ಇನ್ನು ಜಿಟಾಕ್‌ಗೆ ಬೈಬೈ ಹೇಳಿ ಹ್ಯಾಂಗ್‌ಔಟ್ಸ್ ಬರಮಾಡಿಕೊಳ್ಳಿ

Written By:

ಒಂಭತ್ತರ ಹರೆಯದ ತ್ವರಿತ ಮೆಸೇಜಿಂಗ್ ಸೇವೆ ಗೂಗಲ್ ಟಾಕ್‌ಗೆ ಗೂಗಲ್ ಕೊನೆಗೂ ಮಂಗಳ ಹಾಡಿದೆ. ಜಿಟಾಕ್ ಅನ್ನು ಪ್ರಸ್ತುತ ಗೂಗಲ್ ಹ್ಯಾಂಗ್‌ಔಟ್ಸ್ ಆಗಿ ಮಾರ್ಪಡಿಸಿದ್ದು, 2013 ರಿಂದ ಎರಡೂ ಕೂಡ ಸ್ವಯಂ ಅಸ್ತಿತ್ವದಲ್ಲಿದೆ.

ಇನ್ನು ಜಿಟಾಕ್‌ಗೆ ಬೈಬೈ ಹೇಳಿ ಹ್ಯಾಂಗ್‌ಔಟ್ಸ್ ಬರಮಾಡಿಕೊಳ್ಳಿ

ವಾಯ್ಸ್ ಮತ್ತು ಹ್ಯಾಂಗ್‌ಔಟ್ಸ್ ನ ಗೂಗಲ್‌ ಪ್ರಡಕ್ಟ್ ಮ್ಯಾನೇಜರ್ ಮಯೂರ್ ಕಾಮತ್, ಜಿಟಾಕ್‌ನ ನಿವೃತ್ತಿಯ ಕುರಿತು ಘೋಷಿಸಿದ್ದಾರೆ. ಅಧಿಕೃತವಾಗಿ ಈ ಸೇವೆ ಈಗ ನಿವೃತ್ತಿಯನ್ನು ಹೊಂದಿದ್ದು, ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಾದ ಜಿಟ್ಸಿ, ಪ್ಸಿ, ಇನ್‌ಸ್ಟಾಂಟ್ ಬರ್ಡ್ ಮೂಲಕ ಪ್ರವೇಶಿಸಬಹುದಾಗಿದೆ. ಇವುಗಳು ಗೂಗಲ್ ಉತ್ಪನ್ನಗಳಾಗಿರದೇ ಇರುವುದರಿಂದ ನಿಮ್ಮ ಗೂಗಲ್ ಖಾತೆಯೊಂದಿಗೆ ಸೈನ್ ಇನ್ ಮಾಡುವಾಗ ಹೆಚ್ಚುವರಿ ಮುಂಜಾಗ್ರತೆಯನ್ನು ಪಡೆದುಕೊಳ್ಳಬೇಕು ಎಂದು ಗೂಗಲ್ ತಿಳಿಸಿದೆ.

ಇನ್ನು ಜಿಟಾಕ್‌ಗೆ ಬೈಬೈ ಹೇಳಿ ಹ್ಯಾಂಗ್‌ಔಟ್ಸ್ ಬರಮಾಡಿಕೊಳ್ಳಿ

ಇದನ್ನೂ ಓದಿ: ಖರೀದಿಗೆ ಅತ್ಯುತ್ತಮವಾಗಿರುವ ರೂ 5,000 ದ ಒಳಗಿನ ಸ್ಮಾರ್ಟ್‌ಫೋನ್‌ಗಳು

ಗೂಗಲ್ ಟಾಕ್‌ನಲ್ಲಿರುವ ಕೆಲವೊಂದು ವಿಶೇಷತೆಗಳು ಹ್ಯಾಂಗ್‌ಔಟ್‌ನಲ್ಲಿ ಲಭ್ಯವಿಲ್ಲದಿರುವುದಿಲ್ಲ. ಇನ್ನು ಹ್ಯಾಂಗ್‌ಔಟ್ಸ್‌ಗೆ ಹೋಲಿಸಿದಾಗ ಫೈಲ್‌ಗಳನ್ನು ಹಂಚಿಕೊಳ್ಳುವುದು ಜಿಟಾಕ್‌ನಲ್ಲಿ ಹೆಚ್ಚು ಆರಾಮದಾಯಕವಾಗಿತ್ತು.

ಇನ್ನು ಜಿಟಾಕ್‌ಗೆ ಬೈಬೈ ಹೇಳಿ ಹ್ಯಾಂಗ್‌ಔಟ್ಸ್ ಬರಮಾಡಿಕೊಳ್ಳಿ

ವಾಟ್ಸಾಪ್‌ನಂತಹ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗೆ ನೇರವಾದ ಹೊಡೆತವನ್ನು ನೀಡಲಿರುವ ಹ್ಯಾಂಗ್‌ಔಟ್ಸ್ ಗೂಗಲ್‌ನ ಬಲಗೈಯಾಗಿದೆ ಎಂದೇ ಹೇಳಬಹುದು. ಬ್ರೌಸರ್ ಎಕ್ಸ್‌ಟೆನ್ಶನ್, ಮೊಬೈಲ್ ಅಪ್ಲಿಕೇಶನ್ ಮತ್ತು ಜಿಮೇಲ್ ಇಂಟಿಗ್ರೇಶನ್ ಜೊತೆಗೆ, ಜಿಟಾಕ್‌ಗಿಂತಲೂ ಹೆಚ್ಚಿನ ಬಳಕೆದಾರ ಅನುಭವವನ್ನು ಹ್ಯಾಂಗ್‌ಔಟ್ಸ್ ನೀಡಲಿದೆ.

English summary
This article tells about GTalk is officially dead, long live Hangouts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot