ಗೃಹಲಕ್ಷ್ಮಿ ಆಕಾಂಕ್ಷಿಗಳಿಗೆ ಶಾಕ್ ನೀಡಿದ ಸರ್ಕಾರ... ನಿಮ್ಮ ಅರ್ಜಿಯೂ ತಿರಸ್ಕೃತವಾಗಿರಬಹುದು ಚೆಕ್ ಮಾಡಿ!
ಗೃಹಲಕ್ಷ್ಮಿ ಯೋಜನೆ (gruhalakshmi scheme) ಮೂಲಕ ಕರ್ನಾಟಕ ಹಲವಾರು ಅರ್ಹ ಫಲಾನುಭವಿಗಳು ತಿಂಗಳಿಗೆ ಎರಡು ಸಾವಿರ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ತಾಂತ್ರಿಕ ಹಾಗೂ ಇನ್ನಿತರೆ ಸಮಸ್ಯೆಗಳಿಂದ ಈ ಹಣ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಈಗ ಸರ್ಕಾರ ಮತ್ತೆ ಶಾಕಿಂಗ್ ನ್ಯೂಸ್ ನೀಡಿದೆ.
ಹೌದು, ಗೃಹಲಕ್ಷ್ಮಿ ಹಣ ಪಡೆದುಕೊಳ್ಳಲು ಹಾಗೂ ಸರ್ಕಾರದ ಇತರೆ ಪ್ರಯೋಜನಗಳನ್ನು ಪಡೆಯಲು ಮನವಿ ಸಲ್ಲಿಸಿದ್ದ ಅದೆಷ್ಟೋ ಎಪಿಎಲ್ ಕಾರ್ಡ್‌ದಾರರ ಅರ್ಜಿಗಳು ತಿರಸ್ಕಾರವಾಗಿವೆ. ಈ ಮೂಲಕ ಇವರಿಗೆಲ್ಲಾ ಸರ್ಕಾರ ಶಾಕ್ ನೀಡಿದೆ. ಹಾಗಿದ್ರೆ, ಯಾವ ಕಾರಣಕ್ಕೆ ಅರ್ಜಿಗಳು ತಿರಸ್ಕಾರ ಆಗಿವೆ?, ಸ್ವೀಕಾರ ಮಾಡಿದ ಅರ್ಜಿಯ ಸ್ಥಿತಿಯಲ್ಲಿ ಪರಿಶೀಲನೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ತಿರಸ್ಕೃತಗೊಂಡ ಎಪಿಎಲ್ ಕಾರ್ಡ್‌ದಾರರ ಅರ್ಜಿ: ಮೊದಲೇ ತಿಳಿಸಿದಂತೆ ಆರಂಭದಲ್ಲಿ ಯಾರೆಲ್ಲಾ ಗೃಹಲಕ್ಷ್ಮಿ ಹಣ ಸ್ವೀಕಾರ ಮಾಡಿಲ್ಲವೋ ಅವರು ಮತ್ತೊಮ್ಮೆ ತಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿಕೊಳ್ಳುವ ಮೂಲಕ ಅರ್ಜಿ ಸಲ್ಲಿಕೆ ಮಾಡಿ ಎಂದು ಮಾಹಿತಿ ನೀಡಲಾಗಿತ್ತು. ಅದರಂತೆ ಹಲವಾರು ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಈಗ ಕಳೆದ 14 ದಿನದಲ್ಲಿ 53 ಸಾವಿರ ಅರ್ಜಿ ತಿದ್ದುಪಡಿಗೆ ಸಲ್ಲಿಕೆ ಮಾಡಲಾಗಿದ್ದು, ಈ ಹಿಂದೆಯೇ ಸಲ್ಲಿಕೆ ಮಾಡಲಾದ 3.18 ಲಕ್ಷ ಅರ್ಜಿಗಳು ಸೇರಿದಂತೆ ಒಟ್ಟು 3.71 ಲಕ್ಷ ಕಾರ್ಡ್‌ದಾರರು ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಈ ಅರ್ಜಿ ಸಲ್ಲಿಕೆ ಮಾಡಿದ ಜನರಲ್ಲಿ ಬಹುಪಾಲು ಎಪಿಎಲ್ ಕಾರ್ಡ್ (APL ration card) ಹೊಂದಿರುವವರೇ ಆಗಿದ್ದಾರೆ. ಅಂದರೆ 70ರಷ್ಟು ಎಪಿಎಲ್ ಕಾರ್ಡ್ದಾರರಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 24 ಲಕ್ಷ ಎಪಿಎಲ್ ಕಾರ್ಡ್ ದಾರರಿದ್ದು, ಈ ನಡುವೆ 1.17ಲಕ್ಷ ಅರ್ಜಿಗಳಿಗೆ ಆಹಾರ ಇಲಾಖೆ ಸಮ್ಮತಿ ನೀಡಿದರೆ ಇನ್ನುಳಿದ ಅಂದರೆ 93 ಸಾವಿರ ಅರ್ಜಿದಾರರ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ.
