Home
ಸುದ್ದಿಜಾಲ

mPassport ಪೊಲೀಸ್ ಆಪ್‌ ಲಾಂಚ್‌; ವಿದೇಶಕ್ಕೆ ಹೋಗುವವರಿಗೆ ಇದರಿಂದ ಪ್ರಯೋಜನ ಏನು?

ಭಾರತದ ಸರ್ಕಾರ ಡಿಜಿಟಲ್‌ ವ್ಯವಸ್ಥೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ಇದರ ಭಾಗವಾಗಿಯೇ ಈಗಾಗಲೇ ಹಲವಾರು ಇಲಾಖೆಗಳು ಹಾಗೂ ಸರ್ಕಾರದ ಸೇವೆಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿವೆ. ಈ ಮೂಲಕ ಭಾರತದ ಪ್ರಜೆಗಳಿಗೆ ಸುಲಭ ಸೇವೆ ನೀಡಲು ಅನುಕೂಲ ಆಗುತ್ತಿದೆ. ಇದರ ನಡುವೆ ಕೇಂದ್ರವು ಪಾಸ್‌ಪೋರ್ಟ್‌ ವಿಚಾರದಲ್ಲಿ ವಿದೇಶಕ್ಕೆ ಸಂಚರಿಸುವ ಜನರಿಗೆ ಸಂತಸದ ವಿಷಯ ನೀಡಿದೆ.

mPassport ಪೊಲೀಸ್ ಆಪ್‌ ಲಾಂಚ್‌; ವಿದೇಶಕ್ಕೆ ಹೋಗುವವರಿಗೆ ಇದರಿಂದ ಪ್ರಯೋಜನ ಏನು?

ಹೌದು, ಹಣ ಇದ್ದರೆ ವಿದೇಶಕ್ಕೆ ಹೋಗುವುದೇನೋ ಸುಲಭ. ಆದರೆ, ಇದಕ್ಕಾಗಿ ಪಾಸ್‌ಪೋರ್ಟ್‌ ಮಾಡಿಸಿಕೊಳ್ಳುವ ಪ್ರಕ್ರಿಯೆ ತುಂಬಾನೆ ಕಷ್ಟದ ಕೆಲಸ. ಆದರೆ, ಇನ್ಮುಂದೆ ಈ ರೀತಿಯ ಸಮಸ್ಯೆ ನಿಮಗೆ ಖಂಡಿತಾ ಎದುರಾಗುವುದಿಲ್ಲ. ಯಾಕೆಂದರೆ ಸರ್ಕಾರ 'mPassport ಪೊಲೀಸ್ ಅಪ್ಲಿಕೇಶನ್' ಅನ್ನು ಲಾಂಚ್‌ ಮಾಡಿದ್ದು, ಇದು ಭಾರತೀಯ ಪ್ರಜೆಗಳಿಗೆ ವಿಶೇಷ ಸೇವೆ ನೀಡುತ್ತದೆ. ಹಾಗಿದ್ರೆ ಇದರ ಬಳಕೆ ಹೇಗೆ?, ಇದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.ಸ

mPassport ಪೊಲೀಸ್ ಆಪ್ ಲಾಂಚ್‌

ಪಾಸ್‌ಪೋರ್ಟ್ ಪ್ರಕ್ರಿಯೆಯನ್ನು ವೇಗವಾಗಿ ಟ್ರ್ಯಾಕ್ ಮಾಡುವು ಉದ್ದೇಶಕ್ಕಾಗಿ ಕೇಂದ್ರವು 'mPassport ಪೊಲೀಸ್ ಅಪ್ಲಿಕೇಶನ್' ಅನ್ನು ಆರಂಭಿಸಿದ್ದು, ಈ ಮೂಲಕ ಎಲ್ಲಾ ಪರಿಶೀಲನೆಗಳು ಕೇವಲ 5 ದಿನಗಳಲ್ಲಿಯೇ ಜರುಗಲಿವೆ. ಅದರಂತೆ ಪ್ರತಿದಿನ ಸರಾಸರಿ 2,000 ಪಾಸ್‌ಪೋರ್ಟ್‌ಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಇವುಗಳನ್ನು ಪೂರ್ಣಗೊಳಿಸಲು 15 ದಿನಗಳಾಗುತ್ತಿದ್ದವು. ಆದರೆ ಇನ್ಮುಂದೆ ಐದು ದಿನಗಳಲ್ಲಿ ಈ ಪ್ರಕ್ರಿಯೆ ಜರುಗಲಿದೆ.

ಇನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಾರಂಭಿಸಿರುವ ಈ mPassport ಪೊಲೀಸ್ ಆಪ್‌ ಪಾಸ್‌ಪೋರ್ಟ್ ಪರಿಶೀಲನೆ ಪ್ರಕ್ರಿಯೆಯನ್ನು ಸುಗಮಗೊಳಿಸುವುದಿಲ್ಲವಾದರೂ ಸಮಯೋಚಿತ ನವೀಕರಣಕ್ಕಾಗಿ ಹಾಗೂ ಕೆಲವು ದೋಷಗಳನ್ನು ಶೀಘ್ರದಲ್ಲಿ ಸರಿಪಡಿಸಿಕೊಳ್ಳಲು ಬಹಳ ಪ್ರಯೋಜಕಾರಿಯಾಗಿದೆ. ಇದು ಡಿಜಿಟಲ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್ ಆಗಿದೆ.

ನೀವು ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಮೂಲಕ ಅಥವಾ mPassport ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಹೇಗೆ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಬಹುದು ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ ನೋಡಿ.

mPassport ಪೊಲೀಸ್ ಆಪ್‌ ಲಾಂಚ್‌; ವಿದೇಶಕ್ಕೆ ಹೋಗುವವರಿಗೆ ಇದರಿಂದ ಪ್ರಯೋಜನ ಏನು?

ಹಂತ 1
ಮೊದಲು ಪಾಸ್‌ಪೋರ್ಟ್ ಪಡೆದುಕೊಳ್ಳುವ ಉದ್ದೇಶ ಇದ್ದವರು ಇದಕ್ಕೆ ಸಂಬಂಧಿಸಿದ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 2
ಬಳಿಕ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ಇದಾದ ನಂತರ ನಿಮ್ಮ ಅರ್ಜಿ ಕಾಯ್ದಿರಿಸಲು ಹಾಗೂ ಪಾವತಿ ಪ್ರಕ್ರಿಯೆಗಾಗಿ ಉಳಿಸಿದ/ಸಲ್ಲಿಸಿದ ಅರ್ಜಿಯನ್ನು ವೀಕ್ಷಿಸಿ ವಿಭಾಗದಲ್ಲಿ ಪಾವತಿಸಿ ಮತ್ತು ಅಪಾಯಿಟ್‌ಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 3
ಈ ಮೇಲೆ ತಿಳಿಸಿದ ಪ್ರಕ್ರಿಯೆ ಮುಗಿದ ನಂತರ ಅಂದರೆ ನಿಮ್ಮ ಪಾವತಿ ಪ್ರಕ್ರಿಯೆ ಮುಗಿದ ನಂತರ ಅರ್ಜಿಯ ರಶೀದಿಯನ್ನು ಮುದ್ರಿಸು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದರೊಂದಿಗೆ ರಶೀದಿಯ ವಿವರ ಎಸ್‌ಎಮ್‌ಎಸ್‌ ಮೂಲಕ ಸಹ ಬರುತ್ತದೆ.

ಹಂತ 4
ಅನ್‌ಲೈನ್‌ನಲ್ಲಿ ಇಷ್ಟೆಲ್ಲಾ ಪ್ರಕ್ರಿಯೆ ಮುಗಿದ ನಂತರ ಪಾಯಿಂಟ್‌ಮೆಂಟ್ ನಿಗದಿಯಾಗಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಈ ವೇಳೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿದೆ.

mPassport ಪೊಲೀಸ್ ಆಪ್‌ ಲಾಂಚ್‌; ವಿದೇಶಕ್ಕೆ ಹೋಗುವವರಿಗೆ ಇದರಿಂದ ಪ್ರಯೋಜನ ಏನು?

ಪೊಲೀಸ್ ಸ್ಟೇಟಸ್‌ ಅನ್ನು ಪರಿಶೀಲಿಸುವುದು ಹೇಗೆ?

ನಿಮ್ಮ ಪಾಸ್‌ಪೋರ್ಟ್‌ನ ಸ್ಟೇಟಸ್‌ ಮತ್ತು ಪರಿಶೀಲನೆಗೆ ಅನುಗುಣವಾಗಿ ಪೊಲೀಸರು ನಿಮ್ಮ ಪಾಸ್‌ಪೋರ್ಟ್ ಅರ್ಜಿಗೆ ಮೂರು ರೀತಿಯ ಲೇಬಲ್ ಅನ್ನು ನೀಡಲಾಗುತ್ತದೆ. ಅದಾಗ್ಯೂ ಈ ಕುರಿತ ಹೆಚ್ಚಿನ ವಿವರಗಳಿಗಾಗಿ ನೀವು ಪೊಲೀಸ್ ಠಾಣೆಗೂ ಭೇಟಿ ನೀಡಬಹುದು. ಅದರಂತೆ ನಿಮ್ಮ ಪಾಸ್‌ಪೋರ್ಟ್‌ ಸ್ಟೇಟಸ್‌ ವಿವರವನ್ನು 4 ರೀತಿಯಲ್ಲಿ ಪರಿಶೀಲಿಸಬಹುದು.

ಅದರಲ್ಲಿ ಪ್ರಮುಖವಾಗಿ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ ಮೂಲಕ, ಟೋಲ್ ಫ್ರೀ ಸಂಖ್ಯೆ 1800 258 1800 ಗೆ ಕರೆ ಮಾಡುವ ಮೂಲಕ, 9704 100 100 ಗೆ 'STATUS FILE NUMBER' ಎಂದು ಎಸ್‌ಎಮ್‌ಎಸ್‌ ಮಾಡುವ ಮೂಲಕ ಹಾಗೂ mPassport ಸೇವಾ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುವ ಮೂಲಕ ಈ ಸೇವೆ ಪಡೆಯಬಹುದಾಗಿದೆ.

Best Mobiles in India

English summary
The Central government has launched the mPassport Police App to fast track the passport verification process.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+