ಜೀವನದ ಅರ್ಥ ತಿಳಿಸುವ ವೀಡಿಯೋ ಗೇಮ್‌ಗಳು
ಕಂಪ್ಯೂಟರ್, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿದಂತೆಲ್ಲಾ ಇಂದು ಬಹುಸಂಖ್ಯಾತರಿಗೆ ತಮ್ಮ ದೈನಂದಿನ ಕೆಲಸಗಳು ಸುಲಭವು ಹಾಗೂ ಸರಳವು ಆಗುತ್ತಿವೆ. ಉದಾಹರಣೆಗೆ ಇಂದು ಮೊಬೈಲ್‌ಗಳಲ್ಲಿ ಸೇವೆ ಒದಗಿಸುತ್ತಿರುವ ನೆಟ್ ಬ್ಯಾಂಕ್ ಆಪ್ಸ್‌ಗಳು, ವಿದ್ಯುತ್ ಬಿಲ್ ಪಾವತಿ ಮಾಡಲು ಇರುವ ಆಪ್ಸ್‌ಗಳು, ಸಿನೆಮಾ ಟಿಕೆಟ್ ಬುಕ್ ಮಾಡಲು ಇರುವ ಆಪ್‌ಗಳು.
ಓದಿರಿ: ಈ ಗೇಮ್ಸ್ ಆಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ !!
ಕೆಲವೊಮ್ಮೆ ಜೀವನವನ್ನು ಹೇಗೆ ಲೀಡ್ ಮಾಡಬೇಕು, ಜನರೊಂದಿಗೆ ಹೇಗೆ ಗೆಳೆತನ ಬೆಳೆಸಿ ಸಂತೋಷವಾಗಿರುವುದು ಎಂಬ ಹಲವು ಪ್ರಶ್ನೆಗಳು ಕಾಡುತ್ತವೆ. ಜೀವನ ಅಂದ್ರೆ ಏನು ಅನ್ನೋ ಹಾಸ್ಯವಾದ ಪ್ರಶ್ನೆಗಳು ಕೆಲವರಿಗೆ ಎನಾದರೂ ಗೊಂದಲ ಸಮಸ್ಯೆಗಳು ಎದುರಾದಾಗ ಬರುತ್ತವೆ. ಆದ್ರೆ ಇಂದು ಅಂತಹ ಪ್ರಶ್ನೆಗಳಿಗೂ ಸಹ ಶಾಂತವಾಗಿ ಉತ್ತರ ನೀಡುವ ಹಲವು ವೀಡಿಯೋ ಗೇಮ್‌ಗಳನ್ನು ಟೆಕ್ ತಜ್ಞರು ಅಭಿವೃದ್ದಿಪಡಿಸಿದ್ದಾರೆ. ಜೀವನ ಅಂದ್ರೆ ಏನು ಎಂದು ಅರ್ಥ ಮಾಡಿಸುವ ಕೆಲವು ಟಾಪ್ ವೀಡಿಯೋ ಗೇಮ್‌ಗಳು ಯಾವುವು ಎಂದು ಈ ಲೇಖನ ಓದಿ ತಿಳಿಯಿರಿ. ಹಾಗೂ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿರಿ.

ಅನಿಮಲ್ ಕ್ರಾಸ್ಸಿಂಗ್ (Animal Crossing)
ಈ ವೀಡಿಯೋ ಗೇಮ್ ಹಲವು ಸೀರೀಸ್‌ಗಳನ್ನು ಹೊಂದಿದೆ. ಈ ಗೇಮ್‌ನಿಂದ ಜನರೊಂದಿಗೆ ಹೇಗೆ ಉತ್ತಮವಾಗಿ ಇರಬಹುದು ಮತ್ತು ಹಣದ ಬಗ್ಗೆ ಹೆಚ್ಚು ಯೋಚಿಸುವುದನ್ನು ಬಿಟ್ಟು ಹೇಗೆ ಸಂತೋಷವಾಗಿರಬಹುದು ಎಂಬುದನ್ನು ಪಾಠ ಕಲಿಯಬಹುದು.

ಬ್ರೇಡ್ (Braid)
ಬ್ರೇಡ್ ವೀಡಿಯೋ ಗೇಮ್‌ನಿಂದ ಪರಸ್ಪರ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಜೀವನದ ಪಾಠವಾಗಿ ಕಲಿಯಬಹುದು.

ಸಿವಿಲೈಜೇಶನ್ (Civilization)
ಮಾನವನ ಸಮಗ್ರ ಜೀವನ ಪರಿಯನ್ನು ಈ ಗೇಮ್‌ನಲ್ಲಿ ನೋಡಬಹುದಾಗಿದೆ. ಅಲ್ಲದೇ ಶಿಲಾಯುಗದಿಂದ ಸ್ಪೇಸ್‌ಯುಗದ ವರೆಗೆ ಹೇಗೆ ಪ್ರೇರಣೆ ಹೊಂದಲಾಗಿದೆ ಎಂಬುದನ್ನು ನೋಡಬಹುದಾಗಿದೆ. ಈ ಗೇಮ್‌ನಿಂದ ಎಲ್ಲಾ ಜನರು ಹೇಗೆ ಸಂತೋಷವಾಗಿರಬೇಕು ಎಂದು ಚಿಂತಿಸುತ್ತಾರೆ ಎಂಬುದನ್ನು ತಿಳಿಯಬಹುದಾಗಿದೆ.

ಜರ್ನಿ (Journey)
ಸುಂದರವಾದ ವೀಕ್ಷಣೆ, ಭಾವಪೂರ್ಣ ಶೋಕಗಳ ಟೋನ್ ಹೊಂದಿರುವ ಅತ್ಯುತ್ತಮ ಅಡಿಮೆ ಅವಧಿಯ ಗೇಮ್. ಈ ಗೇಮ್ ಅನ್ನು ಆನ್‌ಲೈನ್ ಸಂಪರ್ಕದಿಂದ ಆಡಬಹುದು. ಈ ಗೇಮ್ ಆಡುವುದರಿಂದ ಜೀವನವು ಎಂದಿಗೂ ಪ್ರಯಾಣ ಬೆಳೆಸುತ್ತಿರುವ ಪ್ರವಾಸವಿದ್ದಂತೆ, ಗುರಿ ಸಿಗುವುದಿಲ್ಲಾ ಎಂಬುದನ್ನು ತಿಳಿಯಬಹುದಾಗಿದೆ.

ಲೈಫ್ ಇಸ್ ಸ್ಟ್ರೇಂಜ್
ಲೈಫ್ ಒಂದು ರೀತಿ ವಿಚಿತ್ರವಾದ ಪಯಣ ದಂತೆ ಈ ಗೇಮ್‌ನಲ್ಲಿ ಯುವತಿಯೊಬ್ಬಳು ಕಾಣಿಸಿಕೊಳ್ಳುತ್ತಾಳೆ. ಇದರಲ್ಲಿ ಜವಾಬ್ದಾರಿ, ಪ್ರೀತಿ, ಪರಿಣಾಮ, ಯೋಜನೆ ಎಲ್ಲವನ್ನೂ ತೋರಿಸಲಾಗುತ್ತದೆ. ಈ ಎಲ್ಲಾ ಅಂಶಗಳೊಂದಿಗಿದ್ದರೂ ಸಹ ನಾವು ಭೇಟಿ ಮಾಡಿದ ಎಲ್ಲರನ್ನು ಸಹ ರಕ್ಷಿಸಲು ನಮ್ಮಿಂದ ಆಗುವುದಿಲ್ಲಾ ಎಂಬುದನ್ನು ಇದರಲ್ಲಿ ತೋರಿಸಲಾಗುತ್ತದೆ.


Click it and Unblock the Notifications








