Home
ಸುದ್ದಿಜಾಲ

ಏರ್‌ಟೆಲ್, ಜಿಯೋ, ವಿ ಟೆಲಿಕಾಂಗೆ ಸರ್ಕಾರದ ಗಂಭೀರ ಎಚ್ಚರಿಕೆ! ಸದ್ಯಕ್ಕೆ ಈ ಸೌಲಭ್ಯ ನೀಡಬೇಡಿ ಎಂದ ಸರ್ಕಾರ

ಟೆಲಿಕಾಂ ವಲಯದಲ್ಲಿ ಏರ್‌ಟೆಲ್, ಜಿಯೋ, ವಿ ಟೆಲಿಕಾಂ (Airtel, Jio,VI Telecom) ಭಿನ್ನ ರೀಚಾರ್ಜ್‌ ಪ್ಲ್ಯಾನ್‌ಗಳ ಮೂಲಕ ಬಳಕೆದಾರರಿಗೆ ವಿಶೇಷ ಪ್ರಯೋಜನ ನೀಡುತ್ತಿವೆ. ಅದರಲ್ಲೂ 5G ವ್ಯಾಪಕವಾಗುತ್ತಿದ್ದು, ಬಳಕೆದಾರರು ವೇಗವಾದ ಇಂಟರ್ನೆಟ್‌ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಈ ಎಲ್ಲಾ ಬೆಳವಣಿಗೆ ನಡುವೆ ಭಾರತ ಸರ್ಕಾರ ಏರ್‌ಟೆಲ್, ಜಿಯೋ, ವಿ ಟೆಲಿಕಾಂಗೆ ಗಂಭೀರ ಎಚ್ಚರಿಕೆ ನೀಡಿದೆ.

ಹೌದು, ಏರ್‌ಟೆಲ್, ಜಿಯೋ, ವೊಡಾಫೋನ್‌ ಐಡಿಯಾ (Airtel, Jio, Vodafone Idea) ಸೇವೆಯನ್ನು ಭಾರತದಲ್ಲಿ ಸಾಕಷ್ಟು ಬಳಕೆದಾರರು ಪಡೆಯುತ್ತಿದ್ದಾರೆ. ಆದರೆ, ಈ ಸಿಮ್‌ಗಳನ್ನು ಬಳಕೆ ಮಾಡುವ ಬಹುಪಾಲು ಮಂದಿ ವಿವಿಧ ರೀತಿಯಲ್ಲಿ ವಂಚನೆಗೆ ಒಳಗಾಗುತ್ತಿರುವುದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಈ ಕಾರಣಕ್ಕೆ ಇದನ್ನು ನಿಯಂತ್ರಣ ಮಾಡಲು ಹಾಗೂ ಜನರು ವಂಚನೆಗೆ ಒಳಗಾಗುವುದನ್ನು ತಡೆಯಲು ಹೊಸ ಆದೇಶವನ್ನು ನೀಡಲಾಗಿದೆ. ಹಾಗಿದ್ರೆ, ಏನದು ಎಚ್ಚರಿಕೆ?, ಇನ್ಮುಂದೆ ಈ ಸೇವೆಯನ್ನು ಯಾವ ರೀತಿ ಪಡೆಯಬೇಕು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏರ್‌ಟೆಲ್, ಜಿಯೋ, ವಿ ಟೆಲಿಕಾಂಗೆ ಸರ್ಕಾರದ ಗಂಭೀರ ಎಚ್ಚರಿಕೆ!

