Home
ಸುದ್ದಿಜಾಲ

ಇನ್ಮುಂದೆ ಡಿಜಿಲಾಕರ್‌ನಲ್ಲೇ ತಪ್ಪಾದ ದಾಖಲೆ ತಿದ್ದುಪಡಿ ಮಾಡಬಹುದು!..ಸರ್ಕಾರದ ಹೊಸ ಹೆಜ್ಜೆ

ನಮ್ಮ ಬಳಿ ಇರುವ ಅಗತ್ಯ ಗುರುತಿನ ದಾಖಲೆಗಳಲ್ಲಿ ಏನಾದರೂ ತಪ್ಪು ಕಂಡು ಬಂದರೆ ಅದನ್ನು ಸರಿಪಡಿಸಲು ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗುತ್ತೇವೆ. ಅದಾಗ್ಯೂ ಸಮಯಕ್ಕೆ ಸರಿಯಾಗಿ ಕೆಲಸ ಆಗುವುದಿಲ್ಲ. ಆದರೆ, ಇನ್ಮುಂದೆ ಯಾವುದೇ ದಾಖಲೆಗಳನ್ನು ಆಧಾರ್‌ ಮೂಲಕ ಈ ಒಂದೇ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ.

ಹೌದು, ಸಾಮಾನ್ಯ ಜನರು ದಿನನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಈ ತಪ್ಪಾದ ದಾಖಲೆಗಳಿಂದ ದೊಡ್ಡ ಕಷ್ಟವನ್ನೇ ಎದುರಿಸುತ್ತಿರುತ್ತಾರೆ. ಆದರೆ, ಇನ್ಮುಂದೆ ಸ್ಮಾರ್ಟ್‌ಫೋನ್‌ನಲ್ಲಿ ಡಿಜಿಲಾಕರ್‌ ಆಪ್‌ ಬಳಕೆ ಮಾಡುವ ಮೂಲಕ ಸುಲಭವಾಗಿ ಇವುಗಳನ್ನು ತಿದ್ದುಪಡಿ ಮಾಡಬಹುದಾಗಿದೆ. ಹಾಗಿದ್ರೆ, ಸರ್ಕಾರದ ಈ ಹೊಸ ನಿರ್ಧಾರದಿಂದ ಏನೆಲ್ಲಾ ಲಾಭ?, ಯಾವೆಲ್ಲಾ ದಾಖಲಾತಿಗಳನ್ನು ತಿದ್ದುಪಡಿ ಮಾಡಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್ಮುಂದೆ ಡಿಜಿಲಾಕರ್‌ನಲ್ಲೇ ತಪ್ಪಾದ ದಾಖಲೆ ತಿದ್ದುಪಡಿ ಮಾಡಬಹುದು!...

ಭಾರತದ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು (MeitY) ಆಧಾರ್ ಮೂಲಕ ಅಗತ್ಯ ಸರ್ಕಾರಿ ದಾಖಲೆಗಳನ್ನು ಸ್ವಯಂ-ಅಪ್‌ಡೇಟ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಇದು ಅಭಿವೃದ್ಧಿ ಹಂತದಲ್ಲಿದ್ದು, ಅಂತಿಮವಾಗಿ ಜನರಿಗೆ ಪರಿಚಯಿಸುವ ಮೊದಲು ಕೆಲವು ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇದರಿಂದ ಜನರಿಗೆ ಏನು ಲಾಭ?

ಭಾರತದ ಎಲ್ಲಾ ಪ್ರಜೆಗಳು ಈ ವಿಶೇಷ ಸೇವೆಯ ಮೂಲಕ ಯಾವುದೇ ಇಲಾಖೆಗಳಿಗೆ ಭೇಟಿ ನೀಡುವ ಅಗತ್ಯ ಇಲ್ಲ. ಅಂದರೆ ಚಾಲನಾ ಪರವಾನಗಿಗಳು, ರೇಷನ್ ಕಾರ್ಡ್‌ಗಳು ಮತ್ತು ಮತದಾರರ ಗುರುತಿನ ಚೀಟಿಗಳಂತಹ ಇನ್ನಿತರೆ ದಾಖಲಾತಿಗಳನ್ನು ತಿದ್ದುಪಡಿ ಮಾಡಲು ಆಯಾ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡದೆಯೇ ಡಿಜಿಲಾಕರ್‌ ಮೂಲಕ ಸ್ವಯಂ ಅಪ್‌ಡೇಟ್‌ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅದರಂತೆ ಮೇಲೆ ಉಲ್ಲೇಖಿಸಲಾದ ಇಲಾಖೆಯ ದಾಖಲಾತಿಗಳಿಗೆ ಮೊದಲು ಈ ಸೌಲಭ್ಯವನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ.

ಇನ್ಮುಂದೆ ಡಿಜಿಲಾಕರ್‌ನಲ್ಲೇ ತಪ್ಪಾದ ದಾಖಲೆ ತಿದ್ದುಪಡಿ ಮಾಡಬಹುದು!...

