Subscribe to Gizbot

ಚೀನಾದಲ್ಲಿ ಆಪಲ್‌ ವಿರುದ್ದ ಐಫೋನ್‌ ನೌಕರರ ಪ್ರತಿಭಟನೆ

Posted By:

ಚೀನಾ ಆಪಲ್‌ ಫ್ಯಾಕ್ಟರಿ ನೌಕರರು ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ದೇಹದ ಆರೋಗ್ಯದ ಮೇಲೆ ಹೆಚ್ಚು ಹಾನಿಯಾಗಬಲ್ಲ ರಾಸಾಯನಿಕ ವಸ್ತುಗಳನ್ನು ಬಳಸಿ ನಿರ್ಮಾಣವಾಗುತ್ತಿರುವ ಐಫೋನ್‌‌ ವಿರೋಧಿಸಿ ಆನ್‌ಲೈನ್‌ನಲ್ಲಿ ಪಿಟಿಷನ್‌‌ ಸಲ್ಲಿಸಿದ್ದಾರೆ.

ಬೆಂಜೀನ್ ಮತ್ತು ಎನ್‌‌-ಹೆಕ್ಸೇನ್ ರಾಸಾಯನಿಕಗಳನ್ನು ಐಫೋನ್‌ಗಳಲ್ಲಿ‌ ಬಳಸದಂತೆ ಆಪಲ್‌ ವಿರುದ್ದ ನೌಕರರು ನಿನ್ನೆಯಿಂದ ಪ್ರತಿಭಟನೆ ಆರಂಭಿಸಿದ್ದು, ಆಪಲ್‌ನ ಬಗ್ಗೆ ಯಾವಾಗಲೂ ಕಿಡಿ ಕಾರುತ್ತಿರುವ ಚೀನಾ ಲೆಬರ್‌ ವಾಚ್‌‌‌‌,ಗ್ರೀನ್‌ ಅಮೆರಿಕ ಸಂಸ್ಥೆ ನೌಕರರ ಪ್ರತಿಭಟನೆಗೆ ಬೆಂಬಲ ನೀಡಿದೆ.

ಐಫೋನ್‌ ತಯಾರಿಸಲು ಬೆಂಜೀನ್ ಬಳಸುತ್ತಿದ್ದು, ರಕ್ತ ಕ್ಯಾನ್ಸರ್‌ಗೆ(ಲ್ಯುಕೇಮಿಯಾ) ಕಾರಣವಾಗಬಲ್ಲ ರಾಸಾಯನಿಕ ಇದಾಗಿದ್ದು,ಇದನ್ನುಸರಿಯಾಗಿ ನಿರ್ವ‌ಹಿಸದಿದ್ದಲ್ಲಿ ವ್ಯಕ್ತಿ ರಕ್ತ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಬೆಂಜೀನ್‌ ಬಳಕೆಯನ್ನು ನೌಕರರು ವಿರೋಧಿಸುತ್ತಿದ್ದಾರೆ.

ಬೆಂಜಿನ್‌ ಜೊತೆಗೆ ನರ ಹಾನಿಗೆ ಕಾರಣವಾಗುವ ಎನ್‌‌-ಹೆಕ್ಸೇನ್ ಬಳಕೆಯನ್ನು ವಿರೋಧಿಸಿ ಐಫೋನ್‌ ಫ್ಯಾಕ್ಟರಿಯ‌ ನೌಕರರು ಪ್ರತಿಭಟನೆ ನಡೆಸಿ ಆಪಲ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಆಪಲ್‌ ಪ್ರತಿವರ್ಷ‌ ತನ್ನ ಎಲ್ಲಾ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ಅಧ್ಯಯನ ನಡೆಸುತ್ತದೆ.ಫ್ಯಾಕ್ಟರಿಯ ನೈಜ ಚಿತ್ರಣವನ್ನು ಮರೆಮಾಚಿ ಅಂತಿಮವಾಗಿ ಆಪಲ್‌ ವರದಿ ತಯಾರಾಗುತ್ತದೆ. ಸರಿಯಾದ ತರಬೇತಿ ನೀಡದೇ ಅಪಾಯಕಾರಿ ವಸ್ತುಗಳೊಂದಿಗೆ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಐಫೋನ್‌ ಫ್ಯಾಕ್ಟರಿ ಉದ್ಯೋಗಿಗಳು ಆಪಲ್‌ ವಿರುದ್ದ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಚೀನಾದ ಐಫೋನ್ ಫ್ಯಾಕ್ಟರಿ ಹೇಗಿದೆ ನೋಡಿದ್ದೀರಾ?

<center><iframe width="100%" height="360" src="//www.youtube.com/embed/ns-kJ5Podjw?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot