Home
ಸುದ್ದಿಜಾಲ

ಹೆಚ್ಚುತ್ತಿದೆ ಯುಎಸ್‌ಬಿ ಚಾರ್ಜರ್ ಸ್ಕ್ಯಾಮ್; ಸಾರ್ವಜನಿಕ ಸ್ಥಳಗಳಲ್ಲಿ ಫೋನ್‌ ಚಾರ್ಜ್ ಮಾಡಬೇಡಿ

ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಅಗತ್ಯ ಡಿವೈಸ್‌ಗಳಾಗಿದ್ದು, ಒಂದು ಕ್ಷಣವೂ ಬಿಟ್ಟಿರಲಾರದ ರೀತಿಯಲ್ಲಿ ಜನರು ಇವುಗಳ ಮೇಲೆ ಆಕರ್ಷಿತರಾಗಿದ್ದಾರೆ. ಈ ನಡುವೆ ಫೋನ್‌ ಒಂದು ಕ್ಷಣವೂ ಸಹ ಆಫ್‌ ಆಗಬಾರದು ಎಂದು ನೀವು ಸಿಕ್ಕ ಸಿಕ್ಕ ಜಾಗದಲ್ಲಿ ಚಾರ್ಜರ್‌ ಮಾಡಲು ಹೋದರು ಭಾರೀ ಸಂಕಷ್ಟಕ್ಕೆ ಸಿಲುಕುತ್ತೀರಾ.

ಹೌದು, ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್ ಸಂಬಂಧ ಸ್ಕ್ಯಾಮ್‌ಗಳನ್ನು ನೀವು ಗಮನಿಸಿರಬಹುದು. ಅದರಲ್ಲಿ ಯುಎಸ್‌ಬಿ ಚಾರ್ಜರ್ ಸ್ಕ್ಯಾಮ್ (USB charger scam) ಸಹ ಪ್ರಮುಖವಾಗಿದೆ. ಈ ಕಾರಣಕ್ಕೆ ಈಗ ಭಾರತ ಸರ್ಕಾರ ಯಾರೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜ್‌ ಹಾಕುತ್ತಾರೋ ಅವರಿಗೆ ಎಚ್ಚರಿಕೆ ನೀಡಿದೆ. ಹಾಗಿದ್ರೆ, ಈ ರೀತಿ ಮಾಡಿದ್ರೆ ಬಳಕೆದಾರರಿಗೆ ಏನೆಲ್ಲಾ ಸಮಸ್ಯೆಗಳು ಆಗಲಿವೆ?, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸಾರ್ವಜನಿಕ ಸ್ಥಳಗಳಲ್ಲಿ ಫೋನ್‌ ಚಾರ್ಜ್ ಮಾಡಬೇಡಿ...

ಯುಎಸ್‌ಬಿ ಚಾರ್ಜರ್ ಸ್ಕ್ಯಾಮ್: ಯುಎಸ್‌ಬಿ ಚಾರ್ಜರ್ ಸ್ಕ್ಯಾಮ್ ಸಂಬಂಧ ನಾಗರಿಕರಿಗೆ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ಒತ್ತಾಯಿಸಿದೆ. ಯಾಕೆಂದರೆ ಸೈಬರ್ ಅಪರಾಧಿಗಳು ಸೂಕ್ಷ್ಮ ಡೇಟಾವನ್ನು ಕದಿಯಲು ಅಥವಾ ಸಂಪರ್ಕಿತ ಡಿವೈಸ್‌ಗಳಲ್ಲಿ ಮಾಲ್‌ವೇರ್ ಅನ್ನು ಇನ್‌ಸ್ಟಾಲ್‌ ಮಾಡಲು ಸಾರ್ವಜನಿಕ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಲಾಗಿದೆ .

ಎಲ್ಲೆಲ್ಲಿ ಈ ರೀತಿ ಮಾಡಲಾಗುತ್ತದೆ?: ಯುಎಸ್‌ಬಿ ಚಾರ್ಜರ್ ಸ್ಕ್ಯಾಮ್‌ಗೆ ಸಂಬಂಧಿಸಿದಂತೆ ಸರ್ಕಾರವು ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್‌ಗಳು ಮತ್ತು ಬಸ್ ನಿಲ್ದಾಣಗಳಂತಹ ಸಾಮಾನ್ಯ ಸ್ಥಳಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಇತರೆ ಡಿವೈಸ್‌ಗಳನ್ನು ಚಾರ್ಜ್ ಮಾಡುವಾಗ ಜಾಗರೂಕರಾಗಿರಿ ಎಂದು ಹೇಳಿದ್ದು, ಸಾರ್ವಜನಿಕ ಚಾರ್ಜಿಂಗ್ ಪೋರ್ಟಲ್‌ಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಫೋನ್‌ ಚಾರ್ಜ್ ಮಾಡಬೇಡಿ...

ಯುಎಸ್‌ಬಿ ಸ್ಕ್ಯಾಮ್ ಎಂದರೇನು?: ಯುಎಸ್‌ಬಿ ಸ್ಕ್ಯಾಮ್ ಅನ್ನು ಯುಎಸ್‌ಬಿ ಚಾರ್ಜರ್ ಸ್ಕ್ಯಾಮ್ ಎಂದೂ ಸಹ ಕರೆಯಲಾಗುತ್ತದೆ. ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕಂಡುಬರುವ ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳನ್ನು ಸೈಬರ್ ಅಪರಾಧಿಗಳು ಕಂಟ್ರೋಲ್‌ ಮಾಡಲಿದ್ದು, ಜ್ಯೂಸ್-ಜಾಕಿಂಗ್ ಎಂಬ ತಂತ್ರದ ಮೂಲಕ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳನ್ನು ಕುಶಲತೆಯಿಂದ ನಿರ್ವಹಿಸುತ್ತಾರೆ.

ಯಾರಾದರೂ ತಮ್ಮ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಈ ಪೋರ್ಟ್‌ಗಳಿಗೆ ಪ್ಲಗ್ ಮಾಡಿದಾಗ, ಸೈಬರ್ ಅಪರಾಧಿಗಳು ಸೂಕ್ಷ್ಮ ಬಳಕೆದಾರರ ಡೇಟಾವನ್ನು ಕದಿಯುವ ಕೆಲಸ ಮಾಡುತ್ತಾರೆ ಅಥವಾ ಸಂಪರ್ಕಿತ ಡಿವೈಸ್‌ಗಳಲ್ಲಿ ಮಾಲ್‌ವೇರ್ ಅನ್ನು ಇನ್‌ಸ್ಟಾಲ್ ಮಾಡುತ್ತಾರೆ. ಇದು ವ್ಯಕ್ತಿಗಳನ್ನು ಡೇಟಾ ಕಳ್ಳತನ, ಮಾಲ್‌ವೇರ್ ಸೋಂಕು, ಅಥವಾ ಸುಲಿಗೆಗೆ ಪ್ರಮುಖ ಕಾರಣವಾಗುತ್ತಿದೆ.

ಯುಎಸ್‌ಬಿ ಸ್ಕ್ಯಾಮ್‌ನಿಂದ ಸುರಕ್ಷಿತವಾಗಿರುವುದು ಹೇಗೆ?:
ಎಲೆಕ್ಟ್ರಿಕಲ್ ವಾಲ್ ಔಟ್‌ಲೆಟ್‌ಗಳಿಗೆ ಆದ್ಯತೆ ನೀಡಿ ಅಥವಾ ನಿಮ್ಮ ಸ್ವಂತ ಚಾರ್ಜರ್ ಬಳಕೆ ಮಾಡಿ: ನಿಮ್ಮ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಸಾಂಪ್ರದಾಯಿಕ ಎಲೆಕ್ಟ್ರಿಕಲ್ ವಾಲ್ ಔಟ್‌ಲೆಟ್‌ಗಳನ್ನು ಬಳಕೆ ಮಾಡಿ. ನೀವು ಹೊರಗಿದ್ದರೆ ಮತ್ತು ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಬೇಕಾದರೆ, ನಿಮ್ಮ ಸ್ವಂತ ಚಾರ್ಜರ್ ಅಥವಾ ಪೋರ್ಟಬಲ್ ಪವರ್ ಬ್ಯಾಂಕ್ ಅನ್ನು ಬಳಕೆ ಮಾಡುವುದು ಉತ್ತಮ ಮಾರ್ಗವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಫೋನ್‌ ಚಾರ್ಜ್ ಮಾಡಬೇಡಿ...

ಡಿವೈಸ್‌ಗಳನ್ನು ಸುರಕ್ಷಿತಗೊಳಿಸಿ ಮತ್ತು ಅಪರಿಚಿತ ಡಿವೈಸ್‌ಗಳೊಂದಿಗೆ ಜೋಡಿಸಬೇಡಿ: ನಿಮ್ಮ ಡಿವೈಸ್‌ಗಳಲ್ಲಿ ಪಿನ್ ಅಥವಾ ಪಾಸ್‌ವರ್ಡ್ ಹೊಂದಿಸುವಂತಹ ಭದ್ರತಾ ಕ್ರಮಗಳನ್ನು ಅಳವಡಿಸಿ. ಇದು ನಿಮ್ಮ ಡಿವೈಸ್‌ಗೆ ಅನಧಿಕೃತ ಪ್ರವೇಶವನ್ನು ತಡೆಯುತ್ತದೆ ಮತ್ತು ನಿಮ್ಮ ಡೇಟಾವನ್ನು ರಕ್ಷಿಸಲು ಮಾಡುತ್ತದೆ. ನಿಮ್ಮ ಡಿವೈಸ್‌ ಅನ್ನು ಅಪರಿಚಿತ ಅಥವಾ ವಿಶ್ವಾಸಾರ್ಹವಲ್ಲದ ಡಿವೈಸ್‌ಗಳಿಗೆ ಸಂಪರ್ಕಿಸುವುದನ್ನು ತಪ್ಪಿಸಿ. ಸೈಬರ್ ದಾಳಿಯ ಅಪಾಯವನ್ನು ಕಡಿಮೆ ಮಾಡಲು ನಂಬಲಾರ್ಹ ಡಿವೈಸ್‌ನೊಂದಿಗೆ ಮಾತ್ರ ಕನೆಕ್ಟ್‌ ಮಾಡಿ.

ನಿಮ್ಮ ಫೋನ್ ಅನ್ನು ಆಫ್ ಮಾಡಿ ಚಾರ್ಜ್ ಮಾಡಿ: ಇನ್ನು ಸಾರ್ವಜನಿಕ ಪ್ರದೇಶದಲ್ಲಿ ಚಾರ್ಜ್‌ ಮಾಡಲೇಬೇಕು ಎಂದಾದರೆ ನಿಮ್ಮ ಡಿವೈಸ್‌ ಅನ್ನು ಆಫ್‌ ಮಾಡಿ. ಚಾರ್ಜ್ ಮಾಡುವುದರಿಂದ ಸೈಬರ್ ದಾಳಿಯ ಅಪಾಯವನ್ನು ಕಡಿಮೆ ಮಾಡಬಹುದು. ನಿಮ್ಮ ಡಿವೈಸ್‌ ಅನ್ನು ಆಫ್ ಮಾಡಿದಾಗ ಮಾಲ್‌ವೇರ್ ಇನ್‌ಸ್ಟಾಲ್‌ ಅಥವಾ ಚಾರ್ಜಿಂಗ್ ಪೋರ್ಟ್‌ಗಳ ಮೂಲಕ ಡೇಟಾ ಕಳ್ಳತನಕ್ಕೆ ಕಡಿವಾಣ ಹಾಕಬಹುದು.

ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಿ: ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಡಿವೈಸ್‌ ಅನ್ನು ಚಾರ್ಜ್‌ ಮಾಡುವಾಗ ಅಸಹಜ ನಡವಳಿಕೆ ಅಥವಾ ನಿಮ್ಮ ಡಿವೈಸ್‌ನಲ್ಲಿ ಅನಿರೀಕ್ಷಿತ ಪ್ರಾಂಪ್ಟ್‌ಗಳಂತಹ ಅನುಮಾನಾಸ್ಪದ ಏನನ್ನಾದರೂ ನೀವು ಗಮನಿಸಿದರೆ ತಕ್ಷಣವೇ ಚಾರ್ಜಿಂಗ್ ಮಾಡುವುದನ್ನು ನಿಲ್ಲಿಸಿ. ಸೈಬರ್ ವಂಚನೆ ಅಥವಾ ಅನುಮಾನಾಸ್ಪದ ಚಟುವಟಿಕೆಯ ಯಾವುದೇ ಘಟನೆಗಳನ್ನು ತಕ್ಷಣವೇ ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಿ. ಇದಕ್ಕಾಗಿ ನೀವು 1930 ನಂಬರ್‌ ಅನ್ನು ಬಳಕೆ ಮಾಡಬಹುದು.

Best Mobiles in India

English summary
Indian government has warned smartphone users about the USB charger scam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+