ವಾಟ್ಸಾಪ್‌ಗೆ ಟಾಂಗ್ ನೀಡಲು ಕೇಂದ್ರ ಸರ್ಕಾರದಿಂದ ಹೊಸ ಮೆಸೆಜ್‌ ಆಪ್‌ ಬಿಡುಗಡೆ!

|

ಕೇಂದ್ರ ಸರ್ಕಾರವು ಇನ್‌ಸ್ಟಂಟ್ ಮೆಸೆಜಿಂಗ್ ಪ್ಲಾಟ್‌ಫಾರ್ಮ್ 'ಸ್ಯಾಂಡೆಸ್' (Sandes) ಅನ್ನು ಪ್ರಾರಂಭಿಸಿದೆ. ಈ ಹೊಸ ಮೆಸೆಜ್ ಆಪ್‌ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಮೊಬೈಲ್ ಅಪ್ಲಿಕೇಶನ್ ಅನ್ನು ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ಫೇಸ್‌ಬುಕ್‌ನ

ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್‌ನ ಇನ್‌ಸ್ಟಂಟ್ ಮೆಸೆಜ್ ವೇದಿಕೆಯಾದ ವಾಟ್ಸಾಪ್‌ಗೆ ಭಾರತದ ಈ ಆಪ್‌ ಪೈಪೋಟಿ ನೀಡುವ ಅಪ್ಲಿಕೇಶನ್ ಆಗಲಿದೆ ಎಂದು ಹೇಳಲಾಗುತ್ತಿದೆ. ವಾಟ್ಸಾಪ್‌ ನಂತೆಯೇ, ಸ್ಯಾಂಡೆಸ್ - Sandes ಆಪ್ ಅನ್ನು ಮಾನ್ಯವಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID ಹೊಂದಿರುವ ಯಾವುದೇ ವ್ಯಕ್ತಿ ಬಳಸಬಹುದು. ಆದಾಗ್ಯೂ, ಪ್ರಸ್ತುತ, ಇದನ್ನು ಸರ್ಕಾರಿ ನೌಕರರು ಮತ್ತು ಅದಕ್ಕೆ ಸಂಬಂಧಿಸಿದ ಏಜೆನ್ಸಿಗಳು ಮಾತ್ರ ಬಳಸುತ್ತಿದ್ದಾರೆ.

ಸಂದೇಶ

ಸ್ಯಾಂಡೆಸ್ ಓಪನ್ ಸೋರ್ಸ್ ಆಧಾರಿತ, ಸುರಕ್ಷಿತ, ಕ್ಲೌಡ್-ಎನೇಬಲ್ಡ್ ಪ್ಲಾಟ್‌ಫಾರ್ಮ್ ಆಗಿದೆ. ಇದನ್ನು ಸರ್ಕಾರವು ಆಯೋಜಿಸುತ್ತದೆ ಮತ್ತು ಸರ್ಕಾರದ ಮೂಲಸೌಕರ್ಯಗಳ ಮೇಲೆ ನಿಯಂತ್ರಣವು ಸರ್ಕಾರದೊಂದಿಗೆ ಮಾತ್ರ ಉಳಿಯುತ್ತದೆ. ಒಂದರಿಂದ ಒಂದು ಮತ್ತು ಗುಂಪು ಸಂದೇಶ, ಫೈಲ್ ಮತ್ತು ಮಾಧ್ಯಮದಂತಹ ವೈಶಿಷ್ಟ್ಯಗಳೊಂದಿಗೆ ಹಂಚಿಕೆ, ಆಡಿಯೋ-ವಿಡಿಯೋ ಕರೆ ಮತ್ತು ಇ-ಸರ್ಕಾರಿ ಅಪ್ಲಿಕೇಶನ್ ಇಂಟಿಗ್ರೇಷನ್, ಇತ್ಯಾದಿ. ಇದು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ.

