Subscribe to Gizbot

ಐಫೋನ್ ಮಾದರಿಯ ಲಿನೊವೊ S5 ಸ್ಮಾರ್ಟ್‌ಫೋನ್ ಲಾಂಚ್: ರೆಡ್‌ಮಿ ನೋಟ್ 5ಗಿಂತಲೂ ಬೆಸ್ಟ್..!

Written By:

ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಹಾವಳಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಇಂದು ಲಿನೊವೊ ಕಂಪನಿಯೂ ನೂತನ ಲಿನೊವೊ S5 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಇದು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಐಫೋನ್ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲಿದೆ.

ಐಫೋನ್ ಮಾದರಿಯ ಲಿನೊವೊ S5 ಸ್ಮಾರ್ಟ್‌ಫೋನ್ ಲಾಂಚ್:

ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್‌ಗೆ ಲಿನೊವೊ S5 ಸ್ಮಾರ್ಟ್‌ಫೋನ್ ಸೆಡ್ಡು ಹೊಡೆಯುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನಿನಲ್ಲಿ ಸೆಲ್ಪಿಗಾಗಿ ಕೃತಕ ಬುದ್ದಿಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿ ಈ ಮುಂದಿನಂತಿದೆ.

ಓದಿರಿ: ಬೆಂಗಳೂರು To ನಾರ್ಥ್ ಕೊರಿಯಾಗೆ ಒಲಾ ಕ್ಯಾಬ್: ಬಿಲ್ ಎಷ್ಟಾಗಬಹುದು..!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
FHD ಗುಣಮಟ್ಟದ ಡಿಸ್‌ಪ್ಲೇ:

FHD ಗುಣಮಟ್ಟದ ಡಿಸ್‌ಪ್ಲೇ:

ಲಿನೊವೊ S5 ಸ್ಮಾರ್ಟ್‌ಫೋನ್ ನಲ್ಲಿ 5.7 ಇಂಚಿನ FHD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿದೆ. ಇದು ಸ್ಮಾರ್ಟ್‌ಫೋನಿನಲ್ಲಿ ವಿಡಿಯೋ ನೋಡುವ ಮತ್ತು ಗೇಮ್ ಆಡುವ ಸಂದರ್ಭದಲ್ಲಿ ಉತ್ತಮ ಅನುಭವನ್ನು ನೀಡಲಿದೆ. 3000mAh ಬ್ಯಾಟರಿ ಈ ಸ್ಮಾರ್ಟ್‌ಫೋನಿನಲ್ಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಲಿನೊವೊ S5 ಸ್ಮಾರ್ಟ್‌ಫೋನ್ ನಲ್ಲಿ ಆಕ್ಟಾ ಕೋರ್ 2GHz ವೇಗದ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅದಲ್ಲದೇ ಆಡ್ರಿನೋ 506 GPU ವನ್ನು ಅಳವಡಿಸಲಾಗಿದೆ. ಇದರಿಂದಾಗಿ ಈ ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಲಿನೊವೊ S5 ಸ್ಮಾರ್ಟ್‌ಫೋನ್, ಹಿಂಭಾಗದಲ್ಲಿ 13MP + 13 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಮುಂಭಾಗದಲ್ಲಿ 16MP ಸೆಲ್ಪಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಸೆಲ್ಪಿಗಾಗಿ ಕೃತಕ ಬುದ್ದಿ ಮತ್ತೆಯನ್ನು ನೀಡಲಾಗಿದೆ.

ಮೂರು ಆವೃತ್ತಿಯಲ್ಲಿ ಲಭ್ಯ:

ಮೂರು ಆವೃತ್ತಿಯಲ್ಲಿ ಲಭ್ಯ:

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುವ ಲಿನೊವೊ S5 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 3GB RAM ಮತ್ತು 32GB ಇಂಟರ್ನಲ್ ಮೆಮೊರಿ, 4GB ಮತ್ತು 64 GB ಇಂಟರ್ನಲ್ ಮೆಮೊರಿ ಹಾಗೂ 4GB ಮತ್ತು 128 GB ಇಂಟರನಲ್ ಮೆಮೊರಿಯೊಂದಿಗೆ ಲಭ್ಯವಿದೆ.

ಬೆಲೆ:

ಬೆಲೆ:

ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ಲಿನೊವೊ S5 ಸ್ಮಾರ್ಟ್‌ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಕಾಲಿಡಲಿದೆ. 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ ಅಂದಾಜು ಬೆಲೆ ರೂ.10,300, 4GB ಮತ್ತು 64 GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ ಅಂದಾಜು ಬೆಲೆ ರೂ.12,400 ಹಾಗೂ 4GB ಮತ್ತು 128 GB ಇಂಟರನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ ಅಂದಾಜು ಬೆಲೆ ರೂ. 15,50೦ಗಳಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿ: ಐಫೋನ್ X ಅಲ್ಲ, ಟ್ರೆಂಡ್ ಬದಲಾಯಿಸುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್: 19:9 ಡಿಸ್‌ಪ್ಲೇ, ಇನ್‌-ಡಿಸ್‌ಪ್ಲೇ ಸ್ಕ್ಯಾನರ್.!

English summary
Lenovo S5 announced: Specifications, price. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot