Home
ಸುದ್ದಿಜಾಲ

'ಗೃಹಲಕ್ಷ್ಮಿ'ಯರಿಗೆ ಗುಡ್‌ ನ್ಯೂಸ್; ಎರಡು ತಿಂಗಳ ಹಣ ಒಟ್ಟಿಗೇ ಜಮಾ, 4600 ಕೋಟಿ ರೂ.ಬಿಡುಗಡೆ!

ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruhalakshmi scheme) ಮೂಲಕ ನಾಡಿನ ಮಹಿಳೆಯರು ಪ್ರತಿ ತಿಂಗಳು 2 ಸಾವಿರ ಹಣ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇನ್ನೂ ಹಲವು ಮಹಿಳೆಯರು ಕೆಲವು ಕಾರಣಗಳಿಂದ ಈ ಹಣ ಸ್ವೀಕಾರ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಸರ್ಕಾರ ಅವರು ಹಣ ಪಡೆದುಕೊಳ್ಳಲು ಸುಲಭವಾಗುವಂತೆ ರೇಷನ್‌ ಕಾರ್ಡ್‌(Ration card) ತಿದ್ದುಪಡಿ ಮಾಡಲು ಹಾಗೂ ಇ-ಕೆವೈಸಿ ಮಾಡಲು ಅನುಕೂಲ ಮಾಡಿಕೊಟ್ಟಿದೆ.

ಹೌದು, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಕಡ್ಡಾಯವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ (Congress Govt) ಘೋಷಣೆ ಮಾಡಿದೆ. ಅದರಂತೆ ನಡೆದುಕೊಳ್ಳಲು ಮುಂದಾಗಿದ್ದು, ಈಗ ಗೃಹಲಕ್ಷ್ಮಿಗಾಗಿ 4600 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ, ಈ ಹಣ ಯಾವ ತಿಂಗಳಿಗೆ ಮೀಸಲಿಡಲಾಗಿದೆ? ನಿಮ್ಮ ಖಾತೆಗೆ 2 ಸಾವಿರ ಜಮೆ ಆಗಿದ್ದರೆ ಅದನ್ನು ತಿಳಿದುಕೊಳ್ಳುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

'ಗೃಹಲಕ್ಷ್ಮಿ'ಯರಿಗೆ ಗುಡ್‌ ನ್ಯೂಸ್; ಎರಡು ತಿಂಗಳ ಹಣ ಒಟ್ಟಿಗೇ ಜಮಾ..

ಮೊದಲ ಕಂತಿನಲ್ಲಿ 4,600 ಕೋಟಿ ರೂ. ಬಿಡುಗಡೆ: ಈ ಯೋಜನೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಕರ್ನಾಟಕ ಸರ್ಕಾರ ಇಂದು ಮೊದಲ ಕಂತಿನಲ್ಲಿ ಆಗಸ್ಟ್​, ಸೆಪ್ಟೆಂಬರ್ ತಿಂಗಳ ಅವಧಿಗೆ 4,600 ಕೋಟಿ ರೂ. ಬಿಡುಗಡೆ ಮಾಡಿದೆ. ಅದಾಗ್ಯೂ ಈ ಸಾಲಿಗೆ ಅಂದರೆ 2023-24ನೇ ಸಾಲಿಗೆ 17,500 ಕೋಟಿ ರೂ.ಗಳನ್ನು ನೀಡಬೇಕಿದೆ. ಈ ನಡುವೆ ಕಳೆದ ತಿಂಗಳು ಯಾರೆಲ್ಲಾ ಕೆಲವು ಸಮಸ್ಯೆಗಳಿಂದ ಹಣ ಪಡೆದಿಲ್ಲವೋ ಅವರು ಮುಂದಿನ ತಿಂಗಳಲ್ಲಿ ಎರಡೂ ತಿಂಗಳ ಹಣವನ್ನು ಒಟ್ಟಿಗೆ ಪಡೆಯಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಯಾವ ದಿನಾಂಕದಂದು ಹಣ ನಿಮ್ಮ ಕೈ ಸೇರಲಿದೆ?: ಸರ್ಕಾರ ನೀರುವ ಎರಡು ಸಾವಿರ ರೂ. ಹಣ ಫಲಾನುಭವಿಗಳ ಖಾತೆಗೆ ನೇರ ಜಮೆ ಆಗಲಿದ್ದು, ಈ ಹಣ ಪ್ರತಿ ತಿಂಗಳು 15ನೇ ತಾರೀಖಿನ ಒಳಗಡೆ ಫಲಾನುಭವಿಗಳ ಖಾತೆಗೆ ಸೇರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದಾರೆ. ಅದಾಗ್ಯೂ ಈ ಹಣ ನಿಮ್ಮ ಕೈ ಸೇರಿಲ್ಲ ಅಥವಾ ಏನಾದರೂ ಸಮಸ್ಯೆ ಎಂದು ಕಂಡುಬಂದರೆ ನಿಮ್ಮ ಗ್ರಾಮದ ಅಂಗನವಾಡಿ ಕಾರ್ಯಕರ್ತರನ್ನು ಭೇಟಿ ಮಾಡಿ ಎಂದು ತಿಳಿಸಿದ್ದಾರೆ.