ಏರ್‌ಟೆಲ್, ಜಿಯೋ, ವಿ ಟೆಲಿಕಾಂಗೆ ಸರ್ಕಾರದ ಎಚ್ಚರಿಕೆ: ಭಾರತದಲ್ಲಿನ ಟೆಲಿಕಾಂ ಇಲಾಖೆಯು ಭದ್ರತೆಯನ್ನು ಹೆಚ್ಚಿಸಲು ಮತ್ತು ಆನ್‌ಲೈನ್ ಹಗರಣಗಳನ್ನು ಕಡಿಮೆ ಮಾಡಲು ಏಪ್ರಿಲ್ 15, 2024 ರಿಂದ ಕರೆ ಫಾರ್ವರ್ಡ್ (Call forward) ಮಾಡಲು ಯುಎಸ್‌ಎಸ್‌ಡಿ ಕೋಡ್‌ಗಳನ್ನು (USSD code) ನಿಲ್ಲಿಸುವಂತೆ ಟೆಲಿಕಾಂ ಕಂಪೆನಿಗಳಿಗೆ ಆದೇಶ ನೀಡಿದೆ. ಅಂದರೆ, ಇನ್ಮುಂದೆ ಗೌಪ್ಯ ಮಾಹಿತಿಯನ್ನು ರಕ್ಷಿಸಿಕೊಳ್ಳುವ ಮೂಲಕ ಬಳಕೆದಾರರು ಹೊಸ ಮಾರ್ಗದ ಮೂಲಕ ಈ ಸೇವೆ ಪಡೆಯಬಹುದಾಗಿದೆ.

ಕರೆ ಫಾರ್ವರ್ಡ್ ನಿರ್ಬಂಧ: ಆಂಡ್ರಾಯ್ಡ್‌ ಫೋನ್ ಮತ್ತು ಐಫೋನ್‌ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಕರೆ ಫಾರ್ವರ್ಡ್ ಮಾಡುವ ವಿಧಾನ ಇನ್ಮುಂದೆ ಬದಲಾಗಲಿದೆ. ಕರೆ ಫಾರ್ವರ್ಡ್ ಫೀಚರ್ಸ್‌ ಅನ್ನು ಈವರೆಗೂ ಸಹ ಯುಎಸ್‌ಎಸ್‌ಡಿ ಕೋಡ್‌ಗಳನ್ನು ಬಳಕೆ ಮಾಡಿಕೊಂಡು (*401#) ಮಾಡಲಾಗುತ್ತಿತ್ತು. ಆದರೆ ಇನ್ಮುಂದೆ ಈ ಸೇವೆಯನ್ನು ನಿಲ್ಲಿಸುವಂತೆ ಟೆಲಿಕಾಂ ಇಲಾಖೆ (DoT) ಟೆಲಿಕಾಂ ಕಂಪನಿಗಳಿಗೆ ಆದೇಶಿಸಿದೆ. ಈ ಬದಲಾವಣೆಯು ಏಪ್ರಿಲ್ 15, 2024 ರಿಂದ ಜಾರಿಗೆ ಬರಲಿದೆ.

ಏರ್‌ಟೆಲ್, ಜಿಯೋ, ವಿ ಟೆಲಿಕಾಂಗೆ ಸರ್ಕಾರದ ಗಂಭೀರ ಎಚ್ಚರಿಕೆ!

ಇನ್ನು ಈ ಯುಎಸ್‌ಎಸ್‌ಡಿ ಕೋಡ್‌ಗಳು ಬ್ಯಾಲೆನ್ಸ್ ಅಥವಾ ಫೋನ್‌ನ ಐಎಮ್‌ಇಐ ಸಂಖ್ಯೆಯಂತಹ ವಿವಿಧ ಮಾಹಿತಿಗಳನ್ನು ಪಡೆಯಲು ಸಹಕಾರಿಯಾಗಿವೆ. ಇವುಗಳನ್ನು ದುರ್ಬಳಕೆ ಮಾಡಿಕೊಂಡು ಸ್ಕ್ಯಾಮರ್‌ಗಳು ಜನರಿಗೆ ವಿವಿಧ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಟೆಲಿಕಾಂ ಇಲಾಖೆ ಮಾಹಿತಿಯನ್ನೂ ಸಹ ನೀಡಿದ್ದು, ಕರೆ ಫಾರ್ವರ್ಡ್ ಸೇವೆಗಳನ್ನು ಕೆಲವರು ಅನಗತ್ಯ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.