ಈ ಸ್ವಯಂ-ನವೀಕರಣ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ಡಿಜಿಲಾಕರ್‌ನಲ್ಲಿ ಸರ್ಕಾರಿ ದಾಖಲೆಗಳನ್ನು ಇರಿಸಿಕೊಂಡಿರುವ ಬಳಕೆದಾರರಿಗೆ ಇದು ಸಹಾಯಕವಾಗಲಿದ್ದು, ಇದರಲ್ಲಿ ಪಾನ್‌ ಲಾರ್ಡ್‌, ಪರವಾನಗಿ ದಾಖಲೆಗಳು ಇದ್ದು, ಇವುಗಳನ್ನು ನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಕೆವೈಸಿ ಪ್ರಕ್ರಿಯೆಗಳಲ್ಲಿ ಅಗತ್ಯವಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಆಧಾರ್‌ ಕಾರ್ಡ್‌ ಅನ್ನು ಮೂಲವಾಗಿರಿಸಿಕೊಂಡು ಇನ್ನುಳಿದ ಅಗತ್ಯವಾದ ಎಲ್ಲಾ ದಾಖಲೆಗಳು ಅದರಂತೆ ಸ್ವಯಂ ಆಗಿ ಬದಲಾವಣೆ ಆಗಲಿವೆ.

ಈ ಸ್ವಯಂ ಬದಲಾವಣೆಯು ವೈಯಕ್ತಿಕ ಆಯ್ಕೆಯಾಗಿದ್ದು, ಬಳಕೆದಾರರು ಇದು ಅಗತ್ಯ ಎಂದು ಒಪ್ಪಿಗೆ ಸೂಚಿಸಿದರೆ ಮಾತ್ರ ಇದರಲ್ಲಿ ಬದಲಾವಣೆ ಸಂಭವಿಸುತ್ತದೆ ಎನ್ನಲಾಗಿದೆ. ಇದನ್ನು ಉದಾಹರಣೆ ಸಹಿತ ಹೇಳುವುದಾದರೆ ಆಧಾರ್‌ನಲ್ಲಿ ವಿಳಾಸವನ್ನು ಬದಲಾವಣೆ ಮಾಡಿದಾಗ ಆ ವೇಳೆ ಇದೇ ಮಾಹಿತಿ ಇತರೆ ದಾಖಲಾತಿಗಳಲ್ಲೂ ಬದಲಾಗಳು ಬಯಸುತ್ತೀರಾ ಎಂದು ಕೇಳುತ್ತದೆ. ಈ ವೇಳೆ ನೀವು ಅದಕ್ಕೆ ಒಪ್ಪಿಗೆ ಸೂಚಿಸಿದರೆ ಎಲ್ಲಾ ದಾಖಲೆಯಲ್ಲಿ ಇರುವ ವಿಳಾಸ ಬದಲಾಗಲಿದೆ.

ಇದರಲ್ಲಿಯೂ ಕೆಲವು ಮಹತ್ವದ ಆಯ್ಕೆ ನೀಡಲಾಗಿದ್ದು, ನೀವು ಎಲ್ಲಾ ಇಲಾಖೆಯ ದಾಖಲೆಗಳನ್ನು ಬದಲಾವಣೆ ಮಾಡದೆ ಅಗತ್ಯ ಇರುವ ಕೆಲವು ಇಲಾಖೆಯ ದಾಖಲೆಯನ್ನಷ್ಟೇ ಬದಲಾವಣೆ ಮಾಡಲು ಇಚ್ಚಿಸಿದರೆ ಅದಕ್ಕೂ ಅವಕಾಶ ನೀಡಲಾಗುತ್ತದಂತೆ. ಈ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ದಾಖಲಾತಿಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಇನ್ಮುಂದೆ ಡಿಜಿಲಾಕರ್‌ನಲ್ಲೇ ತಪ್ಪಾದ ದಾಖಲೆ ತಿದ್ದುಪಡಿ ಮಾಡಬಹುದು!...

ಇದರಲ್ಲಿ ಏನೆಲ್ಲಾ ಬದಲಾವಣೆ ಮಾಡಬಹುದು?

ಸಾಮಾನ್ಯವಾಗಿ ಬಳಕೆದಾರರು ಜನ್ಮದಿನಾಂಕ, ಜನ್ಮಸ್ಥಳ, ತಪ್ಪಾದ ಹೆಸರು, ತಪ್ಪಾದ ಊರು ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಬದಲಾವಣೆ ಮಾಡಲು ಇಚ್ಚಿಸುತ್ತಾರೆ. ಅದರಂತೆ ಇದೀಗ ಸಚಿವಾಲಯವು ಎಪಿಐ ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇನ್ನೇನು ಕೆಲವು ತಿಂಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಲಭ್ಯವಾಗಿಸಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

Best Mobiles in India

English summary
Government reportedly wants to build a system to allow users to update any wrong information through Digilocker.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+