Home
ಸುದ್ದಿಜಾಲ

ದೇಶೀಯ ಬ್ರ್ಯಾಂಡ್‌ನಿಂದ ಹೊಸ ಸೌಂಡ್‌ಬಾರ್‌ ಲಾಂಚ್‌; ಮನೆಯಲ್ಲೇ ಥಿಯೇಟರ್‌ ಅನುಭವ, ಬೆಲೆ ಎಷ್ಟು?

ಸೌಂಡ್‌ಬಾರ್‌ಗಳ (soundbar) ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ವಿವಿಧ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಡಿವೈಸ್‌ಗಳನ್ನು ಪ್ರಮುಖ ಕಂಪೆನಿಗಳು ಲಾಂಚ್‌ ಮಾಡಿಕೊಂಡು ಬರುತ್ತಿವೆ. ಈ ನಡುವೆ ಪ್ರಮುಖ ಸ್ಮಾರ್ಟ್‌ ಡಿವೈಸ್‌ ತಯಾರಿಕಾ ಸಂಸ್ಥೆ ಆಗಿರುವ GOVO ಇದೀಗ ಹೊಸ ಆಕರ್ಷಕ ಶೈಲಿಯ ಸೌಂಡ್‌ ಬಾರ್‌ ಅನ್ನು ಲಾಂಚ್‌ ಮಾಡಿದೆ.

ಹೌದು, GOVO ತನ್ನ ಹೊಸ ಗೋಸರೌಂಡ್‌ 300 ಸೌಂಡ್‌ಬಾರ್ (GoSurround 300 soundbar) ಅನ್ನು ಲಾಂಚ್‌ ಮಾಡುವ ಮೂಲಕ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಣೆ ಮಾಡಿಕೊಂಡಿದೆ. ಈ ಡಿವೈಸ್‌ ತಲ್ಲೀನಗೊಳಿಸುವ 3D ಸರೌಂಡ್ ಸೌಂಡ್ ನೀಡಲಿದ್ದು, ಎಂಟು ಗಂಟೆಗಳ ಬ್ಯಾಟರಿ ಬ್ಯಾಕಪ್‌ ಅನ್ನು ಸಹ ಪಡೆದಿದೆ. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ನೋಡೋಣ ಬನ್ನಿ.

ದೇಶೀಯ ಬ್ರ್ಯಾಂಡ್‌ನಿಂದ ಹೊಸ ಸೌಂಡ್‌ಬಾರ್‌ ಲಾಂಚ್‌; ಮನೆಯಲ್ಲೇ ಥಿಯೇಟರ್‌ ಅನುಭವ..

ಗೋಸರೌಂಡ್‌ 300 ಸೌಂಡ್‌ಬಾರ್: ಮನೆಯಲ್ಲಿ ಸ್ಮಾರ್ಟ್‌ಟಿವಿ ಅಥವಾ ಲ್ಯಾಪ್‌ಟಾಪ್‌, ಪಿಸಿಗೆ (SmartTV, Laptop, PC) ಉತ್ತಮ ಸೌಂಡ್‌ ಬಾರ್‌ ಕನೆಕ್ಟ್‌ ಮಾಡಿದ್ರೆ ಅದರ ಮಜಾನೇ ಬೇರೆ. ಅದರಲ್ಲೂ ಸಿನಿಮಾ ನೋಡುವಾಗ ಥಿಯೇಟರ್‌ ಅನುಭವ ಪಡೆದುಕೊಳ್ಳಬಹುದು. ಈ ನಡುವೆ GOVO ಬ್ಲೂಟೂತ್ ಆವೃತ್ತಿ 5.3 ನೊಂದಿಗೆ ಹೊಸ ಗೋಸರೌಂಡ್‌ 300 ಸೌಂಡ್‌ಬಾರ್ ಅನಾವರಣ ಮಾಡಿದೆ. ಇದರ ಖರೀದಿ ಮೇಲೆ ನಿಮಗೆ ಒಂದು ವರ್ಷದ ವಾರಂಟಿ ಸಹ ಲಭ್ಯ.

