ಒನ್‌ಪ್ಲಸ್‌ನ ಈ ಫೋನ್ ಖರೀದಿಸಿದರೆ, 1,799ರೂ. ಬೆಲೆಯ ಇಯರ್‌ಬಡ್ಸ್ ಉಚಿತ!
ಹೊಸದಾಗಿ ಒನ್‌ಪ್ಲಸ್ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಅಮೆಜಾನ್‌ನಲ್ಲಿದೆ ಸಖತ್ ಗುಡ್‌ನ್ಯೂಸ್. ಏಕೆಂದರೆ, ಜನಪ್ರಿಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್, ಈಗ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆಯೋಜಿಸಿ ಟ್ರೆಂಡ್‌ನಲ್ಲಿ ಇದೆ. ಈ ಮಾರಾಟದಲ್ಲಿ ಒನ್‌ಪ್ಲಸ್ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿ ಪಡೆದಿದ್ದು, ಆ ಪೈಕಿ ಒನ್‌ಪ್ಲಸ್ ನಾರ್ಡ್ CE 3 ಖರೀದಿಸುವ ಗ್ರಾಹಕರಿಗೆ ಇಯರ್‌ಬಡ್ಸ್ ಉಚಿತವಾಗಿ ಲಭ್ಯ ಆಗಲಿದೆ.
ಹೌದು, ಅಮೆಜಾನ್ ತಾಣದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಒನ್‌ಪ್ಲಸ್ ನಾರ್ಡ್ CE 3 ಫೋನ್ ಆಕರ್ಷಕ ಡಿಸ್ಕೌಂಟ್ ಪಡೆದಿದ್ದು, 8GB RAM + 128GB ವೇರಿಯಂಟ್ ಫೋನ್ 28,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಉಚಿತವಾಗಿ 1,799ರೂ. ಮೌಲ್ಯದ ಇಯರ್‌ಬಡ್ ಖರೀದಿದಾರರಿಗೆ ಸಿಗಲಿದೆ. ಹಾಗಾದರೇ ಒನ್‌ಪ್ಲಸ್ ನಾರ್ಡ್ CE 3 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹಾಗೂ ಪ್ರೊಸೆಸರ್ ಫೀಚರ್ಸ್ ಹೀಗಿವೆ
ಒನ್‌ಪ್ಲಸ್ ನಾರ್ಡ್ CE 3 ಮೊಬೈಲ್ 1,080 x 2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಡಿಸ್‌ಪ್ಲೇಯ 120Hz ರಿಫ್ರೆಶ್ ರೇಟ್ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 782G SoC ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಅದರೊಂದಿಗೆ ಅಡ್ರಿನೋ 642L GPU ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ 12 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದೆ.
ಕ್ಯಾಮೆರಾ ಸೆನ್ಸಾರ್ ಆಯ್ಕೆ ಹೀಗಿವೆ
ಒನ್‌ಪ್ಲಸ್ ಸಂಸ್ಥೆಯ ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ. ಈ ಫೋನ್ ನೈಟ್‌ಸ್ಕೇಪ್ ಅಲ್ಟ್ರಾ, ನೈಟ್ ಪೋರ್ಟ್ರೇಟ್, ಒಐಎಸ್ ನಂತಹ ಕೆಲವು ಆಯ್ಕೆಗಳನ್ನು ಪಡೆದಿದೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ ಹೀಗಿದೆ
ಒನ್‌ಪ್ಲಸ್ ನಾರ್ಡ್ CE 3 ಮೊಬೈಲ್ 5,000 mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕ ವಾಗಿ 80w ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ವನ್ನು ಒಳಗೊಂಡಿದೆ. ಇದರೊಂದಿಗೆ ಅಂಡ್ರಾಯ್ಡ್ 13 ಓಎಸ್ ಸಫೋರ್ಟ್ ಒಳಗೊಂಡಿದ್ದು, ಜೊತೆಗೆ ಆಕ್ಸಿಜನ್ 13.1 ಸ್ಕೀನ್ ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಇತ್ತೀಚಿಗಿನ ಕನೆಕ್ಟಿವಿಟಿ ಸೌಲಭ್ಯಗಳು ಸೇರಿವೆ.
ಮೆಮೊರಿ ಹಾಗೂ ಲಭ್ಯತೆ
ಒನ್‌ಪ್ಲಸ್ ನಾರ್ಡ್ CE 3 ಎರಡು ವೇರಿಯಂಟ್‌ಗಳ ಆಯ್ಕೆ ಅನ್ನು ಪಡೆದಿದ್ದು, ಅವುಗಳು ಕ್ರಮವಾಗಿ 8 GB RAM + 128 GB ಮತ್ತು 12 GB RAM + 256 GB ಆಗಿವೆ. ಇನ್ನು ಈ ಫೋನ್ ಸದ್ಯ ಅಮೆಜಾನ್ ಇ ಕಾಮರ್ಸ್ ತಾಣವು ಆಯೋಜಿಸಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಭರ್ಜರಿ ಕೊಡುಗೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನ್ ಖರೀದಿ ಜೊತೆಗೆ ಉಚಿತವಾಗಿ 1,799ರೂ. ಮೌಲ್ಯದ ಇಯರ್‌ಬಡ್ ಖರೀದಿದಾರರಿಗೆ ಸಿಗಲಿದೆ.


Click it and Unblock the Notifications








