ವಾಟ್ಸಪ್‌ನಲ್ಲಿ ಆರ್ಡರ್ ಮಾಡಿದ್ರೆ, ದಿನಸಿ ನಿಮ್ಮ ಮನೆ ಬಾಗಿಲಿಗೆ ತಲುಪುತ್ತೆ!
ಕೊರೊನಾ ವೈರಸ್ ದಿನೇ ದಿನೇ ವ್ಯಾಪಕವಾಗುತ್ತಿದ್ದು, ತನ್ನ ರಣಕೇಕೆಯ ಅಟ್ಟಹಾಸ ಮುಂದುವರಿಸಿದೆ. ದೇಶದಲ್ಲಿ ಕೊರೊನಾ ವ್ಯಾಪಿಸುವುದನ್ನು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜಾರಿಯನ್ನು ಮೇ.3ರ ವರೆಗೂ ವಿಸ್ತರಿಸಿದೆ. ಈ ಅವಧಿಯಲ್ಲಿ ಜನಸಾಮಾನ್ಯರಿಗೆ ದಿನಸಿ ತರಲು ಮನೆಯಿಂದ ಹೊರಬರುವುದು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ದಿನಸಿ ಸಾಮಗ್ರಿಗಳನ್ನು ಮನೆ ಬಾಗಲಿಗೆ ತಲುಪಿಸುವ ವ್ಯವಸ್ಥೆಯನ್ನು ಜಾರಿ ಮಾಡಿದೆ.

ಹೌದು, ಜನರು ಇನ್ನು ವಾಟ್ಸಪ್ ಮೂಲಕ ತಮಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಆರ್ಡರ್ ಮಾಡುವ ಮೂಲಕ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಹೋಮ್ ಡೆಲಿವರಿ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಲಾಕ್‌ಡೌನ್ ಮುಗಿಯುವವರೆಗೂ ಸಾರ್ವಜನಿಕರು ಅಗತ್ಯ ಸಾಮಗ್ರಿ ತರಲು ಮನೆಯಿಂದ ಹೊರಹೋಗುವ ಸಂದರ್ಭಗಳು ಕಡಿಮೆಯಾಗಲಿವೆ.

ಹೋಮ್ ಡೆಲಿವರಿ ಸಹಾಯವಾಣಿ
ಸರ್ಕಾರ ದಿನಸಿಯನ್ನು ಮನೆ ಬಾಗಿಲಿಗೆ ತಲುಪಿಸಿಲು ಹೋಮ್ ಡೆಲಿವರಿ ಸಹಾಯವಾಣಿ ಬಿಡುಗಡೆ ಮಾಡಿದೆ. ಸಹಾಯವಾಣಿಯ ನಂಬರ್ 08061914960 ಆಗಿದ್ದು, ಸಾರ್ವಜನಿಕರು ತಮಗೆ ಬೇಕಾದ ಆಹಾರ/ದಿನಸಿ ಸಾಮಗ್ರಿಗಳ ಲಿಸ್ಟ್ ಮಾಡಿ ಈ ನಂಬರ್‌ಗೆ ವಾಟ್ಸಪ್ ಮಾಡಿದರೆ. ಸಾಮಾಗ್ರಿಗಳು ಮನೆ ಬಾಗಿಲಿಗೆ ಲಭ್ಯವಾಗಲಿವೆ.

ಖಾಸಗಿ ಏಜೆನ್ಸಿ ಸಾಥ್
ದಿನಸಿಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಗೆ ಕೆಲವು ಖಾಸಗಿ ಏಜೆನ್ಸಿ ಜೊತೆಗೆ ಸರ್ಕಾರ ಕೈಜೋಡಿಸಿದೆ. ಹಾಗೂ ಈ ಸೇವೆಗಾಗಿ ಸುಮಾರು 5 ಸಾವಿರ ಡೆಲಿವರಿ ಏಜೆಂಟ್‌ಗಳನ್ನು ನೇಮಿಸಲಾಗಿದೆ. ಹೀಗಾಗಿ ಗ್ರಾಹಕರ ಮನೆಯಿಂದ ದಿನಸಿ ಬೇಗ ತಲುಪಿಸುವ ವ್ಯವಸ್ಥೆ ಆಗಿದೆ. ಈ ಸೇವೆ ಬೆಂಗಳೂರಿನ ವ್ಯಾಪ್ತಿಯಲ್ಲಿ ಲಭ್ಯವಾಗಲಿದೆ.

ಅಗತ್ಯ ಸಾಮಗ್ರಿಗಳನ್ನು ಆರ್ಡರ್ ಮಾಡಲು ಈ ಹಂತಗಳನ್ನು ಅನುಸರಿಸಿರಿ
* ನಿಮ್ಮ ಮೊಬೈಲ್‌ನಲ್ಲಿ 08061914960 ನಂಬರ್ ಸೇವೆ ಮಾಡಿ
* ನಂತರ ವಾಟ್ಸಪ್ ಮೆಸೇಜ್ ಮೂಲಕ Hi ಎಂದು ಕಳುಹಿಸಿ
* ನಿಮ್ಮ ಲೊಕೇಷನ್ /ವಿಳಾಸ ಶೇರ್ ಮಾಡಿ
* ಅದರಲ್ಲಿ ಎರಡು ರೀತಿ ವಿಂಗಡಿಸಿದ್ದಾರೆ. ದಿನಬಳಕೆ ವಸ್ತುಗಳು ಹಾಗೂ ತರಕಾರಿಗಳು-ಟೈಪ್ A ಅಥವಾ ಔಷಧ B.

* ಯಾವ ವಸ್ತುಗಳು ನಿಮಗೆ ಬೇಕಾಗಿವೆ ಎಂದು ಬರೆದು ಆಹಾರ ಸಾಮಗ್ರಿಗಳ ಲಿಸ್ಟ್ ಮಾಡಿ ಫೋಟೊ ತೆಗೆದು ಸೆಂಡ್ ಮಾಡಿ.
* ಮೆಸೆಜ್ ಕಳುಹಿಸಿದ ಬಳಿಕ ನಿಮ್ಮ ಆರ್ಡರ್ ಪ್ಲೇಸ್ ಆಗಿದೆ ಎಂದು ಮೆಸೆಜ್ ಮರಳಿ ಬರುತ್ತದೆ.
* ಟ್ರಾನ್ಸ್ಯಾಕ್ಷನ್ ಐಡಿಯೊಂದಿಗೆ ಕನ್ಫರ್ಮೇಷನ್ ಮೆಸೆಜ್ ಲಭ್ಯವಾಗಲಿದೆ.
* ಆ ನಂತರ ನೀವು ಹೇಳಿರುವ ಸ್ಥಳಕ್ಕೆ ಬಂದು ವಸ್ತುಗಳನ್ನು ಒದಗಿಸುತ್ತಾರೆ.
* ವಸ್ತುಗಳ ಬೆಲೆಯ ಜೊತೆಗೆ ಡೆಲಿವರಿ ಚಾರ್ಜ್ 10 ರೂ ಶುಲ್ಕ ಸೇರಿಸಿ ನೀಡಬೇಕಾಗುತ್ತದೆ.


Click it and Unblock the Notifications








