ವಾಟ್ಸಾಪ್‌ಗೆ ಟಾಂಗ್ ಕೊಡಲಿದೆ ಸ್ವದೇಶಿ ನಿರ್ಮಿತ ಈ ಮೆಸೆಜಿಂಗ್ ಆಪ್‌!

|

ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನ ಹೊಸ ಪ್ರೈವಸಿ ನೀತಿಯಿಂದಾಗಿ ಬಳಕೆದಾರರ ಆಪ್‌ನಿಂದ ದೂರ ಸರಿಯುವಂತಾಗಿದೆ. ವಾಟ್ಸಾಪ್‌ ಟಾಂಗ್ ನೀಡಲು ರಾಷ್ಟ್ರೀಯ ಮಾಹಿತಿ ಕೇಂದ್ರವು ವಾಟ್ಸಾಪ್ ಮಾದರಿಯಲ್ಲಿ Sandes ಎಂಬ ಇನ್‌ಸ್ಟಂಟ್ ಮೆಸೆಜ್ ಕಳುಹಿಸುವ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ವಾಟ್ಸಾಪ್‌ನಂತೆ ಈ ಹೊಸ ಅಪ್ಲಿಕೇಶನ್ ತಾಣದಲ್ಲಿಯೂ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಹೊಂದಿರುವ ಯಾರಾದರೂ ಮೆಸೆಜ್ ಮಾಡಬಹುದಾಗಿದೆ.

ಅಪ್ಲಿಕೇಶನ್

ಹೌದು, ಸ್ವದೇಶಿ ನಿರ್ಮಿತ Sandes ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ಗೆ ಪರ್ಯಾಯ ಎನ್ನಲಾಗಿದೆ. ಎನ್‌ಐಸಿ-National Informatics Centre ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಆಪ್‌ನಲ್ಲಿ ಬಳಕೆದಾರರ ಖಾಸಗಿ ಮಾಹಿತಿ ಹಾಗೂ ಪ್ರೈವಸಿ ವಿಷಯಕ್ಕೆ ಧಕ್ಕೆ ಇರಲ್ಲ. ಪ್ರಸ್ತುತ Sandes ಮೆಸೆಜಿಂಗ್ ಆಪ್‌ APK ಮಾದರಿಯಲ್ಲಿ ಲಭ್ಯ ಇದೆ. ಹಾಗಾದರೇ ಈ ಆಪ್‌ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಅಪ್ಲಿಕೇಶನ್

ಮೆಸೇಜಿಂಗ್ ಅಪ್ಲಿಕೇಶನ್ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಅಪ್ಲಿಕೇಶನ್‌ಗಳಂತೆಯೇ ಇಂಟರ್ಫೇಸ್ ಅನ್ನು ಹೊಂದಿದೆ. ಎರಡು ಪ್ಲಾಟ್‌ಫಾರ್ಮ್‌ಗಳ ನಡುವೆ ಚಾಟ್ ಹಿಸ್ಟರಿಯನ್ನು ವರ್ಗಾಯಿಸಲು ಯಾವುದೇ ಆಯ್ಕೆಗಳಿಲ್ಲದಿದ್ದರೂ, GIMS - government instant messaging systems ನಲ್ಲಿನ ಚಾಟ್‌ಗಳನ್ನು ಬಳಕೆದಾರರ ಇಮೇಲ್‌ಗೆ ಬ್ಯಾಕಪ್ ಮಾಡಬಹುದು. ವಾಟ್ಸಾಪ್ನಂತೆ, ಈ ಅಪ್ಲಿಕೇಶನ್ ಗ್ರೂಪ್‌ಗಳು, ಪ್ರಸಾರ ಮೆಸಜೆಗಳು, ಮೆಸೆಜ್ ರವಾನೆ ಮತ್ತು ಎಮೋಜಿಗಳಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ.

ಪ್ಲಾಟ್‌ಫಾರ್ಮ್

ಪ್ರಸ್ತುತ, Sandes ಮೆಸೆಜ್‌ ಪ್ಲಾಟ್‌ಫಾರ್ಮ್ ಅಧಿಕೃತ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದೆ. ಈ ಅಪ್ಲಿಕೇಶನ್ APK ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಗೂಗಲ್‌ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್‌ ಸ್ಟೋರ್ ತಾಣಗಳಲ್ಲಿ ಇನ್ನು ಅಧಿಕೃತವಾಗಿ ಲಭ್ಯ ಮಾಡಿಲ್ಲ. ಆದರೆ ಶೀಘ್ರದಲ್ಲೇ ಸ್ವದೇಶಿ Sandes ಅಪ್ಲಿಕೇಶನ್ ಆಂಡ್ರಾಯ್ಡ್ ಹಾಗೂ ಐಓಎಸ್‌ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಸರ್ಕಾರಿ

ಕಳೆದ ಏಪ್ರಿಲ್‌ನಲ್ಲಿ ಸರ್ಕಾರಿ ನೌಕರರಿಗೆ ಸುರಕ್ಷತೆ ಮತ್ತು ಗೌಪ್ಯತೆ ದೃಷ್ಠಿಯಿಂದ ಜೂಮ್‌ ವಿಡಿಯೊ ಕಾನ್ಫರೇನ್ಸ್‌ ನಂತಹ ಪ್ಲಾಟ್‌ಫಾರ್ಮ್ ಗಳನ್ನು ಬಳಸದಂತೆ ಗೃಹ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿತ್ತು. ಹೀಗಾಗಿ ಆರಂಭದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ Sandes ಮೆಸೆಜ್ ಲಭ್ಯ ಮಾಡಲಾಗಿತ್ತು. ಆದರೆ ಇದನ್ನು ಈಗ ಸಾರ್ವಜನಿಕರಿಗೂ ಬಿಡುಗಡೆ ಮಾಡಲಾಗಿದೆ.

Best Mobiles in India

English summary
Like WhatsApp, the app offers features like groups, broadcast messages, message forwarding and emojis.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X