Home
ಸುದ್ದಿಜಾಲ

Gruhalakshmi scheme: ಗೃಹಲಕ್ಷ್ಮಿ ಹಣ ಸ್ವೀಕರಿಸದವರಿಗೆ ಮತ್ತೊಂದು ಖುಷಿ ಸುದ್ದಿ, ಕಾಲಾವಕಾಶ ವಿಸ್ತರಣೆ!

ಗೃಹಲಕ್ಷ್ಮಿ ಯೋಜನೆ (Gruhalakshmi scheme) ಮೂಲಕ ಕರ್ನಾಟಕ ಸರ್ಕಾರ ಎಲ್ಲಾ ಅರ್ಹ ಮಹಿಯರಿಗೆ ಎರಡು ಸಾವಿರ ಹಣವನ್ನು ಜಮೆ ಮಾಡಲಾಗಿದೆ. ಆದರೆ, ಕೆಲವು ಸಮಸ್ಯೆಗಳಿಂದಾಗಿ ಇನ್ನೂ ಹಲವಾರು ಮಹಿಳೆಯರು ಈ ಹಣವನ್ನು ಪಡೆದುಕೊಳ್ಳಲು ಸಾಧ್ಯ ಆಗಿಲ್ಲ. ಈ ಕಾರಣಕ್ಕೆ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತು. ಅದಾಗ್ಯೂ ಈಗ ಮತ್ತೆ ಗುಡ್‌ ನ್ಯೂಸ್‌ ನೀಡಿದೆ.

ಹೌದು, ಕರ್ನಾಟಕದ ಎಲ್ಲಾ ಅರ್ಹ ಮಹಿಳೆಯರು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಹಣವನ್ನು ಪಡೆಯುವ ಮೂಲಕ ಬಹಳ ಸಂತಸ ಹೊರಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಕಡೆ ಬ್ಯಾಂಕ್‌ಗಳಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿರುವುದನ್ನು ಗಮನಿರಬಹುದು. ಈ ನಡುವೆ ಯಾರೆಲ್ಲಾ ಈವರೆಗೂ ಈ ಹಣ ಪಡೆದಿಲ್ಲವೋ ಅವರು ಈ ದಿನಾಂಕದ ಒಳಗೆ ತಪ್ಪಾದ ಮಾಹಿತಿಗಳನ್ನು ಸರಿಪಡಿಸಿಕೊಂಡರೆ ಹಣ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಏನಿದು ಸರ್ಕಾರದ ಮತ್ತೊಂದು ಗುಡ್‌ನ್ಯೂಸ್‌?, ಯಾವೆಲ್ಲಾ ಸಮಸ್ಯೆಗಳಿಂದ ಹಣ ಪಾವತಿ ಆಗಿಲ್ಲ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗೃಹಲಕ್ಷ್ಮಿ ಹಣ ಸ್ವೀಕರಿಸದವರಿಗೆ ಮತ್ತೊಂದು ಖುಷಿ ಸುದ್ದಿ, ಕಾಲಾವಕಾಶ ವಿಸ್ತರಣೆ!

ತಿದ್ದುಪಡಿ ಅವಧಿ ವಿಸ್ತರಣೆ: ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ ಕೆಲವೇ ದಿನಗಳಲ್ಲಿ ಯಾರೆಲ್ಲಾ ಹಣ ಪಡೆದಿಲ್ಲವೋ ಅವರು ತನ್ನ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಕೊಳ್ಳಿ ಎಂದು ಸೆ. 9 ರ ವರೆಗೆ ಕಾಲಾವಕಾಶ ನೀಡಿ ಸರ್ಕಾರ ಆದೇಶ ಮಾಡಿತ್ತು. ಈ ಮೂಲಕ ಸಾಕಷ್ಟು ಜನರು ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ತಾಮುಂದು ನಾಮುಂದು ಎಂಬಂತೆ ಸೈಬರ್‌ ಸೆಂಟರ್‌ ಹಾಗೂ ಬೆಂಗಳೂರು ಒನ್‌, ಕರ್ನಾಟಕ ಒನ್‌ ಒಳಗೊಂಡ ಹಲವಾರು ಕಚೇರಿಗಳಿಗೆ ಮುಗಿಬಿದ್ದಿದ್ದರು. ಆದರೆ, ಈ ವೇಳೆ ಸರ್ವರ್ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಈ ಕೆಲಸ ಆಗುತ್ತಿರಲಿಲ್ಲ.

ಈ ವಿಷಯ ಮನಗಂಡು ಸರ್ಕಾರ ಈ ಅವಧಿ ದಿನಾಂಕವನ್ನು ಮುಂದೂಡಿದೆ. ಈ ಮೂಲಕ ನಾಡಿನ ಜನರು ಅಂದರೆ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳದವರು ಸೆಪ್ಟೆಂಬರ್ 14 ರೊಳಗೆ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಿಕೊಂಡು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಜಾಗದಲ್ಲಿ ಪುರುಷರ ಹೆಸರು ಇದ್ದರೆ ಅದನ್ನು ಬದಲಾಯಿಸಿ ಮಹಿಳೆಯರ ಹೆಸರನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕಿದೆ.

ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಟ್ವೀಟ್‌ ಮಾಡಿದೆ. ಅದರಲ್ಲಿ "ಪಡಿತರ ಚೀಟಿಯಲ್ಲಿ ತಿದ್ದುಪಡಿ/ಸೇರ್ಪಡೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳದವರು ಸೆಪ್ಟೆಂಬರ್ 09 ರಿಂದ 14 ರೊಳಗೆ ಯಜಮಾನಿಯ ಸ್ಥಾನದಲ್ಲಿ ತಿದ್ದುಪಡಿ ಮಾಡಿಕೊಂಡು, ಯೋಜನೆಗೆ ನೋಂದಾಯಿಸಿ ಸೌಲಭ್ಯ ಪಡೆಯಬಹುದಾಗಿದೆ' ಎಂದು ಉಲ್ಲೇಖಿಸಲಾಗಿದೆ.

ಈ ನಡುವೆ ಕೆಲವು ಸೂಚನೆಗಳನ್ನೂ ಸಹ ನೀಡಲಾಗಿದೆ. ಅದೇನೆಂದರೆ ಈ ಯೋಜನೆಯಡಿ ಈಗಾಗಲೇ ನೋಂದಾವಣಿ ಮಾಡಿ ಯಜಮಾನಿಯ ಬದಲಾವಣೆಗೆ ಅರ್ಜಿ ಸಲ್ಲಿಕೆ ಮಾಡಿದ್ದರೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ತಡೆಹಿಡಿಯಲಾಗುತ್ತೆ ಎಂದು ಉಲ್ಲೇಖ ಮಾಡಲಾಗಿದೆ.

ಇನ್ನು ಈವರೆಗೆ ತಾಂತ್ರಿಕ ನೀಡಿ ಈವರೆಗೆ ಅನ್ನಭಾಗ್ಯದ ಯೋಜನೆ ಅಡಿ ಹೆಚ್ಚುವರಿ ಅಕ್ಕಿಗೆ ನೀಡಲಾಗುತ್ತಿರುವ ಹಣವನ್ನು ಬರೋಬ್ಬರಿ 29 ಲಕ್ಷ ಕಾರ್ಡ್‌ದಾರರು ಪಡೆದುಕೊಂಡಿಲ್ಲ. ಈ ಮೂಲಕ ಆಗಷ್ಟ್ ಹಾಗೂ ಜುಲೈ ತಿಂಗಳಲ್ಲಿ 98 ಲಕ್ಷ ಕುಟುಂಬಗಳಿಗೆ ಮಾತ್ರ ಈ ಹಣವನ್ನು ಜಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಉಳಿದ ಹಲವಾರು ಫಲಾನುಭವಿಗಳು ಸಹ ಈ ದಿನಾಂಕದ ಒಳಗೆ ಅಗತ್ಯ ಮಾಹಿತಿಯನ್ನು ತಿದ್ದುಪಡಿ ಮಾಡುವ ಮೂಲಕ ಮುಂದಿನ ತಿಂಗಳಿನಿಂದ ಹಣ ಪಡೆದುಕೊಳ್ಳಬಹುದಾಗಿದೆ.

ಇಷ್ಟೇ ಅಲ್ಲದೆ ಈ ಯೋಜನೆಯನ್ನು ಪಡೆಯಲು ಅರ್ಹರು ಇ-ಕೆವೈಸಿ ಮಾಡಿಸಿರಬೇಕು. ಇದಕ್ಕಾಗಿ ಬ್ಯಾಂಕ್‌ ಖಾತೆ-ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ನಲ್ಲಿರುವ ಫಲಾನುಭವಿಗಳ ವೈಯಕ್ತಿಕ ವಿವರ ಒಂದಕ್ಕೊಂದು ತಾಳೆಯಾಗಬೇಕು ಆಗ ಮಾತ್ರ ಸುಲಭವಾಗಿ ಖಾತೆಗೆ ಈ ಹಣ ಜಮೆ ಆಗಲಿದೆ. ಮತ್ಯಾಕೆ ತಡ ಈಗಲೇ ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಂಡು ಮುಂದಿನ ತಿಂಗಳಿಂದ ಹಣ ಪಡೆದುಕೊಳ್ಳಿ.

Best Mobiles in India

English summary
Gruhalakshmi scheme: Those who have not received the money within a few days of the implementation of the Gruhalakshmi Yojana should amend their ration card. The government had ordered to give time till 9th, but this date has been extended again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+