ಹಣ ಜಮೆ ಆಗಿದೆಯಾ ಎಂದು ತಿಳಿಯಲು ಏನು ಮಾಡಬೇಕು?: ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿದೆಯಾ ಅಥವಾ ಆಗದಿರಲು ಏನು ಕಾರಣ ಎಂಬ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಅಂದರೆ ನೀವು ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಡಿಬಿಟಿ ಕರ್ನಾಟಕ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಈ ಆಪ್‌ ನೋಂದಣಿಗೆ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಅವಶ್ಯಕವಾಗಿದೆ. ಈ ಮೂಲಕ ಎಲ್ಲಾ ರೀತಿಯ ಗೃಹಲಕ್ಷ್ಮಿ ಸ್ಟೇಟಸ್‌ ಅನ್ನು ಚೆಕ್‌ ಮಾಡಬಹುದು.

ಮತ್ತೊಂದು ಮಾರ್ಗದ ಮೂಲಕವೂ ನೀವು ಈ ಮಾಹಿತಿ ಪಡೆದುಕೊಳ್ಳಬಹುದು. ಗೃಹಲಕ್ಷ್ಮಿ ಯೋಜನೆಯ ಹಣ ಯಾಕೆ ಬಂದಿಲ್ಲ ಎಂದು ಪರಿಶೀಲಿಸಲು ನೀವು ರಾಜ್ಯ ಸರ್ಕಾರ ನೀಡಿರುವ 8147500500 ಸಂಖ್ಯೆಗೆ ಮೆಸೆಜ್‌ ಮಾಡಬಹುದಾಗಿದೆ. ಈ ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಎಂಟ್ರಿ ಮಾಡಿ ಮೆಸೆಜ್‌ ಮಾಡಬೇಕಿದೆ. ಇದಾದ ನಂತರ ನಿಮಗೆ ಪ್ರತ್ಯುತ್ತರವಾಗಿ ಮೆಸೆಜ್‌ ಬರಲಿದ್ದು, ಅದರಲ್ಲಿ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬಹುದು.

'ಗೃಹಲಕ್ಷ್ಮಿ'ಯರಿಗೆ ಗುಡ್‌ ನ್ಯೂಸ್; ಎರಡು ತಿಂಗಳ ಹಣ ಒಟ್ಟಿಗೇ ಜಮಾ..

ಅದಾಗ್ಯೂ ನಿಮ್ಮ ದಾಖಲೆಗಳಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ. ಅಂದರೆ ಈ ಹಣವನ್ನು ರೇಷನ್‌ ಕಾರ್ಡ್‌ ಆಧಾರದ ಮೇಲೆ ನೀಡಲಾಗುತ್ತದೆ. ರೇಷನ್ ಕಾರ್ಡ್‌ನಲ್ಲಿನ ಕುಟುಂಬದ ಮುಖ್ಯಸ್ಥರ ಹೆಸರಲ್ಲಿ ಮಹಿಳೆಯರ ಹೆಸರಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಇದರಲ್ಲಿ ಪುರುಷರ ಹೆಸರು ಏನಾದರೂ ಇದ್ದರೆ ಈಗಲೇ ಅದನ್ನು ತಿದ್ದುಪಡಿ ಮಾಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ.

Best Mobiles in India

English summary
4600 crore released for gruhalakshmi Yojana. Through this, the eligible beneficiaries can get Rs 2,000 from the next month without fail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+