Home
ಸುದ್ದಿಜಾಲ

ಸಸ್ತಾ ಬೆಲೆಯ ಈ ಮೊಬೈಲ್‌ ಈಗ ಮತ್ತೇ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ!

ಪ್ರಮುಖ ಇ ಕಾಮರ್ಸ್‌ ಎನಿಸಿರುವ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಏನಾದರೊಂದು ಸ್ಪೆಷಲ್‌ ಮಾರಾಟ ಮೇಳ ಆಯೋಜಿಸುತ್ತಲೆ ಮುನ್ನಡೆದಿದೆ. ಸದ್ಯ ಬಿಗ್‌ ಸೇವಿಂಗ್‌ ಡೇಸ್‌ ಮಾರಾಟ ಮೇಳವನ್ನು ಶುರು ಮಾಡಿದೆ. ಈ ಸೇಲ್‌ನಲ್ಲಿ ರೆಡ್ಮಿ A3 (Redmi A3) ಮೊಬೈಲ್‌ ಅತ್ಯುತ್ತಮ ಡಿಸ್ಕೌಂಟ್‌ ಬೆಲೆಯಲ್ಲಿ ಸಖತ್ ಕಡಿತ ಕಂಡಿದೆ. ಹಾಗೆಯೇ ಈ ಎಂಟ್ರಿ ಲೆವೆಲ್‌ ಮೊಬೈಲ್‌ಮೀಡಿಯಾ ಟೆಕ್ ಹಿಲಿಯೊ G36 SoC ಪಡೆದಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ನಲ್ಲಿ ರೆಡ್ಮಿ A3 ಮೊಬೈಲ್‌ ಶೇ. 33% ರಷ್ಟು ನೇರ ರಿಯಾಯಿತಿ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಗ್ರಾಹಕರು ಡಿಸ್ಕೌಂಟ್‌ನಲ್ಲಿ ಈಗ 7,988ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಇದರ ಜೊತೆಗೆ ವೆಬ್‌ಸೈಟ್‌ನಲ್ಲಿ ಸಿಗುವ ಇತರೆ ಆಫರ್‌ ಸಹ ಪಡೆದುಕೊಂಡರೆ, ಇನ್ನಷ್ಟು ಆಫರ್‌ ಪಡೆಯಲು ಅವಕಾಶ ಇದೆ.

ಸಸ್ತಾ ಬೆಲೆಯ ಈ ಮೊಬೈಲ್‌ ಈಗ ಮತ್ತೇ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ!

ರೆಡ್ಮಿ A3 ಫೋನ್‌ ಅನ್ನು ಗ್ರಾಹಕರು ಬ್ಲೂ, ಬ್ಲ್ಯಾಕ್‌ ಹಾಗೂ ಗ್ರೀನ್‌ ಕಲರ್‌ ಆಯ್ಕೆಯಲ್ಲಿ ಖರೀದಿಸಬಹುದು. ಇನ್ನು ಈ ಫೋನ್‌ 4 GB + 64GB ಹಾಗೂ 6GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಇದರೊಂದಿಗೆ 8 ಮೆಗಾಪಿಕ್ಸಲ್‌ ಕ್ಯಾಮೆರಾ ಸೆನ್ಸಾರ್‌ ಪಡೆದಿದೆ. ಇನ್ನುಳಿದಂತೆ ರೆಡ್ಮಿ A3 ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ A3 ಮೊಬೈಲ್‌ ಫೀಚರ್ಸ್‌

ರೆಡ್ಮಿ A3 ಫೋನ್‌ 6.71 ಇಂಚಿನ ಹೆಚ್‌ಡಿ ಪ್ಲಸ್‌ ಐಪಿಎಸ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಇನ್ನು ಡಿಸ್‌ಪ್ಲೇ IPS LCD ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಆಗಿದ್ದು, 90Hz ರಿಫ್ರೆಶ್ ರೇಟ್ ಸಪೋರ್ಟ್‌ ಪಡೆದಿದೆ. ಇದಲ್ಲದೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ.

ರೆಡ್ಮಿ A3 ಫೋನ್‌ 2.2 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ) ಬೆಂಬಲ ನೊಂದಿಗೆ ಕಾರ್ಯ ಮಾಡಲಿದೆ. ಹಾಗೆಯೇ 3GB RAM + 64GB, 4GB RAM + 128GB ಹಾಗೂ 6GB RAM + 128GB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗೆಯೇ ಮೈಕ್ರೊ ಎಸ್‌ಡಿ ಮೂಲಕ 1TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಆಯ್ಕೆ ಇದೆ.

ರೆಡ್ಮಿ A3 ಫೋನ್‌ ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, 0.08ಎಂಪಿ ದ್ವಿತೀಯ ಕ್ಯಾಮೆರಾ ಸೆನ್ಸಾರ್‌ ಸಹ ಪಡೆದಿದೆ. ಅಲ್ಲದೇ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಇದರೊಂದಿಗೆ ಹಿಂಭಾಗದ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಷ್‌ ಅನ್ನು ಸಹ ನೀಡಲಾಗಿದೆ.

ರೆಡ್ಮಿ A3 ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವುದು. ಇನ್ನು ಕನೆಕ್ಟಿವಿಟಿ ಆಯ್ಕೆಗಳು ಡ್ಯುಯಲ್ 4G VoLTE, Wi-Fi 802.11 b/g/n, ಬ್ಲೂಟೂತ್ 5.0, GPS + GLONASS, USB ಟೈಪ್- C ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ 3.5mm ಆಡಿಯೋ ಜಾಕ್, FM ರೇಡಿಯೋ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

Best Mobiles in India

English summary
Greatest Price Drop on Redmi A3 on Flipkart Big Saving Days. check out offers, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+