Home
ಸುದ್ದಿಜಾಲ

Whatsapp: ಈ ಮಾಹಿತಿಯನ್ನು ನೀಡಲೇಬೇಕು ಎಂದ ಮೋದಿ ಸರ್ಕಾರ, ಆಗುವುದಿಲ್ಲ ಎಂದ ವಾಟ್ಸಾಪ್‌!

ವಾಟ್ಸಾಪ್‌ (Whatsapp) ಬಳಕೆ ಮಾಡದ ಸ್ಮಾರ್ಟ್‌ಫೋನ್‌ ಬಳಕೆದಾರರು ಯಾರಿದ್ದಾರೆ ಹೇಳಿ. ಅಷ್ಟೇ ಅಲ್ಲದೆ ವಾಟ್ಸಾಪ್‌ ಬಳಕೆದಾರರಿಗೆ ಯಾವುದೇ ಸಮಸ್ಯೆಗಳು ಆಗಬಾರದು ಎಂದು ವಿಶೇಷವಾದ ಭದ್ರತಾ ಫೀಚರ್ಸ್‌ಗಳನ್ನು ಸಹ ವಾಟ್ಸಾಪ್‌ ನೀಡುತ್ತಲೇ ಬಂದಿದೆ. ಅದರೆ, ಈಗ ವಾಟ್ಸಾಪ್‌ನ ಈ ವಿಚಾರದಲ್ಲಿ ಸರ್ಕಾರ ತಲೆ ಹಾಕಿದೆ.

ಹೌದು, ವಾಟ್ಸಾಪ್‌ನಲ್ಲಿನ ಡೀಪ್‌ಫೇಕ್‌ಗಳ (deepfakes) ವಿರುದ್ಧ ಹೋರಾಡಲು ಬಳಕೆದಾರರ ವಿವರಗಳನ್ನು ಶೇರ್‌ ಮಾಡುವಂತೆ ಭಾರತದ ಸರ್ಕಾರ ವಾಟ್ಸಾಪ್‌ ಅನ್ನು ಕೇಳಿದೆ. ಆದರೆ ಗೌಪ್ಯತೆಗೆ ಧಕ್ಕೆ ತರುತ್ತದೆ ಎಂದು ಕಂಪನಿಯು ಪ್ರತ್ಯುತ್ತರ ನೀಡದೆ. ಹಾಗಿದ್ರೆ, ಏನಿದು ಡೀಪ್‌ಫೇಕ್?, ಇದರಿಂದ ಸರ್ಕಾರಕ್ಕೆ ಆಗುವ ಅನಾನುಕೂಲಗಳೇನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ಮಾಹಿತಿಯನ್ನು ನೀಡಲೇಬೇಕು ಎಂದ ಮೋದಿ ಸರ್ಕಾರ, ಆಗುವುದಿಲ್ಲ ಎಂದ ವಾಟ್ಸಾಪ್‌!

ವಾಟ್ಸಾಪ್‌ ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇನ್‌ಸ್ಟಂಟ್‌ ಮೆಸೆಜಿಂಗ್‌ ಆಪ್‌ ಆಗಿದೆ. ಪ್ರತಿದಿನ ಲಕ್ಷಾಂತರ ಜನರು ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳು ಇತ್ಯಾದಿಗಳೊಂದಿಗೆ ಸಂಪರ್ಕ ಸಾಧಿಸಲು ಇದನ್ನು ಬಳಕೆ ಮಾಡುವುದು ಸಾಮಾನ್ಯವಾದ ವಿಚಾರ. ಈ ನಡುವೆ 2024ರ ಲೋಕಸಭಾ ಚುನಾವಣೆಗೆ (Lok Sabha Elections at 2024) ಮುಂಚಿತವಾಗಿ ಭಾರತ ಸರ್ಕಾರವು ಹೊಸ ಕಾನೂನು ಒಂದನ್ನು ಜಾರಿ ಮಾಡಲು ಸಜ್ಜಾಗಿದೆ.

ಈ ಹೊಸ ಕಾನೂನಿನ ಅಡಿಯಲ್ಲಿ ವಾಟ್ಸಾಪ್‌ ಮೂಲ ಮೆಸೆಜ್‌ ಮಾಡುವವರ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುವ ಡೀಪ್‌ಫೇಕ್‌ಗಳ ವಿರುದ್ಧ ಹೋರಾಡಲು ಇದನ್ನು ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಮತ್ತೊಂದೆಡೆ ಮೆಟಾ ಮಾಲೀಕತ್ವದ ವಾಟ್ಸಾಪ್‌, ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆಯ ವಿವರಗಳು ಕಂಪನಿಗೆ ಲಭ್ಯವಿರುವುದಿಲ್ಲ. ಜೊತೆಗೆ ಇದು ಬಳಕೆದಾರರ ಗೌಪ್ಯತೆಯನ್ನು ಹಾಳುಮಾಡುತ್ತದೆ ಎಂದು ತಿಳಿಸಿದೆ.

ಈ ಸಂಬಂಧ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು, ಅದರಂತೆ ಇತ್ತೀಚಿನ ದಿನಗಳಲ್ಲಿ ಡೀಪ್‌ಫೇಕ್ ಜಾಸ್ತಿ ಆಗುತ್ತಿದ್ದು, ಇದರಿಂದ ಮುಂದಿನ ಚುನಾವಣೆಯಲ್ಲಿ ಏನಾದರೂ ಸಮಸ್ಯೆ ಆಗಬಹುದು ಎಂದು ಸರ್ಕಾರ ಈ ನಿರ್ಧಾರ ಮಾಡಿದೆಯಂತೆ. ಅಂದರೆ ಮೂಲ ಸಂದೇಶವನ್ನು ಯಾರೆಲ್ಲಾ ಕಳುಹಿಸುತ್ತಾರೋ ಅವರ ಮಾಹಿತಿಯನ್ನು ವಾಟ್ಸಾಪ್‌ ಸರ್ಕಾರಕ್ಕೆ ತಿಳಿಸಬೇಕಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳು 2021 ರ ಅಡಿಯಲ್ಲಿ ಈ ರೀತಿಯ ವಿಡಿಯೋಗಳನ್ನು ಮೊದಲು ಹಂಚಿಕೊಳ್ಳುವ ಜನರ ಗುರುತನ್ನು ಶೇರ್‌ ಮಾಡಲು ಸರ್ಕಾರವು ಕಂಪನಿಗೆ ಆದೇಶಿಸಬಹುದು ಎಂದೂ ಸಹ ಉಲ್ಲೇಖಿಸಲಾಗಿದೆ.

