Home
ಸುದ್ದಿಜಾಲ

ಓಟಿಟಿ ಪ್ಲಾಟ್‌ಫಾರ್ಮ್‌ ಮತ್ತು ಸಾಮಾಜಿಕ ಜಾಲತಾಣಗಳಿಗೆ ಲಗಾಮು ಹಾಕಿದ ಕೇಂದ್ರ!

ಪ್ರಸ್ತುತ ಭಾರೀ ಟ್ರೆಂಡಿಂಗ್‌ನಲ್ಲಿರುವ ಫೇಸ್‌ಬುಕ್, ವಾಟ್ಸಾಪ್‌, ನೆಟ್‌ಫ್ಲಿಕ್ಸ್‌, ಟ್ವಿಟ್ಟರ್ ಸೇರಿದಂತೆ ಇತರೆ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರ ಗೈಡ್‌ಲೈನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಅವುಗಳ ಅಬ್ಬರಕ್ಕೆ ಮೂಗುದಾರ ಹಾಕಿದೆ. ಸೋಶಿಯಲ್ ಮೀಡಿಯಾ ತಾಣಗಳಲ್ಲಿನ ದೂರಗಳ ಕಾರಣಕ್ಕೆ ಸರ್ಕಾರ ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿಗಳು 2021 ಅನ್ನು ಜಾರಿ ಮಾಡಿದೆ.

ಫೇಸ್‌ಬುಕ್

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೊಗಳಂತಹ ಓಟಿಟಿ ತಾಣಗಳು ಹಾಗೂ ನ್ಯೂಸ್‌ ಪೋರ್ಟಲ್‌ಗಳು ಸ್ವಯಂ ನಿರ್ಬಂಧ ಹಾಕಿಕೊಳ್ಳುವ ಅವಶ್ಯಕತೆ ಇದೆ. ಇದರೊಂದಿಗೆ ಬಳಕೆದಾರರ ದೂರುಗಳನ್ನು ಸ್ವೀಕರಿಸುವುದು ಮತ್ತು ಅವುಗಳನ್ನು ಬೇಗನೆ ದೂರು ನಿರ್ವಹಣಾ ವ್ಯವಸ್ಥೆಯನ್ನು ರಚಿಸಿಕೊಳ್ಳಲು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಸೂಚಿಸಿದ್ದಾರೆ.

ಸೋಶಿಯಲ್

ಕಂಟೆಂಟ್‌ ದುರುಪಯೋಗವನ್ನು ತಡೆಯಲು ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಮಾರ್ಗಸೂಚಿಗಳನ್ನು ಅವಶ್ಯ ಮತ್ತು ಅಗತ್ಯ ಅನಿಸಲಿವೆ. ಮಾಡಿದೆ. ಸೋಶಿಯಲ್ ಮೀಡಿಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸೋಶಿಯಲ್ ಮೀಡಿಯಾಗಳಿಗೆ ಸೂಚಿಸಲಾಗದ ಮಾರ್ಗಸೂಚಿಗಳು

ಸೋಶಿಯಲ್ ಮೀಡಿಯಾಗಳಿಗೆ ಸೂಚಿಸಲಾಗದ ಮಾರ್ಗಸೂಚಿಗಳು


* ಹೊಸ ಮಾರ್ಗಸೂಚಿಗಳ ಪ್ರಕಾರ, ಸೋಶಿಯಲ್ ಮೀಡಿಯಾ ಸೆಲ್ ರಚಿಸಬೇಕು.

* ಯಾವುದೇ ವಿಷಯವನ್ನು ತೆಗೆದುಹಾಕುವ ಮೊದಲು, ಅದರ ಕಾರಣವನ್ನು ಹೇಳುವುದು ಅವಶ್ಯಕ

* ದೂರಿನ ಮೇರೆಗೆ ಆಕ್ಷೇಪಾರ್ಹ ಪೋಸ್ಟ್ 24 ಗಂಟೆಗಳೊಳಗೆ ತೆಗೆದುಹಾಕಬೇಕು.