ಮೊದಲೇ ತಿಳಿಸಿದಂತೆ ಈ ಸೌಂಡ್‌ಬಾರ್ ತಲ್ಲೀನಗೊಳಿಸುವ 3D ಸರೌಂಡ್ ಸೌಂಡ್ (3D surround sound) ಸೌಲಭ್ಯವನ್ನು ಹೊಂದಿದ್ದು, ಸಿನಿಮಾ ವೀಕ್ಷಣೆ ಮಾಡುವಾಗ ನೀವು ಹೊಸ ಲೋಕಕ್ಕೆ ಸಂಚರಿಸುವಂತೆ ಮಾಡುತ್ತದೆ. ಪೋರ್ಟಬಲ್ ಸ್ಪೀಕರ್‌ನೊಂದಿಗೆ ಪ್ಯಾಕ್‌ ಆಗಿರುವ ಈ ಡಿವೈಸ್‌ 52 mm ಡ್ರೈವರ್‌ಗಳಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 24 ವ್ಯಾಟ್ ಔಟ್‌ಪುಟ್ ಅನ್ನು ನೀಡಲಿದ್ದು, ಡೈನಾಮಿಕ್ LED ಲೈಟ್‌ಗಳೊಂದಿಗೆ ಪಾರ್ಟಿ ಸಮಯದಲ್ಲಿ ಉತ್ತಮ ಅನುಭವ ಪಡೆಯಬಹುದು.

ಹಾಗೆಯೇ GOVO ಗೋಸರೌಂಡ್‌ 300 ಸೌಂಡ್‌ಬಾರ್ ಎಂಟು ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್‌ ನೀಡುವ ಸಾಮರ್ಥ್ಯ ಪಡೆದಿದೆ. ಉಳಿದಂತೆ ಕನೆಕ್ಟಿವಿಟಿ ವಿಚಾರದ ಬಗ್ಗೆ ಮಾತನಾಡುವುದಾದರೆ ಆಕ್ಸ್‌, ಯುಎಸ್‌ಬಿ ಮತ್ತು ಟಿಎಫ್‌ ಕಾರ್ಡ್ ಇನ್‌ಪುಟ್‌ಗಳು ಮತ್ತು ಎಫ್ಎಮ್‌ ನಂತಹ ವ್ಯಾಪಕ ಶ್ರೇಣಿಯ ಸೌಲಭ್ಯದೊಂದಿಗೆ ತಡೆರಹಿತ ಕನೆಕ್ಟಿವಿಟಿ ಆಯ್ಕೆ ನೀಡುತ್ತದೆ.

ಈ ಸಂಬಂಧ GOVO ಸಂಸ್ಥಾಪಕ ವರುಣ್ ಪೊದ್ದಾರ್ ಮಾತನಾಡಿ. ನಾವೀನ್ಯತೆ ಮತ್ತು ತಂತ್ರಜ್ಞಾನವು ಒಮ್ಮುಖವಾಗುವ GOVO ಗೋಸರೌಂಡ್‌ 300 ಸೌಂಡ್‌ಬಾರ್ ಅನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಅತ್ಯುತ್ತಮ ಗುಣಮಟ್ಟದ ನಮ್ಮ ಆಡಿಯೊ ಉತ್ಪನ್ನಗಳನ್ನು ವಿಸ್ತರಿಸುವುದು ನಮ್ಮ ಗುರಿಯಾಗಿದೆ. ಅನೇಕ ಜನರು ಸ್ಮಾರ್ಟ್ ಸ್ಪೀಕರ್‌ಗಳನ್ನು ಬಳಸಲು ಪ್ರಾರಂಭಿಸುತ್ತಿರುವುದರಿಂದ, ಈ ಡಿವೈಸ್‌ ಅನ್ನು ನೀಡಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಹಾಗೆಯೇ ಈ ಹೊಸ ಉತ್ಪನ್ನದೊಂದಿಗೆ, ನಾವು ನಮ್ಮ ತಂತ್ರಜ್ಞಾನದಲ್ಲಿ ಹೆಚ್ಚು ಬುದ್ಧಿವಂತ ಗ್ರಾಹಕರನ್ನು ಸಂತೋಷಪಡಿಸಬಹುದು ಮತ್ತು ಉತ್ಪನ್ನಗಳ ಅದ್ಭುತ ಅನುಭವವನ್ನು ಅವರಿಗೆ ನೀಡಬಹುದು ಎಂಬ ವಿಶ್ವಾಸ ನಮಗಿದೆ ಎಂದು ಸಂತೋಷ ಹೊರಹಾಕಿದ್ದಾರೆ. ಮತ್ಯಾಕೆ ತಡ ಬನ್ನಿ ಈ ಡಿವೈಸ್‌ನ ಬೆಲೆ ಎಷ್ಟು ಎಂದು ತಿಳಿಯೋಣ.

