9 ಸಿಮ್‌ಗಳನ್ನು ಮಾತ್ರ ಖರೀದಿ ಮಾಡಬಹುದು ಎಂದು ನಿರ್ಬಂಧ ಹೇರಲಾಗಿತ್ತು. ಆದರೆ, ಈಗ ಮತ್ತೆ ಈ ವಿಷಯದಲ್ಲಿ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ಸಿಮ್‌ ಖರೀದಿ ವಿಷಯದಲ್ಲಿ ಭಾರತ ಸರ್ಕಾರದಿಂದ ಮಹತ್ವದ ನಿರ್ಧಾರ!?

ಈವರೆಗೂ ಭಾರತದಲ್ಲಿ ಯಾವುದೇ ಬಳಕೆದಾರರು ತಮ್ಮ ಐಡಿಯಲ್ಲಿ ಒಟ್ಟಾರೆ 9 ಸಿಮ್‌ಗಳನ್ನು ಬಳಕೆ ಮಾಡಬಹುದಾಗಿತ್ತು.ಆದರೆ, ಈಗ ಈ ನಿಯಮ ಬದಲಾಯಿಸಲು ಸರ್ಕಾರ ಮುಂದಾಗಿದೆ. ಜೊತೆಗೆ ಈ ರೀತಿಯ ನಿರ್ಧಾರದಿಂದ ಸೈಬರ್‌ ಅಪರಾಧಗಳನ್ನು ತಡೆಯುವ ಗುರಿ ಹೊಂದಿದೆ ಎಂದು ತಿಳಿದುಬಂದಿದೆ. ಯಾಕೆಂದರೆ ವಂಚಕರು ಒಂದು ಐಡಿ ಮೂಲಕ ಹಲವಾರು ಸಿಮ್‌ಗಳನ್ನು ಪಡೆದು ವಿವಿಧ ರೀತಿಯಲ್ಲಿ ವಂಚನೆ ಮಾಡಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ.

ಇನ್ಮುಂದೆ ಒಂದು ಐಡಿಗೆ ನಾಲ್ಕು ಸಿಮ್?‌: ಬಳಕೆದಾರರು ಇನ್ಮುಂದೆ ತಮ್ಮ ಐಡಿಯಲ್ಲಿ ನಾಲ್ಕು ಸಿಮ್‌ಗಳನ್ನು ಮಾತ್ರ ಖರೀದಿ ಮಾಡುವಂತೆ ಮಾಡುವ ಹೊಸ ಆದೇಶವನ್ನು ಹೊರಡಿಸಲು ಮುಂದಾಗಿದೆ. ಈ ಮೂಲಕ ವಂಚಕರ ಸಂಖ್ಯೆಯನ್ನು ಹಾಗೂ ವಂಚಕರ ಜಾಲವನ್ನು ಭೇದಿಸಲು ಸಹಾಯಕ ಎಂದು ಸರ್ಕಾರ ನಂಬಿದೆ. ಇದರೊಂದಿಗೆ ಲೀಕ್‌ ಆದ ಮಾಹಿತಿಗಳ ಪ್ರಕಾರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಒಂದು ಐಡಿಯಲ್ಲಿ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು ನಾಲ್ಕಕ್ಕೆ ಸೀಮಿತಗೊಳಿಸುವ ಮಾರ್ಗಸೂಚಿಗಳನ್ನು ಅನುಮೋದಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಎನ್‌ಬಿಟಿ ವರದಿ ಮಾಡಿದ್ದು, ಈ ನಾಲ್ಕು ಸಿಮ್‌ಗಳನ್ನು ಖರೀದಿ ಮಾಡುವ ಸಂಬಂಧ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಗ್ರಾಹಕರ ದೃಢೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಈ ನಿರ್ಧಾರಗಳು ವಂಚನೆಯನ್ನು ತಡೆಯಲು ಹಾಗೂ ಬಳಕೆದಾರರಿಗೆ ಹೆಚ್ಚಿನ ಭದ್ರತೆ ನೀಡಲು ಸಹಾಯ ಮಾಡಲಿದೆ ಎಂದು ಹೇಳಲಾಗಿದೆ.

ಈ ನಡುವೆ ಭಾರತದ ಸರ್ಕಾರ ಹೊಸ ಸೌಲಭ್ಯವೊಂದನ್ನು ಸಹ ಆರಂಭಿಸಿದ್ದು, ಈ ಮೂಲಕ ಈಗಾಗಲೇ ನಿಮ್ಮ ಐಡಿಯ ಹೆಸರಲ್ಲಿ ಎಷ್ಟು ಸಿಮ್‌ಗಳು ಕೆಲಸ ಮಾಡುತ್ತಿವೆ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗೆಯೇ ನೀವು ಬಳಕೆ ಮಾಡದ ನಂಬರ್‌ ಆ ಲಿಸ್ಟ್‌ನಲ್ಲಿ ಕಾಣಿಸಲಿಲ್ಲ ಎಂದರೆ ಅದನ್ನು ರಿಪೋರ್ಟ್‌ ಸಹ ಮಾಡಿ ಬ್ಲಾಕ್‌ ಮಾಡಿಸಬಹುದು. ಇದನ್ನೂ ಸಹ ಆನ್‌ಲೈನ್ ವಂಚನೆ ತಡೆಯಲು ರೂಪಿಸಲಾಗಿದೆ. ಇದಕ್ಕಾಗಿ ನೀವು https://www.sancharsaathi.gov.in/ ಲಿಂಕ್‌ ಅನ್ನು ಬಳಕೆ ಮಾಡಬಹುದು.

ಸಿಮ್‌ ಖರೀದಿ ವಿಷಯದಲ್ಲಿ ಭಾರತ ಸರ್ಕಾರದಿಂದ ಮಹತ್ವದ ನಿರ್ಧಾರ!?

ವಂಚನೆ ಕರೆ ತಡೆಯಲು AI ಸಹಾಯಕ: ಈ ನಡುವೆ ಅನಗತ್ಯ ಕರೆಗಳು ಮತ್ತು ವಂಚನೆ ಕರೆಗಳನ್ನು ನಿಲ್ಲಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದು ಟೆಲಿಕಾಂ ಕಂಪನಿಗಳಿಗೆ ಎಐ ಫಿಲ್ಟರ್‌ಗಳನ್ನು ಹೊಂದಿಸಲು ಸಹಾಯ ಮಾಡಲಿದ್ದು, ಈ ಎಐ ಫಿಲ್ಟರ್‌ಗಳು ಅಪರಿಚಿತ ಕರೆಗಳು ಮತ್ತು ಮೆಸೆಜ್‌ಗಳನ್ನು ಪತ್ತೆ ಮಾಡುತ್ತವೆ. ಜೊತೆಗೆ ಅವುಗಳನ್ನು ನಿರ್ಬಂಧಿಸುವ ಕೆಲಸ ಮಾಡುತ್ತವೆ.

Best Mobiles in India

English summary
In the background of the increasing number of fraudsters using different SIM, the Government of India is about to announce an important decision, according to which henceforth users can use only four SIMs for one ID.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+