Samsung: ಸ್ಯಾಮ್‌ಸಂಗ್‌ನ ಈ ಸರಣಿ ಫೋನ್‌ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
ಸ್ಯಾಮ್‌ಸಂಗ್ (Samsung) ಫೋನ್ ವಿವಿಧ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುತ್ತವೆ. ಅದರಲ್ಲೂ ಭದ್ರತೆ ಹಾಗೂ ಉತ್ತಮ ಫೀಚರ್ಸ್ ಆಯ್ಕೆ ಇರುವ ಫೋನ್‌ಗಳಲ್ಲಿ ಈ ಫೋನ್‌ಗಳು ಅಗ್ರಸ್ಥಾನದಲ್ಲಿದ್ದು, ಆದರೀಗ ಈ ಫೋನ್ ಬಗ್ಗೆ ಬೇಸರದ ವರದಿ ಹೊರಬಿದ್ದಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿಯ (Samsung Galaxy S21 series) ಫೋನ್‌ಗಳು ಗ್ರೀನ್ ಲೈನ್ ಸಮಸ್ಯೆಯನ್ನು (Green line problem) ಎದುರಿಸುತ್ತಿದ್ದು, ಈ ಸಂಬಂಧ ವರದಿ ಮಾಡಲಾಗಿದೆ. ಈ ಮೂಲಕ ಬಳಕೆದಾರರಿಗೆ ಕೆಟ್ಟ ಅನುಭವ ಆಗುತ್ತಿದೆಯಂತೆ. ಆದರೂ ಸಹ ಸ್ಯಾಮ್‌ಸಂಗ್ ಮಾತ್ರ ಮುಕ್ತವಾಗಿ ಇದು ನಮ್ಮದೇ ಸಮಸ್ಯೆ ಎಂದು ಮಾತ್ರ ಒಪ್ಪಿಕೊಂಡಿಲ್ಲ. ಹಾಗಿದ್ರೆ, ಈ ಸರಣಿಯ ಯಾವೆಲ್ಲಾ ಫೋನ್‌ಗಳಲ್ಲಿ ಕಂಡುಬಂದಿದೆ?, ಸ್ಯಾಮ್‌ಸಂಗ್‌ನ ಮುಂದಿನ ನಿರ್ಧಾರ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿಯಲ್ಲಿ ಸಮಸ್ಯೆ: ಕೆಲವು ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ಮತ್ತು ಗ್ಯಾಲಕ್ಸಿ S21 FE ಡಿಸ್‌ಪ್ಲೇಗಳು ಸಾಫ್ಟ್‌ವೇರ್ ಅಪ್‌ಡೇಟ್ (Software update) ನಂತರ ಲಂಬವಾದ ಗ್ರೀನ್ ಲೈನ್ ಅನ್ನು ತೋರಿಸುತ್ತಿವೆ ಎಂದು ತಿಳಿದುಬಂದಿದೆ. ದೋಷಯುಕ್ತ ಆಂತರಿಕ ಘಟಕವು ಫೋನ್ ಡಿಸ್‌ಪ್ಲೇ ಮೇಲೆ ಗ್ರೀನ್ ಲೈನ್ ಸಮಸ್ಯೆಗೆ ಕಾರಣ ಎಂದು ತಿಳಿದುಬಂದಿದೆ.
ಬಳಕೆದಾರರಿಂದ ದೂರು: ಹಲವಾರು ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿಯ ಬಳಕೆದಾರರು ತಮ್ಮ ಫೋನ್‌ಗಳಲ್ಲಿನ ಗ್ರೀನ್ ಲೈನ್ ಸಮಸ್ಯೆಯ ಬಗ್ಗೆ ದೂರು ನೀಡುತ್ತಿದ್ದಾರೆ. ಗ್ಯಾಲಕ್ಸಿ S21 ಅಲ್ಟ್ರಾ ಮತ್ತು ಗ್ಯಾಲಕ್ಸಿ S21 FE ಬಳಕೆದಾರರ ಮೇಲೆ ಮಾತ್ರ ಇದು ಪರಿಣಾಮ ಬೀರಿದೆ. ಇನ್ನೂ ಕೆಲವರು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿ ತಮಗೆ ಆಗುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ. ಇವರೆಲ್ಲರೂ ಸಹ ಸಾಫ್ಟ್‌ವೇರ್ ನವೀಕರಣ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ಮಾಡಿದ್ದಾರೆ.