ಗೋಸರೌಂಡ್‌ 300 ಸೌಂಡ್‌ಬಾರ್ ಬೆಲೆ ಹಾಗೂ ಲಭ್ಯತೆ: ಈ ಡಿವೈಸ್‌ನ ಆರಂಭಿಕ ಬೆಲೆ 1,499 ರೂ.ಗಳಾಗಿದೆ. ಇದನ್ನು ನೀವು ಅಮೆಜಾನ್ (Amazon) ಮತ್ತು ದೇಶಾದ್ಯಂತ ಇತರ ಚಿಲ್ಲರೆ ಅಂಗಡಿಗಳಿಂದ ಖರೀದಿ ಮಾಡಬಹುದಾಗಿದೆ. ಸಂತೋಷದ ವಿಷಯ ಏನೆಂದರೆ ಈ ಸೌಂಡ್‌ಬಾರ್ ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ ಮತ್ತು ಪ್ಲಾಟಿನಂ ಬ್ಲಾಕ್ ಎಂಬ ಒಂದೇ ಬಣ್ಣದ ಆಯ್ಕೆಯಲ್ಲಿ ಲಭ್ಯ.

ದೇಶೀಯ ಬ್ರ್ಯಾಂಡ್‌ನಿಂದ ಹೊಸ ಸೌಂಡ್‌ಬಾರ್‌ ಲಾಂಚ್‌; ಮನೆಯಲ್ಲೇ ಥಿಯೇಟರ್‌ ಅನುಭವ..

ಇನ್ನು ಈ ದೇಶೀಯ ಬ್ರ್ಯಾಂಡ್ GOVO ಹೊಸ ಕಳೆದ ವರ್ಷ ಗೋಸರೌಂಡ್‌ 200 ಸೌಂಡ್‌ಬಾರ್ ಅನ್ನು ಲಾಂಚ್ ಮಾಡಿತ್ತು. ಇದು ಕಾಂಪ್ಯಾಕ್ಟ್ ಸೌಂಡ್‌ಬಾರ್ ಆಗಿದ್ದು, ಸುಧಾರಿತ ಆಡಿಯೊ ಅನುಭವವನ್ನು ನೀಡುತ್ತದೆ. ಜೊತೆಗೆ ವರ್ಧಿತ ಫೀಚರ್ಸ್‌ ಮತ್ತು ಸುಧಾರಿತ ಕಾರ್ಯಕ್ಷಮತೆಯೊಂದಿಗೆ ಇದು ಕಾಣಿಸಿಕೊಂಡಿದ್ದು, ವೃತ್ತಿಪರ ಮತ್ತು ಗೃಹ ಬಳಕೆಗೆ ಸೂಕ್ತವಾಗಗುವಂತೆ ವಿನ್ಯಾಸಗೊಳಿಸಲಾಗಿತ್ತು.

ಈ ಸೌಂಡ್‌ಬಾರ್ 3,999 ರೂ.ಗಳ ಬೆಲೆಯೊಂದಿಗೆ ಲಾಂಚ್ ಆಗಿದ್ದರೂ ಸಹ ಆರಂಭದಲ್ಲಿ ಪರಿಚಯಾತ್ಮಕ ಬೆಲೆಯಾಗಿ 999 ರೂ.ಗಳಿಗೆ ಮಾರಾಟ ಮಾಡಲಾಗಿದೆ. ಈಗಲೂ ಸಹ ಈ ಡಿವೈಸ್‌ ಅಮೆಜಾನ್‌ನಲ್ಲಿ ಆಫರ್‌ ಬೆಲೆಯಲ್ಲಿ ಲಭ್ಯ ಇದೆ. ಇದೂ ಸಹ ಪ್ಲಾಟಿನಂ ಕಪ್ಪು ಬಣ್ಣದ ಒಂದೇ ರೂಪಾಂತರದಲ್ಲಿ ಕಾಣಿಸಿಕೊಂಡಿದೆ.

Best Mobiles in India

English summary
GOVO has expanded its product portfolio by launching the new GoSurround 300 soundbar. The device will offer immersive 3D surround sound and has eight hours of battery backup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+