'ಕ್ರೋಮ್' ಬಳಕೆದಾರರಿಗೆ ಬಿಗ್ ಶಾಕ್ ನೀಡಿದ 'ಗೂಗಲ್'!

|

ಆಡ್‌ ಬ್ಲಾಕರ್ ಇದ್ದರೆ ಸಾಕು ಯಾವುದೇ ವೆಬ್‌ಸೈಟ್‌ ಜಾಹೀರಾತುಗಳನ್ನು ಬ್ಲಾಕ್‌ ಮಾಡಿ, ಕಿರಿಕಿರಿ ಮತ್ತು ಡೇಟಾ ವ್ಯಯವಾಗುವುದನ್ನು ತಪ್ಪಿಸಬಹುದು ಎಂಬ ಖುಷಿಯಲ್ಲಿದ್ದರೆ ಬಿಟ್ಟುಬಿಡಿ. ಏಕೆಂದರೆ, ಇನ್ಮುಂದೆ ಕ್ರೋಮ್‌ ಬ್ರೌಸರ್‌ನಲ್ಲಿ ಈ ಆಡ್‌ ಬ್ಲಾಕರ್ ಆಯ್ಕೆ ಎಲ್ಲರಿಗೂ ಸಿಗುವುದಿಲ್ಲ. ಹಣ ಪಾವತಿಸುವ ಕೆಲವೇ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ ಎಂದು ಗೂಗಲ್ ಹೇಳಿದೆ.

'ಕ್ರೋಮ್' ಬಳಕೆದಾರರಿಗೆ ಬಿಗ್ ಶಾಕ್ ನೀಡಿದ 'ಗೂಗಲ್'!

ಹೌದು, ತನ್ನ ಜಾಹೀರಾತು ವರಮಾನ ಹೆಚ್ಚಿಸಿಕೊಳ್ಳಲು ಗೂಗಲ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕ್ರೋಮ್‌ ಬ್ರೌಸರ್‌ನಲ್ಲಿ ಇರುವ ಆಡ್‌ ಬ್ಲಾಕರ್ ಎಕ್ಸ್‌ಟೆನ್ಶನ್ ಅನ್ನು ಸಾಮಾನ್ಯ ಬಳಕೆದಾರರಿಗೆ ನೀಡುವುದಿಲ್ಲ ಎಂದು ತಿಳಿಸಿದೆ. ಯಾರು ದುಡ್ಡು ಕೊಟ್ಟು ಸೇವೆಗಳನ್ನು ಪಡೆಯುತ್ತಾರೋ ಅವರಿಗೆ ಮಾತ್ರವೇ ಆಡ್‌ಗಳನ್ನು ಬ್ಲಾಕ್‌ ಮಾಡುವ ಆಯ್ಕೆ ಇನ್ನು ಲಭ್ಯವಾಗಲಿದೆ.

ಗೂಗಲ್‌ ಹೀಗೆ ಹೇಳುತ್ತಿದ್ದಂತೆಯೇ ಇದು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಗೂಗಲ್‌ನ ಈ ಕ್ರಮ ಸರಿ ಇಲ್ಲ ಎಂದು ತಂತ್ರಜ್ಞಾನ ಲೋಕ ಅಸಮಾಧಾನ ವ್ಯಕ್ತಪಡಿಸಿದೆ. ಹಾಗಾದರೆ, ಆಡ್‌ ಬ್ಲಾಕರ್ ಎಕ್ಸ್‌ಟೆನ್ಶನ್ ಅನ್ನು ಸಾಮಾನ್ಯ ಬಳಕೆದಾರರಿಗೆ ನೀಡುವುದಿಲ್ಲ ಎಂದು ಗೂಗಲ್ ಹೇಳಿದ್ದೇಕೆ?, ಇದರಿಂದ ಆಗಬಹುದಾದ ಪರಿಣಾಮಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಆಡ್‌ ಬ್ಲಾಕರ್ ಎಕ್ಸ್‌ಟೆನ್ಶನ್?