OTP

ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ಅಪ್ಲಿಕೇಶನ್ ವಿವರಣೆಯ ಪ್ರಕಾರ, ಸ್ಯಾಂಡೆಸ್ ಅನ್ನು ಸರ್ಕಾರಿ ಮೂಲಸೌಕರ್ಯದಲ್ಲಿ ಪ್ರತ್ಯೇಕವಾಗಿ ಹೋಸ್ಟ್ ಮಾಡಲಾಗಿದೆ. ಇದು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಮತ್ತು ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್ ಮತ್ತು ಎನ್‌ಕ್ರಿಪ್ಟ್ ಮಾಡಿದ OTP ಸೇವೆಯನ್ನು ಬೆಂಬಲಿಸುತ್ತದೆ. ಇದರ ಗೌಪ್ಯತೆ ಮತ್ತು ಡೇಟಾ ನೀತಿಯನ್ನು ಭಾರತ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳು ನಿಯಂತ್ರಿಸುತ್ತವೆ. ಪ್ರಸ್ತುತ, ಸ್ಯಾಂಡೆಸ್ ಅನ್ನು ಎನ್ಐಸಿ ಇಮೇಲ್, ಡಿಜಿಲಾಕರ್ ಮತ್ತು ಇ-ಆಫೀಸ್‌ನೊಂದಿಗೆ ಸಂಯೋಜಿಸಲಾಗಿದೆ. ಅಲ್ಲದೆ, ಸ್ಯಾಂಡೆಸ್ ಆಪ್‌ನ ಸಂಪೂರ್ಣ ವೈಶಿಷ್ಟ್ಯಗಳು ಸರ್ಕಾರದಿಂದ ದೃಢೀಕರಿಸಿದ ಬಳಕೆದಾರರಿಗೆ ಮಾತ್ರ ಲಭ್ಯವಿವೆ ಎಂದು ಆಪ್ ವಿವರಣೆ ಹೇಳುತ್ತದೆ.

ಚಾಟ್

ಮೆಸೇಜಿಂಗ್ ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಅಪ್ಲಿಕೇಶನ್‌ಗಳಂತೆಯೇ ಇಂಟರ್ಫೇಸ್ ಅನ್ನು ಹೊಂದಿದೆ. ಎರಡು ಪ್ಲಾಟ್‌ಫಾರ್ಮ್‌ಗಳ ನಡುವೆ ಚಾಟ್ ಹಿಸ್ಟರಿಯನ್ನು ವರ್ಗಾಯಿಸಲು ಯಾವುದೇ ಆಯ್ಕೆಗಳಿಲ್ಲದಿದ್ದರೂ, GIMS - government instant messaging systems ನಲ್ಲಿನ ಚಾಟ್‌ಗಳನ್ನು ಬಳಕೆದಾರರ ಇಮೇಲ್‌ಗೆ ಬ್ಯಾಕಪ್ ಮಾಡಬಹುದು. ವಾಟ್ಸಾಪ್ನಂತೆ, ಈ ಅಪ್ಲಿಕೇಶನ್ ಗ್ರೂಪ್‌ಗಳು, ಪ್ರಸಾರ ಮೆಸಜೆಗಳು, ಮೆಸೆಜ್ ರವಾನೆ ಮತ್ತು ಎಮೋಜಿಗಳಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ.

ಸರ್ಕಾರಿ

ಕಳೆದ ಏಪ್ರಿಲ್‌ನಲ್ಲಿ ಸರ್ಕಾರಿ ನೌಕರರಿಗೆ ಸುರಕ್ಷತೆ ಮತ್ತು ಗೌಪ್ಯತೆ ದೃಷ್ಠಿಯಿಂದ ಜೂಮ್‌ ವಿಡಿಯೊ ಕಾನ್ಫರೇನ್ಸ್‌ ನಂತಹ ಪ್ಲಾಟ್‌ಫಾರ್ಮ್ ಗಳನ್ನು ಬಳಸದಂತೆ ಗೃಹ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿತ್ತು. ಹೀಗಾಗಿ ಆರಂಭದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ Sandes ಮೆಸೆಜ್ ಲಭ್ಯ ಮಾಡಲಾಗಿತ್ತು.

Best Mobiles in India

English summary
Govt Launches Messaging Platform 'Sandes' Amid Spat With WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X