ಒನ್‌ಪ್ಲಸ್‌ನ ಈ ಜಬರ್ದಸ್ತ್ ಫೋನಿಗೆ ಬಿಗ್ ಡಿಸ್ಕೌಂಟ್!..ಗ್ರಾಹಕರಿಗೆ ಅಚ್ಚರಿ!
ಇ ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (amazon great indian festival sale 2023) ಮಾರಾಟ ಮೇಳ ಜೋರಾಗಿ ನಡೆಯುತ್ತದೆ. ಸದ್ಯ ಈ ಮಾರಾಟ ಮೇಳದಲ್ಲಿ ಮೊಬೈಲ್ ಖರೀದಿದಾರರಿಗೆ ಹಬ್ಬದ ವಾತಾವರಣ ಇದ್ದು, ಫೋನ್‌ಗಳು ಆಕರ್ಷಕ ಕೊಡುಗೆ ಪಡೆದಿವೆ. ಅವುಗಳಲ್ಲಿ ಒನ್‌ಪ್ಲಸ್‌ನ 11R 5G ಫೋನ್ ಬಿಗ್ ಡಿಸ್ಕೌಂಟ್ ಹೊಂದಿದೆ.
ಹೌದು, ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಸೇಲ್‌ನಲ್ಲಿ ಒನ್‌ಪ್ಲಸ್ 11R 5G ಮೊಬೈಲ್ ಆಕರ್ಷಕ ರಿಯಾಯಿತಿ ಪಡೆದಿದೆ. ಈ ಫೋನ್ 8GB RAM + 128GB ವೇರಿಯಂಟ್ ಮಾಡೆಲ್ ಕೊಡುಗೆಯಲ್ಲಿ 37,999ರೂ. ಗಳ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳ ಮೂಲಕ ಹೆಚ್ಚುವರಿ ರಿಯಾಯಿತಿ ಸಹ ದೊರೆಯುತ್ತದೆ.

ಹಾಗೆಯೇ ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 5G SoC ಪ್ರೊಸೆಸರ್ ಬಲದಲ್ಲಿ ಕೆಲಸ ನಿರ್ವಹಿಸಲಿದೆ. ತ್ರಿವಳಿ ಕ್ಯಾಮೆರಾ ರಚನೆ ಇದ್ದು, 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಮುಖ್ಯ ಕ್ಯಾಮೆರಾ ಇದೆ. ಹಾಗಾದರೆ ಒನ್‌ಪ್ಲಸ್ 11R 5G ಫೋನಿನ ಇತರ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸದ ಮಾಹಿತಿ
ಒನ್‌ಪ್ಲಸ್ ಸಂಸ್ಥೆಯ ಈ ಮೊಬೈಲ್ 6.74 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಇದರ ಡಿಸ್‌ಪ್ಲೇಯು 2772 x 1240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 40Hz-120Hz ಅಡಾಪ್ಟಿವ್ ಡೈನಾಮಿಕ್ ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, ಇದು 1000Hz ವರೆಗೆ ಟಚ್ ರೆಸ್ಪಾನ್ಸ್, 4450 ppi ಬ್ರೈಟ್‌ನೆಸ್ ಮತ್ತು 1,450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುತ್ತದೆ.
ಪ್ರೊಸೆಸರ್ ಕಾರ್ಯವೈಖರಿ ಹೇಗಿದೆ
ಒನ್‌ಪ್ಲಸ್ 11R ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 5G SoC ಪ್ರೊಸೆಸರ್ ಕಾರ್ಯವೈಖರಿ ಅನ್ನು ಒಳಗೊಂಡಿದ್ದು, ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು 8GB RAM + 256GB ಹಾಗೂ 16GB RAM ಮತ್ತು 256GB ವೇರಿಯೆಂಟ್ ಆಯ್ಕೆಯ ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಕ್ಯಾಮೆರಾ ಸೆನ್ಸಾರ್ ರಚನೆ ಹೀಗಿದೆ
ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 4cm ಮ್ಯಾಕ್ರೋ ಲೆನ್ಸ್ ಹೊಂದಿದ್ದು, 120-ಡಿಗ್ರಿ ಅಲ್ಟ್ರಾ-ವೈಡ್ ಲೆನ್ಸ್ ಪಡೆದಿದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಬ್ಯಾಟರಿ ಮತ್ತು ಇತರೆ ಆಯ್ಕೆಗಳ ಮಾಹಿತಿ
ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, 100W SUPERVOOC S ಫ್ಲಾಶ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G, Wi-Fi, ಬ್ಲೂಟೂತ್ 5.3 ಅನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ಉತ್ತಮ ಡಿಸ್ಚಾರ್ಜ್ ಮತ್ತು ಸುರಕ್ಷಿತ ರೀಬೂಟ್ ಸೌಲಭ್ಯ ಪಡೆದಿದೆ.
ಮೆಮೊರಿ ಆಯ್ಕೆ ಹಾಗೂ ಕಲರ್ ಆಯ್ಕೆ
ಈ ಜನಪ್ರಿಯ ಮೊಬೈಲ್ ಭಾರತದಲ್ಲಿ 8GB + 256GB ಮತ್ತು 16GB + 256GB ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ ಸೋನಿಕ್ ಬ್ಲ್ಯಾಕ್ ಮತ್ತು ಗಾಲಾಟಿಕ್ ಸಿಲ್ವರ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.


Click it and Unblock the Notifications