ಅರ್ಜಿ ತಿರಸ್ಕಾರ ಆಗಲು ಇವೇ ಕಾರಣ: ಗೃಹಲಕ್ಷ್ಮಿ ಹಣ ಪಡೆಯುವ ಉದ್ದೇಶದಿಂದ ಕೆಲವು ಜನರು ಅನ್ಯ ಮಾರ್ಗಗಳನ್ನು ಅನುಸರಿಸಿದ್ದಾರೆ. ಅಂದರೆ ಸಂಬಂಧವೇ ಇಲ್ಲದವರ ಹೆಸರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಕೆ ಮಾಡಿರುವುದು, ಒಂದೇ ಮನೆಯಲ್ಲಿದ್ದರೂ ಸಹ ಅತ್ತೆ, ಸೊಸೆ ಇಬ್ಬರೂ ಗೃಹ ಲಕ್ಷ್ಮಿ ಯೋಜನೆ ಹಣ ಪಡೆಯಲು ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡಿರುವುದು, ಸರ್ಕಾರಿ ಕೆಲಸದಲ್ಲಿದ್ದವರು ಅರ್ಜಿ ಸಲ್ಲಿಕೆ ಮಾಡಿರುವುದು, ನಕಲಿ ವಿಳಾಸಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿರುವುದು ಈ ವೇಳೆ ಕಂಡುಬಂದಿದೆ.
ಇನ್ನುಳಿದಂತೆ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಒಟ್ಟಾರೆ 1.13 ಕೋಟಿ ಅರ್ಜಿಗಳು ಸ್ವೀಕಾರ ಆಗಿದ್ದು, ಇಷ್ಟು ಜನರಲ್ಲಿ ಇದೀಗ 82 ಲಕ್ಷ ಅರ್ಜಿದಾರರಿಗೆ ಮಾತ್ರ ಹಣ ವರ್ಗಾವಣೆ ಆಗಿದೆ. ಇನ್ನುಳಿದ ಅರ್ಹ ಫಲಾನುಭವಿಗಳಿಗೂ ಸಹ ಹಣ ಪಾವತಿ ಮಾಡಲಾಗಿತ್ತದೆ ಆದರೆ ಸ್ವಲ್ಪ ಸಮಯಾವಕಾಶ ಬೇಕು ಎಂದು ಸರ್ಕಾರ ತಿಳಿಸಿದೆ. ಜೊತೆಗೆ ಈ ಸಂಬಂಧ ಕೆಲವು ತಾಂತ್ರಿಕ ಹಾಗೂ ತಿದ್ದುಪಡಿ ದೋಷಗಳನ್ನು ಉಲ್ಲೇಖಿಸಿದೆ.
ತಿರಸ್ಕೃತರ ಹೆಸರು ಚೆಕ್ ಮಾಡುವುದು ಹೇಗೆ?:
-ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕರ್ನಾಟಕ ಸರ್ಕಾರ ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು https://ahara.kar.nic.in/Home/Home ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
- ನಂತರದಲ್ಲಿ ಇ-ಸೇವೆಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ಬಳಿಕ ಇ-ಪಡಿತರ ಚೀಟಿ ವಿಭಾಗ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

-ಮೇಲೆ ತಿಳಿಸಿದ ಕೆಲಸ ಮಾಡಿದ ನಂತರ ಮತ್ತೇ ಹಲವಾರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ಪಟ್ಟಿ ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು, ಅದರ ಮೇಲೆ ಕ್ಲಿಕ್ ಮಾಡಿ.
- ನಂತರದಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ನಂತರ ತಾಲೂಕಿನ ಹೆಸರನ್ನು ಆಯ್ಕೆ ಮಾಡಿ. ಬಳಿಕ ಈ ಪ್ರಸ್ತುತ ತಿಂಗಳನ್ನು ಆಯ್ಕೆ ಮಾಡಿ ಸಬ್‌ಮಿಟ್ ಮಾಡಿ. ಇದಾದ ನಂತರ ಇಸವಿಯನ್ನು ಆಯ್ಕೆ ಮಾಡಿ.
- ಇದನ್ನೆಲ್ಲಾ ಮಾಡಿದ ಮೇಲೆ ನಿಮ್ಮ ತಾಲೂಕಿನ ಅನರ್ಹ ಅಥವಾ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ಪಟ್ಟಿ ಕಾಣಿಸಿಕೊಳ್ಳುತ್ತದೆ. ಈ ಮೂಲಕ ನೀವು ಈ ಯೋಜನೆಗೆ ಅರ್ಹರೋ ಅನರ್ಹರೋ ತಿಳಿದುಕೊಳ್ಳಬಹುದು.


Click it and Unblock the Notifications