ಇದರಲ್ಲಿ ಓರ್ವ ಬಳಕೆದಾರರು ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ದಲ್ಲಿ ಏಪ್ರಿಲ್ ಭದ್ರತಾ ಅಪ್‌ಡೇಟ್‌ಗೆ ಪ್ಯಾಚ್ ಮಾಡಿದ ನಂತರ ಗ್ರೀನ್ ಲೈನ್ ಕಾಣಿಸಿಕೊಂಡವು. ಇದು ಫೋನ್‌ನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರದಿದ್ದರೂ ಸಹ ನೋಡಲು ಕಿರಿಕಿರಿಯುಂಟುಮಾಡುತ್ತದೆ ಎಂದು ವಿವರಿಸಿದ್ದಾರೆ.

ಈ ಸಮಸ್ಯೆಗೆ ನಿಖರ ಕಾರಣ ಏನು?: ಇನ್ನು ಈ ಸಮಸ್ಯೆಯು ಕೇವಲ ಸ್ಯಾಮ್‌ಸಂಗ್ ಫೋನ್‌ಗಳಿಗೆ ಸೀಮಿತವಾಗಿಲ್ಲ. ಏಕೆಂದರೆ ಈ ಸಮಸ್ಯೆಯನ್ನು ಎದುರಿಸುತ್ತಿರುವ ಇತರ ಬ್ರ್ಯಾಂಡ್‌ಗಳ ಬಗ್ಗೆ ನೀವು ಕೇಳಿರಬಹುದು. ಸಾಫ್ಟ್‌ವೇರ್ ನವೀಕರಣದ ನಂತರ ಇದು ಸಂಭವಿಸುತ್ತದೆ ಎಂದು ತಿಳಿದಿದ್ದರೂ, ಇದು ಸಂಪೂರ್ಣವಾಗಿ ಸಾಫ್ಟ್‌ವೇರ್ ದೋಷವೆಂದು ಕಂಡುಬರುತ್ತಿಲ್ಲ. ಸಾಫ್ಟ್‌ವೇರ್‌ನಿಂದಾಗಿಯೇ ಈ ಸಮಸ್ಯೆ ಉಂಟಾಗಿದೆ ಎಂದರೆ ಅದನ್ನು ಸುಲಭವಾಗಿ ಪರಿಹರಿಸಬಹುದಾಗಿದೆ.
ಅದಾಗ್ಯೂ ಕೆಲವು ವರದಿಗಳ ಪ್ರಕಾರ ಈ ಗ್ರೀನ್ ಲೈನ್ ಸಮಸ್ಯೆಯು ಹಾರ್ಡ್‌ವೇರ್ ದೋಷದಿಂದ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಇದು ಸಡಿಲವಾದ, ಹಾನಿಗೊಳಗಾದ ಅಥವಾ ದೋಷಯುಕ್ತ ಡಿಸ್‌ಪ್ಲೇ ಕನೆಕ್ಟರ್‌ಗಳು ಅಥವಾ ಫ್ಲೆಕ್ಸ್ ಕೇಬಲ್‌ಗಳೊಂದಿಗೆ ಅಮೋಲೆಡ್ ಡಿಸ್‌ಪ್ಲೇ ಇರುವ ಫೋನ್‌ಗಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಈ ಆಂತರಿಕ ಘಟಕಗಳು ಮದರ್‌ಬೋರ್ಡ್ ಮತ್ತು ಡಿಸ್‌ಪ್ಲೇಯನ್ನು ಸಂಪರ್ಕಿಸುವ ಕೆಲಸ ಮಾಡುತ್ತದೆ.
ಸ್ಯಾಮ್‌ಸಂಗ್ ಹೇಳಿಕೆ ಏನು?: ಮೊದಲೇ ತಿಳಿಸಿದಂತೆ ಸ್ಯಾಮ್‌ಸಂಗ್ ಈ ಸಮಸ್ಯೆಯನ್ನು ಈ ಕ್ಷಣದ ವರೆಗೆ ಒಪ್ಪಿಕೊಂಡಿಲ್ಲ. ಅದಾಗ್ಯೂ ಈ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅದರ ಮದರ್‌ಬೋರ್ಡ್ ಅನ್ನು ಬದಲಾಯಿಸಬೇಕಾಗಬಹುದು. ಅದಾಗ್ಯೂ ನೀವು ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಸ್ಯಾಮ್‌ಸಂಗ್‌ನ ಗ್ರಾಹಕ ಸೇವಾ ಅಧಿಕಾರಿಗಳನ್ನು ಸಂಪರ್ಕಿಸಿ. ಯಾಕೆಂದರೆ ಫೋನ್ ಮಾದರಿ ಮತ್ತು ನಿಮ್ಮ ನಿರ್ದಿಷ್ಟ ಸನ್ನಿವೇಶವನ್ನು ಅವಲಂಬಿಸಿ ಕಾರಣ ಮತ್ತು ಪರಿಹಾರವು ಭಿನ್ನವಾಗಿರಬಹುದು.


Click it and Unblock the Notifications