ಏನಿದು ಆಡ್‌ ಬ್ಲಾಕರ್ ಎಕ್ಸ್‌ಟೆನ್ಶನ್?

ಕ್ರೋಮ್ ಬಳಕೆದಾರರು ಯಾವುದೇ ವೆಬ್‌ಸೈಟ್‌ನ ಪುಟ ತೆರೆದಾಗಲೂ ಲೆಕ್ಕವಿಲ್ಲದಷ್ಟು ಜಾಹೀರಾತುಗಳು ಕಾಣಿಸುತ್ತವೆ. ವೆಬ್‌ಸೈಟ್‌ನಲ್ಲಿ ಲೋಡ್‌ ಆಗುವುದರಲ್ಲಿ ಶೇ 50ರಷ್ಟು ಜಾಹೀರಾತು ಅಥವಾ ಟ್ರ್ಯಾಕರ್‌ಗಳಾಗಿವೆ. ಹಾಗಾಗಿ, ಆಡ್‌ ಬ್ಲಾಕರ್ ಎಕ್ಸ್‌ಟೆನ್ಶನ್ ಕ್ರೋಮ್ ಬಳಕೆದಾರರಿಗೆ ಸಹಾಯವಾಗಿತ್ತು. ಇದರ ಸಹಾಯದಿಂದ ಜಾಹಿರಾತುಗಳು ಕಾಣಿಸದಂತೆ ತಡೆಯಬಹುದಿತ್ತು.

ಸಾಮಾನ್ಯರಿಗೆ ಆಡ್‌ ಬ್ಲಾಕರ್ ನಿಷೇಧ!

ಸಾಮಾನ್ಯರಿಗೆ ಆಡ್‌ ಬ್ಲಾಕರ್ ನಿಷೇಧ!

ತನ್ನ ಜಾಹೀರಾತು ವರಮಾನ ಹೆಚ್ಚಿಸಿಕೊಳ್ಳಲು ಗೂಗಲ್‌ ಆಡ್‌ ಬ್ಲಾಕರ್ ಎಕ್ಸ್‌ಟೆನ್ಶನ್ ಅನ್ನು ನಿಷೇಧಿಸಿದೆ. ಇದಕ್ಕೆ ಮೂಲ ಕಾರಣವೇ ಜಾಹೀರಾತು ವರಮಾನವಾಗಿದ್ದು, ಸದ್ಯ ಇರುವ 2 ಕೋಟಿ ಕ್ರೋಮ್‌ ಬಳಕೆದಾರರಲ್ಲಿ ಶೇ1 ರಷ್ಟು ಬಳಕೆದಾರರು ಆಡ್‌ ಬ್ಲಾಕರ್‌ ಬಳಸಿದರೆ ಅದರಿಂದ ಗೂಗಲ್‌ಗೆ ತಿಂಗಳಿಗೆ ಕೋಟಿಗಟ್ಟಲೆ ವರಮಾನ ನಷ್ಟವಾಗುವ ಅಂದಾಜು ಮಾಡಲಾಗಿದೆ.

ಇನ್ನು ಹಣ ಪಾವತಿಸಿ ಬಳಸಬೇಕು!

ಇನ್ನು ಹಣ ಪಾವತಿಸಿ ಬಳಸಬೇಕು!

ಆಡ್‌ ಬ್ಲಾಕರ್ ಇದ್ದರೆ ಜಾಹೀರಾತುಗಳನ್ನು ಬ್ಲಾಕ್‌ ಮಾಡಿ ನಮ್ಮ ಡೇಟಾ ವ್ಯಯವಾಗುವುದನ್ನು ತಪ್ಪಿಸಬಹುದು. ಜೊತೆಗೆ ಯಾವಾಗಲೂ ಕಾಣಿಸಿಕೊಳ್ಳುವ ಕಿರಿಕಿರಿ ಕೂಡ ತಪ್ಪುತ್ತಿತ್ತು. ಆದರೆ, ಇದೀಗ ಈ ಸೇವೆಗೆ ಹಣ ನೀಡಬೇಕಿದೆ. ಅಂದರೆ, ಹಣ ಪಾವತಿಸಲು ಸಾಧ್ಯವಾಗದ ಸಾಮಾನ್ಯ ಕ್ರೋಮ್ ಬಳಕೆದಾರರರು ಜಾಹಿರಾತುಗಳನ್ನು ನೋಡಲೇಬೇಕಾದ ಸಮಸ್ಯೆ ಎದುರಾಗಲಿದೆ.