* ದೂರಿನ ಮೇರೆಗೆ ಪ್ರತಿ ತಿಂಗಳು ಕ್ರಮ ಕೈಗೊಳ್ಳಬೇಕು.

* ಸಾಮಾಜಿಕ ಮಾಧ್ಯಮದ ಈ ನಿಯಮಗಳು ಮೂರು ತಿಂಗಳಲ್ಲಿ ಜಾರಿಗೆ ಬರಬೇಕು.

* ಚೀಫ್ ಕಂಪ್ಲೈನ್ಸ್ ಅಧಿಕಾರಿ ನೇಮಕ ಮಾಡಬೇಕು ಮತ್ತು ಅವರು ಮೇಲೆ ನಿಯಮಗಳ ಪಾಲನೆ ಮಾಡಿಸಬೇಕಾದ ಜವಾಬ್ದಾರಿ ಇರಲಿದೆ.

* ಇದರ ಜೊತೆಗೆ ನೋಡಲ್ ಕಾಂಟಾಕ್ಟ್ಸ್ ಅಧಿಕಾರಿಗಳನ್ನು ಕೂಡ ನೇಮಿಸಬೇಕು. ಇವರು 24x7 ಕಾನೂನು ಪಾಲನಾ ಸಂಸ್ಥೆಗಳ ಜೊತೆ ಸೇರಿ ಕಾರ್ಯ ನಿರ್ವಹಿಸಬೇಕು.

* ಈ ಇಬ್ಬರು ನೇಮಕಗೊಂಡ ಅಧಿಕಾರಿಗಳು ಭಾರತದ ರಹವಾಸಿಗಳಾಗಬೇಕು.

* ರೆಸಿಡೆಂಟ್ ಗ್ರಿವನ್ಸ್ ಅಧಿಕಾರಿಯನ್ನೂ ಕೂಡ ನೇಮಿಸಬೇಕಾಗಲಿದೆ.

* ಎಲ್ಲಕ್ಕಿಂತ ಮೊದಲು ಆಕ್ಷೇಪಾರ್ಹ ಪೋಸ್ಟ್ ಹಾಕುವವರ ಬಗ್ಗೆ ಮಾಹಿತಿಯನ್ನು ನೀಡಬೇಕು.

OTT ತಾಣಗಳಿಗೆ ಸೂಚಿಸಲಾಗದ ಮಾರ್ಗಸೂಚಿಗಳು

OTT ತಾಣಗಳಿಗೆ ಸೂಚಿಸಲಾಗದ ಮಾರ್ಗಸೂಚಿಗಳು

* ಪ್ರೇಕ್ಷಕರ ವಯಸ್ಸಿಗೆ ಅನುಗುಣವಾಗಿ ಕಂಟೆಂಟ್ ಕೆಟಗರಿಗಳನ್ನು ನಿರ್ಮಿಸಬೇಕು.

* OTT ಕಂಟೆಂಟ್ ಗಳಿಗೆ ಒಟ್ಟು 5 ಕೆಟಗರಿ ರಚಿಸಬೇಕು.

* U, U/A 7+, U/A 13+, U/A 16+ ಹಾಗೂ A ಕೆಟಗರಿಗಳಿರಬೇಕು.

* ಡಿಜಿಟಲ್ ಪ್ಲಾಟ್ ಫಾರ್ಮ್ ಮೇಲೆ ಪೋಷಕರ ಲಾಕ್ ಸೌಕರ್ಯ ಒದಗಿಸಬೇಕು.

* ಎಥಿಕ್ಸ್ ಕೋಡ್ ಟಿವಿ ಹಾಗೂ ಸಿನೆಮಾ ಮಾದರಿಯಲ್ಲಿಯೇ ಇರಲಿದೆ.

* OTT ಪ್ಲಾಟ್ ಫಾರ್ಮ್ ಗಳು ಸೆಲ್ಫ್ ರೆಗ್ಯುಲೆಶನ್ ಬಾಡಿ ನಿರ್ಮಿಸಬೇಕು.

* ನಕಲಿ ಕಂಟೆಂಟ್ ಹಾಕುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.

Best Mobiles in India

English summary
The Centre on Thursday released guidelines for regulating social media and OTT platforms to curb misuse of content.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+