ಸರ್ಕಾರದಿಂದ ಚೀನಾದ ಅಪಾಯಕಾರಿ ಆಪ್‌ಗಳ ಪಟ್ಟಿ: ಟ್ರೂಕಾಲರ್, ಶಿಯೋಮಿ ಆಪ್, ಶೇರ್‌ಇಟ್‌ ಪಟ್ಟಿಯಲ್ಲಿ.!

|

ಚೀನಾ ಮೂಲದ ಸ್ಮಾರ್ಟ್‌ಫೋನ್ ಹಾವಳಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿರುವ ಮಾದರಿಯಲ್ಲಿ, ಹೆಚ್ಚು ಪ್ರಮಾಣದಲ್ಲಿ ಚೀನಾ ಮೂಲದ ಆಪ್‌ಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಕೆಲವು ಬಳಕೆದಾರರ ಮಾಹಿತಿಯನ್ನು ಖದಿಯುತ್ತಿರುವುದಾಗಿ ಈ ಹಿಂದೆಯೇ ವರದಿ ಮಾಡಲಾಗಿತ್ತು. ಈ ಕುರಿತು ಭಾರತೀಯ ಸೇನಾ ಪಡೆ ಎಚ್ಚರಿಕೆಯನ್ನು ನೀಡಿತ್ತು.

ಸರ್ಕಾರದಿಂದ ಚೀನಾದ ಅಪಾಯಕಾರಿ ಆಪ್: ಟ್ರೂಕಾಲರ್, ಶಿಯೋಮಿ ಆಪ್ ಪಟ್ಟಿಯಲ್ಲಿ..!

ಈ ಬೆನ್ನಲೇ ಚೀನಾ ಮೂಲದ ಅಪಾಯಕಾರಿ ಆಪ್‌ಗಳ ಕುರಿತು ಪಟ್ಟಿಯೊಂದನ್ನು ಸರಕಾರ ಸಿದ್ದಪಡಿಸಿದ್ದು, ಇವುಗಳು ಬಳಕೆದಾರರ ಮಾಹಿತಿಯನ್ನು ಖದಿಯುವುದಲ್ಲದೇ ಹ್ಯಾಕರ್ಸ್‌ಗಳಿಗೆ ನಿಮ್ಮ ಸ್ಮಾರ್ಟ್‌ಫೋನ್ ಬಾಗಿಲು ತೆರೆದು ಇಡಲಿದೆ ಎಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದರೆ ಅವುಗಳನ್ನು ಡಿಲೀಟ್ ಮಾಡುವುದು ಉತ್ತಮ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಸರ್ಕಾರ ನೀಡಿರುವ 42 ಆಪ್‌ಗಳ ಪಟ್ಟಿಯಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ಮತ್ತು ಹೆಚ್ಚು ಬಳಕೆದಾರರನ್ನು ಹೊಂದಿರುವ ಆಪ್‌ಗಳನ್ನು ಕಾಣಬಹುದಾಗಿದೆ ಎಂದು ಫೈನಾಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸರ್ಕಾರ ಪಟ್ಟಿ ಮಾಡಿರುವ ಪ್ರಮುಖ ಆಪ್‌ಗಳು ಇಂತಿವೆ.

ಓದಿರಿ: ಐಫೋನ್ ಮಾದರಿಯ ಲಿನೊವೊ S5 ಸ್ಮಾರ್ಟ್‌ಫೋನ್ ಲಾಂಚ್: ರೆಡ್‌ಮಿ ನೋಟ್ 5ಗಿಂತಲೂ ಬೆಸ್ಟ್..!

ವೈಬೋ, ವೀ ಚಾಟ್, ಶೇರ್ ಇಟ್, UC ನ್ಯೂಸ್, UC ಬ್ರೌಸರ್, ಬ್ಯೂಟಿ ಪ್ಲಸ್, ಟ್ರೂಕಾಲರ್, ನ್ಯೂಸ್ ಡಾಗ್, QU ವಿಡಿಯೋ, ಪ್ಯಾರಲಲ್ ಸ್ಪೇಸ್, APUS ಬ್ರೌಸರ್, ಫರ್ಫೆಕ್ಟ್ ಕ್ರಾಪ್, ವೈರಸ್ ಕ್ಲೀನರ್, CM ಬ್ರೌಸರ್, MI ಕಮ್ಯುನಿಟಿ, DU ರೆಕಾರ್ಡರ್, ವಾಲ್ಟ್ ಹೈಡ್, U ಕ್ಯಾಮ್ ಮೇಕಪ್, Mi ಸ್ಟೋರ್, ಕ್ಯಾಶ್ ಕ್ಲಿಯರ್, DU ಬ್ಯಾಟರಿ ಸೇವರ್, DU ಕ್ಲೀನರ್, DU ಪ್ರೈವಸಿ, 360 ಸೆಕ್ಯುರಿಟಿ, DU ಬ್ರೌಸರ್, ಕ್ಲೀನ್ ಮಾಸ್ಟರ್, ಬೈದು ಟ್ರಾನ್ಸ್‌ಲೇಟ್, ಬೈದು ಮ್ಯಾಪ್, ವಂಡರ್ ಕ್ಯಾಮರಾ.

EX ಫೈಲ್ ಎಕ್ಸ್‌ಪ್ಲೋರರ್, ಫೊಟೊ ವಂಡರ್, QQ ಇಂಟರ್ ನ್ಯಾಷನಲ್, QQ ಮ್ಯೂಸಿಕ್, QQ ಮೈಲ್, QQ ಪ್ಲೇಯರ್, QQ ನ್ಯೂಸ್ ಫೀಡ್, ವೀ ಸಿಂಕ್, QQ ಸೆಕ್ಯುರಿಟಿ ಸೆಂಟರ್, ಸೆಲ್ಫಿ ಸಿಟಿ, ಮೈಲ್ ಮಾಸ್ಟರ್, Mi ವಿಡಿಯೋ ಕಾಲ್, UQ ಲಾಂಚರ್

Best Mobiles in India

English summary
Government reportedly lists 42 Chinese apps as dangerous, including TrueCaller, UC Browser, Mi Store: Check if your phone has any of them. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X