ಇದಕ್ಕೆ ಗೂಗಲ್ ಸಮರ್ಥನೆ!

ಇದಕ್ಕೆ ಗೂಗಲ್ ಸಮರ್ಥನೆ!

ಭವಿಷ್ಯದಲ್ಲಿ ಜಿಯೋ ಹೇಗಿರಲಿದೆ ಎಂಬ ಕಲ್ಪನೆ ಸಿಕ್ಕಿದ್ದು ಮುಂಬೈನ ಈ ಕಟ್ಟಡದಲ್ಲಿ!!ಭವಿಷ್ಯದಲ್ಲಿ ಜಿಯೋ ಹೇಗಿರಲಿದೆ ಎಂಬ ಕಲ್ಪನೆ ಸಿಕ್ಕಿದ್ದು ಮುಂಬೈನ ಈ ಕಟ್ಟಡದಲ್ಲಿ!!

ಈ ಸುದ್ದಿ ವೈರಲ್ ಆದ ನಂತರ ಕ್ರೋಮ್‌ ಎಕ್ಸ್‌ಟೆನ್ಶನ್ ತಂಡದ ಡೆವ್ಲಿನ್ ಕ್ರೊನಿನ್ ಅವರು, ಆಡ್‌ ಬ್ಲಾಕರ್‌ಗಳನ್ನು ನಿಯಂತ್ರಿಸುತ್ತಿಲ್ಲ ಅಥವಾ ಬಳಕೆದಾರರಿಗೆ ಆಡ್‌ಗಳನ್ನು ಬ್ಲಾಕ್‌ ಮಾಡದೇ ಇರುವಂತೆ ನಿರ್ಬಂಧ ಹೇರುತ್ತಿಲ್ಲ. ಬಳಕೆದಾರರ ಖಾಸಗಿತನದ ರಕ್ಷಣೆಯ ನಿಟ್ಟಿನಲ್ಲಿ ಎಕ್ಸ್‌ಟೆನ್ಶನ್ಗಳನ್ನು ಸಿದ್ಧಪಡಿಸಲು ಡೆವಲಪರ್‌ಗಳಿಗೆ ನೆರವಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಹೆಚ್ಚು ಸಮಯ ವ್ಯಯವಾಗಲಿದೆ

ಹೆಚ್ಚು ಸಮಯ ವ್ಯಯವಾಗಲಿದೆ

ಭಾರತದಲ್ಲಿ ಜಿಯೊ ಡೇಟಾ ಉಚಿತವಾಗಿದೆ. ಹಾಗಾಗಿ ಇಲ್ಲಿ ಡೇಟಾ ಸಮಸ್ಯೆಯೇ ಇಲ್ಲ ಎಂದು ಹೇಳಬಹುದು. ಆದರೆ, ಕ್ರೋಮ್‌ನಲ್ಲಿ ತಕ್ಷಣಕ್ಕೆ ನಿಮಗೆ ಬೇಕಿರುವ ಮಾಹಿತಿ ಹುಡುಕಲು ಹೋದರೆ ಜಾಹೀರಾತುಗಳೇ ಹೆಚ್ಚು ತೆರೆದುಕೊಳ್ಳುವುದರಿಂದ ಸಮಯ ವ್ಯಯವಾಗುತ್ತದೆ. ಆದಾಯಕ್ಕಾಗಿ ಗೂಗಲ್ ಏನೂ ಬೇಕಾದರೂ ಮಾಡಲಿದೆ ಎಂದು ನಾವು ಇಲ್ಲಿ ತಿಳಿಯಬಹುದು.

Best Mobiles in India

English summary
Wow, fancy that. Web ad giant Google to block ad-blockers in Chrome.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X