ಇದು ಪಕ್ಷಪಾತದ ವಿಚಾರವಲ್ಲ. ಆದರೆ, ಪ್ರಶ್ನೆಯಲ್ಲಿರುವ ವಿಡಿಯೋಗಳು ವಿವಿಧ ರಾಜಕೀಯ ಪಕ್ಷಗಳ ರಾಜಕಾರಣಿಗಳ ಡೀಪ್‌ಫೇಕ್‌ಗಳನ್ನು ಹೊಂದಿರುತ್ತವೆ. ರಾಜಕೀಯ ವಲಯದಲ್ಲಿ ಇಂತಹ ನಕಲಿ ವಿಡಿಯೋಗಳನ್ನು ನಮ್ಮ ಗಮನಕ್ಕೆ ತರಲಾಗಿದೆ. ಇದು ಭಾರತದಲ್ಲಿ ಚುನಾವಣಾ ಸಮಗ್ರತೆಗೆ ಹಾನಿ ಉಂಟುಮಾಡಬಹುದು. ಆದ್ದರಿಂದ ವಾಟ್ಸಾಪ್‌ಗೆ ಮೊದಲ ಮೂಲ ಮೆಸೆಜ್‌ ಅನ್ನು ಕಳುಹಿಸುವ ಬಳಕೆದಾರರ ಮಾಹಿತಿಯನ್ನು ತಿಳಿಸಲು ಹೇಳಿದ್ದೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ಈ ಬೆಳವಣಿಗೆ ನಡುವೆ ನಾವು ಪ್ರಮುಖ ವಿಷಯವೊಂದನ್ನು ಈ ವೇಳೆ ನೆನಪಿಸಿಕೊಳ್ಳಬಹುದು. ಅದೇನೆಂದರೆ ವಾಟ್ಸಾಪ್ ಮತ್ತು ಫೇಸ್‌ಬುಕ್ 2021 ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಈ ರೀತಿಯ ನಿಬಂಧನೆಯನ್ನು ಪ್ರಶ್ನೆ ಮಾಡಿದ್ದವು. ಈ ಕ್ರಮವು ತಮ್ಮ ಬಳಕೆದಾರರ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ಸಾಮೂಹಿಕ ಕಣ್ಗಾವಲಿಗೆ ಕಾರಣವಾಗಬಹುದು ಎಂದು ವಾದಿಸಿದ್ದವು. ಆದರೆ, ಈ ಕ್ರಮವು ಸಾಮಾನ್ಯ ವಾಟ್ಸಾಪ್‌ ಕಾರ್ಯನಿರ್ವಹಣೆ ಮತ್ತು ಸಾಮಾನ್ಯ ಬಳಕೆದಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಏನಿದು ಡೀಪ್‌ಫೇಕ್: ಡೀಪ್‌ಫೇಕ್‌ಗಳು ನಕಲಿ ವಿಡಿಯೋ, ಆಡಿಯೊಗಳು ಅಥವಾ ಫೋಟೋಗಳನ್ನು (Video, audio, photo) ಹೊಂದಿರುತ್ತವೆ. ಇವುಗಳನ್ನು ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆ ಮಾಡಿ ಕ್ರಿಯೇಟ್‌ ಮಾಡಲಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸುಧಾರಿತ ಎಐ ಆಯ್ಕೆ ಇದ್ದು, ಅತ್ಯಂತ ಸರಳವಾಗಿ ಇದನ್ನು ಮಾಡಬಹುದಾಗಿದೆ.

ಈ ಮಾಹಿತಿಯನ್ನು ನೀಡಲೇಬೇಕು ಎಂದ ಮೋದಿ ಸರ್ಕಾರ, ಆಗುವುದಿಲ್ಲ ಎಂದ ವಾಟ್ಸಾಪ್‌!

ಈ ಡೀಪ್‌ಫೇಕ್‌ನಲ್ಲಿ ಘಟನೆಗಳು, ಹೇಳಿಕೆಗಳು ಅಥವಾ ನಿಜವಾಗಿ ಸಂಭವಿಸದ ಕ್ರಿಯೆಗಳನ್ನು ಚಿತ್ರಿಸುವ ಹೊಸ ತುಣುಕನ್ನು ರಚಿಸುವ ಕೆಲಸ ಮಾಡಲಾಗುತ್ತದೆ. ಡೀಪ್‌ಫೇಕ್‌ಗಳು ಒಂದು ರೀತಿಯ ಸೈಬರ್ ಅಪರಾಧವಾಗಿದ್ದು (Cyber crime) ಇದನ್ನು ಸುಳ್ಳು ಮಾಹಿತಿಯನ್ನು ಹರಡಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಅದರಂತೆ ಕೆಲವು ಸಂದರ್ಭದಲ್ಲಿ ಭಾರತವೂ ಸೇರಿದಂತೆ ಇತರೆ ರಾಷ್ಟ್ರಗಳನ್ನು ಇದನ್ನು ಬಳಕೆ ಮಾಡಲಾಗಿದೆ.

Best Mobiles in India

English summary
WhatsApp: Indian government has asked WhatsApp to share user details to fight deepfakes on WhatsApp.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+