ಮೊಬೈಲ್ ಬಳಕೆಯಿಂದ ತಲೆಮೇಲೆ ಬೆಳೆಯುತ್ತಿದೆ ಕೊಂಬು!!

|

ಮೊಬೈಲ್ ತಂತ್ರಜ್ಞಾನವು ನಾವು ಬದುಕುವ ವಿಧಾನವನ್ನು ಮಾರ್ಪಡಿಸಿದೆ. ಓದುವುದು, ಕೆಲಸ ಮಾಡುವುದು, ಸಂವಹನ ಮಾಡುವುದು, ಶಾಪಿಂಗ್ ಇತ್ಯಾದಿಗಳೆಲ್ಲವನ್ನೂ ಈಗ ಮೊಬೈಲ್ ನೋಡಿಕೊಳ್ಳುತ್ತಿದೆ. ಹಾಗಾಗಿ, ನಮ್ಮ ದೇಹ ರಚನೆ ಕೂಡ ಮೊಬೈಲ್‌ಗೆ ಒಗ್ಗಿಕೊಳ್ಳುತ್ತಿದೆ. ಹೌದು, ನಾವು ಇನ್ನೂ ಗ್ರಹಿಸದ ಸಂಗತಿಯೆಂದರೆ, ನಮ್ಮ ಮುಂದೆ ಇರುವ ಸಣ್ಣ ಯಂತ್ರಗಳು ನಮ್ಮ ಅಸ್ಥಿಪಂಜರಗಳನ್ನು ಮರುರೂಪಿಸುತ್ತಿವೆ ಎಂಬ ಆತಂಕಕಾರಿ ಮತ್ತು ವಿಶೇಷ ಮಾಹಿತಿಯನ್ನು ಸಂಶೋಧಕರು ಹೊರಹಾಕಿದ್ದಾರೆ.

ಮೊಬೈಲ್ ಬಳಕೆಯಿಂದ ತಲೆಮೇಲೆ ಬೆಳೆಯುತ್ತಿದೆ ಕೊಂಬು!!

ಇತ್ತೀಚೆಗೆ ಆಸ್ಟ್ರೇಲಿಯಾದ ಕ್ವೀನ್​ಲ್ಯಾಂಡ್​ನ ಸನ್​ಶೈನ್​ ಕೋಸ್ಟ್​ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದಾಗ ಇಂತಹದೊಂದು ವಿಷಯ ಬೆಳಕಿಗೆ ಬಂದಿದ್ದು, ಯುವಕರು ತಮ್ಮ ತಲೆಬುರುಡೆಯ ಹಿಂಭಾಗದಲ್ಲಿ ಕೊಂಬಿನಂತಹ ಹೊಸ ಅಂಗ ಬೆಳೆಯುತ್ತಿದೆ ಎಂದು ತಿಳಿಸಿದ್ದಾರೆ. ಅಧ್ಯಯನ ಹೇಳುವ ಪ್ರಕಾರ, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಹ್ಯಾಂಡ್ಹೆಲ್ಡ್ ಸಾಧನಗಳು ಮಾನವ ರೂಪವನ್ನು ನಿಯಂತ್ರಿಸುತ್ತಿವೆ. ಇದು ಇತ್ತೀಚಿಗೆ ಹೆಚ್ಚು ಕಂಡುಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕಳೆದ ವರ್ಷ ಈ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, 18-86 ವರ್ಷದ 1,200 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರಲ್ಲಿ ಶೇ. 33 ಜನರಿಗೆ ಅಸ್ಥಿಪಂಜರದ ರೂಪಾಂತರವಾಗಿ ತಲೆಯ ಹಿಂಭಾಗದಲ್ಲಿ ಕೋಡು ಬೆಳೆದಿರುವ ವಿಚಾರ ತಿಳಿದುಬಂದಿದೆ. ಈ ಕೋಡು ಬೆಳೆಯಲು ಮೊಬೈಲ್​ ಬಳಕೆ ಅಧಿಕವಾಗಿದ್ದೆ ಕಾರಣ ಎನ್ನಲಾಗಿದ್ದು, ಚಿಕ್ಕ ವಯಸ್ಸಿನಿಂದಲೂ ಮೊಬೈಲ್​ ಬಳಕೆ ಮಾಡುತ್ತಿದ್ದರೆ ಈ ಬದಲಾವಣೆ ಕಂಡುಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಮೊಬೈಲ್ ಬಳಕೆಯಿಂದ ತಲೆಮೇಲೆ ಬೆಳೆಯುತ್ತಿದೆ ಕೊಂಬು!!

ಇಂದಿನ ಯುವಜನತೆ ಮೊಬೈಲ್ ಸೇರಿದಂತೆ ಗ್ಯಾಜೆಟ್‌ಗಳನ್ನು ​ಸದಾ ಹಿಡಿದಿರುತ್ತಾರೆ. ಮೊಬೈಲ್​ ನೋಡಲು ಕತ್ತನ್ನು ಕೆಳಮುಖ ಮಾಡಿಕೊಳ್ಳಬೇಕು. ಇದರಿಂದ ಬೆನ್ನು ಮೂಳೆಯ ಬದಲಾಗಿ ತಲೆ ಹಿಂಭಾಗದಲ್ಲಿರುವ ಸ್ನಾಯುವಿಗೆ ಭಾರ ವರ್ಗಾವಣೆ ಆಗುತ್ತದೆ. ಹಾಗಾಗಿ, ಮಾನವನ ತಲೆಬುರುಡೆಯಿಂದ ಕುತ್ತಿಗೆಯ ನಡುವೆ ನಿಧಾನವಾಗಿ ಮೂಳೆ ಆಕಾರದ ಅಂಗ ಬೆಳೆದುಕೊಳ್ಳುತ್ತದೆ ಎಂದು ಅಧ್ಯಯನ ಹೇಳಿದೆ. ಈ ಕೋಡು ಸುಮಾರು 3-5 ಮಿಲಿಮೀಟರ್​ವರೆಗೆ ಬೆಳೆಯಲಿದೆ ಎಂದು ತಿಳಿಸಿದೆ.

ಓದಿರಿ: 'ಕ್ರೋಮ್' ಬಳಕೆದಾರರಿಗೆ ಬಿಗ್ ಶಾಕ್ ನೀಡಿದ 'ಗೂಗಲ್'!

ಮೊಬೈಲ್ ಅಥವಾ ಇತರೆ ಹ್ಯಾಂಡೆಲ್ಡ್ ಪರದೆಗಳಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಮ್ಮ ತಲೆಯನ್ನು ಮುಂದಕ್ಕೆ ಬಾಗಿಸಬೇಕಾಗುತ್ತದೆ. ಇದರಿಂದ ಕಿರಿಯ ವಯಸ್ಕರಲ್ಲಿ ಮೂಳೆ ಬೆಳವಣಿಗೆಯು ಬದಲಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಬಳಕೆಯು ದೇಹದ ಭಂಗಿಯನ್ನು ಬದಲಿಸುವಂತೆ ಸೂಚಿಸುತ್ತದೆ. ಈ ಕೋಡು ಒಂದು ದಿನ ಅಥವಾ ಒಂದು ವರ್ಷದಲ್ಲಿ ಬೆಳೆಯುವಂಥದ್ದಲ್ಲ. ಇದಕ್ಕೆ ಅನೇಕ ವರ್ಷಗಳೇ ಹಿಡಿಯುತ್ತವೆ ಎಂದು ಅಧ್ಯಯನಕಾರರು. ತಿಳಿಸಿದ್ದಾರೆ.

Best Mobiles in India

English summary
The researchers said their discovery marks the first documentation of a physiological or skeletal adaptation to the penetration of advanced technology into everyday life. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X