Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಅಬ್ಬರಿಸಲು ಎಂಟ್ರಿ ಕೊಟ್ಟಿದೆ ಹೊಸ ಸೌಂಡ್‌ಬಾರ್‌!..ಬೆಲೆಯು ಕಡಿಮೆ!

ಆಡಿಯೋ ತಂತ್ರಜ್ಞಾನ ವಲಯದಲ್ಲಿ ಗುರುತಿಸಿಕೊಂಡಿರುವ ಗೋವೊ (GOVO) ಬ್ರ್ಯಾಂಡ್‌ ಈಗಾಗಲೇ ಹಲವು ಆಡಿಯೋ ಉತ್ಪನ್ನಗಳ ಮೂಲಕ ಗಮನ ಸೆಳೆದಿದೆ. ಸಂಸ್ಥೆಯು ಇತ್ತೀಚೆಗೆ ಅದರ ಸೌಂಡ್‌ಬಾರ್ ಲೈನ್‌ಅಪ್ ವಿಸ್ತರಿಸಿದ್ದು, ಗೋಸರೌಂಡ್‌ 970 (GoSurround 970) ಸೌಂಡ್‌ಬಾರ್‌ ಅನ್ನು ಹೊಸದಾಗಿ ಸೇರ್ಪಡೆ ಮಾಡಿದೆ.

ಹೌದು, ಗೋವೊ ಕಂನಿಯು ನೂತನವಾಗಿ ಗೋಸರೌಂಡ್‌ 970 (GoSurround 970) ಸೌಂಡ್‌ಬಾರ್‌ ಅನ್ನು ಪರಿಚಯಿಸಿದೆ. ಈ ಸೌಂಡ್‌ಬಾರ್‌ ಉತ್ತಮ-ಗುಣಮಟ್ಟದ ಆಡಿಯೊ ಮತ್ತು ತಲ್ಲೀನಗೊಳಿಸುವ ಸರೌಂಡ್ ಧ್ವನಿಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಆಡಿಯೊ ಸಿಸ್ಟಮ್‌ಗಳು ಆಗಿವೆ. ಅಂದಹಾಗೆ ಈ ಸೌಂಡ್‌ಬಾರ್‌ ಡಿವೈಸ್‌ ಬೆಲೆಯು 12,999ರೂ. ಆಗಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುವಂತಿದೆ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ಎಂಟ್ರಿ ಕೊಟ್ಟಿದೆ ಹೊಸ ಸೌಂಡ್‌ಬಾರ್‌!..ಬೆಲೆಯು ಕಡಿಮ

ಗೋವೊ ಸಂಸ್ಥೆಯು GoSurround 970 ಸೌಂಡ್‌ಬಾರ್ ಡಿವೈಸ್‌ ಅನ್ನು ಗ್ರಾಹಕರು ಆನ್‌ಲೈನ್‌ನಲ್ಲಿ ಅಧಿಕೃತ Govo ವೆಬ್‌ಸೈಟ್‌ ಮತ್ತು Amazon.in ನಲ್ಲಿ ಖರೀದಿ ಮಾಡಬಹುದಾಗಿದೆ. ಈ ಸಾಧನವು ಪ್ಲಾಟಿನಂ ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗಾದರೆ ಈ ಸೌಂಡ್‌ಬಾರ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸೌಂಡ್‌ಬಾರ್ ಪ್ರಮುಖ ಫೀಚರ್ಸ್‌ ಹೀಗಿವೆ

ಈ ಸೌಂಡ್‌ಬಾರ್‌ ಡಾಲ್ಬಿ ಆಡಿಯೊ ಸೌಲಭ್ಯ ಪಡೆದಿದೆ. ಡಾಲ್ಬಿ ಆಡಿಯೊದೊಂದಿಗೆ 5.1 ಪ್ರತ್ಯೇಕ ಆಡಿಯೊ ಚಾನಲ್‌ಗಳಿಂದ ನಾಟಕೀಯ, ಉತ್ತಮ-ಗುಣಮಟ್ಟದ ಸರೌಂಡ್ ಸೌಂಡ್ ಅನ್ನು ಪಡೆಯಬಹುದಾಗಿದೆ. ಜೊತೆಗೆ ಇದು DSP ಸಕ್ರಿಯಗೊಳಿಸಿದ ಸಬ್ ವೂಫರ್ ಪಡೆದಿದೆ. 6.5 ಇಂಚಿನ ಸಬ್ ವೂಫರ್‌ನ ಡೆಪ್ತ್ ಬಾಸ್‌ನೊಂದಿಗೆ ಥಿಯೇಟರ್ ಅನುಭವ ಪಡೆಯಬಹುದು.

ಡೈನಾಮಿಕ್ ಎಲ್ಇಡಿ ದೀಪಗಳು ಸೌಲಭ್ಯ ಇದೆ. ಗೊವೊ ನ ಸಿಗ್ನೇಚರ್ ಬಣ್ಣದಲ್ಲಿ ಅತ್ಯಂತ ಸೊಗಸಾದ ಎಲ್ಇಡಿ ದೀಪಗಳೊಂದಿಗೆ ಮುಂದಿನ ಹಂತಕ್ಕೆ ಅಕೌಸ್ಟಿಕ್ ಅನುಭವ ಲಭ್ಯ. ಅಲ್ಲದೇ 5 ಈಕ್ವಲೈಜರ್ ಮೋಡ್‌ಗಳು ಇದ್ದು, ಸಿನಿಮಾ, ಸುದ್ದಿ, ಸಂಗೀತ ಮತ್ತು 3D ಮೋಡ್‌ಗಳ ಮೂಲಕ ಬದಲಿಸಿ ಮತ್ತು ನಿಮ್ಮ ಹೋಮ್ ಸಿನಿಮಾ ಅನುಭವವನ್ನು ಆನಂದಿಸಬಹುದು.

ಹಾಗೆಯೇ ರಿಮೋಟ್ ಕಂಟ್ರೋಲ್ ಆಯ್ಕೆ ಇದೆ. ಅತ್ಯಂತ ಸೊಗಸಾದ ರಿಮೋಟ್ ಕಂಟ್ರೋಲ್‌ನೊಂದಿಗೆ ಬಾಸ್, ಟ್ರೆಬಲ್ ಮತ್ತು ವಾಲ್ಯೂಮ್ ಅನ್ನು ಸೆಟ್‌ ಮಾಡಬಹುದು. ಇದರೊಂದಿಗೆ ಈ ಸಾಧನವು ಮಲ್ಟಿ ಕನೆಕ್ಷನ್ ಆಯ್ಕೆ ಪಡೆದಿದೆ. ಅವುಗಳು HDMI (ARC), AUX, USB ಮತ್ತು OPT ಕನೆಕ್ಷನ್ ಸೌಲಭ್ಯ ಆಗಿವೆ.

ಇದು ಬ್ಲೂಟೂತ್ V5.3 ಆಯ್ಕೆ ಪಡೆದಿದ್ದು, ಬಳಕೆದಾರರ ಮೊಬೈಲ್ ಡಿವೈಸ್‌ ಅನ್ನು ಸ್ವಯಂಚಾಲಿತವಾಗಿ ಕನೆಕ್ಟ್ ಮಾಡುಬಹುದು ಹಾಗೂ ಎಂದಿಗಿಂತಲೂ ಜೋರಾಗಿ ಸಂಗೀತವನ್ನು ನೀಡಬಲ್ಲದು. ಸಂಯೋಜಿತ ನಿಯಂತ್ರಣಗಳ ಆಯ್ಕೆ ಕೂಡಾ ಲಭ್ಯ. ಬಳಕೆದಾರರು ಸಂಗೀತ ಅನುಭವವನ್ನು ನಿಯಂತ್ರಿಸಿ ಮತ್ತು ಸೌಂಡ್‌ಬಾರ್‌ನಲ್ಲಿರುವ ಕೀ ಪ್ಯಾನೆಲ್ ಮೂಲಕ ಜೋಡಿಸಿಬಹುದು.

ಇದಲ್ಲದೇ ಈ ಡಿವೈಸ್ ಎಲ್ಇಡಿ ಡಿಸ್‌ಪ್ಲೇ ಸೌಲಭ್ಯ ಹೊಂದಿದೆ. ಎಲ್ಇಡಿ ಡಿಸ್‌ಪ್ಲೇ ಮೂಲಕ ನಿಮ್ಮ ಸೌಂಡ್ಬಾರ್ ಸ್ಟೇಟಸ್‌ ಅನ್ನು ಚೆಕ್ ಮಾಡಬಹುದಾಗಿದೆ. ಡೈನಾಮಿಕ್ ಮೌಂಟಿಂಗ್ (ವಾಲ್/ಶೆಲ್ಫ್) ಆಯ್ಕೆ ಇದೆ. ಬಳಕೆದಾರರು ಟಿವಿಯ ಮುಂದೆ ಇರಿಸಬಹುದು ಅಥವಾ ಗೋಡೆಯ ಮೇಲೆ ಹಾಕಬಹುದಾಗಿದೆ.

ಬೆಲೆ ಹಾಗೂ ಲಭ್ಯತೆ ಮಾಹಿತಿ

ಗೋವೊ ಸಂಸ್ಥೆಯು GoSurround 970 ಸೌಂಡ್‌ಬಾರ್ ಬೆಲೆಯು 12,999ರೂ. ಆಗಿದೆ. ಈ ಸೌಂಡ್‌ಬಾರ್‌ ಅನ್ನು ಖರೀದಿದಾರರು ಆನ್‌ಲೈನ್‌ನಲ್ಲಿ ಅಧಿಕೃತ Govo ವೆಬ್‌ಸೈಟ್‌ ಮತ್ತು Amazon.in ನಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ ಪ್ಲಾಟಿನಂ ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇರುತ್ತದೆ.

Best Mobiles in India

English summary
Govo launches GoSurround 970 soundbar. Price in India, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+