ಈ ಕಾರಣಕ್ಕೆ ಎಲ್ಲಾ ಪರವಾನಗಿದಾರರು ಅಸ್ತಿತ್ವದಲ್ಲಿರುವ ಯುಎಸ್‌ಎಸ್‌ಡಿ ಆಧಾರಿತ ಕರೆ ಫಾರ್ವರ್ಡ್ ಸೇವೆಗಳನ್ನು ಏಪ್ರಿಲ್ 15, 2024 ರಿಂದ ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಬೇಕೆಂದು ಆದೇಶ ನೀಡಿದೆ. ಜೊತೆಗೆ ಪರ್ಯಾಯ ವಿಧಾನಗಳ ಮೂಲಕ ಕರೆ ಫಾರ್ವರ್ಡ್ ಮಾಡುವ ಸೇವೆಗಳನ್ನು ಪುನಃ ಸಕ್ರಿಯಗೊಳಿಸುವ ಸೌಲಭ್ಯವನ್ನು ಬಳಕೆದಾರರು ಪಡೆಯಬಹುದು ಎಂದು ಈ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

ಅಂದರೆ ಪ್ರಸ್ತುತ ಯುಎಸ್‌ಎಸ್‌ಡಿ ಕೋಡ್‌ಗಳನ್ನು ಕರೆ ಫಾರ್ವರ್ಡ್ ಮಾಡಲು ಬಳಸುವ ಬಳಕೆದಾರರು, ಏಪ್ರಿಲ್ 15 ರ ನಂತರ ಹೊಸ ವಿಧಾನವನ್ನು ಬಳಸಿಕೊಂಡು ಅವುಗಳನ್ನು ಮರುಸಕ್ರಿಯಗೊಳಿಸಬಹುದಾಗಿದೆ. ಕರೆ ಫಾರ್ವರ್ಡ್ ಮಾಡುವಿಕೆಯನ್ನು ನಿರ್ವಹಿಸಲು ಪರ್ಯಾಯ ಮಾರ್ಗಗಳನ್ನು ಒದಗಿಸುವ ಜವಾಬ್ದಾರಿಯನ್ನು ಟೆಲಿಕಾಂ ಕಂಪನಿಗಳು ವಹಿಸಿಕೊಳ್ಳುತ್ತವೆ.

ಏರ್‌ಟೆಲ್, ಜಿಯೋ, ವಿ ಟೆಲಿಕಾಂಗೆ ಸರ್ಕಾರದ ಗಂಭೀರ ಎಚ್ಚರಿಕೆ!

ಈ ಬದಲಾವಣೆಯಿಂದ ಮೊದಲೇ ತಿಳಿಸಿದಂತೆ ಸುರಕ್ಷತೆಯನ್ನು ಹೆಚ್ಚಿಗೆ ಮಾಡುತ್ತದೆ. ಅಲ್ಲದೆ ಅನಧಿಕೃತ ಕರೆ ಫಾರ್ವರ್ಡ್ ಮಾಡುವುದನ್ನು ತಡೆಯುವ ಗುರಿಯನ್ನು ಹೊಂದಲಾಗಿದೆ. ಈ ಮೊದಲು ಆನ್‌ಲೈನ್ ವ್ಯವಹಾರದಲ್ಲಿ ಜನರನ್ನು ಮೋಸ ಮಾಡಲು ಓಟಿಪಿಗಾಗಿ ಬಳಕೆ ಮಾಡಲಾಗುತ್ತಿತ್ತು. ಅಂತಹ ಗಂಭೀರ ಮೋಸಗಳಿಗೆ ಈ ಹೊಸ ನಿಯಮ ಕಡಿವಾಣ ಹಾಕಲಿದೆ.

Best Mobiles in India

English summary
Department of Telecom has warned Airtel, Jio, Vodafone Idea SIM users about call forwarding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+